/newsfirstlive-kannada/media/post_attachments/wp-content/uploads/2025/05/microwave.jpg)
ಒಂದು ಕಾಲದಲ್ಲಿ ಅಡುಗೆ ಬಿಸಿ ಮಾಡಲು ಬೆಂಕಿ ಅಥವಾ ಗ್ಯಾಸ್ ಬಳಸಲಾಗ್ತಿತ್ತು. ಅಂದು ಯಾವುದೇ ವಿಶೇಷ ತಂತ್ರಜ್ಞಾನ ಲಭ್ಯವಿರಲಿಲ್ಲ. ಈಗ ಕಾಲ ಬದಲಾಗಿದೆ, ಹೊಸ ಹೊಸ ತಂತ್ರಜ್ಞಾನಗಳು ಬಂದಿವೆ. ಮೈಕ್ರೋವೇವ್ (Microwave) ಅಥವಾ ಓವನ್ (Oven) ಕೂಡ ಈ ಪಟ್ಟಿಯಲ್ಲಿದೆ. ಆರಂಭದಲ್ಲಿ ಜನ ಇದನ್ನು ಬಳಸಲು ಇಷ್ಟಪಡ್ತಿರಲಿಲ್ಲ. ಬದಲಾಗ್ತಿರುವ ಪರಿಸ್ಥಿತಿಗಳೊಂದಿಗೆ ಜನ ಇದನ್ನು ಇಷ್ಟಪಡ್ತಿದ್ದಾರೆ.
ನಿಮಗೆ ಇದು ಗೊತ್ತಾ..?
ಮೈಕ್ರೋವೇವ್‌ನಲ್ಲಿ ಆಹಾರ ಬಿಸಿಯಾಗುತ್ತದೆ. ಆದರೆ ಪಾತ್ರೆಗಳು ಬಿಸಿಯಾಗಲ್ಲ. ಮೈಕ್ರೋವೇವ್‌ನಲ್ಲಿ ಆಹಾರ ಬಿಸಿ ಆಗೋದು ಸಾಮಾನ್ಯ. ಆದರೆ ಪಾತ್ರೆಗಳು ಬಿಸಿಯಾಗಲ್ಲ. ಮೈಕ್ರೋವೇವ್‌ನ ಶಕ್ತಿಯು ಆಹಾರದಲ್ಲಿರುವ ನೀರಿನ ಅಣುಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ಇದರಿಂದ ಆಹಾರ ಮಾತ್ರ ಬಿಸಿಯಾಗುತ್ತದೆ. ಇಲ್ಲಿ ಪತ್ರೆ ಬಿಸಿ ಆಗಲ್ಲ. ಪಾತ್ರೆ ಬಿಸಿಯಾಗಲು ಶಾಖ ಬೇಕಾಗುತ್ತದೆ. ಮೈಕ್ರೋವೇವ್‌ನಲ್ಲಿರುವ ಮ್ಯಾಗ್ನೆಟ್ರಾನ್ ಸಾಧನವು ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಅದು ಆಹಾರದಲ್ಲಿನ ನೀರಿನ ಅಣುಗಳು ಕಂಪಿಸುವಂತೆ ಮಾಡುತ್ತದೆ. ಅವುಗಳ ನಡುವೆ ಘರ್ಷಣೆ ಉಂಟಾದಾಗ ಶಾಕ ಬಿಡುಗಡೆ ಆಗುತ್ತದೆ. ಇದರಿಂದ ಆಹಾರ ಬಿಸಿ ಆಗುತ್ತದೆ.
ಇದನ್ನೂ ಓದಿ: ನಿರಂತರ ಮಳೆಗೆ ಬೆಚ್ಚಿ ಬಿದ್ದ ಸಿಲಿಕಾನ್ ಸಿಟಿ ಟೆಕ್ಕಿಗಳು.. ಮತ್ತೆ ವರ್ಕ್ ಫ್ರಮ್ ಹೋಮ್‌ಗೆ ಡಿಮ್ಯಾಂಡ್!
ಪಾತ್ರೆ ಯಾಕೆ ಬಿಸಿ ಆಗಲ್ಲ?
ಪಾತ್ರೆಗಳು ಮೈಕ್ರೋವೇವ್‌ನಲ್ಲಿರುವ ನೀರನ್ನು ಹೀರಿಕೊಳ್ಳುವುದಿಲ್ಲ. ಆದ್ದರಿಂದ ಪಾತ್ರೆಗಳು ಬಿಸಿಯಾಗಲ್ಲ. ಪಾತ್ರೆಯ ಮೇಲ್ಮೈ ಆಹಾರದ ಸಂಪರ್ಕದಲ್ಲಿದ್ದರೂ, ಆಹಾರ ಮಾತ್ರ ಹೆಚ್ಚು ಬಿಸಿಯಾಗುತ್ತದೆ. ಪಾತ್ರೆ ಸ್ವಲ್ಪ ಬಿಸಿಯಾಗುತ್ತದೆ. ಮೈಕ್ರೋವೇವ್‌ನಲ್ಲಿ ಮೈಕ್ರೋವೇವ್ ಪ್ರೂಫ್ ಗಾಜು, ಸೆರಾಮಿಕ್ ಮತ್ತು ಪ್ಲಾಸ್ಟಿಕ್ ಪಾತ್ರೆಗಳನ್ನು ಮಾತ್ರ ಬಳಸಬೇಕು. ಮೈಕ್ರೋವೇವ್‌ನಲ್ಲಿ ಯಾವುದೇ ಲೋಹದ ಪಾತ್ರೆಗಳನ್ನು ಇಡಬಾರದು.
ಇದನ್ನೂ ಓದಿ: ಆರ್ಸಿಬಿಗೆ ಭರ್ಜರಿ ಗುಡ್ನ್ಯೂಸ್.. ಸ್ಟಾರ್ ಬೌಲರ್ ಫುಲ್ ಫಿಟ್..! VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ