2 ವರ್ಷ ಫ್ರಿಡ್ಜ್​ನಲ್ಲಿಟ್ಟ ಸಾಂಬಾರ್ ತಿಂದು ಭಾವುಕಳಾದ ಮಹಿಳೆ; ಇದರ ಹಿಂದೆ ಇರೋದು ಕರುಳು ಹಿಂಡುವ ಕಥೆ!

author-image
Gopal Kulkarni
Updated On
2 ವರ್ಷ ಫ್ರಿಡ್ಜ್​ನಲ್ಲಿಟ್ಟ ಸಾಂಬಾರ್ ತಿಂದು ಭಾವುಕಳಾದ ಮಹಿಳೆ; ಇದರ ಹಿಂದೆ ಇರೋದು ಕರುಳು ಹಿಂಡುವ ಕಥೆ!
Advertisment
  • ಎರಡು ವರ್ಷ ಫ್ರಿಡ್ಜ್​ನಲ್ಲಿಟ್ಟಿದ್ದ ಸಂಬಾರ್ ಸೇವಿಸಿ ಭಾವುಕಳಾಗಿದ್ದು ಏಕೆ ಮಹಿಳೆ?
  • ಆ ಬಾಕ್ಸ್​ನಲ್ಲಿ ತೆಗೆದಿಟ್ಟಿದ್ದ ಸಂಬಾರ್​​ನಲ್ಲಿ ಅಡಗಿತ್ತು ಎಂದೂ ಮುಗಿಯದ ಪ್ರೇಮ
  • ವಿಡಿಯೋದಲ್ಲಿ ಆ ಕರಿಽ ಹಿಂದಿರುವ ಒಂದೊಂದು ಕಥೆಯನ್ನು ಹೇಳಿದ ಯುವತಿ

ಪತಿ ಪತ್ನಿಯರ ನಡುವಿನ ಬಾಂಧವ್ಯವೇ ಅಂತಹದು. ಅದಕ್ಕೊಂದು ಮಿತಿ ಇರುವುದಿಲ್ಲ, ಎಲ್ಲ ಸೀಮೆಗಳನ್ನು ದಾಟಿದ ಪ್ರೇಮವೊಂದು ಧಾರೆಯಾಗಿ ಹರಿದಿರುತ್ತೆ ಆ ಎರಡು ಜೀವಗಳ ನಡುವೆ. ಅದರಲ್ಲೂ ಗಂಡ ಪ್ರೀತಿಯಿಂದ ಹೆಂಡತಿಗಾಗಿ ಅಡುಗೆ ಮಾಡಿ ಬಡಿಸಿದಾಗ ಇರುವ ಸಂತೋಷವಿದೆಯಲ್ಲಾ ಅದು ಜಗತ್ತಿನ ಇನ್ಯಾವುದೇ ವಸ್ತು ಕೊಡಲಾರದು. ಹೀಗೆ ಗಂಡ ಮಾಡಿಟ್ಟ ಕರಿಽಯನ್ನು ಎರಡು ವರ್ಷ ಫ್ರಿಡ್ಜ್​​ನಲ್ಲಿಟ್ಟು ಎರಡು ವರ್ಷದ ಬಳಿಕ ಪತ್ನಿ ಅದನ್ನು ಸೇವಿಸಿದ ಘಟನೆ ಜಪಾನ್​ನಲ್ಲಿ ನಡೆದಿದೆ.

ಜಪಾನಿನ ಮಹಿಳೆ ತನ್ನ ನೆನಪಿನ ಬುತ್ತಿಯನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾಳೆ. ಆಕೆಯ ಪತಿ ಟೋನಿ ಅವಳಿಗಾಗಿ ಪ್ರೀತಿಯಿಂದ ವಿಶೇಷ ಅಡುಗೆಯನ್ನು ಮಾಡುವುದರಲ್ಲಿ ಬಹಳ ಪ್ರೀತಿ. ಎರಡು ವರ್ಷಗಳ ಹಿಂದೆ ಕೊನೆಯದಾಗಿ ಒಂದು ಕರಿಽಯನ್ನು ರೆಡಿ ಮಾಡಿದ್ದ ಟೋನಿ. ಅದೇ ದಿನವೇ ತೀರಕೊಂಡುಬಿಟ್ಟ. ಆತನ ನೆನಪಿಗಾಗಿ ಆ ಸಾಂಬಾರನ್ನು ಅವನ ಪತ್ನಿ ಫ್ರೀಜರ್​ನಲ್ಲಿ ಹಾಗೆಯೇ ಕಾದಿಟ್ಟಿದ್ದಳು. ಈಗ ಎರಡು ವರ್ಷಗಳ ಬಳಿಕ ಅವರು ತಮ್ಮ ಮನೆಯನ್ನು ಬದಲಾಯಿಸಬೇಕಾಯ್ತು ಈ ಕಾರಣದಿಂದ ಈಗ ಆ ಸಾಂಬಾರನ್ನು ಸೇವಿಸುವ ಸಮಯ ಬಂದಿದೆ ಎಂದುಕೊಂಡ ಮಹಿಳೆ ಕೊನೆಗೂ ಎರಡು ವರ್ಷದಿಂದ ಕಾದಿಟ್ಟದ ಪತಿಯಿಂದ ಸಿದ್ಧಗೊಂಡ ಪ್ರೀತಿಯ ಹಾಗೂ ಕೊನೆಯ ಸಾಂಬಾರನ್ನು ಸೇವಿಸಿದ್ದಾಳೆ.

ಇದನ್ನೂ ಓದಿ:ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ.. ಭಾರತದಲ್ಲಿ ಬಂಗಾರ ದಿಢೀರ್‌ ದುಬಾರಿ ಆಗಲು 5 ಕಾರಣಗಳು ಇಲ್ಲಿದೆ!

ಎಂತವರ ಮನವೂ ಒಂದು ಕ್ಷಣ ಕರಗುವಂತ ವಿಡಿಯೋವನ್ನು ಈ ಮಹಿಳೆ ಇನ್​ಸ್ಟಾಗ್ರಾಮ್​​ನಲ್ಲಿ ಶೇರ್ ಮಾಡಿದ್ದಾಳೆ. ತನ್ನ ಪತಿಯನ್ನು ಕ್ಷಣ ಕ್ಷಣಕ್ಕೂ ನೆನೆಪಿಸಿಕೊಂಡು ಭಾವುಕಳಾಗಿದ್ದಾಳೆ. ಟೋನಿ ಯಾವಾಗಲೂ ತಾನೇ ಅಡುಗೆಮನೆ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ.ಅವನ ಪ್ರತಿ ಅಹಾರವನ್ನು ನಾನು ಆರಾಧಿಸಿದ್ದೇನೆ ಎಂದು ಹೇಳಿದ್ದಾಳೆ ಮಹಿಳೆ. ಅದರಲ್ಲೂ ಟೋನಿ ಮಾಡಿದ ಕೊನೆಯ ಅಡುಗೆಯನ್ನು ಭಾವುಕಗೊಂಡು ಹೊಗಳಿದ್ದಾರೆ. ತರಕಾರಿಯನ್ನು ಬಳಸಿ ಮಾಡಿದ ಕರಿಽ ಇಂದಿಗೂ ಅವನ ಪ್ರೀತಿಯಂತೆ ಇದು ಕೂಡ ರುಚಿ ಕಳೆದುಕೊಂಡಿಲ್ಲ. ತನ್ನ ಘಮವನ್ನು ಕಳೆದುಕೊಂಡಿಲ್ಲ ಎಂದು ಹೇಳಿಕೊಂಡಿದ್ದಾಳೆ.

ಇದನ್ನೂ ಓದಿ:ವಿಶ್ವದಲ್ಲಿಯೇ ಅತ್ಯಂತ ಸುಂದರ ಕೈ ಬರಹ ಹೊಂದಿರುವ ಯುವತಿ.. ಇವರು ಯಾವ ದೇಶದವರು ಅಂತ ಗೊತ್ತಾ?

ಟೋನಿ ನನ್ನನ್ನು ಅಗಲು ದಿನ, ನಾನು ನನಗೆ ಜಪನೀಸ್ ಕರಿಽ ತಿನ್ನುವ ಆಸೆಯಾಗಿದೆ ಎಂದು ಹೇಳಿದ್ದೆ. ಅವನು ಅತ್ಯಂತ ಪ್ರೀತಿಯಿಂದ ನನಗಾಗಿ ತಯಾರಿಸಿ ಕೊಟ್ಟಿದ್ದ. ಅವನು ಅಗಲಿದ ನಂತರ ನಾನು ಅದನ್ನು ಸುಮ್ಮನೇ ಫ್ರೀಜರ್​ನಲ್ಲಿ ಇಟ್ಟುಕೊಂಡಿದ್ದೆ. ಆದರೆ ಈಗ ಬೇರೆ ಕಡೆ ಹೋಗಬೇಕಾಗಿರ ಬಂದಿರುವುದರಿಂದ ನಾನು ಕೊನೆಗೂ ಅದನ್ನು ಸೇವಿಸಬೇಕಾಯ್ತು. ಟೋನಿ ನನ್ನ ಅಡುಗೆ ಮನೆಯ ಹೃದಯವೇ ಆಗಿ ಹೋಗಿದ್ದ. ನಾನು ಏನೇ ಬೇಡಿಕೆಯಿಟ್ಟರು ಅದನ್ನು ಅತ್ಯಂತ ಪ್ರೀತಿಯಿಂದ ಮಾಡಿ ಕೊಡುತ್ತಿದ್ದ. ಅದು ಅವನ ಪ್ರೀತಿ ಅಭಿವ್ಯಕ್ತಿ ಪಡಿಸುವ ರೀತಿಯಾಗಿತ್ತು.

ಧನ್ಯವಾದ ಟೋನಿ, ನಿನ್ನ ಈ ಕೊನೆಯ ಆಹಾರ ಇದು ನಮ್ಮ ಮನೆಯಲ್ಲಿ. ಇದರೊಂದಿಗೆ ಅನ್ನವನ್ನು ಬೆರೆಸಿ ತಿನ್ನಬೇಕು ಅಂತಲೇ ನನಗೆ ಅನಿಸಲಿಲ್ಲ ಎಂದು ಹೇಳಿಕೊಂಡ ಮಹಿಳೆ, ಪತಿ ತಯಾರಿಸಿದ್ದ ಕೊನೆಯ ಸಾಂಬಾರನ್ನು ಹಾಗೆಯೇ ಸೇವಿಸಿ ಅದನ್ನು ವಿಡಿಯೋ ಮಾಡಿ ಇನ್​ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತನ್ನ ಪತಿ ಪ್ರೀತಿಯ ಪರಾಕಾಷ್ಠೆಯ ಒಂದೊಂದು ವಿವವರವನ್ನು ಹೇಳುತ್ತಾ ಆ ಸಾಂಬಾರನ್ನು ಸೇವಿಸಿದ್ದಾರೆ ಮಹಿಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment