/newsfirstlive-kannada/media/post_attachments/wp-content/uploads/2024/10/Rajanikanth-1.jpg)
10A ಮೆಜೆಸ್ಟಿಕ್ ಟು ಶ್ರೀನಗರ ಬಸ್ನಲ್ಲಿ ಟಿಕೆಟ್ ಹರಿಯುತ್ತಿದ್ದ ಕಂಡಕ್ಟರ್ ಶಿವಾಜಿರಾವ್ ಗಾಯಕ್ವಾಡ್ ಮೆಜೆಸ್ಟಿಕ್ ಮಂದಿಗೂ ಸರಿಯಾಗಿ ಗೊತ್ತಿಲ್ಲ. ಆದರೆ, ರಜನಿಕಾಂತ್ ಅಂದ್ರೆ ಇಡೀ ವಿಶ್ವಕ್ಕೇ ಗೊತ್ತು. ಅದು ಸೂಪರ್ಸ್ಟಾರ್ ರಜನಿಕಾಂತ್ ತಾಕತ್ತು. ಆದ್ರೆ, ಪ್ರತಿ ಹೋಳಿ ಹಬ್ಬದ ದಿನ ರಜನಿಕಾಂತ್ ಥೇಟ್ ದಳಪತಿ ಸಿನಿಮಾ ಸೀನ್ ತರಹವೇ ಫುಲ್ ಸೈಲೆಂಟ್ ಆಗ್ತಾರೆ.
ಇದನ್ನೂ ಓದಿ:ಭಾರತದ ರಾಷ್ಟ್ರೀಯ ಆಹಾರ ಯಾವುದು ಗೊತ್ತಾ? ಈ ಭೋಜನವನ್ನೇ ಆಯ್ಕೆ ಮಾಡಲು ಕಾರಣವೇನು?
ಕಳೆದ 50 ವರ್ಷಗಳಿಂದಲೂ ಹೋಳಿ ಹಬ್ಬದ ದಿನ ರಜನಿಕಾಂತ್ ಒಂದು ವ್ರತದಂತೆಯೇ ಆ ಒಬ್ಬ ವ್ಯಕ್ತಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದರು. ಆದರೆ, ಕಳೆದ 11 ವರ್ಷಗಳಿಂದ ರಜನಿ ಬದುಕಿನ ಚೀಫ್ ಗೆಸ್ಟ್ ಭೇಟಿ ಸಿಗ್ತಿಲ್ಲ. ಅಷ್ಟಕ್ಕೂ ಏನಿದು ರಜನಿಕಾಂತ್ ಬದುಕಿನ ಹೋಳಿ ಸೀಕ್ರೆಟ್ ಅಂತೀರಾ? ಇಲ್ಲಿದೆ ಮಾಹಿತಿ.
ರಜನಿಕಾಂತ್ ವಯಸ್ಸು 74 ಅಲ್ಲವೇ ಅಲ್ಲ.. ಜಸ್ಟ್ 50 ವರ್ಷ!
ಸೂಪರ್ಸ್ಟಾರ್ ರಜನಿಕಾಂತ್ಗೆ ಇದೀಗ 74 ವರ್ಷ ವಯಸ್ಸು. ಆದ್ರೆ, ಅದು ಶಿವಾಜಿ ರಾವ್ ಗಾಯಕ್ವಾಡ್ ಹೆಸರು ಅನ್ನೋ ಬಿಎಂಟಿಸಿ ಕಂಡಕ್ಟರ್ ವಯಸ್ಸು. ರಜನಿಕಾಂತ್ ಅನ್ನೋ ಸೂಪರ್ಸ್ಟಾರ್ಗೀಗ 50 ವರ್ಷ. ಕಲಾವಿದ ಆಗಬೇಕು ಅಂತ ಕಂಡಕ್ಟರ್ ವೃತ್ತಿಗೆ ರಾಜೀನಾಮೆ ಕೊಟ್ಟು ಮದ್ರಾಸ್ನಲ್ಲಿ ಅಲೆದಾಡಿ ಅಪಮಾನ ಕಂಡಿದ್ದ ಶಿವಾಜಿರಾವ್ ಬದುಕನ್ನೇ ಬದಲಿಸಿದ್ದು ಖ್ಯಾತ ನಿರ್ದೇಶಕ ದಿವಂಗತ ಕೆ. ಬಾಲಚಂದರ್. ಇದೇ ಕೆ. ಬಾಲಚಂದರ್ ಶಿವಾಜಿ ರಾವ್ ಗಾಯಕ್ವಾಡ್ ಹೆಸರನ್ನು 1975 ಮಾರ್ಚ್ 27ರ ಹೋಳಿ ಹಬ್ಬದ ದಿನವೇ ಬದಲಿಸಿದ್ರು. ಭರ್ತಿ 50 ವರ್ಷಗಳ ಹಿಂದೆ ಬಾಲಚಂದರ್ ರಜನಿಕಾಂತ್ ಅಂತ ಮರು ನಾಮಕರಣ ಮಾಡಿದ್ರು. ಇದೇ ಕಾರಣಕ್ಕೆ ರಜನಿಕಾಂತ್ ಹೋಳಿ ಹಬ್ಬವನ್ನು ಒಂದು ವ್ರತದಂತೆ ಆಚರಿಸುತ್ತಿದ್ರು.
ಪ್ರತಿ ಹೋಳಿ ಹಬ್ಬದ ದಿನವೂ ರಜನಿ ಗುರು ಪೂಜೆ ಮಾಡುತ್ತಿದ್ದರು!
ಶಿವಾಜಿರಾವ್ ಗಾಯಕ್ವಾಡ್ ರಜನಿಕಾಂತ್ ಆದಾಗಿನಿಂದ 2014ರವರೆಗೂ ಪ್ರತಿ ಹೋಳಿ ಹಬ್ಬದ ದಿನ ಗುರುವನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬರ್ತಿದ್ರು. ಆದ್ರೆ 2014ರಲ್ಲಿ ಕೆ. ಬಾಲಚಂದರ್ ಸಾವನ್ನಪ್ಪಿದ್ರು. ಅವತ್ತಿನಿಂದ ರಜನಿ ಮನೆಯಲ್ಲೇ ಗುರುವನ್ನು ನಮಿಸುವ ಹಾಗೂ ಹೋಳಿ ಹಬ್ಬದ ದಿನ ಯಾವುದೇ ಬಣ್ಣ ಹಚ್ಚದೇ ಒಂದು ಪವಿತ್ರ ಹಬ್ಬದಂತೆ ಗುರುವನ್ನು ನೆನೆಯುತ್ತಿದ್ದಾರೆ. ಒಂದು ಸಂದರ್ಶನದಲ್ಲಿ ಖುದ್ದು ಬಾಲಚಂದರ್ ರಜನಿಗೆ ಪ್ರಶ್ನಿಸುತ್ತಾರೆ. ನನಗಾಗಿ ಒಂದು ದಿನ ಬಣ್ಣ ಹಚ್ಚುತ್ತೀಯಾ? ಅಂತ ಪ್ರಶ್ನಿಸಿದ್ರು. ಅದ್ಯಾವ ದಿನ ಹೇಳಿ ಸಾರ್ ಅಂತ ಕೇಳಿದ್ರು ರಜನಿ. ಹೋಳಿ ಹಬ್ಬದ ದಿನ ಅಂದ ಕೂಡಲೇ ನಕ್ಕ ರಜನಿ, ನಿಮಗೆ ಗೊತ್ತಲ್ವಾ ಸಾರ್ ಆ ದಿನ ನಾನು ಬಣ್ಣ ಹಚ್ಚೋದಿಲ್ಲ ಅಂತ ಹೇಳಿದ್ರು. ಇಬ್ಬರು ನಕ್ಕಿದ್ರು. ಅವತ್ತೇ ರಜನಿಯ ಹೋಳಿ ರಹಸ್ಯ ಬಯಲಾಗಿತ್ತು. ಈ ಕ್ಷಣಕ್ಕೂ ಗುರು ಬಾಲಚಂದರ್ ಶಿವಾಜಿ ಕಿವಿಯಲ್ಲಿ ರಜನಿಕಾಂತ್ ಅಂತ ಹೇಳಿದ ಧ್ವನಿ ಪ್ರತಿ ಹೋಳಿ ಹಬ್ಬದಂದು ಮಾರ್ದನಿಸುತ್ತದೆ.
ವಿಶೇಷ ವರದಿ: ಬಸವರಾಜು ಸಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ