/newsfirstlive-kannada/media/post_attachments/wp-content/uploads/2024/10/Rahul-Gandhi-Jalebi.jpg)
ದೆಹಲಿ: ಇತ್ತೀಚೆಗೆ ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಆರಂಭದಲ್ಲಿದ್ದ ಟ್ರೆಂಡ್ ಕೊನೆಗೆ ಸಂಪೂರ್ಣ ಬದಲಾಗಿದೆ. ಒಂದು ಹಂತದಲ್ಲಿ 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್ ಈಗ ಹಿಂದೆ ಬಿದ್ದಿದೆ. ಸದ್ಯದ ಮಾಹಿತಿ ಪ್ರಕಾರ ಬಿಜೆಪಿ 48 ಮತ್ತು ಕಾಂಗ್ರೆಸ್ 34 ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ಹಾಗಾಗಿ ಬಿಜೆಪಿ ಅಧಿಕಾರಕ್ಕೆ ಬರೋದು ಕನ್ಫರ್ಮ್ ಆಗಿದೆ.
ಊರಿಗೆ ಮುಂಚೆ ಜಿಲೇಬಿ ಹಂಚಿ ಸಂಭ್ರಮಿಸಿದ್ದ ಕಾಂಗ್ರೆಸ್!
ಮತ ಎಣಿಕೆ ಶುರುವಾದ ಆರಂಭದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತ್ತು. ಇದೇ ಟ್ರೆಂಡ್ ನಂಬಿದ್ದ ಕಾಂಗ್ರೆಸ್ ಕಾರ್ಯಕರ್ತರು ಜಿಲೇಬಿ ಹಂಚಿ ಸಂಭ್ರಮಿಸಿದ್ದರು. ಆದರೀಗ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿ ಗೆದ್ದು ಬೀಗಿದ್ದು, ಕಾಂಗ್ರೆಸ್ ಕಾರ್ಯಕರ್ತರಿಗೆ ಭಾರೀ ನಿರಾಸೆ ಆಗಿದೆ.
Ordered some Jalebis.#HaryanaElectionResultpic.twitter.com/WyGEC2xXhO
— P C Mohan (@PCMohanMP)
Ordered some Jalebis.#HaryanaElectionResultpic.twitter.com/WyGEC2xXhO
— P C Mohan (@PCMohanMP) October 8, 2024
">October 8, 2024
ಜಿಲೇಬಿ ಚರ್ಚೆಗೆ ಬಂದಿದ್ದೇಕೆ?
ಹರಿಯಾಣದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೇಂದ್ರ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಗೊಹಾನದ ಪ್ರಸಿದ್ಧ ಜಿಲೇಬಿಯನ್ನು ತಿಂದು ನಾವು ಗೆಲ್ಲುತ್ತೇವೆ ಎಂದಿದ್ದರು. ನನ್ನ ಜೀವನದ ಅತ್ಯುತ್ತಮ ಜಿಲೇಬಿ ತಿಂದಿದ್ದೇನೆ. ಕಾಂಗ್ರೆಸ್ ಗೆದ್ದ ಮೇಲೆ ಇದೇ ಜಿಲೇಬಿ ಹಂಚುತ್ತೇವೆ ಎಂದಿದ್ದರು. ಅಷ್ಟೇ ಅಲ್ಲ ಹರಿಯಾಣದಲ್ಲಿ ಜಿಲೇಬಿ ಫ್ಯಾಟ್ಟರಿ ಶುರು ಮಾಡಿ ವಿದೇಶಕ್ಕೆ ಈ ಸಿಹಿಯನ್ನು ಕಳಿಸೋಣ ಎಂದು ಹೇಳಿಕೆ ನೀಡಿದ್ದರು. ಬಳಿಕ ಆರಂಭಿಕ ಟ್ರೆಂಡ್ ನಂಬಿ ಕಾಂಗ್ರೆಸ್ ಜಿಲೇಬಿ ಹಂಚಿ ಸಂಭ್ರಮಿಸಿದ್ದ ಕಾರಣ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬಿಜೆಪಿಯಿಂದ ಟ್ರೋಲ್
ಬಿಜೆಪಿ ಇದನ್ನೇ ಇಟ್ಟುಕೊಂಡು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದೆ. ಜಿಲೇಬಿ ಮೀಮ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಕಾಂಗ್ರೆಸ್ ಆತುರದ ನಿರ್ಧಾರವೇ ಇದಕ್ಕೆಲ್ಲಾ ಕಾರಣವಾಗಿದೆ.
ಇದನ್ನೂ ಓದಿ:ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿಗೆ ಭರ್ಜರಿ ಗೆಲುವು.. ಮತ್ತೆ CM ಗದ್ದುಗೆ ಏರಲು ಓಮರ್ ಅಬ್ದುಲ್ಲಾ ರೆಡಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ