ಮಳೆ ಬಂದ್ರೆ ಮಾನ್ಯತಾ ಟೆಕ್​​ ಪಾರ್ಕ್​​​ ಮುಳುಗೋದು ಯಾಕೆ? ವರದಿಯಲ್ಲಿ ಅಸಲಿ ಸತ್ಯ ರಿವೀಲ್​..!

author-image
Veena Gangani
Updated On
ಮಳೆ ಬಂದ್ರೆ ಮಾನ್ಯತಾ ಟೆಕ್​​ ಪಾರ್ಕ್​​​ ಮುಳುಗೋದು ಯಾಕೆ? ವರದಿಯಲ್ಲಿ ಅಸಲಿ ಸತ್ಯ ರಿವೀಲ್​..!
Advertisment
  • ಪ್ರತಿ ಬಾರಿ ಸುರಿದ ಮಳೆಗೆ ಮಾನ್ಯತಾ ಟೆಕ್​​ ಪಾರ್ಕ್​​ ಜಲಾವೃತ ಆಗೋದೇಕೆ?
  • ಒಂದೇ ಮಳೆಗೆ ಸಂಪೂರ್ಣ ಮುಳುಗಡೆ ಆಗುತ್ತೆ ಮಾನ್ಯತಾ ಟೆಕ್​​ ಪಾರ್ಕ್​
  • ಅಷ್ಟಕ್ಕೂ ಖಾಸಗಿ​ ಕಂಪನಿಗಳು ಮಾಡಿರೋ ಅವಾಂತರ ಏನು? ಸ್ಟೋರಿ ಓದಿ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಮಳೆ ಬಂದ್ರೆ ಸಾಕು ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಳ್ಳುತ್ತದೆ. ಅದರಲ್ಲೂ ಎಡೆಬಿಡದೆ ಮಳೆ ಸುರಿದು ಬಿಟ್ರೆ ಫಾಲ್ಸ್​​ನಂತೆ ಆಗಿಬಿಡುತ್ತದೆ. ಇದಕ್ಕೆ ಪಕ್ಕಾ ಉದಾಹರಣೆ ಎಂದರೆ ಬೆಂಗಳೂರಿನ ಐಟಿ ಹಬ್ ಮಾನ್ಯತಾ ಟೆಕ್ ಪಾರ್ಕ್.

ಇದನ್ನೂ ಓದಿ:ಕಾಲೇಜು ಉಪನ್ಯಾಸಕರಿಂದ ಬೆಂಗಳೂರಲ್ಲಿ ವಿದ್ಯಾರ್ಥಿನಿ ಮೇಲೆ ರೇಪ್.. ಮೂವರು ಕೀಚಕರು ಅರೆಸ್ಟ್..!

publive-image

ಹೌದು, ಬೆಂಗಳೂರಿನಲ್ಲಿ ಧಾರಾಕಾರವಾಗಿ ಮಳೆಯಾದ್ರೆ, ಹೆಬ್ಬಾಳ ಬಳಿಯ ನಾಗವಾರದ ಹೊರ ವರ್ತುಲ ರಸ್ತೆಯಲ್ಲಿರೋ ಮಾನ್ಯತಾ ಟೆಕ್ ಪಾರ್ಕ್ ಸಂಪೂರ್ಣ ಜಲಾವೃತಗೊಳ್ಳುತ್ತದೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಧಾರಾಕಾರವಾಗಿ ಸುರಿದ ಮಳೆಗೆ ಮಾನ್ಯತಾ ಟೆಕ್ ಪಾರ್ಕ್ ಪ್ರವಾಹದಲ್ಲಿ ಮುಳುಗಡೆಯಾಗಿತ್ತು. ಟೆಕ್ ಪಾರ್ಕ್‌ನಲ್ಲಿ ಮಳೆಯಿಂದ ರಸ್ತೆಗಳಂತೂ ನದಿಗಳಂತೆ ತುಂಬಿ ಹರಿಯುತ್ತಿದ್ದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಮೊದಲೇ ಮಾನ್ಯತಾ ಟೆಕ್ ಪಾರ್ಕ್ ಬೆಂಗಳೂರಿನಲ್ಲಿರುವ ಒಂದು ಪ್ರಮುಖ ಸಾಫ್ಟ್‌ವೇರ್ ತಂತ್ರಜ್ಞಾನ ಉದ್ಯಾನವನವಾಗಿದೆ. ಇಲ್ಲಿ ಅನೇಕ ಪ್ರಮುಖ ಐಟಿ ಕಂಪನಿಗಳಿಗೆ ನೆಲೆಯಾಗಿದೆ.

publive-image

ಆದ್ರೆ, ಹೀಗೆ ಒಂದೇ ಮಳೆಗೆ ಮಾನ್ಯತಾ ಟೆಕ್​​ ಪಾರ್ಕ್​​ ಬಳಿ ಪ್ರವಾಹ ಉಂಟಾಗೋದು ಏಕೆ? ಪ್ರತಿ ಬಾರಿಯೂ ಸುರಿದ ಮಳೆಗೆ ಮಾನ್ಯತಾ ಟೆಕ್​​ ಪಾರ್ಕ್​​​ ಮುಳುಗಡೆಯಾಗೋದ್ಯಾಕೆ? ಮಾನ್ಯತಾ ಟೆಕ್ ​​​ಪಾರ್ಕ್​ನಲ್ಲಿ ಖಾಸಗಿ​ ಕಂಪನಿಗಳು ಮಾಡಿರೋ ಅವಾಂತರ ಏನು ಎಂಬುವುದರ ಬಗ್ಗೆ ಕಂಪ್ಲೀಟ್​ ಮಾಹಿತಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿಗೆ ಶಿಕ್ಷಣ ಇಲಾಖೆ ಗ್ರೀನ್ ಸಿಗ್ನಲ್.. ಇನ್ನೊಂದು ಹೆಜ್ಜೆ ಬಾಕಿ ಅಷ್ಟೇ!

ಈಗಾಗಲೇ ಮಾನ್ಯತಾ ಟೆಕ್​​​ ಪಾರ್ಕ್​ನ​​ ಜಲಪ್ರವಾಹ ಉಂಟಾದ ಕಾರಣ ಡಿಸಿಎಂ ಡಿ.ಕೆ ಶಿವಕುಮಾರ್​​​ ಸೂಚನೆ ನೀಡಿದ ಬೆನ್ನಲ್ಲೇ ಅಧಿಕಾರಿಗಳು ವಿಸ್ತೃತ ವರದಿ ಸಿದ್ದಪಡಿಸಿದ್ದಾರೆ. ಮಾನ್ಯತಾ ಟೆಕ್​ ಪಾರ್ಕ್​​ ಮುಳುಗಡೆಯಾಗಿದ್ದಾಗ ಮೇ 29ರಂದು ಡಿಸಿಎಂ ಡಿ.ಕೆ. ಶಿವಕುಮಾರ್​​​ ಸ್ಥಳಕ್ಕೆ ಭೇಟಿ ಕೊಟ್ಟ ಪರಿಶೀಲನೆ ನಡೆಸಿದ್ದರು. ಡಿಸಿಎಂ ಸೂಚನೆ ಬೆನ್ನಲ್ಲೇ ಕಂದಾಯ ಮತ್ತು ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಖಾಸಗಿ ಕಂಪನಿಗಳ ಹಿರಿಯ ಅಧಿಕಾರಿಗಳು, ಸ್ಥಳೀಯರು ಮತ್ತು ಭೂಮಾಲೀಕರೊಂದಿಗೆ ಸಭೆ ನಡೆಸಿದ್ದಾರೆ. ಬಳಿಕ ವಿಸ್ತೃತ ಯೋಜನಾ ವರದಿ ಸಿದ್ದಪಡಿಸಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮುನೀಶ್​ ಮೌದ್ಗಿಲ್ ಅವರು ಬಿಬಿಎಂಪಿಗೆ ಸೂಕ್ತ ಕ್ರಮಕ್ಕೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಜೊತೆಗೆ ಕಂದಾಯ ಇಲಾಖೆ ಜಲಾವೃತ ತಡೆಗೆ ಒಳಚರಂಡಿ ಮತ್ತು ನೀರುಗಾಲುವೆಗಳ ಯೋಜನೆ ರೂಪಿಸುವ ಬಗ್ಗೆ ಸಲಹೆ ನೀಡಿದೆ.

publive-image

ಇನ್ನೂ, ಇದೇ ವೇಳೆ ಟೆಕ್​​​ ಪಾರ್ಕ್​​​ಗಳ ಒತ್ತುವರಿ ಮತ್ತು ಸರ್ಕಾರದ ತಪ್ಪುಗಳು ವರದಿಯಲ್ಲಿ ಬಹಿರಂಗವಾಗಿದೆ. ಸರ್ವೇಯಲ್ಲಿ ರಾಜಕಾಲುವೆಗಳ ಬಫರ್​​ ಜೋನ್​ ಮತ್ತು ನೀರಗಾಲುವೆಗಳ ಒತ್ತುವರಿಯೇ ಈ ಜಲಪ್ರವಾಹಕ್ಕೆ ಕಾರಣ ಎಂಬ ಅಂಶ ಬಟಾಬಯಲಾಗಿದೆ. ಅಲ್ಲದೇ ಆಯಾ ಪ್ರಾಧಿಕಾರಿಗಳು ಮತ್ತು ಭ್ರಷ್ಟ ಅಧಿಕಾರಿಗಳ ತಪ್ಪುಗಳು ವರದಿಯಲ್ಲಿ ಬಹಿರಂಗವಾಗಿದೆ. ಈ ಬಗ್ಗೆ KIADB (Karnataka Industrial Areas Development Board) ಮತ್ತು ಟೌನ್​​ ಪ್ಲಾನಿಂಗ್​​ ಇಲಾಖೆಗಳ ನಿರ್ಲಕ್ಷ್ಯವೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಮಾನ್ಯತಾ ಟೆಕ್​​ ಪಾರ್ಕ್​​​ ಮತ್ತು ಸುತ್ತಲಿನ ಪ್ರದೇಶ ಮುಳುಗಡೆಗೆ ಕಾರಣ ಏನು..? ವರದಿಯಲ್ಲಿ ಏನಿದೆ..?

  • ನಾಗವಾರದ ಮಾನ್ಯತಾ ಟೆಕ್ ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಪ್ರತಿ ಮಳೆಗೆ ತೀವ್ರ ನೀರಿನ ಪ್ರವಾಹಕ್ಕೆ ತುತ್ತಾಗ್ತಿವೆ.
  • ನೀರು ನಿಲ್ಲುವಿಕೆಯಿಂದಾಗಿ ಪ್ರವಾಹ ಉಂಟಾಗಿ ಜನರ ಸಂಚಾರ ಮತ್ತು ಜೀವನಕ್ಕೆ ಅಡ್ಡಿಯುಂಟಾಗಿದೆ.
  • ಮಳೆಗಾಲಕ್ಕೂ ಮುನ್ನ ಸುರಿದ ಭಾರೀ ಮಳೆಯಿಂದಾಗಿ ಈ ಪ್ರದೇಶ ಜಲಾವೃತಗೊಂಡು ಅವಾಂತರ ಸೃಷ್ಠಿಸಿತ್ತು.
  • ಈ ಹಿನ್ನೆಲೆ ಮಾನ್ಯತಾ ಟೆಕ್​​ಪಾರ್ಕ್​​ ಮತ್ತು ಸುತ್ತಮುತ್ತಲಿನ ಏರಿಯಾಗಳಿಗೆ ಅಧಿಕಾರಿಗಳು ಭೇಟಿ ಕೊಟ್ಟಿದ್ದರು.
    ಅಧಿಕಾರಿಗಳ ತಂಡ ರೆವಿನ್ಯೂ ದಾಖಲೆಗಳು, ಸರ್ವೇ ರಿಪೋರ್ಟ್ಸ್ ಮತ್ತು ಇತರೆ ದಾಖಲೆಗಳನ್ನು ಪರಿಶೀಲಿಸಿ ವರದಿ ತಯಾರಿಸಿದೆ.
  • ಪ್ರವಾಹಕ್ಕೆ ಕಾರಣವಾಗುತ್ತಿರುವ ನೀರನ್ನು ಹೊರಹಾಕಲು ಪ್ರಾಯೋಗಿಕ ಮಾರ್ಗಗಳು ಮತ್ತು ಆಯ್ಕೆಗಳ ಬಗ್ಗೆ ರಿಪೋರ್ಟ್​​ನಲ್ಲಿ ಅಧಿಕಾರಿಗಳು ಸಲಹೆ ನೀಡಿದ್ದಾರೆ.
  • ಇದು ಸಮೀಕ್ಷಾ ವರದಿಯೂ ಅಲ್ಲ, ಎಂಜಿನಿಯರಿಂಗ್ ವರದಿಯೂ ಅಲ್ಲ ಎಂಬ ಸ್ಪಷ್ಟನೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
  • ಅಧಿಕಾರಿಗಳು ರಾಜುಕಾಲುವೆ ಮತ್ತು ನೀರುಗಾಲುವೆಗಳ ಪ್ರಸ್ತುತ ಸ್ಥಿತಿ ಮತ್ತು ನಿರ್ಮಾಣವಾಗಿರುವ ಕಟ್ಟಡಗಳ ಅಧ್ಯಯನ ಮಾಡಿ ರಿಪೋರ್ಟ್​ ಸಿದ್ದಪಡಿಸಿದ್ದಾರೆ.
  • ಪ್ರತ್ಯೇಕ ನೀರುಗಾಲುವೆಗಳು ಮತ್ತು ಚರಂಡಿಯ ಗಾತ್ರ ವಿಸ್ತರಣೆಗೆ ಪ್ರಮುಖ ಸಲಹೆ ನೀಡಿದ್ದಾರೆ. ಮೇ 30, 2025ರಂದು ಮಾನ್ಯತಾ ಟೆಕ್​​ಪಾರ್ಕ್​ಗೆ ಬಿಬಿಎಂಪಿ ಅಧಿಕಾರಿಗಳ ತಂಡ ತೆರಳಿದ್ದರು.
  • ಎಂ/ಎಸ್ ಕಾರ್ಲೆ, ಎಂ/ಎಸ್ ಮಾನ್ಫೊ, ಎಂ/ಎಸ್ ಮಂತ್ರಿ, ಎಂ/ಎಸ್ ಎಬಿಸು ಟೆಕ್ ಪಾರ್ಕ್ ಪ್ರೈವೇಟ್ ಲಿಮಿಟೆಡ್ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ್ದರು. ಆಗ ಜಲಾವೃತ ತಡೆಗೆ ಸ್ಥಳೀಯ ಕಂಪನಿಗಳ ಪ್ರತಿನಿಧಿಗಳಿಂದ ಸೂಕ್ತ ಸಲಹೆಗಳನ್ನು ಪಡೆದುಕೊಂಡಿದ್ದರು.
  • ಬಳಿಕ ಕಂದಾಯ ಇಲಾಖೆಯ 1958ರ ನಾಗವಾರ ಗ್ರಾಮದ ನಕ್ಷೆಯಲ್ಲಿ ತೋರಿಸಲಾದ ರಾಜುಕಾಲುವೆಗಳು ಮತ್ತು ನೀರಿನ ಒಳಚರಂಡಿಗಳ ತಪಾಸಣೆ ಮಾಡಿಲಾಗಿತ್ತು.

publive-image

ವರದಿಯಲ್ಲಿ ಏನಿದೆ..? ಸರ್ಕಾರಕ್ಕೆ ನೀಡಲಾದ ಸಲಹೆಗಳೇನು..?

  • ಮಾನ್ಯತಾ ಟೆಕ್​​​​ಪಾರ್ಕ್​​ಗೆ ಹತ್ತಿರದ ದೊಡ್ಡ ರಾಜುಕಾಲುವೆಗೆ ಮಳೆನೀರು ಸರಾಗವಾಗಿ ಹರಿದುಹೋಗುವಂತೆ ವಿನ್ಯಾಸವನ್ನು ಮಾಡಬೇಕು.
  • ಹತ್ತಿರದ ದೊಡ್ಡ ರಾಜುಕಾಲುವೆಗೆ ನೀರನ್ನು ಹರಿಸಲು ಸರ್ವೆ ಸ್ಕೆಚ್​​ಗೆ ಅನುಗುಣವಾಗಿ ಚರಂಡಿಗಳು, ನೀರಿಗಾಲುವೆಗಳ ರಚನೆ ಮಾಡಬೇಕು.
  • ನಾಗವಾರ ಕೆರೆಯಿಂದ ಕಲ್ಕೆರೆ ಕೆರೆಗೆ ಹರಿಯುವ ರಾಜಕಾಲುವೆಗೆ ಮಾನ್ಯತಾ ಟೆಕ್​​ಪಾರ್ಕ್​ನ ನೀರುಗಾಲುವೆಗಳನ್ನು ಸಂಪರ್ಕಿಸುವಂತೆ ಮಾಡಬೇಕು.
  • ರಾಜಕಾಲುವೆಯಲ್ಲಿ ಬಹಳಷ್ಟು ಹೂಳು ತುಂಬಿದ್ದು ಮೊದಲು ಅದನ್ನು ಸ್ವಚ್ಛಗೊಳಿಸಬೇಕಿದೆ.
  • ರಾಜುಕಾಲುವೆ ಸುತ್ತಲಿನ ಬಫರ್ ಜೋನ್​​ ನಿರ್ವಹಣೆ ಮಾಡಬೇಕು. ಯಾಕಂದ್ರೆ ಇಡೀ ಪ್ರದೇಶದ ನೀರು ಅಲ್ಲಿ ತುಂಬಿ ಹರಿಯಬಹುದು.
  • ದಾಖಲೆಗಳನ್ನು ಪರಿಶೀಲಿಸಲಾಗಿ ಹಲವಾರು ನೀರುಗಾಲುವೆಗಳು ಮತ್ತು ಬಫರ್​ ಜೋನ್​ ಮೇಲೆ ಅತಿಕ್ರಮವಾಗಿ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ.
  • ಸ್ಯಾಟಲೈಟ್​ ಇಮೇಜಸ್​​ ಅಸ್ಪಷ್ಟತೆಯಿಂದ ಕೂಡಿದ್ದು, ಒತ್ತುವರಿ ಕಟ್ಟಡಗಳ ಗುರುತಿಸಲು ಸಾಧ್ಯವಾಗಿಲ್ಲ.
  • ಕರ್ನಾಟಕ ಸರ್ಕಾರವೇ ನೀರಿನ ಚರಂಡಿಗಳನ್ನು 2020 ರಲ್ಲಿ ಮಾರಾಟ ಮಾಡಿದೆ.
  • 2020 ರ ತಿದ್ದುಪಡಿ ಕಾಯ್ದೆ 44 ರಂತೆ ಕೆಎಲ್ಆರ್ ಕಾಯ್ದೆ 1964 ರ ತಿದ್ದುಪಡಿಯಾಗಿ ಪರಿಚಯಿಸಲಾದ ಸೆಕ್ಷನ್ 69-ಎ ಅಡಿಯಲ್ಲಿ ಎಂ/ಎಸ್ ಕಾರ್ಲೆಗೆ ಮಾರಾಟ ಮಾಡಲಾಗಿದೆ.
  • ಇನ್ನುಳಿದ ನೀರುಗಾಲುವೆಗಳನ್ನು M/S ಮಾನ್ಫೋ, M/S ಮಾನ್ಯತಾ ಮತ್ತು M/S ಎಬಿಸು ಟೆಕ್ ಪಾರ್ಕ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರು ಕಟ್ಟಡಗಳನ್ನು ನಿರ್ಮಿಸಿ ಕಾಲುವೆಗಳನ್ನು ಬ್ಲಾಕ್​​​​ ಮಾಡಿದ್ದಾರೆ.
  • ದಶಕಗಳ ಹಿಂದೆ ಈ ಎಲ್ಲಾ ಕಟ್ಟಡಗಳು ಕೃಷಿ ಭೂಮಿಗಳಾಗಿದ್ದವು.
  • ಕಟ್ಟಡಗಳು ಮತ್ತು ವಾಣಿಜ್ಯ ಚಟುವಟಿಕೆಗಳಿಂದ ಕೃಷಿ ಭೂಮಿಯಲ್ಲಿ ಹಾದುಹೋಗಿದ್ದ ನೈಸರ್ಗಿಕ ನೀರಿನ ಹರಿವಿಗೆ ಅಡ್ಡಿಪಡಿಸಲಾಗಿದೆ.
  • ದಾಖಲೆಯಲ್ಲಿರುವ ಚರಂಡಿಗಳನ್ನು ಸಹ ಅಡ್ಡಿಪಡಿಸಿ ಅವುಗಳ ಮೇಲೆ ಕಟ್ಟಡಗಳ ನಿರ್ಮಿಸಲಾಗಿದೆ.
  • ಇದೀಗ ರಾಜಕಾಲುವೆ ಸಂಪರ್ಕಿಸುವ ನೀರುಗಾಲುವೆಗಳ ನಿರ್ಮಾಣ ಅತ್ಯಗತ್ಯವಾಗಿದ್ದು, ಇದ್ರ ಸಂಪೂರ್ಣ ವೆಚ್ಚ ಒತ್ತುವರಿ ಮಾಡಿರುವ ಖಾಸಗೀ ಕಂಪನಿಗಳಿಂದಲೇ ಭರಿಸಬೇಕು.
  • ನೀರುಗಾಲುವೆಗಳ ನಿರ್ಮಾಣಕ್ಕೆ ಭೂಮಿಯನ್ನು ಎಲ್ಲಾ ಖಾಸಗೀ ಕಂಪನಿಗಳೇ ಸಮಾನವಾಗಿ ಉಚಿತವಾಗಿ ನೀಡಬೇಕು
  • ಮಾನ್ಯತಾ ಟೆಕ್​ ಪಾರ್ಕ್​​​ ಒಳಗೆ ಹಾಕಲಾದ ಕಾಂಕ್ರೀಟ್​ ಮತ್ತು ನಿರ್ಮಾಣ ಕಾರ್ಯಗಳಿಂದಲೂ ಜಲಾವೃತಕ್ಕೆ ಕಾರಣವಾಗಿದೆ.
  • ಮಾನ್ಯತಾ ಟೆಕ್​ ಪಾರ್ಕ್​ ವಾದದಂತೆ ನೀರು ನಿಂತಾಗ ಪಂಪ್​ಗಳನ್ನು ಬಳಸಿ ನೀರು ಹೊರಹಾಕುವ ಅಥವಾ ಸಂಪ್​ಗಳನ್ನು ನಿರ್ಮಿಸುವ ಕಾರ್ಯ ಶಾಶ್ವತ ಪರಿಹಾರವಲ್ಲ.
  • ನೀರು ನಿಲ್ಲುವ ಪ್ರದೇಶಗಳಿಂದ ನೀರುಗಾಲುವೆಗಳ ನಿರ್ಮಿಸಿ ಇಳಿಜಾರಿನ ಮೂಲಕ ಡೊಡ್ಡ ರಾಜಕಾಲುವೆಗೆ ಸಂಪರ್ಕಿಸುವಂತೆ ವಿನ್ಯಾಸ ಮಾಡಬೇಕು.
  • ನೀರುಗಾಲುವೆಗಳ ನಿರ್ಮಾಣಕ್ಕಾಗಿ ಯಾವುದೇ ಮುಖ್ಯ ಕಟ್ಟಡಗಳ ಡೆಮಾಲಿಶನ್​ ಮಾಡುವುದು ಅಗತ್ಯವಿಲ್ಲ.
  • ಕಟ್ಟಡಗಳ ಗಡಿ ಭಾಗದ ಮೂಲಕ ನೀರುಗಾಲುವೆಗಳ ನಿರ್ಮಾಣ ಮಾಡಲು ಸಾಧ್ಯವಿದೆ.

publive-image

KIADB ಮತ್ತು ಟೌನ್​​​ ಪ್ಲಾನಿಂಗ್​ ನಿರ್ಲಕ್ಷ್ಯ ಮಾನ್ಯತಾ ಟೆಕ್​​​ಪಾರ್ಕ್​​ ಜಲಾವೃತಕ್ಕೆ ಪ್ರಮುಖ ಕಾರಣ..!

  • ಕೆಐಎಡಿಬಿ ಮತ್ತು ಯೋಜನಾ ಪ್ರಾಧಿಕಾರಗಳು ಮಾನ್ಯತಾ ಟೆಕ್​ ಪಾರ್ಕ್​ನಲ್ಲಿ ಮೂಲ ನೀರಿನ ಹರಿವಿಗೆ ಆದ್ಯತೆ ನೀಡದೆ ಪಾರ್ಕ್​​, ಕಟ್ಟಡಗಳ ನಿರ್ಮಾಣ, ವಿನ್ಯಾಸಕ್ಕೆ ಪ್ರಾಮುಖ್ಯತೆ ನೀಡಿರೋದು ಕಂಡುಬಂದಿದೆ. ಕಂದಾಯ ನಕ್ಷೆಗಳಲ್ಲಿ ಅಸ್ತಿತ್ವದಲ್ಲಿರುವ ನೀರಿನ ಚರಂಡಿಗಳನ್ನು ಸಹ ಪರಿಗಣಿಸಲಾಗಿಲ್ಲ.
  • ವಿನ್ಯಾಸಗಳು, ಕೈಗಾರಿಕಾ ಉದ್ಯಾನವನಗಳನ್ನು ರಚಿಸುವಾಗ ಮತ್ತು ಕಟ್ಟಡ ಪ್ಲಾನ್​​ ನೀಡುವಾಗ ಅಧಿಕಾರಿಗಳ ನಿರ್ಲಕ್ಷ್ಯ ವಹಿಸಿದ್ದಾರೆ.
  • ಇದರ ಪರಿಣಾಮವಾಗಿ ನೀರುಗಾಲುವೆಗಳ ಮೇಲೆ ನಿರ್ಮಾಣ ಕಾರ್ಯಗಳು ನಡೆದಿವೆ. ಕಾನೂನಿನ ಅಡಿಯಲ್ಲಿ ಇದನ್ನು ಅನುಮತಿಸಲಾಗುವುದಿಲ್ಲ.
  • ಕೆಐಎಡಿಬಿ ಅಥವಾ ಯೋಜನಾ ಪ್ರಾಧಿಕಾರಗಳು ನೀರಿನ ಚರಂಡಿಗಳು ಮತ್ತು ರಾಜುಕಲುವೆಗಳ ಮೇಲೆ ಯಾವುದೇ ನಿರ್ಮಾಣವನ್ನು ಅನುಮತಿಸಲು ಅಥವಾ ಅವುಗಳನ್ನು ತಿರುಗಿಸಲು ಯಾವುದೇ ಅಧಿಕಾರವನ್ನು ಹೊಂದಿಲ್ಲ.
  • ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಈ ವಿಷಯದಲ್ಲಿ ಬಹಳ ಸ್ಪಷ್ಟವಾಗಿ ಹೇಳಿರುವಂತೆ ನೈಸರ್ಗಿಕ ಚರಂಡಿಗಳನ್ನು ತಿರುಗಿಸಲು ಅಥವಾ ಮುಚ್ಚಲು ಯಾರಿಗೂ ಅಧಿಕಾರ ಇಲ್ಲ.
  • ಸೆಕ್ಷನ್ 95 ಕೆಎಲ್ಆರ್ ಕಾಯ್ದೆ 1964 ರ ಅಡಿಯಲ್ಲಿ ಕೃಷಿಯೇತರ ಬಳಕೆಗೆ ಪರಿವರ್ತನೆ ಮಾಡುವಾಗಲೂ ಸಹ, ಈ ಚರಂಡಿಗಳು ಮತ್ತು ಜಲಮೂಲಗಳನ್ನು ಪರಿವರ್ತಿಸಲು ಅಥವಾ ಮುಟ್ಟಲು ಸಾಧ್ಯವಿಲ್ಲ.
  • ಸರ್ಕಾರ ಮತ್ತು ಸ್ಥಳೀಯ ಯೋಜನಾ ಅಧಿಕಾರಿಗಳು ಕಟ್ಟಡ ಮತ್ತು ನಕ್ಷೆ ಪ್ಲಾನಿಂಗ್​​ ಮಂಜೂರು ಮಾಡುವಾಗ ನೀರಿನ ಮೂಲಗಳನ್ನು ಪರಿಶೀಲನೆ ನಡೆಸದೆ ನಿರ್ಲಕ್ಷ್ಯ ವಹಿಸಿದ್ದಾರೆ.

publive-image

ಕಂದಾಯ ಇಲಾಖೆ ಶಿಫಾರಸುಗಳೇನು..?

  • ಕಂದಾಯ ದಾಖಲೆಗಳು ಮತ್ತು ನಕ್ಷೆಗಳಲ್ಲಿ ಅಸ್ತಿತ್ವದಲ್ಲಿರುವ ಚರಂಡಿ/ನೀರುಗಾಲುವೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು.
  • ನೀರುಗಾಲುವೆಗಳ ಗಾತ್ರ ಮತ್ತು ವಿನ್ಯಾಸವನ್ನು ಸರ್ಕಾರ/ಬಿಬಿಎಂಪಿ ಸೂಕ್ತವಾಗಿ ಮಾಡಬೇಕು.
  • ನೀರುಗಾಲುವೆಗಳ ಜೋಡಣೆಯು ನಕ್ಷೆಯಲ್ಲಿ ಅಸ್ತಿತ್ವದಲ್ಲಿರುವಂತೆಯೇ ಇರಬೇಕು.
  • ಖಾಸಗಿ ಸಂಸ್ಥೆಗಳು ಅಗತ್ಯವಿರುವ ನೀರುಗಾಲುವೆಗಳ ಅಗಲೀಕರಣಕ್ಕಾಗಿ ಉಚಿತವಾಗಿ ಭೂಮಿಯನ್ನು ನೀಡಬೇಕು ಮತ್ತು ನಿರ್ಮಾಣಕ್ಕೆ ಹಣಕಾಸು ಒದಗಿಸಬೇಕು.
  • ಒಂದು ಮಾನವ ನಿರ್ಮಿತ ನೀರುಗಾಲುವೆಯನ್ನು ನಿರ್ಮಿಸುವ ಅಗತ್ಯ ಇದೆ.
  • ಈ ನೀರುಗಾಲುವೆಗೆ ಸರಿಯಾದ ಗಾತ್ರ ಮತ್ತು ವಿನ್ಯಾಸವನ್ನು ಮಾಡಬೇಕು.
  • ಈ ನೀರುಗಾಲುವೆ ದೊಡ್ಡ ರಾಜುಕಾಲುವೆಗೆ ಸಂಪರ್ಕಿಸುವಂತೆ ನಿರ್ಮಾಣ ಮಾಡಬೇಕು.
  • ಈ ನೀರುಗಾಲುವೆ ಸಂಪೂರ್ಣವಾಗಿ ಮಾನ್ಯತಾ ಟೆಕ್ ಪಾರ್ಕ್ ಒಳಗೆ ಬರುತ್ತದೆ ಮತ್ತು ಈ ರಸ್ತೆಯು ಸಾರ್ವಜನಿಕರು ಬಳಸುವ ಸಾರ್ವಜನಿಕ ರಸ್ತೆಯಾಗಿದೆ.
  • ಬಿಬಿಎಂಪಿ/ಸರ್ಕಾರ ಅನುಮೋದಿಸಿದ ವಿನ್ಯಾಸ ಮತ್ತು ಯೋಜನೆಯ ಪ್ರಕಾರ ಮಾನ್ಯತಾ ಟೆಕ್​​ಪಾರ್ಕ್​​ ಈ ನೀರುಗಾಲುವೆಯನ್ನು ನಿರ್ಮಿಸಬೇಕು.
  • ನೀರು ನಿಲ್ಲುವ ಸ್ಥಳದಿಂದ ರಾಜುಕಾಲುವೆಗೆ ಮೇಲ್ಮುಖ ಇಳಿಜಾರು ಇರುವುದರಿಂದ, ಚರಂಡಿ ನಿರ್ಮಾಣ ಕಾರ್ಯಸಾಧ್ಯವಲ್ಲ ಎಂದು ಮಾನ್ಯತಾ ಟೆಕ್​​ಪಾರ್ಕ್​​ ನೀಡಿದ ವಾದವನ್ನು ತಿರಸ್ಕರಿಸಲಾಗಿದೆ.
  • KIADB ಅಥವಾ ಯೋಜನಾ ಪ್ರಾಧಿಕಾರಗಳು ನೀರುಗಾಲುವೆಗಳನ್ನು ತಿರುಗಿಸಲು ಅಥವಾ ಕಾಲುವೆಗಳ ಮೇಲೆ ನಿರ್ಮಾಣಕ್ಕೆ ಅನುಮತಿಸಲು ಅಧಿಕಾರ ಹೊಂದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment