newsfirstkannada.com

ದೀಪಿಕಾ ದಾಸ್‌ ಕರಿಮಣಿ ಮಾಲೀಕ ಯಾರು.. ಬಿಗ್‌ಬಾಸ್‌ ಸ್ಪರ್ಧಿ ಸೀಕ್ರೆಟ್‌ ಮದುವೆ ಗುಟ್ಟೇನು?

Share :

Published March 2, 2024 at 6:00pm

Update March 2, 2024 at 6:02pm

    ನಟ ಶೈನ್ ಶೆಟ್ಟಿಗೆ ಕರಿಮಣಿ ಮಾಲೀಕ ನೀನಲ್ಲ ಎಂದ ನೆಟ್ಟಿಗರು

    ದೀಪಕ್​ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಗಿಣಿ

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಫೋಟೋಸ್​

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 7 ಹಾಗೂ 9ರ ಸ್ಪರ್ಧಿಯಾಗಿದ್ದ ದೀಪಿಕಾ ದಾಸ್ ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಕುಟುಂಬಸ್ಥರನ್ನು ಹೊರತು ಪಡಿಸಿ ಯಾರಿಗೂ ಹೇಳದೇ ನಟಿ ದೀಪಿಕಾ ದಾಸ್​ ಮದುವೆಯಾಗಿದ್ದಾರೆ.

ಇದನ್ನು ಓದಿ: ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್​ಬಾಸ್​ ಸ್ಪರ್ಧಿ ದೀಪಿಕಾ ದಾಸ್​​; ಹುಡುಗ ಯಾರು ಗೊತ್ತಾ?​

ದೀಪಿಕಾ ದಾಸ್‌ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಮದುವೆ ಫೋಟೋಗಳನ್ನು ಶೇರ್ ಮಾಡಿಕೊಂಡು ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ನಟಿ ದೀಪಿಕಾ ದಾಸ್​ ಅವರು ಸದ್ದಿಲ್ಲದೆ ಮದುವೆ ಆಗುತ್ತಾರೆ ಎಂದು ಅಭಿಮಾನಿಗಳಲ್ಲೂ ಊಹಿಸಿರಲಿಲ್ಲ. ಈ ವಿಚಾರದ ಬಗ್ಗೆ ತಿಳಿಯುತ್ತಿದ್ದಂತೆ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಆದರೆ ಫೋಟೋಸ್​ ಶೇರ್ ಮಾಡಿಕೊಂಡ ನಟಿ ದೀಪಿಕಾ ದಾಸ್​ ಯಾರೊಬ್ಬರು ಪ್ರತಿಕ್ರಿಯೆ ನೀಡಬಾರದೆಂದು ಕಮೆಂಟ್ ಆಯ್ಕೆಯನ್ನೇ ಆಫ್ ಮಾಡಿದ್ದಾರೆ.

ಈಗ ಮತ್ತೊಂದು ಫೋಟೋವನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ. ಆ ಫೋಟೋದಲ್ಲಿ ಮದುವೆ ದಿನಾಂಕ, ಹುಡುಗನ ಹೆಸರನ್ನು ರಿವೀಲ್ ಮಾಡಿದ್ದಾರೆ. ಇದರ ಜೊತೆಗೆ ದೀಪಿಕಾ ದಾಸ್​ ಹಳದಿ ಕಾರ್ಯಕ್ರಮದಲ್ಲಿ ಭಾಗಿಯಾಗಿರೋ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿವೆ.

ಇದನ್ನು ಓದಿ: ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌; ರಾಜ್ಯ ಸರ್ಕಾರದ ಅತಿ ದೊಡ್ಡ ಫೇಲ್ಯೂರ್- ಕೆ. ಎಸ್‌ ಈಶ್ವರಪ್ಪ

ದೀಪಿಕಾ ದಾಸ್ ಮದುವೆ ನಡೆದಿದ್ದು ಗೋವಾದಲ್ಲಿ. ದುಬೈನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಉದ್ಯಮಿ ದೀಪಕ್​ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಆ ಫೋಟೋಗಳನ್ನು ಟ್ರೋಲ್ ಪೇಜ್ ಶೇರ್ ಮಾಡಿಕೊಂಡು ದೀಪಿಕಾ ದಾಸ್​ ನಡೆಗೆ ಬೇಸರ ಹೊರ ಹಾಕುತ್ತಿದ್ದಾರೆ. ಜೊತೆಗೆ ನಟ ಬಿಗ್​ಬಾಸ್​ ಸ್ಪರ್ಧಿಯಾಗಿರೋ ಶೈನ್ ಶೆಟ್ಟಿ ಫೋಟೋವನ್ನು ಟ್ಯಾಗ್​ ಮಾಡಿ ಕರಿಮಣಿ ಮಾಲೀಕ ನೀನಲ್ಲ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.

ನಟಿ ದೀಪಿಕಾ ದಾಸ್​​ ಕೃಷ್ಣ ರುಕ್ಮಿಣಿ, ನಾಗಿಣಿ, ಇತ್ತೀಚಿಗೆ ಅಂತರಪಟ ಧಾರಾವಾಹಿಯಲ್ಲಿ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದಾರೆ. ಬಿಗ್​ಬಾಸ್​ ಮೂಲಕ ಅಪಾರ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದ ನಟಿ ದೀಪಿಕಾ ದಾಸ್​​ ಸೋಶಿಯಲ್​ ಮಿಡಿಯಾದಲ್ಲಿ​ ಸಖತ್‌ ಆ್ಯಕ್ಟೀವ್ ಆಗಿರುತ್ತಾರೆ. ಸದ್ಯ ಮದುವೆ ಬಗ್ಗೆ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತಾರಾ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೀಪಿಕಾ ದಾಸ್‌ ಕರಿಮಣಿ ಮಾಲೀಕ ಯಾರು.. ಬಿಗ್‌ಬಾಸ್‌ ಸ್ಪರ್ಧಿ ಸೀಕ್ರೆಟ್‌ ಮದುವೆ ಗುಟ್ಟೇನು?

https://newsfirstlive.com/wp-content/uploads/2024/03/deepika-das-3.jpg

Load More