/newsfirstlive-kannada/media/post_attachments/wp-content/uploads/2025/02/mokshitha.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಗ್ರ್ಯಾಂಡ್ ಆಗಿ ಮುಕ್ತಾಯಗೊಂಡಿದೆ. ಬಿಗ್ಬಾಸ್ನಿಂದ ಆಚೆ ಬಂದ ಮೋಕ್ಷಿತಾ ಪೈ ನ್ಯೂಸ್ಫಸ್ಟ್ ಸಂದರ್ಶನದಲ್ಲಿ ಭಾಗಿಯಾಗಿ ಕೆಲವೊಂದು ವಿಚಾರದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.
ಇದನ್ನೂ ಓದಿ: ನೀವು ಚಿನ್ನದ ಮೇಲೆ ಹೂಡಿಕೆ ಶುರು ಮಾಡಿದ್ದಲ್ಲಿ ಹಿಂದೆ ಪಡೆದ ಲಾಭ ಈಗ ಸಿಗುವುದಿಲ್ಲ; ಯಾಕೆ ಗೊತ್ತಾ?
ಹೌದು, ಬಿಗ್‌ಬಾಸ್‌ನಲ್ಲಿ ತಮ್ಮ ಮುಗ್ಧ ಮುಖದಿಂದ, ಅಷ್ಟೇ ಸಾಫ್ಟ್ ಆಗಿ ಇರುವಲ್ಲಿ ನಟಿ ಮೋಕ್ಷಿತಾ ಪೈ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. 3ನೇ ರನ್ನರ್ ಅಪ್ ಆಗಿ ಬಿಗ್ಬಾಸ್ ಮನೆಯಿಂದ ಆಚೆ ಬಂದ ಮೋಕ್ಷಿತಾ ಪೈಗೆ ಅಪಾರ ಅಭಿಮಾನಿಗಳು ಸಂಪಾದನೆ ಮಾಡಿಕೊಂಡಿದ್ದಾರೆ. ಇನ್ನೂ, ಕಿರುತೆರೆಗೆ ಎಂಟ್ರಿ ಕೊಡುವ ಮೊದಲು ಮೋಕ್ಷಿತಾ ಪೈ, ಐಶ್ವರ್ಯಾ ಪೈ ಎಂಬ ಹೆಸರನ್ನು ಇಟ್ಟುಕೊಂಡಿದ್ದರು. ಇದಾದ ಬಳಿಕ ಐಶ್ವರ್ಯಾದಿಂದ ಏಕೆ ಮೋಕ್ಷಿತಾ ಪೈ ಹೆಸರನ್ನು ಇಟ್ಟುಕೊಂಡರು ಅಂತ ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಇನ್ನೂ, ಈ ಬಗ್ಗೆ ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ ಮೋಕ್ಷಿತಾ ಪೈ, ಮೋಕ್ಷಿತಾ ಅಂದ್ರೆ ಫ್ರೀಡಂ ಅಂತ. ನನ್ನ ಯಾರಾದ್ರೂ ಹಿಡಿದಿಟ್ಟರೆ ಆಗೋದಿಲ್ಲ. ಯಾವಾಗಲೂ ಫ್ರೀ ಆಗಿ ಇರೋದಕ್ಕೆ ಇಷ್ಟ ಪಡುತ್ತೇನೆ. ಹೀಗಾಗಿ ಮೋಕ್ಷಿತಾ ಹೆಸರನ್ನು ಇಟ್ಟಿದ್ರು. ಜಾತಕಕ್ಕೆ ಸೂಟ್ ಆಗೋ ಹಾಗೇ ನನಗೆ ಮೊದಲು ಮೋ ಹಾಗೂ ಟಾ ಅಕ್ಷರದಿಂದ ಹೆಸರನ್ನು ಇಡಬೇಕು ಅಂತ ಹೇಳಿದ್ರು. ಆಗ ಜಾತಕದ ಕೇಳಿದಾಗ ಮೋಕ್ಷಿತಾ ಅಂತ ಅವರೇ ಕೊಟ್ಟರು. ಇದಕ್ಕೆ ಮತ್ತೆ ಮೋಕ್ಷಿತಾ ಅಂತ ಮರು ನಾಮಕರಣ ಮಾಡಿದ್ರು. ಇದೇ ಮೋಕ್ಷಿತಾ ಹೆಸರು ನನಗೆ ಯಶಸ್ಸನ್ನು ತಂದುಕೊಟ್ಟಿದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ