/newsfirstlive-kannada/media/post_attachments/wp-content/uploads/2025/05/Mahrang-Baloch-4.jpg)
ಭಾರತದ ವಿರುದ್ಧ ಪ್ರತಿಯೊಂದಕ್ಕೂ ಕುತಂತ್ರ ಮಾಡುವ ಪಾಕಿಸ್ತಾನ, ತನ್ನದೇ ಹೊಟ್ಟೆಯೊಳಗೆ ತಡೆದುಕೊಳ್ಳಲಾಗದ ನೋವುಗಳನ್ನ ತಿನ್ನುತ್ತಿದೆ. ಅಷ್ಟಿದ್ದೂ ಭಾರತಕ್ಕೆ ಗೊಡ್ಡು ಬೆದರಿಕೆ, ಭಾರತದ ವಿರುದ್ಧ ಅಪಪ್ರಚಾರದಂಥ ಪಿತೂರಿಗಳನ್ನು ಮಾಡೋದನ್ನ ನಿಲ್ಲಿಸಲ್ಲ. ಹುಟ್ಟು ಗುಣ ಸುಟ್ಟರೂ ಹೋಗಲ್ಲ ಅನ್ನವ ಹಾಗೆ.
ವಿಷಯ ಅದಲ್ಲ! ಪಾಕ್ನಲ್ಲಿ ಹೊತ್ತಿರುವ ಆಂತರಿಕ ಬೆಂಕಿ ದಿನದಿಂದ ದಿನಕ್ಕೆ ಹೊತ್ತಿ ಉರಿಯುತ್ತಿದೆ. ಅದಕ್ಕೆ ಕಾರಣ, ಬಲೂಚಿಸ್ತಾನ್! ಬಲೂಚಿಸ್ತಾನ ಪಾಕಿಸ್ತಾನದ ಒಂದು ಭಾಗ. ಆದರೆ, ಇಲ್ಲಿಗೆ ಬರಲು ಪಾಕಿಸ್ತಾನಿ ನಾಯಕರು ಇರಲಿ, ಸೈನಿಕರೂ ಸಹ ಹಿಂಜರಿಯುತ್ತಾರೆ. ಕೆಲವು ವರ್ಷಗಳಿಂದ ಬಲೂಚ್ ಲಿಬರೇಶನ್ ಆರ್ಮಿ, ಪಾಕ್ ಸರ್ಕಾರದ ವಿರುದ್ಧ ನಡೆಸ್ತಿರುವ ಚಳವಳಿ ಇಷ್ಟಕ್ಕೆಲ್ಲ ಕಾರಣ. ಅವರ ಹೋರಾಟ ಎಷ್ಟು ಉಗ್ರ ಮತ್ತು ತೀವ್ರವಾಗಿದೆ ಅಂದರೆ ಪಾಕ್ ಸೇನೆಯೇ ಗಢಗಢ ನಡುಗುತ್ತಿದೆ! ಅಷ್ಟರ ಮಟ್ಟಿಗೆ ಪಾಕ್ ಸೇನೆಗೆ ಬಲೂಚ್ ನಾಯಕರು ಮರೆಯಲಾಗದ ಪೆಟ್ಟು ಕೊಡ್ತಿದ್ದಾರೆ.
ಇದನ್ನೂ ಓದಿ: ಬೇಡಿಕೆ ಕಳೆದುಕೊಂಡ ಇಂಜಿನಿಯರಿಂಗ್.. ಆಘಾತಕಾರಿ ಎಚ್ಚರಿಕೆ ಕೊಡ್ತಿದೆ ಕಳೆದ ಬಾರಿಯ ಅಡ್ಮಿಷನ್ ಸಂಖ್ಯೆ..!
ಅದೇನೇ ಇರಲಿ! ಈಗ, ಬಲೂಚ್ನಲ್ಲಿ ಇರುವ ಓರ್ವ ಯುವತಿ ಬಗ್ಗೆ ತಿಳಿದುಕೊಳ್ಳೋಣ. ಇವರು ಇಂದಿಗೂ ಯಾವುದೇ ಶಸ್ತ್ರಾಸ್ತ್ರ ಹಿಡಿದಿಲ್ಲ. ಅವರ ಬೆಂಬಲಿಗರೂ ಸಹ ಹಿಂಸಾಚಾರವನ್ನು ನೆಚ್ಚಿಕೊಂಡಿಲ್ಲ. ಹೀಗಿದ್ದೂ ಪಾಕಿಸ್ತಾನ ಆಕೆಯ ಹೆಸರನ್ನು ಕೇಳಿದ್ರೆ ನಿದ್ರೆಯಿಂದ ಬೆಚ್ಚಿ ಬೀಳುತ್ತದೆ. ಇವರ ಹೋರಾಟದ ಮುಂದೆ ಪಾಕಿಸ್ತಾನದ ವಿರುದ್ಧ ಬಲೂಚ್ ಸೇನೆಯ ದಾಳಿಗಳು ಸಹ ಚಿಕ್ಕದಾಗಿ ಕಾಣುತ್ತವೆ.
ಅಂದ್ಹಾಗೆ ಅವರು ಬೇರೆ ಯಾರೂ ಅಲ್ಲ, ಮಹ್ರಾಂಗ್ ಬಲೋಚ್ (Mahrang Baloch). ಭಾರತದೊಂದಿಗಿನ ಮಿಲಿಟರಿ ಸಂಘರ್ಷದಲ್ಲಿ ಪಾಕಿಸ್ತಾನ ಭಾರೀ ಅವಮಾನ ಎದುರುಸಿತು. ಬೆನ್ನಲ್ಲೇ ಮಹ್ರಾಂಗ್ ಬಲೂಚ್ ಅವರ ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಅವರ ಭಾಷಣಗಳ ಸ್ವರ ಎಷ್ಟು ಉರಿಯುತ್ತಿದೆಯೆಂದರೆ, ಎಲ್ಲರೂ ಸಹ ಆಕೆಯ ಮಾತುಗಳನ್ನು ಕೇಳಲು ಆರಂಭಿಸಿದ್ದಾರೆ.
ಇದನ್ನೂ ಓದಿ: ದರ್ಶನ್, ಪವಿತ್ರಾ ಮತ್ತೆ ಅಕ್ಕ-ಪಕ್ಕ.. ಬರೀ ಫೋನ್ ನಂಬರ್ ಒಂದೇ ಎಕ್ಸ್‌ಚೇಂಜ್ ಆಗಿಲ್ಲ; ಏನೇನಾಯ್ತು?
ಯಾರು ಮಹ್ರಾಂಗ್ ಬಲೂಚ್..?
ಮಹ್ರಾಂಗ್ ಬಲೂಚ್, ಬಲೂಚ್ ಯಕ್ಜೆಹತಿ ಸಮಿತಿಯ (BYC: Baloch Yakjehti Committee) ಲೀಡರ್. ಮೇಲಾಗಿ ಮಾನವ ಹಕ್ಕುಗಳ ಹೋರಾಟಗಾರ್ತಿ ಮತ್ತು ವಕೀಲೆ. ಪಾಕಿಸ್ತಾನ ಸರ್ಕಾರ ಮತ್ತು ಸೇನೆಯು ಬಲೂಚಿಸ್ತಾನದ ಮೇಲೆ ನಡೆಸ್ತಿರುವ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಪಾಕ್ ಸರ್ಕಾರದ ನಿರಂತರವಾಗಿ ಪ್ರತಿಭಟನೆ ಮಾಡ್ತಿದ್ದಾರೆ. ಮಹ್ರಾಂಗ್ ಬಲೂಚ್, ಬಲೂಚಿಸ್ತಾನದ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಮಹ್ರಾಂಗ್ ತಂದೆ-ತಾಯಿಗೆ ಐದು ಹೆಣ್ಮಕ್ಕಳು, ಓರ್ವ ಸಹೋದರ. ಮಹ್ರಾಂಗ್ ತಂದೆಯ ಹೆಸರು ಅಬ್ದುಲ್ ಗಫರ್ ಬಲೂಚ್!
ಇವರು ಓರ್ವ ಕಾರ್ಮಿಕ ಹಾಗೂ ರಾಜಕೀಯ ಕಾರ್ಯಕರ್ತರಾಗಿದ್ದರು. 2009ರಲ್ಲಿ ಮಹ್ರಾಂಗ್ಗೆ 16 ವರ್ಷವಿದ್ದಾಗ ಅಬ್ದುಲ್ ಗಫರ್ ಅವರನ್ನು ಪಾಕಿಸ್ತಾನಿ ಸೇನೆಯು ಕರಾಚಿಯಲ್ಲಿ ಅಪಹರಿಸಿತ್ತು. 2011ರಲ್ಲಿ ಬರ್ಬರವಾಗಿ ಕೊಲೆ ಮಾಡಿ ಬಿಸಾಡಿತ್ತು. ಅವರ ಮೃತದೇಹದ ಮೇಲೆ ಪಾಕಿಸ್ತಾನಿ ಸೇನೆಯ ಕ್ರೌರ್ಯ ಮತ್ತು ಅನಾಗರಿಕತೆಯ ಗುರುತುಗಳಿದ್ದವು. ತಂದೆಯ ದೇಹ ನೋಡಿದ ಸ್ಥಳದಲ್ಲೇ ಮಹ್ರಾಂಗ್, ಪಾಕಿಸ್ತಾನ ಸರ್ಕಾರದ ವಿರುದ್ಧ ಪ್ರತಿಜ್ಞೆ ಮಾಡ್ತಾರೆ. ಅಲ್ಲಿಂದಲೇ ಸರ್ಕಾರ ವಿರುದ್ಧ ರಣಕಹಳೆ ಮೊಳಗಿಸುತ್ತಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್‌ನ್ಯೂಸ್.. 1 ಕೋಟಿವರೆಗೂ ಎಜುಕೇಷನ್ ಲೋನ್
ತಂದೆಯ ಹತ್ಯೆಯ ನಂತರ ಮಹ್ರಾಂಗ್ಗೆ ಇದ್ದ ಏಕೈಕ ಸಹೋದರನನ್ನು 2017ರಲ್ಲಿ ಪಾಕ್ ಸೇನೆ ಅಪಹರಿಸುತ್ತೆ. ಮತ್ತೆ ಮಹ್ರಾಂಗ್ ದೊಡ್ಡ ಹೋರಾಟ ನಡೆಸ್ತಾರೆ. ಈ ಹೋರಾಟ ಎಷ್ಟು ತೀವ್ರವಾಗಿತ್ತು ಅಂದರೆ ಪಾಕಿಸ್ತಾನಿ ಸೇನೆ ಮತ್ತು ಸರ್ಕಾರ ಈಕೆಯ ಪ್ರತಿಭಟನೆಗೆ ಮಂಡಿಯೂರಿತು.
ಸತತ ಮೂರು ತಿಂಗಳ ಕಾಲ ನಡೆದ ಆಂದೋಲನಕ್ಕೆ ಬೆಚ್ಚಿಬಿದ್ದ ಪಾಕಿಸ್ತಾನ ಸರ್ಕಾರ, ಮಹ್ರಾಂಗ್ ಸಹೋದರನ ಬಿಡುಗಡೆ ಮಾಡಿತು. ಅಷ್ಟಕ್ಕೂ ಮಹ್ರಾಂಗ್ ತಮ್ಮ ಹೋರಾಟವನ್ನು ನಿಲ್ಲಿಸಲಿಲ್ಲ. ಬಲೂಚಿಸ್ತಾನದಲ್ಲಿ ಯುವಕರು ಮತ್ತು ಮಹಿಳೆಯರ ಮೇಲಿನ ಅನುಮಾನಾಸ್ಪದ ಕಣ್ಮರೆಗಳು ಮತ್ತು ದೌರ್ಜನ್ಯಗಳ ವಿರುದ್ಧ ಧ್ವನಿಯಾಗಿ ನಿಂತಿದ್ದಾರೆ. ಮಹ್ರಾಂಗ್ ಅವರ ಒಂದು ಕರೆ ಇಂದು ಸಾವಿರಾರು ಮಂದಿ ತಮ್ಮ ಪ್ರಣವನ್ನೇ ತ್ಯಾಗ ಮಾಡಲು ಸಿದ್ಧರಾಗುತ್ತಾರೆ. ಇದೇ ಕಾರಣಕ್ಕೆ ಪಾಕಿಸ್ತಾನ ಮೆಹ್ರಾಂಗ್ ಹೆಸರು ಕೇಳಿದ್ರೆ ಥರಥರ ನಡುಗುತ್ತದೆ.
ಇದನ್ನೂ ಓದಿ: ಪದವಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್.. ಸರ್ಕಾರದ ಈ ನಿರ್ಧಾರದಿಂದ ಫೀಸ್ ಡಬಲ್ ಆಗೋ ಸಾಧ್ಯತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ