/newsfirstlive-kannada/media/post_attachments/wp-content/uploads/2025/03/neha-gowda6.jpg)
ಇತ್ತೀಚಿನ ಟ್ರೆಂಡ್ ಬೇರೆ. ನಮ್ಮ ಸಂಸ್ಕೃತಿ ಬಗ್ಗೆ ಯಾರೂ ಯೋಚಿಸದ ಕಾಲ ಬಂದ್ಬಿಟ್ಟಿದೆ. ಬಹುತೇಕರು ಇದೇ ಹಾದಿ ಹಿಡಿದುಬಿಟ್ಟಿದ್ದಾರೆ. ಹಾಗಂತಾ ಎಲ್ಲರನ್ನೂ ಒಂದೇ ತಕ್ಕಡಿಗೆ ಹಾಕೋದು ಕೂಡ ಸರಿಯಿಲ್ಲ. ಇವತ್ತಿಗೂ ಕೆಲವರು ಟ್ರೇಡಿಷನಲ್ ಕಾಪಾಡಿಕೊಳ್ಳೋ ನಿಟ್ಟಿನಲ್ಲಿ ಒಂದಷ್ಟು ದಿಟ್ಟ ಹೆಜ್ಜೆಯಿಡುತ್ತಿದ್ದಾರೆ. ಇದೇ ಸಾಲಿನಲ್ಲಿದ್ದಾರೆ ಕನ್ನಡ ಕಿರುತೆರೆಯ ಸ್ಟಾರ್ ನಟಿ ನೇಹಾ ಗೌಡ.
ಇದನ್ನೂ ಓದಿ:64 ವರ್ಷದ ಹಿಂದೆ ಓಡಿ ಹೋಗಿದ್ದ ಜೋಡಿಗೆ ಕೂಡಿ ಬಂದ ಕಂಕಣ ಭಾಗ್ಯ..!
ನಟಿ ನೇಹಾ ಗೌಡ ಸಖತ್ ಫೇಸಮ್ ಆಗಿದ್ದೇ ಗೊಂಬೆ ಅನ್ನೋ ಹೆಸರಿನಿಂದ. ಈ ಗೊಂಬೆ ಅನ್ನೋ ಹೆಸರು ಇವರನ್ನ ಬ್ರ್ಯಾಂಡ್ ಮಾಡಿತು. ಇಂಟರೆಸ್ಟಿಂಗ್ ಅಂದ್ರೆ, ಗೊಂಬೆ ಅನ್ನೋದು ಮಾಡರ್ನ್ ಟ್ರೇಂಡ್ ಇರೋ ನೇಮ್ ಅಲ್ಲವೇ ಅಲ್ಲ. ಪ್ರತಿಯೊಂದು ಮನೆಯಲ್ಲೂ ತಮ್ಮ ಮುದ್ದು ಹೆಣ್ಣು ಮಕ್ಕಳನ್ನ ಗೊಂಬೆ ಅಂತಾನೇ ಕರೆಯೋದು. ಇದೊಂದು ಚೆಂದದ ಹೆಸರು. ಹಳೆಯ ಕಾಲದಿಂದಲೂ ಅಜ್ಜಿಯರೋ, ಅಮ್ಮಂದಿರೋ, ಚಿಕ್ಕಮ್ಮಂದಿರೋ, ಮುದ್ದು ಮಕ್ಕಳನ್ನ ಗೊಂಬೆ ಅಂತಾನೇ ಕರೆಯೋದು.
ಹೀಗಾಗಿಯೇ ನೇಹಾ ಗೌಡ ಅವರ, ಈ ಗೊಂಬೆ ಪಾತ್ರ ಜನ ಮೆಚ್ಚುಗೆ ಗಳಿಸಿದ್ದು ಮತ್ತು ಜನರ ನಾಲಿಗೆಯಲ್ಲಿ ಗೊಂಬೆ ಅನ್ನೋ ಪದ ಇವತ್ತಿಗೂ ನಲಿದಾಡ್ತಿರೋದು. ವಿಶೇಷ ಅಂದ್ರೆ, ನೇಹಾ ಗೌಡ ಅವರು, ತಮ್ಮ ಮಗಳಿಗೆ ನಾಮಕರಣ ಮಾಡಿರುವ ಹೆಸರು, ಎಲ್ಲಾ ತರದ ಜನರ ನಾಲಿಗೆಯ ಮೇಲೆ ನಲಿದಾಡಿರುವಂತದ್ದೇ. ಶತಮಾನಗಳಿಂದ ಮನಸ್ಸಿಗೆ ಹತ್ತಿರವಾದ ಹೆಸರೇ. ಅದುವೇ ಶಾರದ.
ಇದನ್ನೂ ಓದಿ: ರೀಲ್ಸ್ಗಾಗಿ ಮಚ್ಚು ಹಿಡಿದ ವಿನಯ್, ಬುಜ್ಜಿ ಜೈಲು ಪಾಲು.. ರಜತ್ ಪತ್ನಿ ಕಣ್ಣೀರು! ಇವತ್ತು ಜಾಮೀನು ಸಿಗುತ್ತಾ?
ನೇಹಾ ಗೌಡ, ತಮ್ಮ ಮುದ್ದಾದ ಮಗಳಿಗೆ ಶಾರದ ಅನ್ನೋ ಹೆಸರು ನಾಮಕರಣ ಮಾಡಿದ್ದಾರೆ ಅಂತಾ ಕೇಳಿದಾಗ ಪ್ರತಿಯೊಬ್ಬರು ಬೆರಗಾದರು. ವ್ಹಾವ್.. ತುಂಬಾ ಚೆನ್ನಾಗಿದೆ ಅಂದವರು ಉಂಟು, ಈ ಕಾಲದಲ್ಲಿ ಇಂಥಾ ಹೆಸರಿಟ್ಟದ್ದೀರಾ ಅಂತಾ ಆಶ್ಚರ್ಯಗೊಂಡವರು ಉಂಟು. ಹಾಗಾದ್ರೆ, ನೇಹಾ ಗೌಡ ಅವರು, ತಮ್ಮ ಮಗಳಿಗೆ ಈ ಹೆಸರು ನಾಮಕರಣ ಮಾಡಿದ್ದೇಕೆ ಎಂದು ಅವರ ತಂದೆ ರಾಮಕೃಷ್ಣ ಅವರು ಹೇಳಿದ್ದಾರೆ.
ಈಗಂತೂ ಹೊಸ ಹೊಸ ಹೆಸರುಗಳನ್ನು ಜನ ಇಡುತ್ತಿದ್ದಾರೆ. ಅದರಲ್ಲೂ ಇಂಗ್ಲೀಷ್ ಟೋನ್ ಇರುವಂತ ಹೆಸರು ಬರುತ್ತಿವೆ. ಆದರಿಂದ ಮೊಮ್ಮಗಳಿಗೆ ನಮ್ಮ ಪರಂಪರೆಯ, ನಮ್ಮ ಸಂಸ್ಕೃತಿ ಇದೆಲ್ಲಾ ಬಿಂಬಿತವಾಗುವಂತ ಹೆಸರನ್ನು ಇಡಬೇಕು ಅಂತ ಅನೀಸುತ್ತು. ಹೀಗಾಗಿ ಶಾರದ ಅಂತ ಹೆಸರನ್ನು ಇಟ್ಟಿದ್ದೇವೆ. ಈ ಹೆಸರನ್ನು ಕೇಳಿದ ಎಲ್ಲರಿಗೂ ಖುಷಿ ಕೊಟ್ಟಿದೆ. ಅದರಿಂದ ನಮ್ಮೆಲ್ಲರಿಗೂ ಖುಷಿಯಾಗಿದೆ.
ಶಾರದೆ ನಮ್ಮ ವಿದ್ಯಾದೇವತೆ. ವಿದ್ಯೆಗೆ ಆಕೆಯೇ ಅಧಿಪತಿ. ಶಾರದೆ ಒಲಿಯದಿದ್ದರೆ ಬದುಕು ಇವತ್ತಿನ ಕಾಲದಲ್ಲಿ ಕಷ್ಟವೇ. ಈ ಅಕ್ಷರ ದೇವತೆಯ ಹೆಸರನ್ನ ಈ ಮೊದಲು ಯಾಕೆ ಇಡುತ್ತಿದ್ದರು ಗೊತ್ತಾ? ನಮ್ಮ ಮಗಳಿಗೆ ವಿದ್ಯೆ ಬುದ್ಧಿ ಚೆನ್ನಾಗಿ ಸಿಗಲಿ ಅನ್ನೋ ಕಾರಣಕ್ಕೆ. ಇವತ್ತಿಗೂ ಶೃಂಗೇರಿ ಶಾರದಾ ಪೀಠದಲ್ಲಿ ಅಕ್ಷರಭ್ಯಾಸ ಮಾಡಿಸಿ, ಮಕ್ಕಳನ್ನ ಶಾಲೆಗೆ ಸೇರಿಸೋ ಪ್ರತೀತಿ ಇದೆ. ಹಿಂದೂ ಧರ್ಮದಲ್ಲಿ ಶಾರದೆಗೇ ದೊಡ್ಡ ಸ್ಥಾನವಂತೂ ಇದೇ.
ಹಿಂದೂ ದೇವರ ಹೆಸರಿಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರೋ ಸಂಪ್ರದಾಯ. ಈಗೀಗ ಅದು ಬದಲಾಗಿದೆ ಅಷ್ಟೇ. ನೇಹಾ ಗೌಡ ಮತ್ತು ಚಂದನ್ ದಂಪತಿ, ಮಗುವಿಗೆ ಶಾರದ ಅನ್ನೋ ಹೆಸರಿಟ್ಟಿದ್ದು ನಮ್ಮ ಸಂಸ್ಕೃತಿಯನ್ನ ಮುಂದುವರೆಸಲು ಮತ್ತು ಮಗಳಿಗೆ ಆ ಶಾರದೆ ಒಲಿಯಲಿ ಅನ್ನೋ ಕಾರಣಕ್ಕೆ ಎಂದು ತಿಳಿದು ಬಂದಿದೆ. ನಿಜಕ್ಕೂ ಇದು ಪ್ರತಿಯೊಬ್ಬರನ್ನೂ ನಿಬ್ಬೆರಗುಗೊಳಿಸಿರೋದು ಕನ್ಫರ್ಮ್. ಮುಂದಿನ ದಿನಮಾನಗಳಲ್ಲಿ ರೀವರ್ಸ್ ಟ್ರೆಂಡ್ ಸೃಷ್ಟಿಯಾದರೇ ಅಚ್ಚರಿ ಪಡುವಂತಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ