/newsfirstlive-kannada/media/post_attachments/wp-content/uploads/2025/02/Mannat-Shahrukh-Khan-House2.jpg)
ದೇಶದ ಶ್ರೀಮಂತ ಸೆಲೆಬ್ರೆಟಿಗಳಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಕೂಡ ಒಬ್ಬರು. ಐಷಾರಾಮಿ ಜೀವನ ನಡೆಸುತ್ತಿರುವ ಶಾರುಖ್ ಖಾನ್ ಇದೀಗ ಮನ್ನತ್ ಮನೆಯನ್ನು ಬಿಟ್ಟು ಹೋಗುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರಂತೆ.
ಇದನ್ನೂ ಓದಿ: ಸಿದ್ಧಗಂಗಾ ಮಠದಲ್ಲಿ ಡಾ. ಪುನೀತ್ ರಾಜ್‌ಕುಮಾರ್ ಚಾರಿಟಬಲ್ ಟ್ರಸ್ಟ್ ಪುಣ್ಯ ಕಾರ್ಯ; ಫೋಟೋಗಳು ಇಲ್ಲಿವೆ!
ಹೌದು, ದೇಶದ್ಯಾದಂತ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟ ಶಾರುಖ್ ಖಾನ್ ಅವರು ತಮ್ಮ ಮನ್ನತ್ ಬಂಗಲೆಯನ್ನು ಬಿಟ್ಟು ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಬೇರೆಡೆಗೆ ಸ್ಥಳಾಂತರಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಮೇ ತಿಂಗಳಿನಲ್ಲಿ ನಟ ಶಾರುಖ್ ಖಾನ್ ಮನೆಯ ನವೀಕರಣ ಕಾರ್ಯವು ಆರಂಭವಾಗುತ್ತಿದೆ.
ಮನ್ನತ್ ಅನ್ನು ನವೀಕರಣದ ಜೊತೆಗೆ ಮತ್ತಷ್ಟು ವಿಸ್ತರಣೆ ಮಾಡುವ ಇನ್ನೂ ಎರಡು ವರ್ಷ ತೆಗೆದುಕೊಳ್ಳಲಿದೆಯಂತೆ. ಅಲ್ಲಿಯವರೆಗೂ ಶಾರುಖ್ ಖಾನ್ ಅವರು ಪತ್ನಿ ಗೌರಿ ಖಾನ್ ಮತ್ತು ಅವರ ಮಕ್ಕಳಾದ ಸುಹಾನಾ ಮತ್ತು ಆರ್ಯನ್ ಮುಂಬೈನ ಬಾಂದ್ರಾದಲ್ಲಿರುವ ಪಾಲಿ ಹಿಲ್‌ಗೆ ಸ್ಥಳಾಂತರಗೊಳ್ಳಲಿದ್ದಾರೆ.
ಸಿನಿಮಾ ನಿರ್ಮಾಪಕ ವಶು ಭಗ್ನಾನಿ ನಿರ್ಮಿಸಿದ ಐಷಾರಾಮಿ ಅಪಾರ್ಟ್‌ಮೆಂಟ್‌ನ ನಾಲ್ಕು ಮಹಡಿಗಳನ್ನು ಶಾರುಖ್ ಖಾನ್ ಬಾಡಿಗೆಗೆ ಪಡೆದಿದ್ದಾರೆ ಎನ್ನಲಾಗಿದೆ. ಈಗ ಇದೇ ನಾಲ್ಕು ಮಹಡಿಗಳಿಗೆ ತಿಂಗಳಿಗೆ 24 ಲಕ್ಷ ರೂ. ಬಾಡಿಗೆ ಪಾವತಿಸಲಿದ್ದಾರಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ