/newsfirstlive-kannada/media/post_attachments/wp-content/uploads/2025/05/India-modi-and-Pakistan-PM.jpg)
ನವದೆಹಲಿ: ಭಾರತದ ಮೇಲೆ ದಾಳಿ ಮಾಡಿ ಠುಸ್ ಆದ ಪಾಕಿಸ್ತಾನ ಯುದ್ಧದ ಭಯದಲ್ಲಿ ಕದನ ವಿರಾಮಕ್ಕೆ ಮುಂದಾಗಿದೆ. ಪಾಕಿಸ್ತಾನ ದಿಢೀರ್ ಅಂತ ಕದನ ವಿರಾಮ ಪ್ರಸ್ತಾಪಿಸಲು ಬಹಳ ಮುಖ್ಯವಾದ ಕಾರಣವೇ IMF ಸಾಲ.
IMF (ಅಂತರಾಷ್ಟ್ರೀಯ ಹಣಕಾಸು ನಿಧಿ) ಆರ್ಥಿಕ ನೆರವಿಗಾಗಿ ಪಾಕಿಸ್ತಾನ ಮೊರೆ ಇಟ್ಟಿತ್ತು. ಭಾರತದ ವಿರೋಧದ ನಡುವೆಯೂ IMF ಪಾಕಿಸ್ತಾನಕ್ಕೆ ಸಾಲ ಮಂಜೂರು ಮಾಡಿದೆ. 19 ಸಾವಿರ ಕೋಟಿ ರೂಪಾಯಿಯ ಸಾಲ, ಹಣದ ಅವಶ್ಯಕತೆಯಿಂದಾಗಿ ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿದೆ.
ಅಮೆರಿಕಾ, ಪಾಕ್​ಗೆ ಸಾಲ ಬಿಡುಗಡೆಗೆ ಕದನ ವಿರಾಮದ ಷರತ್ತು ವಿಧಿಸಿತ್ತು. ನಿನ್ನೆ ಮಧ್ಯಾಹ್ನ ಪಾಕ್​ನ ಡಿಜಿಎಂಒ ಕದನ ವಿರಾಮದ ಪ್ರಸ್ತಾಪಕ್ಕೆ ಭಾರತದ ಡಿಜಿಎಂಓ ಕೂಡ ಒಪ್ಪಿಕೊಂಡಿತ್ತು. ಆದರೆ ಕದನ ವಿರಾಮದ 3 ಗಂಟೆಯೊಳಗೆ ಮತ್ತೆ ದಾಳಿ ಮಾಡುವ ಮೂಲಕ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ.
/newsfirstlive-kannada/media/post_attachments/wp-content/uploads/2025/04/PM-MODI-1.jpg)
ಕದನ ವಿರಾಮ ಒಪ್ಪಿಕೊಂಡಿದ್ದೇಕೆ ಭಾರತ?
ಮಂಡಿಯೂರಿದ್ದ ಪಾಕಿಸ್ತಾನ ಪ್ರಸ್ತಾಪಿಸಿದ ಕದನ ವಿರಾಮವನ್ನು ಭಾರತ ಒಪ್ಪಿಕೊಂಡಿದ್ದೇಕೆ? ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕದನ ವಿರಾಮದ ಒಪ್ಪಿಗೆಗೆ ರಕ್ಷಣಾ ತಜ್ಞರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಭಾರತದ ಅನೇಕ ರಕ್ಷಣಾ ತಜ್ಞರು ಕದನ ವಿರಾಮಕ್ಕೆ ಭಾರತ ಒಪ್ಪಬಾರದಿತ್ತು ಅನ್ನೋ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಕದನ ವಿರಾಮದ ಕಳ್ಳಾಟ.. ಪಾಕ್ ಒಪ್ಪಿಕೊಂಡಿದ್ದೇಕೆ? ಉಲ್ಲಂಘನೆ ಮಾಡಿದ್ದೇಕೆ? ಸಂಪೂರ್ಣ ವಿವರ ಇಲ್ಲಿದೆ
ತಜ್ಞರ ಅಚ್ಚರಿಗೆ ಕಾರಣವೇನು?
ಕಾರಣ-1: ಈ ಹಂತದಲ್ಲಿ ಭಾರತ ಕದನ ವಿರಾಮಕ್ಕೆ ಒಪ್ಪಬಾರದಾಗಿತ್ತು
ಕಾರಣ-2: ಭಾರತವು ಇತಿಹಾಸದಿಂದ ಪಾಠವನ್ನ ಕಲಿಯಲಿಲ್ಲವೇ?
ಕಾರಣ-3: ಭಾರತ ಕದನ ವಿರಾಮಕ್ಕೆ ಒಪ್ಪಿದ್ರೂ ಪಾಕ್ ಗೌರವಿಸೋದಿಲ್ಲ
ಕಾರಣ-4: ಭಾರತಕ್ಕೆ ಜಾಗತಿಕ ರಾಜಕೀಯದಲ್ಲೀಗ ಅನುಕೂಲಕರ ಪರಿಸ್ಥಿತಿ
ಕಾರಣ5: ಭಾರತದ ನಡೆ ಬಗ್ಗೆ ವಿಶ್ವ ಮಟ್ಟದಲ್ಲಿ ಟೀಕೆಗಳು ಕೇಳಿ ಬಂದಿರಲಿಲ್ಲ
ಕಾರಣ-6: ಕೇವಲ ಉಗ್ರ ನೆಲೆ, ಸೇನಾ ನೆಲೆ ಹಾನಿಗೆ ಸೀಮಿತವಾಗಬಾರದಾಗಿತ್ತು
ಕಾರಣ-7: ಇಂಡಸ್ ನದಿ ನೀರು ಹಂಚಿಕೆ ಒಪ್ಪಂದ ಸಸ್ಪೆಂಡ್​ ಪಾಕ್​ಗೆ ಪರಿಣಾಮ ಬೀರಲ್ಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us