/newsfirstlive-kannada/media/post_attachments/wp-content/uploads/2024/12/big-boss.jpg)
ಕನ್ನಡದ ಬಿಗ್​ಬಾಸ್​ ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಮುನ್ನುಗ್ಗುತ್ತಿದೆ. ಪ್ರತಿ ವಾರದಂತೆ ಈ ವಾರ ಕೂಡ ಬಿಗ್​ಬಾಸ್​ ಸ್ಪರ್ಧಿಗಳಿಗೆ ಟಾಸ್ಕ್​ಗಳನ್ನು ಕೊಟ್ಟಿದ್ದರು. ಅದು ಕೂಡ ನಾಮಿನೇಷನ್​ನಿಂದ ಪಾರಾಗಲು ಟಾಸ್ಕ್​ಗಳನ್ನು ನೀಡಿದ್ದರು.
ಇದನ್ನೂ ಓದಿ:ದಕ್ಷಿಣ ಭಾರತದವರು ಅರ್ಹರಲ್ಲ, ಕೆಲಸ ಕೊಡಲ್ಲ ಎಂದ ಕನ್ಸಲ್ಟಿಂಗ್ ಕಂಪನಿ..! ಯಾಕಿಷ್ಟು ಧಿಮಾಕು..?
ಆದರೆ ಈ ಬಾರಿಯ ಬಿಗ್​ಬಾಸ್​ ಮನೆಯ ಸ್ಪರ್ಧಿಗಳು ಪದೇ ಪದೇ ಟಾಸ್ಕ್​ ಅನ್ನು ಅರ್ಧಕ್ಕೆ ರದ್ದುಗೊಳಿಸುತ್ತಲೇ ಬಂದಿದ್ದಾರೆ. ಈ ಬಾರಿಯೂ ಕೂಡ ಇಬ್ಬರು ಉಸ್ತುವಾರಿಗಳಿಂದ ಟಾಸ್ಕ್​ ಅರ್ಧಕ್ಕೆ ನಿಂತು ಹೋಗಿದೆ. ಹೌದು, ಬಿಗ್​ಬಾಸ್​ ಕೊಟ್ಟ ಟಾಸ್ಕ್​ ಅನ್ನು ಸ್ಪರ್ಧಿಗಳು ಆಡುತ್ತಿದ್ದರು. ಆದ್ರೆ ಇದೇ ವೇಳೆ ಐಶ್ವರ್ಯಾ ಅವರು ಗೆರೆ ದಾಟಿ ಒಳಗಡೆ ಬಂದಿದ್ದಾರೆ ಎಂದು ಚೈತ್ರಾ ಕುಂದಾಪುರ ವಾದ ಮಾಡಿದ್ದಾರೆ.
ಇದಕ್ಕೆ ಹನುಮಂತ ಕೂಡ ಪ್ರತಿವಾದ ಮಾಡಿದ್ದಾರೆ. ಕೊನೆಗೆ ಇಬ್ಬರು ಒಮ್ಮತದ ನಿರ್ಧಾರ ತೆಗೆದುಕೊಳ್ಳದ ಕಾರಣ ಬಿಗ್​ಬಾಸ್​ ಮನೆ ಮಂದಿಗೆ ಶಿಕ್ಷೆ ಕೊಟ್ಟಿದ್ದಾರೆ. ತಂಡದ ನಾಯಕರಾಗಿದ್ದ ರಜತ್​ ಹಾಗೂ ತ್ರಿವಿಕ್ರಮ್​ ಸ್ಪರ್ಧಿಗಳ ಜೊತೆಗೆ ಚರ್ಚಿಸಿ ಒಬ್ಬರನ್ನು ನಾಮಿನೇಟ್ ಮಾಡಿ ಅಂತ ಹೇಳಿದ್ದಾರೆ. ಇದಕ್ಕೆ ತ್ರಿವಿಕ್ರಮ್​ ನಾನು ನನ್ನನ್ನೇ ನಾಮಿನೇಟ್ ಮಾಡಿಕೊಳ್ಳುತ್ತೇನೆ ಅಂತ ಹೇಳಿದ್ದಾರೆ. ಆಗ ಅದೇ ತಂಡದ ಸ್ಪರ್ಧಿಗಳು ಓಕೆ ಎಂದಿದ್ದಾರೆ. ಇದಾದ ಬಳಿಕ ಬಿಗ್​ಬಾಸ್​ ನಿಮಯದ ಪ್ರಕಾರ ತ್ರಿವಿಕ್ರಮ್​ ಹಾಗೂ ಹನುಮಂತ ನಾಮಿನೇಟ್​ ಆಗಿದ್ದಾರೆ. ಇನ್ನೂ ಇಂದಿನ ಸಂಚಿಕೆಯಲ್ಲಿ ಯಾರು ಬಿಗ್​ಬಾಸ್​ ಮನೆಯಿಂದ ಆಚೆ ಹೊಗಲಿದ್ದಾರೆ ಎಂದು ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ