/newsfirstlive-kannada/media/post_attachments/wp-content/uploads/2024/07/Sex-Life.jpg)
ಬಾಡಿ ಸ್ಮೆಲ್​​ ಚೆನ್ನಾಗಿರಬೇಕು ಎಂಬುದು ಎಲ್ಲರ ಆಸೆ. ಅದರಲ್ಲೂ ಜೋಡಿಗಳ ಮಧ್ಯೆ ಬಾಡಿ ಸ್ಮೆಲ್​ ಅನ್ನೋದು ಬಹಳ ಮ್ಯಾಟರ್​ ಆಗುತ್ತೆ. ಇದರಿಂದ ದೈಹಿಕ ಅನ್ಯೋನ್ಯತೆ ಹೆಚ್ಚಾಗುತ್ತದೆ. ಲೈಂಗಿಕ ತೃಪ್ತಿಯಲ್ಲೂ ಬಾಡಿ ಸ್ಮೆಲ್​​ ಮಹತ್ವದ ಪಾತ್ರ ವಹಿಸುತ್ತದೆ. ನಮ್ಮ ಮನಸ್ಥಿತಿಯನ್ನು ಸುಧಾರಿಸಲು; ಸಂಗಾತಿ ಜೊತೆ ಸುಂದರ ಕ್ಷಣಗಳು ಕಳೆಯಲು ಇದು ಬಹಳ ಸಹಕಾರಿ ಆಗುತ್ತದೆ ಎಂದರೆ ನಂಬಲೇಬೇಕು. ಹೀಗಿರುವಾಗ ದೇಹದ ದುರ್ವಾಸನೆಯಿಂದ ಬ್ರೇಕಪ್​, ಡೀವೋರ್ಸ್​ ಆಗುತ್ತದೆ ಎನ್ನುತ್ತಾರೆ ಲೈಂಗಿಕ ತಜ್ಞರು.
ಹೌದು, ಹಾರ್ಮೋನ್ಸ್​ ಬದಲಾವಣೆಯಿಂದಲೂ ದೇಹದಿಂದ ದುರ್ವಾಸನೆ ಬರಬಹುದು. ಕೆಲವೊಮ್ಮೆ ನಮ್ಮ ನಿರ್ಲಕ್ಷ್ಯದಿಂದಲೂ ಕೆಟ್ಟ ವಾಸನೆ ಬರುತ್ತದೆ. ಇನ್ಮುಂದೆ ಯಾವುದೇ ಕಾರಣಕ್ಕೂ ನಾವು ದೇಹದ ವಾಸನೆ ಬಗ್ಗೆ ನಿರ್ಲಕ್ಷ್ಯತೆ ತೋರಬಾರದು. ಕಾರಣ ಇದರಿಂದ ಪ್ರೇಮಿಗಳ ನಡುವೆ ಬ್ರೇಕ್ ಅಪ್ ಮತ್ತು ಗಂಡ ಹೆಂಡ್ತಿ ಮಧ್ಯೆ ಡಿವೋರ್ಸ್​ ಆಗಬಹುದು.
ನೀವು ಗಮನಿಸಲೇಬೇಕಾದ ಹಲವು ಅಂಶಗಳು
- ಶಾಖ, ಬೆವರಿನ ಪರಿಣಾಮ ಕೂದಲು ಚರ್ಮದೊಂದಿಗೆ ಅಂಟಿಕೊಂಡು ಕೆಟ್ಟ ವಾಸನೆ ಬರುತ್ತದೆ
- ದೇಹದಿಂದ ಬರುವ ಈ ಕೆಟ್ಟ ವಾಸನೆ ನಮ್ಮ ಹತ್ತಿರ ಸಂಗಾತಿ ಬರದಂತೆ ತಡೆಯುತ್ತದೆ ಎನ್ನಬಹುದು
- ಕೆಸದಲ್ಲಿ ಬ್ಯುಸಿ ಇರುವಾಗ ಹಲವರು ಬೆವರುವ ಕಾರಣದಿಂದಲೂ ಅಂಡರ್ ಆರ್ಮ್ ವಾಸನೆ ಬರುತ್ತೆ
- ಬೆವರು ತುಂಬಾ ಕೆಟ್ಟ ವಾಸನೆ ಹೊಂದಿದ್ರೆ ಸಂಬಂಧದಲ್ಲಿ ಸ್ಪೆಷಲ್ ಕ್ಷಣಗಳಿಗೆ ಅಡ್ಡಿಯಾಗಬಹುದು
- ಸ್ನಾನ ಮಾಡುವ ಮತ್ತು ಸುಗಂಧ ದ್ರವ್ಯಗಳನ್ನು ಬಳಸುವ ಮೂಲಕ ವಾಸನೆ ನಿಯಂತ್ರಿಸಬಹುದು
- ಯಾವುದೇ ಕಾರಣಕ್ಕೂ ನಮ್ಮ ಬಾಯಿಯಿಂದ ಬರುವ ವಾಸನೆಯನ್ನು ನಿರ್ಲಕ್ಷಿಸಲಾಗುವುದಿಲ್ಲ
- ದುರ್ವಾಸನೆ ವೈಯಕ್ತಿಕವಾಗಿ ಮಾತ್ರವಲ್ಲದೆ ವೃತ್ತಿಪರ ಜೀವನದಲ್ಲಿಯೂ ಮುಜುಗರ ತರಬಹುದು
- ಬಾಯಿಯಿಂದ ಬರೋ ದುರ್ವಾಸನೆ ಎಷ್ಟೋ ಜನರ ನಡುವಿನ ಸಂಬಂಧವನ್ನು ಕೊನೆಗೊಳಿಸಿದೆ
- ತಮ್ಮ ಬೂಟುಗಳನ್ನು ತೆಗೆದು ಎಲ್ಲಿಯಾದ್ರೂ ಕುಳಿತರೆ ಸುತ್ತಲಿನ ಜನರಿಗೆ ಉಸಿರಾಡಕ್ಕೂ ಆಗುವುದಿಲ್ಲ
- ಆತ್ಮೀಯ ಕ್ಷಣಗಳಲ್ಲಿ ಪಾದಗಳಿಂದ ಬರುವ ವಾಸನೆ ನಿಮ್ಮಿಬ್ಬರನ್ನೂ ಹತ್ತಿರಕ್ಕೆ ತರುವುದಿಲ್ಲ ಎನ್ನಬಹುದು
- ದುರ್ವಾಸನೆಯಿಂದ ನಿಮ್ಮ ಲವ್ ಲೈಫಲ್ಲಿ ರೋಮ್ಯಾನ್ಸ್ ಕಡಿಮೆಯಾಗಿ ಅಂತರ ಕೂಡ ಹೆಚ್ಚಾಗಬಹುದು
- ದೇಹದ ಜೊತೆಗೆ ಖಾಸಗಿ ಅಂಗಗಳ ಸ್ವಚ್ಛತೆ ಮುಖ್ಯ; ಇದು ಲೈಂಗಿಕ ಆಸಕ್ತಿ ಹೆಚ್ಚು ಮಾಡಲು ಸಹಕಾರಿ
ಇದನ್ನೂ ಓದಿ:ಮಹಿಳೆಯರೇ ಎಚ್ಚರ.. ನಾನ್-ಸ್ಟಿಕ್ ಪ್ಯಾನ್​ನಲ್ಲಿ ಅಡುಗೆ ಮಾಡ್ತಿದ್ದೀರಾ; ಹಾಗಿದ್ರೆ ಕಾದಿದೆ ಅಪಾಯ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us