ಕೇವಲ 18 ತಿಂಗಳಿಗೆ 18 ಕೋಟಿ ಜೀವನಾಂಶ ಕೇಳಿದ ಪತ್ನಿ.. ದುಡಿದು ತಿನ್ನಿ- ಸುಪ್ರೀಂಕೋರ್ಟ್ CJI

author-image
Bheemappa
Updated On
ಕೇವಲ 18 ತಿಂಗಳಿಗೆ 18 ಕೋಟಿ ಜೀವನಾಂಶ ಕೇಳಿದ ಪತ್ನಿ.. ದುಡಿದು ತಿನ್ನಿ- ಸುಪ್ರೀಂಕೋರ್ಟ್ CJI
Advertisment
  • 18 ಕೋಟಿ ರೂಪಾಯಿ ಜೊತೆಗೆ ಮಹಿಳೆ ಇನ್ನು ಏನೇನು ಕೇಳಿದಳು..?
  • ಮಹಿಳೆಗೆ ಬುದ್ಧಿ ಹೇಳಿರುವ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ
  • ನಾನು ಮಾನಸಿಕ ಅಸ್ವಸ್ಥೆ ಎಂದು ಡಿವೋರ್ಸ್​ಗೆ ಗಂಡ ಅರ್ಜಿ ಸಲ್ಲಿಸಿದ್ರು

ಮದುವೆಯಾದ ಕೇವಲ 18 ತಿಂಗಳಿಗೆ ಡಿವೋರ್ಸ್ ಪಡೆಯುತ್ತಿರುವ ಮಹಿಳೆಯು ಪತಿಯಿಂದ ಜೀವನಾಂಶಕ್ಕೆ ಬರೋಬ್ಬರಿ 18 ಕೋಟಿ ರೂಪಾಯಿ ಆಸ್ತಿ, ಹಣ ಕೇಳಿದ್ದಾರೆ. ಇದನ್ನು ಕೇಳಿ ಖುದ್ದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಶ್ಚರ್ಯಚಕಿತರಾಗಿದ್ದಾರೆ. ನೀವು ವಿದ್ಯಾವಂತರು. ನೀವು ಹೀಗೆ ಕೇಳಬಾರದು. ನೀವೇ ದುಡಿದು ನಿಮ್ಮ ಜೀವನ ನಡೆಸಿ ಎಂದು ಸುಪ್ರೀಂಕೋರ್ಟ್ ಮಹಿಳೆಗೆ ಬುದ್ದಿವಾದ ಹೇಳಿದೆ.

ಡಿವೋರ್ಸ್ ಪಡೆಯುತ್ತಿರುವ ಮಹಿಳೆಯ ಜೀವನಾಂಶ ಕೇಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇವತ್ತು ಇದರ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸಿಜೆಐ ಬಿ.ಆರ್ ಗವಾಯಿ ಅವರ ಪೀಠ ನಡೆಸಿತ್ತು. ಈ ವೇಳೆ ತನಗೆ ಮುಂಬೈನಲ್ಲಿ ಪತಿಯಿಂದ ಮನೆ ಬೇಕು, ಜೀವನಾಂಶವಾಗಿ 12 ಕೋಟಿ ರೂಪಾಯಿ ಬೇಕೆಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಬಿ.ಆರ್ ಗವಾಯಿ ಅವರು ನೀವು ಉನ್ನತ ಶಿಕ್ಷಣ ಪಡೆದಿದ್ದೀರಿ. ನೀವು ನಿಮ್ಮ ಜೀವನಕ್ಕೆ ಬೇಕಾದಷ್ಟುನ್ನು ದುಡಿದು ಸಂಪಾದಿಸಿಕೊಳ್ಳಿ ಎಂದು ಬುದ್ಧಿವಾದ ಹೇಳಿದ್ದಾರೆ. ಜೀವನಾಂಶವಾಗಿ ನಿಮಗೆ ಏನು ಬೇಕೆಂದು ಸಿಜೆಐ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಮಹಿಳೆಯು ತನಗೆ ಮುಂಬೈನಲ್ಲಿ ಮನೆ, ಜೀವನಾಂಶವಾಗಿ 12 ಕೋಟಿ ರೂಪಾಯಿ, ಹೈ ಎಂಡ್ ಬಿಎಂಡಬ್ಲ್ಯು ಕಾರ್ ಬೇಕೆಂದು ಹೇಳಿದ್ದಾರೆ.

[caption id="attachment_132061" align="alignnone" width="800"]publive-image ಸಿಜೆಐ ಬಿ.ಆರ್ ಗವಾಯಿ[/caption]

ಆ ಮನೆ ಕಲ್ಪತರುವಿನಲ್ಲಿದೆ. ಒಳ್ಳೆಯ ಬಿಲ್ಡರ್ ಮನೆ ಕಟ್ಟಿದ್ದಾರೆ. ನೀವು ಐ.ಟಿ. ಕ್ಷೇತ್ರದ ವ್ಯಕ್ತಿ. ನೀವು ಎಂಬಿಎ ಓದಿದ್ದೀರಿ. ನಿಮಗೆ ಬೆಂಗಳೂರು, ಹೈದರಾಬಾದ್​ನಲ್ಲಿ ಡಿಮ್ಯಾಂಡ್ ಇದೆ. ನೀವು ಏಕೆ ಉದ್ಯೋಗ ಮಾಡಬಾರದು? ಎಂದು ಸಿಜೆಐ ಹೇಳಿದ್ದಾರೆ. ನೀವು ಮದುವೆಯಾಗಿ 18 ತಿಂಗಳಷ್ಟೇ ಆಗಿದೆ. ನೀವು ಬಿಎಂಡಬ್ಲ್ಯು ಕಾರ್ ಕೂಡ ಬೇಕೆಂದು ಬಯಸುತ್ತಿದ್ದೀರಿ. ಪ್ರಾಕ್ಟೀಕಲ್ ಆಗಿ 18 ತಿಂಗಳ ಮದುವೆಗೆ 18 ಕೋಟಿ ರೂಪಾಯಿಯನ್ನು ಕೇಳುತ್ತಿದ್ದೀರಿ. ಪ್ರತಿ ತಿಂಗಳಿಗೆ 1 ಕೋಟಿ ರೂಪಾಯಿ ಕೇಳುತ್ತಿದ್ದೀರಿ ಎಂದು ಸಿಜೆಐ ಹೇಳಿದ್ದಾರೆ.

ಇದಕ್ಕೆ ಉತ್ತರಿಸಿದ ಮಹಿಳೆಯು, ಪತಿ ಭಾರಿ ಶ್ರೀಮಂತರು. ನಾನು ಮಾನಸಿಕ ಅಸ್ವಸ್ಥೆ ಎಂದು ಕಾರಣ ನೀಡಿ ಮದುವೆಯನ್ನು ರದ್ದುಪಡಿಸಬೇಕೆಂದು ಕೇಳಿದ್ದಾರೆ ಎಂದಿದ್ದಾರೆ. ಇನ್ನೂ ಪತಿಯ ಪರ ಹಿರಿಯ ವಕೀಲೆ ಮಾಧವಿ ದಿವಾನ್ ವಾದ ಮಂಡಿಸಿದ್ದರು. ಆಕೆಯೂ ಉದ್ಯೋಗ ಮಾಡಬೇಕು. ಎಲ್ಲವನ್ನೂ ಹೀಗೆ ಡಿಮ್ಯಾಂಡ್ ಮಾಡುವುದು ಸರಿಯಲ್ಲ ಎಂದು ಮಾಧವಿ ದಿವಾನ್ ವಾದಿಸಿದ್ದರು.

ನಾನು ಮಾನಸಿಕ ಅಸ್ವಸ್ಥೆಯಂತೆ ಕಾಣುತ್ತೇನಾ ಎಂದು ಮಹಿಳೆ ಸಿಜೆಐ ಅವರನ್ನು ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ನಿಮ್ಮ ಮಾಜಿ ಪತಿಯ ತಂದೆಯ ಆಸ್ತಿಯನ್ನು ನೀವು ಕೇಳುವಂತಿಲ್ಲ ಎಂದರು.

ಮಹಿಳೆಯೇ ಖುದ್ದಾಗಿ ವಾದ ಮಂಡಿಸಿದ್ದರು. ತನ್ನ ಮಾಜಿ ಪತಿ ಸಿಟಿ ಬ್ಯಾಂಕ್ ಮ್ಯಾನೇಜರ್ ಆಗಿದ್ದಾರೆ. ಎರಡು ಬ್ಯುಸಿನೆಸ್​ಗಳೂ ಇವೆ ಎಂದು ಮಹಿಳೆ ಹೇಳಿದ್ದರು. ನನಗೆ ಮಗು ಬೇಕು. ಆದರೇ, ಪತಿ ಮಗುವನ್ನು ನನ್ನ ವಶಕ್ಕೆ ನೀಡಿಲ್ಲ. ಪತಿಯೇ ನಾನು ಮಾನಸಿಕ ಅಸ್ವಸ್ಥೆ ಎಂದು ಡಿವೋರ್ಸ್ ಅರ್ಜಿ ಸಲ್ಲಿಸಿದ್ದರು. ನನ್ನ ಮಾಜಿ ಪತಿಯೇ ಈ ಮೊದಲು ನಾನು ಇದ್ದ ಉದ್ಯೋಗವನ್ನು ತೊರೆಯುವಂತೆ ಬಲವಂತ ಮಾಡಿದ್ದರು ಎಂದು ಮಹಿಳೆ ವಾದಿಸಿದ್ದರು.

ಇದನ್ನೂ ಓದಿ:ಮಿಗ್-21 ಫೈಟರ್ ಜೆಟ್​ಗಳಿಗೆ ಗುಡ್​ ಬೈ ಹೇಳಲಿರೋ ಇಂಡಿಯನ್ ಆರ್ಮಿ.. ಇದಕ್ಕೆ ಕಾರಣವೇನು?

publive-image

ಆಗ ಸುಪ್ರೀಂಕೋರ್ಟ್ ಮಾಜಿ ಪತಿಯ ಟ್ಯಾಕ್ಸ್ ರಿಟರ್ನ್ಸ್ ಅನ್ನು ಪರಿಶೀಲಿಸಿತು. ಪತಿಯು ಉದ್ಯೋಗ ತೊರೆದ ಬಳಿಕ ಅವರ ಆದಾಯದಲ್ಲಿ ಇಳಿಕೆಯಾಗಿದೆ ಎಂದು ಪತಿ ಪರ ವಕೀಲೆ ಮಾಧವಿ ದಿವಾನ್, ಕೋರ್ಟ್ ಗಮನಕ್ಕೆ ತಂದರು. ಪತಿಯಿಂದ ಪ್ಲ್ಯಾಟ್ ಪಡೆದು ತೃಪ್ತಿಪಡಿ, ಒಳ್ಳೆಯ ಉದ್ಯೋಗವನ್ನು ಹುಡುಕಿಕೊಳ್ಳಿ ಅಥವಾ ಆ 4 ಕೋಟಿ ಪಡೆದು, ಪುಣೆ, ಬೆಂಗಳೂರು, ಹೈದರಾಬಾದ್​ನಲ್ಲಿ ಕೆಲಸ ಹುಡುಕಿಕೊಳ್ಳಿ ಎಂದು ಸಿಜೆಐ , ಮಹಿಳೆಗೆ ಹೇಳಿದ್ದರು.

ನೀವು ಇಷ್ಟೊಂದು ಓದಿದ್ದೀರಿ. ನೀವು ನಿಮಗಾಗಿ ಕೇಳಬಾರದು. ನೀವು ದುಡಿದು ನಿಮ್ಮ ಅನ್ನ ಸಂಪಾದಿಸಿಕೊಂಡು ಜೀವನ ನಡೆಸಿ ಎಂದು ಸಿಜೆಐ, ಮಹಿಳೆಗೆ ಹೇಳಿದ್ದಾರೆ. ಈ ಕೇಸ್​ನಲ್ಲಿ ಸುಪ್ರೀಂಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ. ಅಂತೂ ಸುಪ್ರೀಂಕೋರ್ಟ್ ಸಿಜೆಐ, 18 ತಿಂಗಳ ಮದುವೆಗೆ ತಿಂಗಳಿಗೆ 1 ಕೋಟಿಯಂತೆ 18 ಕೋಟಿ ರೂಪಾಯಿ ಜೀವನಾಂಶ ಕೇಳಿದ್ದ ಮಹಿಳೆಗೆ ಬುದ್ಧಿವಾದ ಹೇಳಿದ್ದಾರೆ. ಈಗ ಸುಪ್ರೀಂಕೋರ್ಟ್ ಈ ಜೀವನಾಂಶ ಕೇಸ್​ನಲ್ಲಿ ಆದೇಶ ನೀಡುವುದು ಬಾಕಿ ಇದೆ.

ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment