Advertisment

ಹೆಣ್ಣನ್ನು ಮನೆಯ ಲಕ್ಷ್ಮಿ ಅನ್ನೋದು ಯಾಕೆ..? ವರಮಹಾಲಕ್ಷ್ಮಿ ಹಬ್ಬದ ದಿನ ಈ ವಿಚಾರ ನಿಮಗೆ ಗೊತ್ತಿರಲಿ

author-image
Ganesh
Updated On
ಹೆಣ್ಣನ್ನು ಮನೆಯ ಲಕ್ಷ್ಮಿ ಅನ್ನೋದು ಯಾಕೆ..? ವರಮಹಾಲಕ್ಷ್ಮಿ ಹಬ್ಬದ ದಿನ ಈ ವಿಚಾರ ನಿಮಗೆ ಗೊತ್ತಿರಲಿ
Advertisment
  • ಇಂದು ನಾಡಿನಾದ್ಯಂತ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ
  • ಹೆಣ್ಣು ಹುಟ್ಟಿದಾಗ ಲಕ್ಷ್ಮಿ ಬಂದಾಳೆ ಅನ್ನೋದು ಯಾಕೆ?
  • ಬೇರೆ ದೇವತೆಗಳಿಗಿಂತ ಲಕ್ಷ್ಮಿ ದೇವರು ಹೇಗೆ ಭಿನ್ನ..?

ತಾಯಿ ಲಕ್ಷ್ಮಿಯನ್ನು ಹಿಂದೂ ಧರ್ಮದಲ್ಲಿ ಸಂಪತ್ತು ಮತ್ತು ಸಮೃದ್ಧಿಯ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ದೇವಿ ನೆಲೆಸಿರುವ ಸ್ಥಳದಲ್ಲಿ ಯಾರೂ ಆರ್ಥಿಕ ಮುಗ್ಗಟ್ಟನ್ನು ಎದುರಿಸುವುದಿಲ್ಲ. ಮತ್ತು ಯಾವುದೇ ಸೌಕರ್ಯಗಳಿಗೆ ಕೊರತೆ ಇರಲ್ಲ ಎಂದು ನಂಬಲಾಗಿದೆ.

Advertisment

publive-image

ಈ ಕಾರಣದಿಂದಲೇ ಜನ ಲಕ್ಷ್ಮಿ ದೇವಿಯನ್ನು ಮನೆಯಲ್ಲಿ ಮಾತ್ರವಲ್ಲದೆ ಕೆಲಸ ಮಾಡುವ ಸ್ಥಳದಲ್ಲೂ ಪೂಜಿಸುತ್ತಾರೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಆರ್ಥಿಕ ಪ್ರಗತಿ ಇರುತ್ತದೆ ಅನ್ನೋ ನಂಬಿಕೆ. ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಅದೇ ಕಾರಣಕ್ಕೆ ಮನೆಯಲ್ಲಿ ಹೆಣ್ಣು ಹುಟ್ಟಿದಾಗ ಲಕ್ಷ್ಮಿ ಬಂದಿದ್ದಾಳೆ ಅನ್ನೋದು.

ಇದನ್ನೂ ಓದಿ:18.5 ಓವರ್ ಅಂದ್ರೆ ಕೊಹ್ಲಿಗೆ ಮರೆಯದ ಕ್ಷಣ.. ಶತಮಾನದ ಖುಷಿ ಜೊತೆಗೆ ಇದೆ ಬೇಸರದ ನಂಟು..! ಏನದು

publive-image

ಮನೆಯ ಸೊಸೆಯರನ್ನೂ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ಮನೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸೊಸೆಯಂದಿರಿಗೆ ವಹಿಸಲಾಗಿದೆ. ಆದರೆ ಮಹಿಳೆಯರನ್ನು ಲಕ್ಷ್ಮಿ ಎಂದು ಏಕೆ ಕರೆಯುತ್ತಾರೆ ಗೊತ್ತಾ? ದುರ್ಗಾ, ಪಾರ್ವತಿ, ಸರಸ್ವತಿ ಅಥವಾ ಇತರ ದೇವತೆಗಳೆಂದು ಯಾಕೆ ಪರಿಗಣಿಸಲ್ಲ ಎಂಬ ಪ್ರಶ್ನೆ ಕಾಡಬಹುದು!

Advertisment

ಮಹಿಳೆಯರನ್ನು ಲಕ್ಷ್ಮಿ ಎಂದು ಏಕೆ ಕರೆಯುತ್ತಾರೆ?

ತಾಯಿ ಲಕ್ಷ್ಮಿ ಕೇವಲ ಸಂಪತ್ತಿನ ದೇವತೆಯಲ್ಲ. ಬದಲಿಗೆ ಅಪಾರ ಶಕ್ತಿ ಮತ್ತು ಧನಾತ್ಮಕ ಶಕ್ತಿಯ ಉಗ್ರಾಣವನ್ನೇ ಹೊಂದಿದ್ದಾಳೆ. ಲಕ್ಷ್ಮಿ ದೇವಿಯನ್ನು ಬ್ರಹ್ಮಾಂಡದ ಶಕ್ತಿ ಎಂದು ನಂಬಲಾಗಿದೆ. ಆದ್ದರಿಂದ ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಲಕ್ಷ್ಮಿಗೆ ಸಮಾನ ಎಂದು ಭಾವಿಸಲಾಗುತ್ತದೆ. ಇದರ ಹಿಂದಿನ ಅರ್ಥವೇನೆಂದರೆ ತಾಯಿ ಲಕ್ಷ್ಮಿಯಲ್ಲಿ ಹೇಗೆ ಸಕಾರಾತ್ಮಕತೆ ಇದೆಯೋ, ಅದೇ ರೀತಿಯಲ್ಲಿ ಮಗಳು ಹುಟ್ಟಿದಾಗ ಅಥವಾ ಹೊಸ ಮಗಳು ಬರುವಾಗ ಮನೆಗೆ ಧನಾತ್ಮಕ ಶಕ್ತಿ ಬರುತ್ತದೆ ಅನ್ನೋ ವಾದ ಇದೆ.

ಇದನ್ನೂ ಓದಿ:ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಜೋರಾ..? ಈ ಮುಹೂರ್ತದಲ್ಲಿ ಮಾತ್ರ ಪೂಜೆ ಮಾಡಿ.. Don’t Miss

publive-image

ಶುಕ್ರವಾರ ಲಕ್ಷ್ಮಿ ದೇವಿಯ ಪೂಜೆ ಏಕೆ..?

ಲಕ್ಷ್ಮಿ ಪೂಜೆಯನ್ನು ಮನೆಯಲ್ಲಿ ನಿಯಮಿತವಾಗಿ ಮಾಡಲಾಗುತ್ತದೆ. ಧರ್ಮಗ್ರಂಥಗಳಲ್ಲಿ ಎಲ್ಲಾ ದೇವಾನು ದೇವತೆಗಳಿಗೆ ಮೀಸಲಿರುವ ವಿಶೇಷ ದಿನ ಇದೆ. ಶುಕ್ರವಾರ ದೇವಿಯರ ಪೂಜೆಗೆ ಮೀಸಲಾಗಿದೆ. ಈ ಕಾರಣಕ್ಕಾಗಿಯೇ ಶುಕ್ರವಾರ ಲಕ್ಷ್ಮಿ ದೇವಿಯ ಆರಾಧನೆಗೆ ಮತ್ತು ಅವಳ ರೂಪಗಳಿಗೆ ಮಂಗಳಕರವೆಂದು ಪರಿಗಣಿಸಲಾಗಿದೆ.

Advertisment

ಇದನ್ನೂ ಓದಿ:ಮಗಳು IAS ಆಗುವ ಕನಸು ಕಂಡಿದ್ದ ಅಪ್ಪ-ಅಮ್ಮ; ಕನಸು ನನಸು ಆದಾಗ ಸಂಭ್ರಮಿಸಲು ಅವರೇ ಇರಲಿಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment