/newsfirstlive-kannada/media/post_attachments/wp-content/uploads/2025/04/FEVER.jpg)
ಅನೇಕರು ಜ್ವರ ಬಂದಾಗ ಗೊಣಗಲು (ನರಳಲು) ಪ್ರಾರಂಭಿಸ್ತಾರೆ. ಇನ್ನೂ ಕೆಲವರು ವಿಚಿತ್ರ, ವಿಚಿತ್ರವಾಗಿ ವರ್ತಿಸುತ್ತಾರೆ. ಇದನ್ನು ನೋಡಿದ ಕುಟುಂಬಸ್ಥರು ಆತಂಕಕ್ಕೆ ಒಳಗಾಗುತ್ತಾರೆ. ಪ್ರಶ್ನೆ ಏನೆಂದರೆ ಅವರು ಯಾಕೆ ಹಾಗೆ ಮಾಡ್ತಾರೆ ಅನ್ನೋದು. ಜ್ವರ ಬಂದಾಗ ಮೆದುಳಿನ ಮೇಲೆ ಎಷ್ಟು ಪರಿಣಾಮ ಬೀರುತ್ತದೆ.. ರೋಗಿ ಗೊಣಗುವ ಹಿಂದಿನ ‘ಜ್ವರದ ರಹಸ್ಯ’ ಏನು ಅನ್ನೋ ವಿವರ ಇಲ್ಲಿದೆ.
ಇದನ್ನೂ ಓದಿ: ಕೂದಲು ಆಯ್ತು, ಈಗ ಉಗುರು ಉದುರುವ ಸಮಸ್ಯೆ.. ಇಡೀ ಗ್ರಾಮವೇ ಕಂಗಾಲು..!
ಜ್ವರ ಬಂದಾಗ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದರಿಂದ ದೇಹ ಗೊಂದಲಕ್ಕೆ ಒಳಗಾಗುತ್ತದೆ. ವೈರಲ್ ಅಥವಾ ಬ್ಯಾಕ್ಟೀರಿಯಾದಂಥ ಸೋಂಕು ಆವರಿಸಿದಾಗ ದೇಹದಲ್ಲಿ ಪ್ರತಿರಕ್ಷಣಾ ಕಾರ್ಯ ಸಕ್ರಿಯಗೊಳ್ಳುತ್ತದೆ. ಇದು ಸಾಮಾನ್ಯ ದೇಹದ ಉಷ್ಣತೆಯನ್ನು (98.6°F) 102°F, 103°F ಅಥವಾ ಅದಕ್ಕಿಂತಲೂ ಹೆಚ್ಚು ಹೆಚ್ಚಿಸಲು ಕಾರಣವಾಗುತ್ತದೆ.
ಇದನ್ನೂ ಓದಿ: RCB ಪಾಲಿಗೆ 4 ಬಿಗ್ ಸ್ಟಾರ್ ಕಂಟಕ.. ಗೆಲುವಿನ ಕನಸಿಗೆ ನಮ್ಮವರೇ ವಿಲನ್..!
ದೇಹದಲ್ಲಿ ಬಿಸಿ ಹೆಚ್ಚಾದಂತೆ ದೇಹ ಮಾತ್ರವಲ್ಲದೇ ಮೆದುಳು ಕೂಡ ಬಿಸಿಯಾಗಲು ಪ್ರಾರಂಭಿಸುತ್ತದೆ. ಇದರಿಂದ ನಮ್ಮ ಮೆದುಳು ತೊಂದರೆಗೆ ಒಳಗಾಗುತ್ತದೆ. ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ನರಕೋಶಗಳಲ್ಲಿ ಸಮಸ್ಯೆಗಳು ಶುರುವಾಗುತ್ತವೆ. ಇದೇ ಕಾರಣಕ್ಕೆ ಸೋಂಕಿತ ವ್ಯಕ್ತಿ ವಿಚಿತ್ರ ವಿಷಯಗಳನ್ನು ಹೇಳಲು ಪ್ರಾರಂಭಿಸುತ್ತಾನೆ.
ಅದು ಕೇಳುಗರಿಗೆ ಭಯಾನಕ ಅಥವಾ ತಮಾಷೆಯಾಗಿ ಕಾಣಿಸಬಹುದು. ಇದನ್ನು ವೈಜ್ಞಾನಿಕ ಭಾಷೆಯಲ್ಲಿ ಡೆಲಿರಿಯಮ್ (Delirium) ಅಂತಾ ಕರೆಯಲಾಗುತ್ತದೆ. ಇಲ್ಲಿ ಓರ್ವ ವ್ಯಕ್ತಿ ಗೊಂದಲಕ್ಕೆ ಒಳಗಾಗುತ್ತಾನೆ. ಸತ್ಯ ಮತ್ತು ಸುಳ್ಳಿನ ನಡುವೆ ವ್ಯತ್ಯಾಸ ಸಹ ಆತನಿಗೆ ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ ತೀರಾ ಪರಿಚಯಸ್ಥರ ಹೆಸರುಗಳನ್ನು ಸಹ ಮರೆತುಬಿಡುತ್ತಾರೆ. ಕೆಲವೊಮ್ಮೆ ಜೋರಾಗಿ ಮಾತನಾಡಲು ಪ್ರಾರಂಭಿಸ್ತಾರೆ.
ಅಧಿಕ ಜ್ವರ ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
- ಅಧಿಕ ಜ್ವರ ನರಗಳ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ಯೋಚಿಸುವ, ಅರ್ಥ ಮಾಡಿಕೊಳ್ಳುವ ಶಕ್ತಿ ಕುಂದುತ್ತದೆ
- ಜ್ವರದಿಂದ ಬಳಲುತ್ತಿರೋರಿಗೆ ಏನೋ ನೋಡುತ್ತಿದ್ದಂತೆ, ಯಾವುದೋ ವಿಷಯವನ್ನು ಕೇಳುತ್ತಿದ್ದಂತೆಯೇ ಭಾಸವಾಗುತ್ತದೆ.. ಇದನ್ನು ಜ್ವರದ ಸನ್ನಿ ಎಂದು ಕರೆಯಲಾಗುತ್ತದೆ
- ಜ್ವರದಿಂದ ದೇಹವು ದಣಿದಿರುತ್ತದೆ, ಔಷಧವು ಅದರ ಪರಿಣಾಮವನ್ನು ಬೀರುತ್ತದೆ. ಮನಸ್ಸು ಅರ್ಧ ನಿದ್ರೆ ಮತ್ತು ಅರ್ಧ ಎಚ್ಚರವಾಗಿರುತ್ತದೆ. ಅಷ್ಟರಲ್ಲಿ ಕೆಲವರು ಗೊಣಗಲು ಪ್ರಾರಂಭಿಸ್ತಾರೆ.
ಇದನ್ನೂ ಓದಿ: RCB ಪ್ಲೇಯಿಂಗ್-11ನಿಂದ ಲಿವಿಂಗ್ ಸ್ಟೋನ್ಗೆ ಔಟ್.. ಬಲಿಷ್ಠ ಆಟಗಾರ ಎಂಟ್ರಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ