/newsfirstlive-kannada/media/post_attachments/wp-content/uploads/2025/01/bigg-boss10.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್​ ಪಡೆದುಕೊಂಡು ಮುನ್ನುಗ್ಗುತ್ತಿದೆ. ಇನ್ನೇನು ಬಿಗ್​ಬಾಸ್​ ಗ್ರ್ಯಾಂಡ್ ಫಿನಾಲೆಗೆ 2 ವಾರ ಬಾಕಿ ಉಳಿದಿದೆ. ಆದ್ರೆ. ಭಾನುವಾರದ ಸಂಚಿಕೆಯಲ್ಲಿ ಭವ್ಯಾ ಗೌಡಗೆ ಕಿಚ್ಚ ಸುದೀಪ್​ ಅವರು ಕಳಪೆ ಪಟ್ಟ ಕೊಟ್ಟಿದ್ದರು.
/newsfirstlive-kannada/media/post_attachments/wp-content/uploads/2025/01/bigg-boss9.jpg)
ಹೌದು, ಈ ವಾರದ ಮೊದಲ ನಾಮಿನೇಷನ್ ಟಾಸ್ಕ್ ವೇಳೆ ಹನುಮಂತ ಮೇಲೆ ಭವ್ಯಾ ಗೌಡ ಕೈ ಮಾಡಿದ್ದರು. ಆಟ ಆಡುವ ಭರದಲ್ಲಿ ಸಿಟ್ಟಿನಿಂದ ಭವ್ಯಾ ಗೌಡ ಹನುಮಂತನಿಗೆ ಹೊಡೆದಿದ್ದರು. ಇದಾದ ಕೂಡಲೇ ಹನುಮಂತ ಜೋರಾಗಿ ಕೂಗಿ ಭವ್ಯಾ ನನಗೆ ಹೊಡೆದರು ಅಂತ ಹೇಳಿದ್ದರು. ಆಗ ರಜತ್​ ಕೂಡ ಆಟವನ್ನು ನಿಲ್ಲಿಸಿ ಮತ್ತೆ ಶೂರು ಮಾಡಿದ್ದರು. ಆದ್ರೆ ಇಷ್ಟು ಅಷ್ಟು ಸುಲಭವಾಗಿರೋ ವಿಚಾರ ಅಲ್ಲವೇ ಅಲ್ಲ.
ಇದನ್ನೂ ಓದಿ: BBK11: ಹನುಮಂತ ರಾಕ್.. ರಜತ್, ಮಂಜು, ತ್ರಿವಿಕ್ರಮ್‌ಗೆ ಶಾಕ್! ಕಿಚ್ಚ ಸುದೀಪ್ ಹೇಳಿದ್ದೇನು?
/newsfirstlive-kannada/media/post_attachments/wp-content/uploads/2025/01/BBK1191.jpg)
ಈ ಹಿಂದೆ ಸಮೀರ್ ಆಚಾರ್ಯ ಮೇಲೆ ಕಿರಿಕ್​ ಪಾರ್ಟಿ ಸಿನಿಮಾ ನಟಿ ಸಂಯುಕ್ತ ಹೆಗ್ಡೆ ಕೈ ಮಾಡಿದ್ದರು. ಇದೇ ವಿಚಾರಕ್ಕೆ ಸಂಯುಕ್ತ ಹೆಗ್ಡೆ ಅವರನ್ನು ಬಿಗ್​ಬಾಸ್​ ಮನೆಯಿಂದ ಆಚೆ ಕಳುಹಿಸಲಾಗಿತ್ತು. ಆದ್ರೆ ಈ ಬಾರಿ ಭವ್ಯಾ ಗೌಡ, ಹನುಮಂತನ ಮೇಲೆ ಕೈ ಮಾಡಿದ್ದರು. ಇದಾದ ಬಳಿಕ ಹನುಮಂತನ ಕಾಲಿಗೆ ಬಿದ್ದು ಭವ್ಯಾ ಗೌಡ ಕ್ಷಮೆ ಕೇಳಿದ್ದರು. ಆಗ ಬಿಗ್​ಬಾಸ್​ ಕಡೆಯಿಂದ ಯಾವುದೇ ಧ್ವನಿ ಬಂದಿರಲಿಲ್ಲ.
/newsfirstlive-kannada/media/post_attachments/wp-content/uploads/2025/01/bigg-boss7.jpg)
ನಿನ್ನೆಯ ಸಂಚಿಕೆಯಲ್ಲಿ ಇದೇ ವಿಡಿಯೋ ಕ್ಲಿಪ್​ ಅನ್ನು ಹಾಕಿದ ಕಿಚ್ಚ ಸುದೀಪ್ ಈ ಬಗ್ಗೆ ಪ್ರಸ್ತಾಪ ಮಾಡಿದ್ದರು. ಹಳೆಯ ಸೀಸನ್​ನಲ್ಲಿ ಹೀಗೆ ಮಾಡಿದ್ದಕ್ಕೆ ಸ್ಪರ್ಧಿಯನ್ನೇ ಬಿಗ್​ಬಾಸ್​ ಆಚೆ ಕಳುಹಿಸಿದ್ದರು. ಆದ್ರೆ ಈ ಬಾರಿ ಯಾಕೆ ಹೀಗೆ ಮಾಡಲಿಲ್ಲ ಅಂತ ನನಗೆ ಗೊತ್ತಿಲ್ಲ. ಆದ್ರೆ ಮಾಡಿದ ತಪ್ಪಿಗೆ ಭವ್ಯಾ ನೀವು ಶಿಕ್ಷೆ ಅನುಭವಿಸಲೇ ಬೇಕು ಅಂತ ಹೇಳಿದ್ದರು. ಇದಕ್ಕೆ ಶಿಕ್ಷೆ ಎಂಬಂತೆ ಬಿಗ್​ಬಾಸ್​ ಮನೆಗೆ ಕಳಪೆ ವಸ್ತ್ರವನ್ನು ಕಳುಹಿಸಿ ಕೊಟ್ಟಿದ್ದರು. ಇದಾದ ಬಳಿಕ ಭವ್ಯಾ ನೇರವಾಗಿ ಜೈಲಿಗೆ ಹೋಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us