/newsfirstlive-kannada/media/post_attachments/wp-content/uploads/2025/05/gouthami5.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​​ಬಾಸ್​ ಸೀಸನ್ 11ರ ಸ್ಪರ್ಧಿಗಳು ಸಖತ್​ ಬ್ಯುಸಿಯಾಗಿದ್ದಾರೆ. ಅದರಲ್ಲೂ ಸತ್ಯ ಸೀರಿಯಲ್​ ಮೂಲಕ ಸಖತ್​ ಫೇಮಸ್​ ಆಗಿದ್ದ ಗೌತಮಿ ಜಾಧವ್ ಅವರು ಬಿಗ್​ಬಾಸ್​ ಮನೆಗೆ ಎಂಟ್ರಿ ಕಮಾಲ್​ ಮಾಡಿದ್ರು.
ಇದನ್ನೂ ಓದಿ: ಪುಟ್ಟಕ್ಕನ ಮಕ್ಕಳು ವೀಕ್ಷಕರಿಗೆ ಶಾಕಿಂಗ್​ ಸುದ್ದಿ; ಮುಕ್ತಾಯದ ಹಂತದಲ್ಲಿದೆ ಟಾಪ್ ಸೀರಿಯಲ್
ಬರೋಬ್ಬರಿ 111 ದಿನಗಳ ಕಾಲ ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಂಡು ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಬಳಿಕ ನಟಿ ಗೌತಮಿ ಜಾಧವ್ ಅಷ್ಟಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಉಗ್ರಂ ಮಂಜು ಅವರ ಜೊತೆಗೆ ಬಿಟ್ಟು ಮತ್ತೇ ಎಲ್ಲೂ ಖಾಸಗಿಯಾಗಿ ಕಾಣಿಸಿಕೊಂಡಿಲ್ಲ.
ಅಷ್ಟೇ ಯಾಕೆ ಬಿಗ್​ಬಾಸ್​ ಸೀಸನ್ 11ರ ಸ್ಪರ್ಧಿಗಳಾಗಿದ್ದ ರಂಜಿತ್​ ಕುಮಾರ್​​, ಚೈತ್ರಾ ಕುಂದಾಪುರ ಅವರ ಮದುವೆಗೂ ನಟಿ ಗೌತಮಿ ಜಾಧವ್​ ಭಾಗಿಯಾಗಿರಲಿಲ್ಲ. ಹೀಗಾಗಿ ಅಭಿಮಾನಿಗಳಲ್ಲೂ ಗೊಂದಲ ಮನೆ ಮಾಡಿತ್ತು. ಇದೀಗ ಆ ಗೊಂದಲಕ್ಕೆ ಗೌತಮಿ ಜಾಧವ್ ತೆರೆ ಎಳೆದಿದ್ದಾರೆ.
ಈ ಬಗ್ಗೆ ನ್ಯೂಸ್​ ಫಸ್ಟ್​ನೊಂದಿಗೆ ಮಾತಾಡಿದ ಅವರು, ನೀವು ನನ್ನನ್ನೂ 111 ದಿನ ಬಿಗ್​ಬಾಸ್ ಮನೆಯಲ್ಲಿ ನೋಡಿದ್ದೀರಾ. ತುಂಬಾ ಕಡಿಮೆ ಜನರ ಜೊತೆಗೆ ಇರೋಳು ನಾನು. ಹಾಂಗಂತ ಕಾರ್ಯಕ್ರಮ, ಸಮಾರಂಭಕ್ಕೆ ಹೋಗೋದಿಲ್ಲ ಅಂತಲ್ಲ. ಹಾಗೇ ನೋಡಿದ್ರೆ ಚೈತ್ರಾ ಅವರ ಮದುವೆಗೆ 2 ದಿನದ ಹಿಂದೆ ನಾನು ಮಂಗಳೂರಿನಲ್ಲೇ ಇದ್ದೇ. ಆ ಟೈಮ್​ನಲ್ಲಿ ಹೋಗೋದಕ್ಕೆ ಆಗಿರಲಿಲ್ಲ. ನನಗೆ ಟೈಮ್​ ಕೂಡಿ ಬರುತ್ತಿಲ್ಲ. ಎಲ್ಲೂ ಹೋಗೋದಕ್ಕೂ ಆಗುತ್ತಿಲ್ಲ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ