ಚೆನ್ನಾಗಿ ಬೆಳೆಯುತ್ತಿದ್ದ ನಿಮ್ಮ ಉಗುರು ದಿಢೀರ್​ ಮಧ್ಯಕ್ಕೆ ಕಟ್​ ಆಗೋದೇಕೆ? ಇಲ್ಲಿದೆ ಅಸಲಿ ಕಾರಣ

author-image
Veena Gangani
Updated On
ಚೆನ್ನಾಗಿ ಬೆಳೆಯುತ್ತಿದ್ದ ನಿಮ್ಮ ಉಗುರು ದಿಢೀರ್​ ಮಧ್ಯಕ್ಕೆ ಕಟ್​ ಆಗೋದೇಕೆ? ಇಲ್ಲಿದೆ ಅಸಲಿ ಕಾರಣ
Advertisment
  • ನಿಮ್ಮ ಉಗುರುಗಳ ಆರೈಕೆಯಲ್ಲಿ ಏನೆಲ್ಲಾ ಪಾಲನೆ ಮಾಡಬೇಕು ಗೊತ್ತಾ?
  • ಯಾವ ವಿಟಮಿನ್ ಕೊರತೆಯಿಂದಾಗಿ ನಿಮ್ಮ ಉಗುರುಗಳು ಕಟ್​ ಆಗುತ್ತೆ?
  • ನಿಮ್ಮ ಉಗುರು ಚೆನ್ನಾಗಿ ಬೆಳೆಯಬೇಕು ಅಂದ್ರೆ ಮೊದಲು ಈ ಕೆಲಸ ಮಾಡಿ

ಇತ್ತೀಚಿನ ಯುಗದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಉಗುರನ್ನು ಬೆಳಸಲು ಶುರು ಮಾಡಿದ್ದಾರೆ. ಅದರಲ್ಲೂ ಕೆಲವರು ಉಗುರಿನ ಬಗ್ಗೆ ವಿಶೇಷವಾದ ಕಾಳಜಿಯನ್ನು ವಹಿಸುತ್ತಾ ಇರುತ್ತಾರೆ.

ಇದನ್ನೂ ಓದಿ:ಸಚಿನ್ ಕೈ ಹಿಡಿದ ವಿನೋದ್ ಕಾಂಬ್ಳಿ.. ಬಾಲ್ಯದ ಗೆಳೆಯರ ಅಪರೂಪದ ವಿಡಿಯೋ ಫುಲ್ ವೈರಲ್‌!

publive-image

ಹೌದು, ತಮ್ಮ ಉಗುರುಗಳು ನೋಡಲು ಚೆನ್ನಾಗಿ ಕಾಣುತ್ತವೆಯೇ ಎಂದು ಸಾಕಷ್ಟು ಬಾರಿ ಪರೀಕ್ಷಿಸುವ ಹೆಣ್ಣುಮಕ್ಕಳು ಕೂಡ ಇದ್ದಾರೆ. ಏಕೆಂದರೆ ದೇಹದ ಇತರ ಭಾಗಗಳಂತೆ ಉಗುರುಗಳು ಸಹ ಸೊಗಸಾಗಿ ಕಾಣುತ್ತವೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಚೆನ್ನಾಗಿ ಬೆಳೆಸುತ್ತಿದ್ದ ಉಗುರು ಏಕಾಏಕಿ ಮಧ್ಯೆಕ್ಕೆ ಕಟ್​ ಆಗಿ ಬಿಡುತ್ತೆ. ಹೀಗಾಗಿ ಉಗುರಿನ ಆರೋಗ್ಯವನ್ನು ನಿರ್ಲಕ್ಷಿಸಬೇಡಿ.

publive-image

ಮೊದ ಮೊದಲು ಚೆನ್ನಾಗಿ ಬೆಳೆಯುತ್ತಿದ್ದ ಉಗುರುಗಳು ದಿಢೀರನೇ ದುರ್ಬಲ, ಬಿರುಕು, ಕತ್ತರಿಸಿದ, ಒಡೆದ ಅಥವಾ ಸುಲಿದಂತೆ ಕಾಣುತ್ತವೆ. ಉಗುರುಗಳಲ್ಲಿ ಈ ಲಕ್ಷಣಗಳನ್ನು ಹೊಂದಿದ್ದರೆ ಒನಿಕೊಸ್ಚಿಜಿಯಾ ಎಂದು ಕರೆಯಲಾಗುತ್ತದೆ. ಇದು ಏಕೆ ಕಾಣಿಸಿಕೊಳ್ಳುತ್ತದೆ ಅಂತ ಸಾಕಷ್ಟು ಮಂದಿ ತಲೆಕೆಡಿಸಿಕೊಂಡಿದ್ದು ಉಂಟು.

publive-image

ಕೂದಲು ಮತ್ತು ತ್ವಚೆಯ ಜೊತೆಗೆ ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಉಗುರುಗಳ ಆರೋಗ್ಯದ ಬಗ್ಗೆಯೂ ಸಂಪೂರ್ಣ ಕಾಳಜಿ ವಹಿಸುತ್ತಿದ್ದಾರೆ. ಆದರೆ ಅನೇಕ ಜನರ ಉಗುರುಗಳು ಆರೈಕೆ ಮಾಡಿದ ನಂತರವೂ ದುರ್ಬಲವಾಗುತ್ತವೆ. ಇದರಿಂದಾಗಿ ಅವರ ಉಗುರುಗಳು ಆಗಾಗ್ಗೆ ಒಡೆಯುತ್ತಲೇ ಇರುತ್ತವೆ. ಇದಕ್ಕೆ ಪ್ರಮುಖ ಕಾರಣವೆಂದರೆ ದೇಹದಲ್ಲಿನ ವಿಟಮಿನ್ ಕೊರತೆ. ಯಾವ ವಿಟಮಿನ್ ಕೊರತೆಯು ಇದಕ್ಕೆ ಕಾರಣವಾಗುತ್ತದೆ ಎಂದು ತಿಳಿಯೋಣ.

publive-image

ದೇಹದಲ್ಲಿ ವಿಟಮಿನ್ B7 (ಬಯೋಟಿನ್) ಕೊರತೆಯಿಂದಾಗಿ, ಉಗುರುಗಳು ಒಡೆಯಲು ಪ್ರಾರಂಭಿಸುತ್ತವೆ. ಇದರೊಂದಿಗೆ ವಿಟಮಿನ್ ಬಿ 12 ಮತ್ತು ಕ್ಯಾಲ್ಸಿಯಂ ಕೊರತೆಯೂ ಕಾರಣವಾಗುತ್ತದೆ.

ವಿಟಮಿನ್ ಬಿ 12 ಕೊರತೆಯಿಂದಾಗಿ ನಿಮ್ಮ ಉಗುರುಗಳು ತೆಳುವಾಗುತ್ತವೆ ಮತ್ತು ದುರ್ಬಲವಾಗುತ್ತವೆ. ಅದರ ಕೊರತೆಯಿಂದಾಗಿ, ಉಗುರುಗಳು ಸರಿಯಾಗಿ ರೂಪುಗೊಳ್ಳುವುದಿಲ್ಲ ಮತ್ತು ಅವು ದುರ್ಬಲವಾಗುತ್ತದೆ.

publive-image

ಅಲ್ಲದೇ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯಿಂದಾಗಿ ಉಗುರುಗಳು ತೆಳುವಾಗುತ್ತವೆ. ದುರ್ಬಲವಾಗಿರುತ್ತವೆ ಮತ್ತು ತುಂಬಾ ಗಟ್ಟಿಯಾಗುತ್ತವೆ. ದೇಹದಲ್ಲಿ ಕಬ್ಬಿಣದ ಕೊರತೆಯಿಂದಾಗಿ, ಉಗುರುಗಳು ಒಡೆಯಲು ಪ್ರಾರಂಭಿಸುತ್ತವೆ ಮತ್ತು ಅವುಗಳ ಬಣ್ಣವೂ ಬದಲಾಗಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ: ಪೋಷಕರೇ ಎಚ್ಚರ! ಸಾಲದ ಹೊರೆ; ಆನ್​​ಲೈನ್​ ಗೇಮಿಂಗ್​ನಿಂದ ಪ್ರಾಣವನ್ನೇ ಬಿಟ್ಟ ವಿದ್ಯಾರ್ಥಿ!

publive-image

ಉಗುರುಗಳನ್ನು ಬಲಪಡಿಸಲು ಮತ್ತು ಈ ಎಲ್ಲಾ ಜೀವಸತ್ವಗಳ ಕೊರತೆಯನ್ನು ಪೂರೈಸಲು, ಕೋಳಿ, ಮೀನು, ಮೊಟ್ಟೆ, ಹಾಲು, ಚೀಸ್, ಧಾನ್ಯಗಳು, ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ನಿಮ್ಮ ಆಹಾರದ ಪಟ್ಟಿಯಲ್ಲಿ ಸೇರಿಸಿಕೊಂಡರೇ ಆರೋಗ್ಯದ ಜೊತೆಗೆ ಉಗುರಿನ ಬೆಳವಣಿಗೆಗೂ ಸಹಾಯಕಾರಿಯಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment