/newsfirstlive-kannada/media/post_attachments/wp-content/uploads/2024/11/GILL_TEST.jpg)
ಟೀಮ್ ಇಂಡಿಯಾದಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ. ಇಂಗ್ಲೆಂಡ್ ಟೆಸ್ಟ್ ಸರಣಿಯ ಪ್ರವಾಸದೊಂದಿಗೆ ಹೊಸ ಅಧ್ಯಾಯ ಆರಂಭವಾಗಲಿದೆ. ನೂತನ ನಾಯಕನ ಸಾರಥ್ಯದಲ್ಲಿ ಆಂಗ್ಲರ ಬೇಟೆಗೆ ಟೀಮ್ ಇಂಡಿಯಾ ತೆರಳಲಿದೆ. ಮಹತ್ವದ ಪ್ರವಾಸಕ್ಕೆ ಟೀಮ್ ಸೆಲೆಕ್ಷನ್ಗೂ ಮುನ್ನ ಭವಿಷ್ಯದ ನಾಯಕನ ಹೆಸರು ಫೈನಲ್ ಆಗಿದೆ.
ರೋಹಿತ್ ನಿವೃತ್ತಿಯ ಬಳಿಕ ಮುಂದಿನ ಟೆಸ್ಟ್ ತಂಡದ ಸಾರಥಿ ಯಾರು? ಎಂಬ ಚರ್ಚೆ ಜೋರಾಗಿತ್ತು. ಹಲವು ಹೆಸರುಗಳು ನಾಯಕತ್ವದ ರೇಸ್ನಲ್ಲಿದ್ವು. ಇದೀಗ ಈ ನಾಯಕನ ಸ್ಥಾನಕ್ಕೆ ಯಂಗ್ ಬ್ಯಾಟರ್ ಶುಭ್ಮನ್ ಗಿಲ್ ಹೆಸರು ಬಹುತೇಕ ಅಂತಿಮವಾಗಿದೆ. ಈಗಾಗಲೇ ಈ ಬಗ್ಗೆ ಹಲವು ಸುತ್ತಿನ ಸಭೆ ನಡೆಸಿ ಚರ್ಚಿಸಿರುವ ಬಿಗ್ಬಾಸ್ಗಳು, ಟೆಸ್ಟ್ ತಂಡದ ನಾಯಕನ ಪಟ್ಟ ಕಟ್ಟಲು ರೆಡಿಯಾಗಿದ್ದಾರೆ. ಬಿಸಿಸಿಐನಿಂದ ಅಧಿಕೃತ ಘೋಷಣೆಯೊಂದಷ್ಟೇ ಬಾಕಿಯಿದೆ. ಅಂದ್ಹಾಗೆ ಗಿಲ್ಗೆ ನಾಯಕತ್ವ ನೀಡೋ ಬಿಸಿಸಿಐನ ನಿರ್ಧಾರದ ಹಿಂದೆ ಹಲವು ಲೆಕ್ಕಾಚಾರಗಳಿವೆ.
ಇದನ್ನೂ ಓದಿ: ಅಂತಿಮ ಹಂತ ತಲುಪಿದ್ದರೂ ಪ್ಲೇ-ಆಫ್ ಬಗ್ಗೆ ಕ್ಲಾರಿಟಿನೇ ಇಲ್ಲ.. 5 ತಂಡ, 4 ಸ್ಥಾನ..! RCB ಕತೆ..?
ಚಿಂತನ.. ಮಂಥನ..!
ಗಿಲ್ಗೆ ಪಟ್ಟ ಕಟ್ಟಲು ಬಿಸಿಸಿಐ ವಲಯದಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆಯೇ ಹೆಡ್ ಕೋಚ್ ಗೌತಮ್ ಗಂಭೀರ್, ಗಿಲ್ ಜೊತೆಗೆ ಮಹತ್ವದ ಮೀಟಿಂಗ್ ನಡೆಸಿದ್ದಾರೆ. ಸುಮಾರು ನಾಲ್ಕೈದು ಗಂಟೆಗಳ ಕಾಲ ನಡೆದ ಈ ಮೀಟಿಂಗ್ನಲ್ಲಿ ಟೆಸ್ಟ್ ತಂಡದ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ. ಶುಭ್ಮನ್ ಗಿಲ್ರ ಚಿಂತನೆಗಳ ಬಗ್ಗೆ ಗಂಭೀರ್ ಕೂಡ ಇಂಪ್ರೆಸ್ ಆಗಿದ್ದಾರೆ ಎನ್ನಲಾಗಿದೆ. ಸಭೆ ಬಳಿಕ ಬಿಸಿಸಿಐಗೆ ಗಂಭೀರ್ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಲಾಂಗ್ ಟರ್ಮ್ ಕ್ಯಾಪ್ಟನ್ಸಿ ಮತ್ತ ಟೆಸ್ಟ್ ಅನುಭವ
ಗಿಲ್ ಟೀಮ್ ಇಂಡಿಯಾ ಪರ ಮೂರೂ ಫಾರ್ಮೆಟ್ ಆಡ್ತಿರುವ ಆಟಗಾರ. 25 ವರ್ಷದ ಶುಭ್ಮನ್ ಗಿಲ್ಗೆ, ಈಗ ನಾಯಕತ್ವ ನೀಡಿದ್ರೆ, ಮುಂದಿನ ಐದಾರು ವರ್ಷಗಳ ಕಾಲ ತಂಡವನ್ನ ಮುನ್ನಡೆಸಬಲ್ಲರು. ಕೂಲ್ ಆ್ಯಂಡ್ ಕಾಮ್ ವ್ಯಕ್ತಿತ್ವ ಶುಭ್ಮನ್, ಟೆಕ್ನಿಕಲಿ ಕೂಡ ಸಖತ್ ಸ್ಟ್ರಾಂಗ್ ಅನಿಸಿದ್ದಾರೆ. 32 ಟೆಸ್ಟ್ ಪಂದ್ಯಗಳನ್ನಾಡಿರುವ ಅನುಭವ ಹೊಂದಿರೋ ಗಿಲ್, ಕನ್ಸಿಸ್ಟೆಂಟ್ ಆಟದಿಂದಲೂ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ಸ್ಟ್ರಾಂಗ್ ಕಂಬ್ಯಾಕ್.. ಯುವ ಆಟಗಾರನಿಗಾಗಿ ಸ್ಥಾನ ತ್ಯಾಗ ಮಾಡಿದ ಸಂಜು
ನಾಯಕನಾಗಿ ಗಿಲ್ ಯಶಸ್ಸು.!
ನಾಯಕತ್ವಕ್ಕೆ ಶುಭ್ಮನ್ ಗಿಲ್ ನಿಜಕ್ಕೂ ಸರಿಯಾದ ಆಯ್ಕೆನಾ.? ಈ ಪ್ರಶ್ನೆಗೆ ಉತ್ತರ ಪ್ರಸಕ್ತ ಐಪಿಎಲ್ ಸೀಸನ್ ಉತ್ತರ ನೀಡ್ತಿದೆ. ಐಪಿಎಲ್ನಲ್ಲಿ ನಾಯಕತ್ವದ ಒತ್ತಡದ ನಡುವೆಯೂ ಕನ್ಸಿಸ್ಟೆಂಟ್ ಬ್ಯಾಟಿಂಗ್ ಮೂಲಕ ಗಿಲ್ ಮಿಂಚಿದ್ದಾರೆ. ಆನ್ಫೀಲ್ಡ್ನಲ್ಲಿ ಬೌಲರ್ಗಳ ರೋಟೇಷನ್, ಪರಿಸ್ಥಿತಿಗೆ ಅನುಗುಣವಾದ ಡಿಸಿಷನ್ ಮೇಕಿಂಗ್ನಿಂದ ಚಾಣಾಕ್ಷತೆ ಮೆರೆದಿದ್ದಾರೆ.
ನ್ಯೂ ಜನರೇಷನ್ ಟೀಮ್ಗೆ ಬೆಸ್ಟ್ ಕ್ಯಾಪ್ಟನ್
ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಕೆ.ಎಲ್.ರಾಹುಲ್, ಜಸ್ಪ್ರೀತ್ ಬೂಮ್ರಾ, ರವೀಂದ್ರ ಜಡೇಜಾ ಹೊರತು ಪಡಿಸಿದ್ರೆ. ಉಳಿದೆಲ್ಲರು ಯುವ ಆಟಗಾರರೇ ಆಗಿದ್ದಾರೆ. ಭವಿಷ್ಯದಲ್ಲಿ ಇನ್ನಷ್ಟು ಹೊಸ ಆಟಗಾರರು ಎಂಟ್ರಿ ಕೊಡಲಿದ್ದಾರೆ. ನ್ಯೂ ಜನರೇಷನ್ ಆಟಗಾರರ ಮೆಂಟಾಲಿಟಿಗೆ ಹೊಂದಿಕೊಳ್ಳುವಂತ ಹಾಗೂ ಕಂಫರ್ಟ್ ಜೋನ್ ಕ್ರಿಯೇಟ್ ಮಾಡಬೇಕಾದ ನಾಯಕ ಈಗ ತಂಡಕ್ಕೆ ಬೇಕಿದೆ. ಇದಕ್ಕೆ ಬೆಸ್ಟ್ ಚಾಯ್ಸ್ ಶುಭ್ಮನ್ ಗಿಲ್ ಅನ್ನೋದ್ರಲ್ಲಿ ಡೌಟೇ ಇಲ್ಲ.
ಗಂಭೀರ್ಗೆ ಬೇಕಿತ್ತು ಹೊಸ ಮುಖ
ರೋಹಿತ್ ನಿರ್ಗಮನದ ಬಳಿಕ ಅನುಭವಿಗಳಾದ ಜಸ್ಪ್ರೀತ್ ಬೂಮ್ರಾ, ಕೆ.ಎಲ್.ರಾಹುಲ್ ಅಥವಾ ರಿಷಭ್ ಪಂತ್ಗೆ ಟೆಸ್ಟ್ ತಂಡದ ನಾಯಕತ್ವ ನೀಡಬಹುದಿತ್ತು. ಆದ್ರೆ, ಕೋಚ್ ಗಂಭೀರ್ ಭವಿಷ್ಯದ ದೃಷ್ಟಿಯಿಂದ ಹೊಸ ಮುಖಕ್ಕೆ ಆದ್ಯತೆ ನೀಡೋ ಚುಂತನೆ ಹೊಂದಿದ್ರು. ಹೊಸ ಟೆಸ್ಟ್ ತಂಡ ಕಟ್ಟುವ ಗುರಿಯೂ ಗಂಭೀರ್ಗಿದೆ. ಇದೆಲ್ಲಕ್ಕೂ ಮಿಗಿಲಾಗಿ ಗಂಭೀರ್ ಯುಗಾರಂಭ ಮಾಡುವ ಕನಸಿದೆ. ಇದೇ ಕಾರಣಕ್ಕೆ ಗಂಭೀರ್ ಮಾತು ಕೇಳಬಲ್ಲ ಶುಭ್ಮನ್ ಪರ ಕೋಚ್ ಬ್ಯಾಟ್ ಬೀಸಿದ್ದಾರೆ. ಬಿಸಿಸಿಐ ಕೂಡ ಕೋಚ್ ಮಾತಿಗೆ ಮಣೆಹಾಕಿದೆ.
ಇದನ್ನೂ ಓದಿ: ‘ನನ್ನ ಸ್ಟ್ರೆಂತ್, ವೀಕ್ನೆಸ್, ಬೆಸ್ಟ್ ಫ್ರೆಂಡ್ ಎಲ್ಲಾನೂ’.. ವೇದಿಕೆ ಮೇಲೆ ಗಳಗಳನೇ ಕಣ್ಣೀರಿಟ್ಟ ಗಗನಾ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್