/newsfirstlive-kannada/media/post_attachments/wp-content/uploads/2024/03/PANDYA.jpg)
ಶ್ರೇಯಸ್ ಅಯ್ಯರ್​​​- ಇಶಾನ್ ಕಿಶನ್​ರನ್ನ ಬಿಸಿಸಿಐ ಸೆಂಟ್ರಲ್ ಕಾಂಟ್ರಕ್ಟ್​​ ಲಿಸ್ಟ್​​​ನಿಂದ ಕೈಬಿಟ್ಟು ತಕ್ಕ ಪಾಠ ಕಲಿಸಿದೆ. ಆದ್ರೀಗ ಇದೇ ಕಠಿಣ ನಿರ್ಧಾರ ಬಿಸಿಸಿಐಗೆ ತಿರುಗುಬಾಣವಾಗಿದೆ. ಯಾಕಾದ್ರು ಇಬ್ಬರನ್ನ ಡ್ರಾಪ್ ಮಾಡಿದ್ವಿ ಅಂತ ರೀ ಥಿಂಕ್​ ಮಾಡುವಂತಾಗಿದೆ. ಅಷ್ಟಕ್ಕೂ ತಾನೇ ತೆಗೆದುಕೊಂಡ ಖಡಕ್​​ ನಿರ್ಧಾರ ಬಿಸಿಸಿಐಗೆ ಮುಜುಗರ ತಂದಿಟ್ಟಿದ್ದೇಗೆ?.
ಆಟಗಾರರ ವಿಚಾರದಲ್ಲಿ ಬಿಸಿಸಿಐ ಕಠಿಣ ನಿರ್ಧಾರ ತಳೆದಿದೆ. ದೇಶಿ ಕ್ರಿಕೆಟ್​​ನ ರಾಜ ರಣಜಿ ಟ್ರೋಫಿ ಆಡಲು ತಿರಸ್ಕರಿಸಿದ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್​​ ತಕ್ಕ ಪಾಠ ಕಲಿಸಿದೆ. ಇಬ್ಬರನ್ನ ಕೇಂದ್ರ ಗುತ್ತಿಗೆ ಲಿಸ್ಟ್​​ನಿಂದ ಕೈಬಿಟ್ಟು ಮುಟ್ಟಿನೋಡಿಕೊಳ್ಳುವಂತೆ ಮಾಡಿದೆ. ಆ ಮೂಲಕ ಉಳಿದ ಆಟಗಾರರಿಗೆ ಖಡಕ್​ ಸಂದೇಶ ಕೂಡ ರವಾನಿಸಿದೆ. ಶ್ರೇಯಸ್​​​-ಕಿಶನ್​ರನ್ನ ರಿಲೀಸ್ ಮಾಡಿದ ಬಿಸಿಸಿಐ ನಿರ್ಧಾರ ನಿಜಕ್ಕೂ ಸ್ವಾಗತಾರ್ಹ. ಆದರೆ ಇಂತಹದೇ ಸ್ಟ್ರಿಕ್ಟ್​​​​ ಆಕ್ಷನ್​ ಅನ್ನ ಬಿಸಿಸಿಐ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ವಿಚಾರದಲ್ಲಿ ಯಾಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ.'
/newsfirstlive-kannada/media/post_attachments/wp-content/uploads/2023/12/ISHAN_KISHAN_TEST.jpg)
ಹಾರ್ದಿಕ್ ವಿಚಾರದಲ್ಲಿ ಬಿಸಿಸಿಐ ತಾರತಮ್ಯ ಸರಿನಾ..?
ಆಟಗಾರರ ವಿರುದ್ಧ ಬಿಸಿಸಿಐಯ ತಾರತಮ್ಯದ ಆರೋಪ ಇದೇ ಮೊದಲೇನಲ್ಲ. ಇದೀಗ ಆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಶ್ರೇಯಸ್ ಹಾಗೂ ಕಿಶನ್ ರಣಜಿ ಆಡಿಲ್ಲ ಅನ್ನೋ ಒಂದೇ ಕಾರಣಕ್ಕೆ ಇಬ್ಬರನ್ನ ಕೇಂದ್ರ ಗುತ್ತಿಗೆ ಲಿಸ್ಟ್​​​ನಿಂದ ಕೈಬಿಡಲಾಗಿದೆ. ಆದರೆ ಅದೇ ರಣಜಿ ಟ್ರೋಫಿ ಆಡದೇ ಸ್ಟಾರ್​ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ವಿಚಾರದಲ್ಲಿ ಬಿಸಿಸಿಐ ಭಿನ್ನ ನಿಲುವು ತಳೆದಿದೆ. 3ನೇ ಗ್ರೇಡ್​​​ನಲ್ಲಿ ಸ್ಥಾನ ನೀಡಿ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಸವರುವ ಕೆಲಸ ಮಾಡಿದೆ. ಬಿಗ್​ಬಾಸ್​ಗಳ ಈ ತಾರತಮ್ಯವನ್ನ ಯಾರಾದರೂ ಒಪ್ಪಲು ಸಾಧ್ಯವೇ..?
2018ರಲ್ಲಿ ಕೊನೆ ಬಾರಿ ರಣಜಿ ಆಡಿದ ಹಾರ್ದಿಕ್​
ಸದ್ಯ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ರಣಜಿ ಆಡುತ್ತಿಲ್ಲ. ಅದನ್ನ ಒಪ್ಪಲೇಬೇಕು. ಅದಕ್ಕಾಗಿ ಅವರು ರಿಲೀಸ್ ಶಿಕ್ಷೆಗೆ ಗುರಿಯಾಗಿದ್ದಾರೆ. ಎಲ್ಲವೂ ಸರಿ. ಆದರೆ ಅದೇ ಹಾರ್ದಿಕ್​​ ಪಾಂಡ್ಯ ರಣಜಿ ಟ್ರೋಫಿ ಆಡ್ತಿದ್ದಾರಾ, ಖಂಡಿತ ಇಲ್ಲ. ಇವರು ರಣಜಿ ಅನ್ನೋ ಪದವನ್ನೆ ಮರೆತಿದ್ದಾರೆ. 2018 ರಲ್ಲಿ ಬರೋಡಾ ಆಲ್​ರೌಂಡರ್​ ಕೊನೆ ಸಲ ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡಿದ್ರು. ಅದೇ ಕೊನೆ, 6 ವರ್ಷವಾದ್ರು ಒಂದೂ ರಣಜಿ ಕ್ರಿಕೆಟ್​ನತ್ತ ಮುಖ ಮಾಡಿಲ್ಲ.
2023 ರಲ್ಲಿ 31 ಪಂದ್ಯ ಆಡಿದವನಿಗೆ A ಗ್ರೇಡ್​ನಲ್ಲಿ ಸ್ಥಾನ
ಹಾರ್ದಿಕ್ ವಿಚಾರದಲ್ಲಿ ರಣಜಿ ಟ್ರೋಫಿ ದೂರವಾಯ್ತು. 2023ರಲ್ಲಿ ಒನ್ಡೇ 20 ಹಾಗೂ 11 ಟಿ20 ಸೇರಿ ಒಟ್ಟು 31 ಪಂದ್ಯಗಳನ್ನಷ್ಟೇ ಆಡಿದ್ದಾರೆ. ಅದ್ರಲ್ಲಿ ಒಂದೂ ಟೆಸ್ಟ್​​ ಪಂದ್ಯ ಆಡಿಲ್ಲ. ಇಷ್ಟಾದ್ರು ಹಾರ್ದಿಕ್​ ಪಾಂಡ್ಯಗೆ ಸೆಂಟರ್ ಕಾಂಟ್ರಾಕ್ಟ್​ ಲಿಸ್ಟ್​ನಲ್ಲಿ ಎ ಗ್ರೇಡ್​ ಸ್ಥಾನ ನೀಡಲಾಗಿದೆ. ವಾರ್ಷಿಕವಾಗಿ 5 ಕೋಟಿ ರೂಪಾಯಿಯನ್ನ ಜೇಬಿಗಿಳಿಸಿಕೊಳ್ಳಲಿದ್ದಾರೆ.
ಬಿಸಿಸಿಐ ತಾರತಮ್ಯದ ನಡೆಗೆ ಕ್ರಿಕೆಟರ್ಸ್​, ಫ್ಯಾನ್ಸ್​​​ ಕೆಂಡಾಮಂಡಲ..!
ಶ್ರೇಯಸ್ ಅಯ್ಯರ್​​​-ಕಿಶನ್​ರನ್ನ ಕೈಬಿಟ್ಟು, ಹಾರ್ದಿಕ್​​ಗೆ ಎ- ಗ್ರೇಡ್​ನಲ್ಲಿ ಸ್ಥಾನ ಕಲ್ಪಿಸಿರುವುದಕ್ಕೆ ಕ್ರಿಕೆಟರ್ಸ್​ ಹಾಗೂ ಫ್ಯಾನ್ಸ್​​ ಬಿಸಿಸಿಐ ವಿರುದ್ಧ ಗರಂ ಆಗಿದ್ದಾರೆ. ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್​​​ ಬಿಸಿಸಿಐನ ಡಬಲ್​​ ಸ್ಟ್ಯಾಂಡರ್ಡ್​ ನಿರ್ಧಾರವನ್ನ ಖಾರವಾಗಿ ಪ್ರಶ್ನಿಸಿದ್ದಾರೆ.
ತಾರತಮ್ಯ ಸಲ್ಲದು
ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ ಪ್ರತಿಭಾವಂತ ಕ್ರಿಕೆಟಿಗರು. ಅವರು ಲಯಕ್ಕೆ ಮರಳಬಲ್ಲರು ಎಂದು ಭಾವಿಸುತ್ತೇವೆ. ಹಾರ್ದಿಕ್ ಅವರಂತಹ ರೆಡ್ ಬಾಲ್ ಕ್ರಿಕೆಟ್ ಆಡಲು ಬಯಸದಿದ್ದರೆ, ಅವರು ಮತ್ತು ಅವರಂತಹ ಇತರರು ರಾಷ್ಟ್ರೀಯ ಕರ್ತವ್ಯದಲ್ಲಿ ಇಲ್ಲದಿರುವಾಗ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಭಾಗವಹಿಸಬೇಕೆ?. ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸಬೇಕೇ?. ಇದು ಎಲ್ಲರಿಗೂ ಅನ್ವಯಿಸುವುದಿಲ್ವಾ?. ಭಾರತೀಯ ಕ್ರಿಕೆಟ್ ಬಯಸಿದ ಫಲಿತಾಂಶಗಳನ್ನ ಬಯಸುವುದಿಲ್ಲ.
ಇರ್ಫಾನ್ ಪಠಾಣ್, ಮಾಜಿ ಕ್ರಿಕೆಟಿಗ
/newsfirstlive-kannada/media/post_attachments/wp-content/uploads/2023/12/Kohli-and-Rohit-1.jpg)
ಬರೀ ಇರ್ಫಾನ್ ಪಠಾಣ್ ಅಷ್ಟೇ ಅಲ್ಲ, ಅಭಿಮಾನಿಗಳು ಕೂಡ ಬಿಸಿಸಿಐ ದ್ವಿಮುಖ ನೀತಿಗೆ ಕೆರಳಿ ಕೆಂಡವಾಗಿದ್ದಾರೆ. ಗಾಯಗೊಂಡ ಹಾರ್ದಿಕ್​​​​ ರಿಕವರಿ ಬಳಿಕ ಯಾಕೆ ರಣಜಿ ಟ್ರೋಫಿ ಆಡಿಲ್ಲ. ಪಾಂಡ್ಯ ವಿಚಾರದಲ್ಲಿ ಬಿಸಿಸಿಐ ಅತಿಯಾಗಿ ವರ್ತಿಸುತ್ತಿದೆ. ರಾಷ್ಟ್ರೀಯ ಸೇವೆ ಇಲ್ಲದಿದ್ದಾಗ ಎಲ್ಲರೂ ಡೊಮೆಸ್ಟಿಕ್ ಕ್ರಿಕೆಟ್ ಆಡಲೇಬೇಕು. ಒಬ್ಬರಿಗೊಂದು ನ್ಯಾಯ ಏಕೆ ಎಂದು ಫ್ಯಾನ್ಸ್​, ಬಿಸಿಸಿಐಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ.
ಬರೀ ಶ್ರೇಯಸ್ ಅಯ್ಯರ್​​​, ಇಶಾನ್ ಕಿಶನ್ ಹಾಗೂ ಹಾರ್ದಿಕ್ ಪಾಂಡ್ಯ ಅಷ್ಟೇ ಅಲ್ಲ, ಎ ಪ್ಲಸ್​ ಗ್ರೇಡ್​​​ನಲ್ಲಿರೋ ರೋಹಿತ್​ ಶರ್ಮಾ, ವಿರಾಟ್ ಕೊಹ್ಲಿ, ಜಸ್​ಪ್ರೀತ್ ಬೂಮ್ರಾ ಹಾಗೂ ಜಡೇಜಾ ಕೂಡ ರಾಷ್ಟ್ರೀಯ ಸೇವೆ ಇಲ್ಲದಿರುವಾಗ ರಣಜಿ ಆಡಬೇಕು. ಯಾಕಂದ್ರೆ ಅದುವೇ ರಿಯಲ್ ಕ್ರಿಕೆಟ್​​​. ಇನ್ನಾದ್ರು ಬಿಸಿಸಿಐ ಎಲ್ಲರಿಗೂ ರಣಜಿ ಕ್ರಿಕೆಟ್​ ಆಡುವಂತೆ ಖಡಕ್ ನಿರ್ಧಾರ ಕೈಗೊಳ್ಳಲಿ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us