ಕಪ್ಪು ಮೇಕಪ್, ಹಲ್ಲಿಗೆ ಕ್ಲಿಪ್ ಹಾಕಿ ನಟನೆ.. ದಿಯಾ ಬ್ರಹ್ಮಗಂಟು ಸೀರಿಯಲ್​ ಒಪ್ಪಿಕೊಂಡಿದ್ದೇಕೆ?

author-image
Veena Gangani
Updated On
ಕಪ್ಪು ಮೇಕಪ್, ಹಲ್ಲಿಗೆ ಕ್ಲಿಪ್ ಹಾಕಿ ನಟನೆ.. ದಿಯಾ ಬ್ರಹ್ಮಗಂಟು ಸೀರಿಯಲ್​ ಒಪ್ಪಿಕೊಂಡಿದ್ದೇಕೆ?
Advertisment
  • ಕಿನ್ನರಿ ಧಾರಾವಾಹಿಯಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದ ದಿಯಾ
  • ಬ್ರಹ್ಮಗಂಟು ಸೀರಿಯಲ್​ನಲ್ಲಿ ದೀಪಾ ಪಾತ್ರಕ್ಕೆ ಬಣ್ಣ ಹಚ್ಚಿದ ಚೆಲುವೆ
  • ಹಸ್ಬೆಂಡೂ.. ಹಸ್ಬೆಂಡೂ ಅಂತ ಗಂಡನ ಹಿಂದೆ ಓಡಾಡುವ ಕ್ಯೂಟಿ

ಕನ್ನಡ ಕಿರುತೆರೆಯಲ್ಲಿ ಹೊಸ ಹೊಸ ಸೀರಿಯಲ್​ಗಳು ಬರ್ತಾನೆ ಇರುತ್ತವೆ. ಆದರೆ ಕೆಲವೊಂದು ಸೀರಿಯಲ್​ಗಳು ಮಾತ್ರ ವೀಕ್ಷಕರ ಮನಸ್ಸಿಗೆ ಹತ್ತಿರವಾಗುತ್ತವೆ. ಅದೇ ಸಾಲಿನಲ್ಲಿ ಬ್ರಹ್ಮಗಂಟು ನಿಧಾನವಾಗಿ ವೀಕ್ಷಕರಿಗೆ ಹತ್ತಿರವಾಗಿದೆ. ಪಾರು ಸೀರಿಯಲ್​ನಲ್ಲಿ ಕೆಲಸ ಮಾಡಿದ ತಂಡವೇ ಬ್ರಹ್ಮಗಂಟುಗೆ ವರ್ಕ್​ ಮಾಡ್ತಿರೋದು.

ಇದನ್ನೂ ಓದಿ:ಕೊರಳಲ್ಲಿ ಹಾರ, ಕೈಯಲ್ಲಿ ಕೇಕ್ ಹಿಡಿದ ರಜತ್​ ಪತ್ನಿ ಅಕ್ಷಿತಾ.. ಈ ಖುಷಿಗೆ ಕಾರಣವೇನು?

ಮುಖ್ಯವಾಗಿ ನಟ, ನಿರ್ಮಾಪಕ ಹಾಗೂ ನಿರ್ದೇಶಕ ದಿಲೀಪ್​ ರಾಜ್ ಅವರ ನಿರ್ದೇಶನದಲ್ಲಿ ಮೂಡಿಬರ್ತಿರೋ ಸ್ಟೋರಿಯಲ್ಲಿ ವಿಶೇಷವಾದ ದೃಶ್ಯಗಳನ್ನ ಸಂಯೋಜನೆ ಮಾಡಲಾಗುತ್ತಿದೆ. ಇನ್ನು, ಹಳೇ ಟೈಟಲ್​ನಲ್ಲೇ ಹೊಸ ಕಥೆ ಶರುವಾಗಿ ವೀಕ್ಷಕರ ಮನಸ್ಸಿಗೆ ಹತ್ತಿರವಾಗುತ್ತಿದೆ. ಇದೇ ಸೀರಿಯಲ್​ ಮೂಲಕ ಸಖತ್​ ಫೇಮಸ್​ ಆಗಿದ್ದಾರೆ ನಟಿ ದಿಯಾ ಪಾಲಕ್ಕಲ್. ಇದೇ ಸೀರಿಯಲ್​ನಲ್ಲಿ ನಟಿ ದಿಯಾ ಪಾಲಕ್ಕಲ್ ದೀಪಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆದ್ರೆ ನಟಿ ದಿಯಾ ಪಾಲಕ್ಕಲ್ ಈ ಸೀರಿಯಲ್​ ಅನ್ನು ಒಪ್ಪಿಕೊಂಡಿದ್ದೇಕೆ ಎಂಬ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತಾಡಿದ ದಿಯಾ ಪಾಲಕ್ಕಲ್, ನಾನು ಮೊದಲು​ ತುಂಬಾ ಡೌಟ್​ನಲ್ಲೇ ಇದ್ದೇ. ನಾನು ಬೇರೆ ತರ ಕಾಣಿಸಿಕೊಂಡರೇ ಹೇಗಿರುತ್ತೆ ಅಂತ ಪ್ರಶ್ನೆ ಮೂಡಿತ್ತು. ಅದಾದ ಮೇಲೆ ಈ ತರ ಕ್ಯಾರೆಕ್ಟರ್​ ಬರೋದೇ ತುಂಬಾ ಕಡಿಮೆ. ಯಾವಾಗ ಬೇಕಾದರೂ ನಾನು ಈಗಿರೋ ಲುಕ್​ನಲ್ಲಿ ಮಾಡಬಹುದು. ಆದ್ರೆ ಈ ತರ ಒಂದು ಪಾತ್ರವನ್ನು ಮಾಡೋದು ಕಮ್ಮಿ ಜನಕ್ಕೆ ಅವಕಾಶ ಸಿಗುತ್ತೆ. ಅದಕ್ಕಾಗಿ ನಾನು ನಂಬಿಕೆ ಇಟ್ಟುಕೊಂಡು ಈ ಸೀರಿಯಲ್​ಗೆ ಒಪ್ಪಿಕೊಂಡೆ. ಕೇವಲ ಮೇಕಪ್​ ಅಷ್ಟೇ ಅಲ್ಲದೇ ಹಲ್ಲಿಗೆ ಕ್ಲಿಪ್​ ಹಾಕಿಕೊಂಡು ನಟನೆ ಮಾಡ್ತಿದ್ದಾರೆ ನಟಿ. ಈ ಮೇಕಪ್​ ಮಾಡಿಸಿಕೊಳ್ಳೋದಕ್ಕೆ ಸರಿಸುಮಾರು 1 ರಿಂದ 2 ಗಂಟೆಗಳಷ್ಟು ಆಗುತ್ತೆ. ಅಲ್ಲದೇ ಹಲ್ಲಿಗೆ ಕ್ಲಿಪ್​ ಹಾಕಿಕೊಂಡು ಮಾತಾಡೋದು ತುಂಬಾನೇ ಕಷ್ಟ. ಆದ್ರೆ ಕಷ್ಟ ಆದ್ರೂ ನನ್ನ ಕ್ಯಾರೆಕ್ಟರ್​ಗೆ ಅಷ್ಟು ಪ್ರೀತಿ ಸಿಗುತ್ತಿದೆ. ಇದೇ ನನಗೆ ಮೋಟಿವೇಶನ್ ಅಂತ ಹೇಳಿದ್ದಾರೆ.

ದಿಯಾ ಹೊಸ ಮುಖವಲ್ಲ. ಚಿಕ್ಕವಯಸ್ಸಿನಿಂದಲೂ ಸೀರಿಯಲ್​ಗಳಲ್ಲಿ ಅಭಿನಯಿಸುತ್ತಿರೋ ಮುದ್ದು ಮುಖದ ಚಲುವೆ. ಕಿನ್ನರಿ ಧಾರಾವಾಹಿಯಲ್ಲಿ ಐಶ್ವರ್ಯ ಆಗಿ ಕಾಣಿಸಿಕೊಂಡಿದ್ದ ಪುಟಾಣಿ ಈಗ ನಾಯಕಿ ಆಗಿ ಹೊಸ ಇನ್ನಿಂಗ್ಸ್​ ಶುರು ಮಾಡುತ್ತಿದ್ದಾರೆ. 21 ವರ್ಷದ ದಿಯಾ ಪಾಲಕ್ಕಲ್‌ಗೆ ಚಿಕ್ಕ ವಯಸ್ಸಿನಲ್ಲಿಯೇ ನೃತ್ಯ, ನಟನೆ ಕಡೆಗೆ ಮುಖ ಮಾಡಿದ್ದರು. ದಿಯಾ ಪಾಲಕ್ಕಲ್ ಅವರ ತಾಯಿ ರಮ್ಯಾ ಅಜಯ್ ಕೂಡ ನಟಿ. ಅವರು ಕೂಡ ಕನ್ನಡದ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment