/newsfirstlive-kannada/media/post_attachments/wp-content/uploads/2025/07/Roger_Binny.jpg)
ಟೀಮ್ ಇಂಡಿಯಾದಲ್ಲೇ ಅಲ್ಲ, ಬಿಸಿಸಿಐನಲ್ಲೂ ಬದಲಾವಣೆಯ ಪರ್ವ ಶುರುವಾಗಿದೆ. ಕನ್ನಡಿಗ ರೋಜರ್ ಬಿನ್ನಿ ಪದತ್ಯಾಗಕ್ಕೆ ವೇದಿಕೆ ರೆಡಿಯಾಗಿದ್ದು, ಬಿಸಿಸಿಐನ ಹೊಸ ಬಾಸ್ ಯಾರ್ ಆಗ್ತಾರೆ ಎಂಬ ಚರ್ಚೆ ನಡೀತಿದೆ. ಹಾಗಿದ್ದರೆ ಈ ಬದಲಾವಣೆಗೆ ಕಾರಣ ಏನು?.
ಅಕ್ಟೋಬರ್ 18, 2022. ವಿಶ್ವ ಶ್ರೀಮಂತ ಕ್ರಿಕೆಟ್ ಸಂಸ್ಥೆಯಲ್ಲಿ ದಾದಾಗಿರಿ ಯುಗಾಂತ್ಯವಾಗಿ ರೋಜರ್ ಬಿನ್ನಿ ಅವರ ಆಳ್ವಿಕೆ ಶುರುವಾದ ದಿನ. ಅಂದ್ರೆ, ಇಂದಿಗೆ ಬರೋಬ್ಬರಿ 2 ವರ್ಷ 9 ತಿಂಗಳು. 3 ದಿನ, ಇದೀಗ ಇದೇ ರೋಜರ್ ಬಿನ್ನಿ ಅವರು ಯುಗಾಂತ್ಯಕ್ಕೆ ಟೈಮ್ಬಾಂಬ್ ಫಿಕ್ಸ್ ಆಗಿದೆ.
ರೋಜರ್ ಬಿನ್ನಿ ಯುಗಾಂತ್ಯಕ್ಕೆ ಟೈಮ್ಬಾಂಬ್ ಫಿಕ್ಸ್..!
2022ರಲ್ಲಿ ಸೌರವ್ ಗಂಗೂಲಿಯಿಂದ ತೆರವಾದ ಸ್ಥಾನಕ್ಕೆ ರೋಜರ್ ಬಿನ್ನಿ ನೇಮಕ ಆಗಿದ್ದರು. ವಾರ್ಷಿಕ ಮಹಾಸಭೆಯಲ್ಲಿ ಅವಿರೋಧವಾಗಿ ಬಿಸಿಸಿಐ ಕುರ್ಚಿ ಏರಿದ್ದ ರೋಜರ್ ಬಿನ್ನಿ, ಕಳೆದ 3 ವರ್ಷಗಳಲ್ಲಿ ಅನೇಕ ಉತ್ತಮ ನಿರ್ಧಾರಗಳನ್ನೇ ಕೈಗೊಂಡಿದ್ದಾರೆ. ಈ ಮೂರು ವರ್ಷಗಳ ಅವಧಿಯಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಟ್ಟಿದೆ.
ಅಷ್ಟೇ ಅಲ್ಲ, ಮಹಿಳಾ ಪ್ರೀಮಿಯರ್ ಲೀಗ್ನ ಲಾಂಚ್ ಆಗಿದ್ದು ಸಹ ರೋಜರ್ ಬಿನ್ನಿಯ ಕಾಲಘಟದಲ್ಲೇ ಆಗಿದೆ. ಇದೀಗ ರೋಜರ್ ಬಿನ್ನಿ ಅಧಿಕಾರದಿಂದ ಕೆಳಗಿಳಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಬಿಸಿಸಿಐನಲ್ಲಿ ಹೊಸ ಅಧ್ಯಾಯದ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಯಾರು ಮುಂದಿನ ಬಿಗ್ಬಾಸ್ ಆಗ್ತಾರೆ ಎಂಬ ಪ್ರಶ್ನೆ ಸಹಜವಾಗೇ ಹುಟ್ಟಿಕೊಂಡಿದೆ.
ವಯಸ್ಸಿನ ನಿಯಮಕ್ಕೆ ರೋಜರ್ ಬಿನ್ನಿ ಬಲಿ..!
ರೋಜರ್ ಬಿನ್ನಿ ಯಾಕೆ ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಬೇಕು ಎಂಬ ಪ್ರಶ್ನೆ ಸಹಜವಾಗೇ ಕಾಡುತ್ತೆ. ಇದಕ್ಕೆ ಕಾರಣ ರೋಜರ್ ಬಿನ್ನಿ ವಯಸ್ಸೇ ಆಗಿದೆ. ಇದೇ ಜುಲೈ 19ರಂದು ರೋಜರ್ ಬಿನ್ನಿ 70ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬಿಸಿಸಿಐ ರೂಲ್ಸ್ ಪ್ರಕಾರ, ಅಧ್ಯಕ್ಷ ಸ್ಥಾನಕ್ಕೆ 70 ವರ್ಷಗಳ ವಯಸ್ಸಿನ ಮಿತಿಯಿದೆ. ಹೀಗಾಗಿ 70 ವರ್ಷದ ರೋಜರ್ ಬಿನ್ನಿ ಅಧ್ಯಕ್ಷ ಹುದ್ದೆಯನ್ನ ತೊರೆಯಬೇಕಾಗಿದೆ.
ಬಿಸಿಸಿಐ ರೂಲ್ಸ್ ಏನು ಹೇಳುತ್ತೆ..?
- ಬಿಸಿಸಿಐ ಅಧ್ಯಕ್ಷರಾಗಲು ಭಾರತದ ಪ್ರಜೆಯಾಗಿರಬೇಕು
- 70 ವರ್ಷದ ಬಳಿಕ ಬಿಸಿಸಿಐ ಅಧ್ಯಕ್ಷರಾಗಿ ಇರುವಂತಿಲ್ಲ
- ದಿವಾಳಿ, ಅಸ್ವಸ್ಥ ಮನಸ್ಥಿತಿಯ ಹೊಂದಿರಬಾರದು
- ಸಚಿವರು, ಸರ್ಕಾರಿ ಹುದ್ದೆಯಲ್ಲಿ ಇರಬಾರದು
- ಕ್ರಿಕೆಟ್ ಬಿಟ್ಟು ಇತರೆ ಕ್ರೀಡಾ ಸಂಸ್ಥೆಯ ಪದಾಧಿಕಾರಿ ಆಗಿರಬಾರದು
- ಒಟ್ಟು 9 ವರ್ಷಗಳ ಕಾಲ ಬಿಸಿಸಿಐನ ಪದಾಧಿಕಾರಿಯಾಗಿ ಇರುವಂತಿಲ್ಲ
ಈ ನಿಯಮಗಳ ಅನ್ವಯ ರೋಜರ್ ಬಿನ್ನಿಗೆ ಈಗ 70 ವರ್ಷ ವಯಸ್ಸಾಗಿದೆ. ಹೀಗಾಗಿ ಅಧಿಕಾರಾವಧಿ ಕಳೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಇದನ್ನೂ ಓದಿ:ಕೇರಳಕ್ಕೆ ಗುಡ್ಬೈ ಹೇಳಲಿರೋ ಬ್ರಿಟನ್ F-35 ಫೈಟರ್ ಜೆಟ್.. ವಿಶ್ವದ ದುಬಾರಿ ವಿಮಾನಕ್ಕೆ ಏನಾಗಿತ್ತು..?
ಹಂಗಾಮಿ ಅಧ್ಯಕ್ಷರಾಗಿ ರಾಜೀವ್ ಶುಕ್ಲಾ ನೇಮಕ ಫಿಕ್ಸ್..!
ಹಾಲಿ ಅಧ್ಯಕ್ಷರಾಗಿರುವ ರೋಜರ್ ಬಿನ್ನಿಯಿಂದ ತೆರವಾಗುವ ಸ್ಥಾನಕ್ಕೆ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬಿಸಿಸಿಐ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಶುಕ್ಲಾ, ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಆಗಿ, ಐಪಿಎಲ್ನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಇದೆ. ರಾಜಕೀಯದಲ್ಲೂ ಸಕ್ರಿಯರಾಗಿರುವ ಶುಕ್ಲಾಗೆ ಕೆಲ ಬಿಗ್ಬಾಸ್ಗಳ ಕೃಪೆ ಇದೆ. ಹೀಗಾಗಿ ಸದ್ಯ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ ರಾಜೀವ್ ಶುಕ್ಲಾ, ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರಾಗಿ ಮುಂದಿರಿಸುವ ನಿರ್ಧಾರ ಕೈಗೊಂಡರು ಅಚ್ಚರಿ ಇಲ್ಲ.
ಬಿಸಿಸಿಐನಲ್ಲಿ ರೋಜರ್ ಬಿನ್ನಿಯ ದರ್ಬಾರ್ ಅಂತ್ಯವಾಗಿದ್ದು, ಹೊಸ ಅಧ್ಯಾಯದ ಆರಂಭಕ್ಕೆ ಮುನ್ನುಡಿ ಬರೆಯಲಾಗಿದೆ. ಆದ್ರೆ, ಮುಂದಿನ ದಿನಗಳಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಜಸ್ಟ್ ವೇಯ್ಟ್ ಆ್ಯಂಡ್ ಸೀ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ