ಮಧ್ಯಮ ವರ್ಗದವ್ರ ಏರಿಯಾ ನಾಗರಬಾವಿ; ಹೂಡಿಕೆ ಮಾಡಲು ಬೆಸ್ಟ್ ಯಾಕೆ?

author-image
Ganesh Nachikethu
Updated On
ಬಡ ಹೈನುಗಾರನ ಖಾತೆಗೆ 257 ಕೋಟಿ ರೂಪಾಯಿಗೆ ಜಾಕ್​ಪಾಟ್​; ಬೆಚ್ಚಿಬಿದ್ದ ಅಧಿಕಾರಿಗಳು..
Advertisment
  • ವಿಶ್ವದಲ್ಲೇ ಅತೀ ವೇಗವಾಗಿ ಬೆಳೆಯುತ್ತಿರೋ ಮಹಾನಗರ
  • ದೊಡ್ಡ ದೊಡ್ಡ ನಗರಗಳನ್ನೇ ಮೀರಿಸಬಲ್ಲ ಸಿಟಿ ಬೆಂಗಳೂರು
  • ಬೆಂಗಳೂರಲ್ಲಿ ಭೂಮಿ ಬೆಲೆ ಚಿನ್ನಕ್ಕಿಂತಲೂ ಭಾರೀ ದುಬಾರಿ

ಬೆಂಗಳೂರು ವಿಶ್ವದಲ್ಲೇ ಅತೀ ವೇಗವಾಗಿ ಬೆಳೆಯುತ್ತಿರೋ ಸಿಟಿ. ಸಿಲಿಕಾನ್​ ಸಿಟಿ ಬೆಂಗಳೂರು ಎಷ್ಟು ವೇಗವಾಗಿ ಬೆಳೆಯುತ್ತಿದೆಯೋ ಅಷ್ಟೇ Speed Development ನಾಗರಬಾವಿಯಲ್ಲೂ ಕಾಣಬಹುದು. ಬೆಂಗಳೂರು ಪಶ್ಚಿಮ ಭಾಗದಲ್ಲಿರೋ ಈ ಪ್ರದೇಶ ನಿರೀಕ್ಷೆಗೂ ಮೀರಿ ಬೆಳೆದಿದೆ. ಮೈಸೂರು ರಸ್ತೆಗೆ ಹೊಂದಿಕೊಂಡಿರೋ ಈ ಏರಿಯಾ ಇವಾಗ Investment ಮಾಡಲು ಬೆಸ್ಟ್ ಪ್ಲೇಸ್​​. ಇಷ್ಟೇ ಅಲ್ಲ ತುಮಕೂರು ರೋಡ್​ಗೂ ಹತ್ತಿರವಾಗಿರೋ ಈ ಏರಿಯಾ ಇನ್ನಷ್ಟು ಬೆಳೆಯಲಿದೆ.

ಇನ್ನೂ, ನಾಗರಬಾವಿಯಲ್ಲಿ ಹೂಡಿಕೆ ಏಕೆ ಮಾಡಬೇಕು? ಮನೆ, ಸೈಟ್​​, ಅಪಾರ್ಟ್​ಮೆಂಟ್​ ಖರೀದಿ ಮಾಡಲು ಬೆಸ್ಟ್​ ಪ್ಲೇಸ್​ ಏಕೆ? ಏನೆಲ್ಲಾ ಸೌಲಭ್ಯಗಳು ಇಲ್ಲಿವೆ? ಅನ್ನೋ ಕಂಪ್ಲೀಟ್​​ ಡೀಟೈಲ್ಸ್​ ನೋಡೋಣ!

ನಾಗರಬಾವಿ ಸ್ಟ್ರೆಂಥ್ ಏನು?

ನಾಗರಬಾವಿ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ಹೈವೇಗೆ ಹೊಂದಿಕೊಂಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯಲ್ಲೂ ವೇಗವಾಗಿ ಬೆಳೆಯಲಿರೋ ಏರಿಯಾ ಇದು. ಜೊತೆಗೆ ಔಟರ್​​ ರಿಂಗ್​ ರೋಡ್​ ಹತ್ತಿರದಲ್ಲೇ ಇರೋದರಿಂದ ತುಮಕೂರು ರಸ್ತೆಗೆ ಕೇವಲ 10 ನಿಮಿಷದಲ್ಲಿ ತಲುಪಬಹುದು. ಮಾಗಡಿ ರೋಡ್​​ನಿಂದ ಕೇವಲ 4 ಕಿಲೋ ಮೀಟರ್​​ ದೂರದಲ್ಲಿ ನೈಸ್​ ಕಾರಿಡಾರ್​ ಇದೆ. ಇದಕ್ಕೂ ನಾಗರಬಾವಿ ಬಹಳ ಹತ್ತಿರ. ಹಾಗಾಗಿ ಇಲ್ಲಿ ಭೂಮಿ ಖರೀದಿಗೆ ಬೆಸ್ಟ್​​ ಪ್ಲೇಸ್​​. ನಾಯಂಡಹಳ್ಳಿ, ಜ್ಞಾನಭಾರತಿ ಮೆಟ್ರೋ ಸ್ಟೇಷನ್​ ಹತ್ತಿರದಲ್ಲೇ ಇದೆ. ಸ್ಯಾಟಲೈಟ್​​​ ಬಸ್​ ಸ್ಟಾಪ್​​​, ಕೆಂಗೇರಿ ರೈಲ್ವೇ ಸ್ಟೇಷನ್​​​ ಕೂಡ ಸಖತ್​ ನಿಯರ್​ ಇದೆ. ನಗರದ ಬೇರೆ ಬೇರೆ ಭಾಗಗಳಿಗೆ ಬಸ್​ ಸಂಪರ್ಕ ಇದೆ. ಜಮೀನು ಖರೀದಿ ಮಾಡೋರಿಗೆ ಅವಕಾಶವೂ ಇದೆ.

ನಾಗರಬಾವಿ ವೀಕ್ನೆಸ್ ಏನು?

ರಾಜ್ಯದ ವಿವಿಧ ಮೂಲೆಗಳಿಂದ ಈ ಏರಿಯಾಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದು ನೆಲೆಸಿದ್ದಾರೆ. ಇದರಿಂದ ಏಕಾಏಕಿ ಭೂಮಿ ಬೆಲೆ ಏರಿಕೆ ಆಗಿದೆ. ಹಾಗಾಗಿ ಸೈಟ್​​ ರೇಟ್​ ಕೇಳಿದ್ರೇನೆ ತಲೆ ಗಿರ್​ ಅನ್ನುತ್ತೆ. ಕನ್ನಡದ ಹೆಚ್ಚಿನ ಸೆಲೆಬ್ರಿಟಿಗಳು ಇರೋ ಕಾರಣ ಹೈ ಪ್ರೊಫೈಲ್​ ಸ್ಟೇಟಸ್​​ ಹೊಂದಿರೋ ಏರಿಯಾ ಆಗಿದೆ. ಸದ್ಯ Residential Area ಆದ್ರೂ ನಿಧಾನಕ್ಕೆ Commercial Hub ಆಗುತ್ತಿದೆ. ಈ ಕಾರಣಕ್ಕೂ ಸೈಟ್​​ ಬೆಲೆ ದುಬಾರಿ ಆಗುತ್ತಿದೆ. ಮೈಸೂರು ರಸ್ತೆಗೆ ಹತ್ತಿರ ಆಗಿರೋದರಿಂದ ಟ್ರಾಫಿಕ್​ ಕೂಡ ಹೆಚ್ಚೇ ಇದೆ. ಒಂದು ವೇಳೆ ಹೆಚ್ಚಿನ ಮಳೆ ಬಂದಲ್ಲಿ ನಾಯಂಡಹಳ್ಳಿ ಮತ್ತು ಕೆಂಗೇರಿ ರೋಡಲ್ಲಿ ನೀರು ನಿಲ್ಲುತ್ತೆ. ಈ ಸಮಸ್ಯೆಗಳ ಹೊರತಾಗಿ Negative points ತುಂಬಾ ಕಡಿಮೆ ಅಂತಲೇ ಹೇಳಬಹುದು.

ಹೂಡಿಕೆಗೆ ಏಕೆ ಬೆಸ್ಟ್​ ಪ್ಲೇಸ್?

ನಾಗರಬಾವಿಯಲ್ಲೇ ಪ್ರತಿಷ್ಠಿತ ಬೆಂಗಳೂರು ವಿವಿ ಜ್ಞಾನಭಾರತಿ ಕ್ಯಾಂಪಸ್​ ಇದೆ. National Law School, Ambedkar School of Economics, Dr. Ambedkar Institute of Technology ಹೀಗೆ ಪ್ರತಿಷ್ಠಿತ ಸಂಸ್ಥೆಗಳೇ ಇವೆ. ಹೀಗಾಗಿ ಹೂಡಿಕೆಗೆ ಅವಕಾಶಗಳು ಹೆಚ್ಚಿವೆ. ಸರ್ಕಾರವೂ ಈ ಭಾಗದ ಅಭಿವೃದ್ದಿ ತುಂಬಾ ಸೀರಿಯಸ್​ ಆಗಿದೆ. ಬೇರೆ ಏರಿಯಾಗೆ ಕಂಪೇರ್​ ಮಾಡಿದಲ್ಲಿ ಈ ಭಾಗದಲ್ಲಿ ಬಾಡಿಗೆ ಮನೆ, ಲೀಸ್​ಗೆ ಕಡಿಮೆ ದುಡ್ಡಿಗೆ ಸಿಗುತ್ತೆ. ಈಗಲೂ 1 BHK ರೆಂಟ್​​​ 6-8 ಸಾವಿರಕ್ಕೆ ಸಿಗುತ್ತೆ. 2 BHK ರೆಂಟ್​​ 12-15 ಸಾವಿರ ಇದೆ. 2 BHK ಲೀಸ್​ ಅಂತೂ 13- 25 ಲಕ್ಷ ಬೇಕೇ ಬೇಕು.

publive-image

ಮನೆ, ಸೈಟ್​ ರೇಟ್​ ಹೇಗಿದೆ?

ನೀವು ಈ ಏರಿಯಾದಲ್ಲಿ ಎರಡು ರೀತಿಯ ಅಪಾರ್ಟ್​ಮೆಂಟ್​​ ಕಾಣಬಹುದು. ಒಂದು Luxury, ಇನ್ನೊಂದು affordable. ಶ್ರೀಮಂತರು Luxury ಅಪಾರ್ಟ್​​ಮೆಂಟ್​ ಖರೀದಿ ಮಾಡಬಹುದು. ಮಿಡಲ್​​ ಕ್ಲಾಸಿನವ್ರು affordable ಅಪಾರ್ಟ್​ಮೆಂಟ್​​ ನೋಡಬಹುದು. Luxury ಅಪಾರ್ಟ್​ಮೆಂಟ್​​​ 2BHK 1.50 ಕೋಟಿಯಿಂದ 3.5 ಕೋಟಿವರೆಗೂ ಇದೆ. 3BHK 3.30 ಕೋಟಿಯಿಂದ 8 ಕೋಟಿವರೆಗೂ ಇದೆ. ಇನ್ನು, ಮಿಡಲ್​​ ಕ್ಲಾಸ್​​ ಜನಕ್ಕೆ 2BHK 38.50 ಲಕ್ಷದಿಂದ ಶುರುವಾಗಲಿದೆ. 4 BHK ಫ್ಲಾಟ್​​ 2.20 ಕೋಟಿವರೆಗೂ ಇದೆ. ಸೈಟ್​ ಖರೀದಿ ಮಾಡಲು ಪ್ರತಿ square feet ಬೆಲೆ 12 ಸಾವಿರದಿಂದ 20 ಸಾವಿರ ವರೆಗೂ ಇದೆ.

BGS ಸೇರಿದಂತೆ ಅನೇಕ ಪ್ರತಿಷ್ಠಿತ ಆರೋಗ್ಯ ಸಂಸ್ಥೆಗಳು ಹತ್ತಿರದಲ್ಲೇ ಇವೆ. ಅದಕ್ಕಿಂತಲೂ ಮುಖ್ಯವಾಗಿ Entertainment ಅನ್ನೋದಾದ್ರೆ ಅನೇಕ ಡಬ್ಬಿಂಗ್​ ಮತ್ತು ಸೀರಿಯಲ್​ ಸ್ಟುಡಿಯೋಗಳು ಇವೆ. ಈ ಪೈಕಿ ಅಕ್ಷಯ್​ ಸ್ಟುಡಿಯೋ ಒಂದು. ಪಬ್​​​, ಬಾರ್​ ಅಂಡ್​ ರೆಸ್ಟೋರೆಂಟ್​​, ಹೋಟೆಲ್​​​ಗಳು ಇವೆ. ಹಾಗಾಗಿ ಆರೋಗ್ಯ ಮತ್ತು ಮನರಂಜನೆ ಕ್ಷೇತ್ರದಲ್ಲೂ ಸಾಕಷ್ಟು ಉದ್ಯೋಗಳು ಸೃಷ್ಟಿ ಆಗಿವೆ.

ಇರೋ ಸಮಸ್ಯೆಗಳೇನು?

ಆಗಲೇ ಹೇಳಿದಂತೆ ಈ ಏರಿಯಾ ಮೈಸೂರು ರಸ್ತೆಗೆ ಹೊಂದಿಕೊಂಡಿದೆ. ಹಾಗಾಗಿ ಟ್ರಾಫಿಕ್​ ಸಮಸ್ಯೆ ಹೆಚ್ಚೇ ಇದೆ. ಒಂದು ಕಾಲದಲ್ಲಿ ನಾಗರಬಾವಿ ಹಳ್ಳಿ ಆಗಿತ್ತು. ಹಾಗಾಗಿ ಈಗಲೂ ಕೃಷಿ ಭೂಮಿ ಇದೆ. ಮಳೆ ಬಂದರೆ ಚರಂಡಿಯಲ್ಲೇ ನೀರು ನಿಲ್ಲುತ್ತೆ. ಮೆಟ್ರೋ ವಿಸ್ತರಣೆ ಕಾಮಗಾರಿ ಮತ್ತು ರಸ್ತೆ ಕಾಮಗಾರಿ ನಡೆಯುತ್ತಿರೋದು ಹೂಡಿಕೆದಾರರಿಗೆ ಚೂರು ತಲೆ ಬಿಸಿಯಾಗಿದೆ.

ಸದ್ಯದಲ್ಲೇ ನಾಗರಬಾವಿ ಸಮೀಪಕ್ಕೆ ಇಂಟರ್​​ ನ್ಯಾಷನಲ್​​ ಏರ್ಪೋರ್ಟ್​ ಬರೋ ಸಾಧ್ಯತೆ ಇದ್ದು, ಭೂಮಿ ಬೆಲೆ ಚಿನ್ನಕ್ಕಿಂತಲೂ ದುಬಾರಿ ಆಗಲಿದೆ. ಇಷ್ಟೇ ಅಲ್ಲ ಹೂಡಿಕೆದಾರರ ಹಾಟ್​ ಸ್ಪಾಟ್​​ ಕೂಡ ಆಗಲಿದೆ. ಇಲ್ಲಿ ಯಾರೇ ಹಣ ಹೂಡಿಕೆ ಮಾಡಿದ್ರೂ ಡಬಲ್​ ಆಗೋದರಲ್ಲಿ ಯಾವುದೇ ಡೌಟ್​ ಇಲ್ಲ.

ಇದನ್ನೂ ಓದಿ:ವಿದೇಶದಲ್ಲಿ ಓದೋ ಆಸೆನಾ? ಹಣ ಇಲ್ಲ ಎಂದು ಹಿಂದೇಟು ಹಾಕ್ತಿದ್ದೀರಾ? ಓದಲೇಬೇಕಾದ ಸ್ಟೋರಿ ಇದು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment