Advertisment

ಕಿತ್ತಳೆ ಬಣ್ಣದ ಪೆಟ್ಟಿಗೆಗೆ ಬ್ಲ್ಯಾಕ್​ ಬಾಕ್ಸ್​ ಎಂದು ಕರೆಯೋದು ಯಾಕೆ ಗೊತ್ತಾ..? ಅಚ್ಚರಿಯ ಮಾಹಿತಿ..

author-image
Veena Gangani
Updated On
ಕಿತ್ತಳೆ ಬಣ್ಣದ ಪೆಟ್ಟಿಗೆಗೆ ಬ್ಲ್ಯಾಕ್​ ಬಾಕ್ಸ್​ ಎಂದು ಕರೆಯೋದು ಯಾಕೆ ಗೊತ್ತಾ..? ಅಚ್ಚರಿಯ ಮಾಹಿತಿ..
Advertisment
  • ವಿಮಾನದಲ್ಲಿ BLACK BOX ಹೇಗೆ ಕಾರ್ಯನಿರ್ವಹಿಸುತ್ತೆ?
  • ಕಿತ್ತಳೆ ಬಣ್ಣದ ಪೆಟ್ಟಿಗೆಗೆ ಬ್ಲ್ಯಾಕ್​ ಬಾಕ್ಸ್ ಅನ್ನೋದು ಏಕೆ?
  • ಬ್ಲ್ಯಾಕ್ ಬಾಕ್ಸ್ ಇಂಚಿಂಚೂ ಮಾಹಿತಿ ಈ ಸ್ಟೋರಿಯಲ್ಲಿದೆ

ಕಿತ್ತಳೆ ಬಣ್ಣದ ಪೆಟ್ಟಿಗೆಗೆ ಬ್ಲ್ಯಾಕ್​ ಬಾಕ್ಸ್ ಎಂದು ಕರೆಯೋದು ಯಾಕೆ? ಈ BLACK BOX ವಿಮಾನದಲ್ಲಿ ಹೇಗೆ ಕೆಲಸ ಮಾಡುತ್ತದೆ. ಇದು ಏರ್ ಇಂಡಿಯಾ ವಿಮಾನ ಪತನಕ್ಕೆ ಕಾರಣಗಳೇನು ಅಂತ ಹೇಗೆ ಕಲೆ ಹಾಕುತ್ತೆ? ಅಪಘಾತಕ್ಕೆ ಮೊದಲು ವಿಮಾನದಲ್ಲಿ ಏನೆಲ್ಲಾ ಆಯ್ತು? ಬ್ಲ್ಯಾಕ್ ಬಾಕ್ಸ್ ಎಂದರೇನು? ಬ್ಲ್ಯಾಕ್ ಬಾಕ್ಸ್ ಹೇಗೆ ಕಾರ್ಯನಿವ್ರಹಿಸುತ್ತದೆ? ಬ್ಲ್ಯಾಕ್ ಬಾಕ್ಸ್ ಅನ್ನು ವಿಮಾನದಲ್ಲಿ ಎಲ್ಲಿಡಲಾಗುತ್ತೆ ಎಂಬುವುದರ ಬಗ್ಗೆ ಇಂಚಿಂಚೂ ಮಾಹಿತಿ ಈ ಸ್ಟೋರಿಯಲ್ಲಿದೆ.

Advertisment

ಇದನ್ನೂ ಓದಿ:ವಿಮಾನ ದುರಂತದ ದಿನ ಈ ನ್ಯೂಸ್​ ಪೇಪರ್​ನಲ್ಲಿ ಸೇಮ್​ ಟು ಸೇಮ್​ ಜಾಹೀರಾತು!

ಈ ಬ್ಲ್ಯಾಕ್ ಬಾಕ್ಸ್ ಬಗ್ಗೆ ಇಷ್ಟೊಂದು ಮಾಹಿತಿ ಕೊಡುವುದಕ್ಕೆ ಒಂದು ಕಾರಣವಿದೆ. ಮೊನ್ನೆ ನಡೆದ ವಿಮಾನ ಪತನದ ಘೋರ ದುರಂತದ ಬಗ್ಗೆ ಇದು ಒಂದೇ ಸಾಕ್ಷಿ. ಹೌದು, ಗುಜುರಾತ್​ನ ಅಹಮದಾಬಾದ್​ನಲ್ಲಿ ಏರ್​ ಇಂಡಿಯಾ ವಿಮಾನ ಪತನಗೊಂಡು ಬರೋಬ್ಬರಿ 265 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್​ಗೆ ಹೊರಟಿದ್ದ ಬೋಯಿಂಗ್​ ಡ್ರೀಮ್​ಲೈನರ್​ ವಿಮಾನದಲ್ಲಿ 242 ಪ್ರಯಾಣಿಸುತ್ತಿದ್ದರು.

ಟೇಕ್ಆಫ್​ ಆಗಿ ಕೆಲವೇ ಕೆಲವು ನಿಮಿಷಗಳಲ್ಲಿ ಬಿ.ಜೆ. ಮೆಡಿಕಲ್​ ಕಾಲೇಜಿನ ಹಾಸ್ಟೆಲ್​ಗೆ ಏರ್ ಇಂಡಿಯಾ ವಿಮಾನ ಡಿಕ್ಕಿ ಹೊಡೆದಿದೆ. ಪರಿಣಾಮ ಕಟ್ಟಡ ಧ್ವಂಸವಾಗಿದೆ. ಇದ್ರಿಂದಾಗಿ ಹಾಸ್ಟೆಲ್​ನ ಡೈನಿಂಗ್​ ಹಾಲ್​ನಲ್ಲಿ ಕುಳಿತು ಊಟ ಮಾಡ್ತಿದ್ದ ವಿದ್ಯಾರ್ಥಿಗಳ ಪೈಕಿ 24 ವಿದ್ಯಾರ್ಥಿಗಳು ದಾರುಣವಾಗಿ ಮೃತಪಟ್ಟಿದ್ದಾರೆ. ವಿಮಾನದಲ್ಲಿದ್ದ 242 ಜನರಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಪವಾಡ ಸದೃಶರಾಗಿ ಬದುಕುಳಿದಿದ್ದಾರೆ.

Advertisment

ವಿಮಾನ ಅಪಘಾತಕ್ಕೆ ಕಾರಣಗಳೇನು ಎಂಬುದನ್ನು ಕಂಡುಹಿಡಿಯಲು ತಜ್ಞರು ಬ್ಲ್ಯಾಕ್ ಬಾಕ್ಸ್ ಶೋಧ ಹಾಗೂ ವಿಶ್ಲೇಷಣೆ ಸೇರಿದಂತೆ ಇತರ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ವಿಮಾನ ಅಪಘಾತ ತನಿಖಾ ಬ್ಯೂರೋ ಈಗಾಗಲೇ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ ನಿಗದಿಪಡಿಸಿದ ಅಂತರರಾಷ್ಟ್ರೀಯ ಪ್ರೋಟೋಕಾಲ್​​ಗಳಿಗೆ ಅನುಗುಣವಾಗಿ ತನಿಖೆಯನ್ನು ಪ್ರಾರಂಭಿಸಿದೆ.

ಬ್ಲ್ಯಾಕ್​ ಬಾಕ್ಸ್ ಎಂದರೇನು? ಇದರ ಮುಖ್ಯ ಉದ್ದೇಶ ಏನಾಗಿರುತ್ತೆ?

ಬ್ಲ್ಯಾಕ್ ಬಾಕ್ಸ್ ವಿಮಾನದಲ್ಲಿ ಬಳಸಲಾಗುವ ಒಂದು ಎಲೆಕ್ಟ್ರಾನಿಕ್ ಸಾಧನವಾಗಿದೆ. ಇದನ್ನು ಫ್ಲೈಟ್ ಡೇಟಾ ರೆಕಾರ್ಡರ್ (FDR) ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಎಂದೂ ಕರೆಯಲಾಗುತ್ತೆ. ಇದರಲ್ಲಿ ವಿಮಾನದ ಕಾರ್ಯಾಚರಣೆಯ ಮಾಹಿತಿ ಮತ್ತು ಕಾಕ್‌ಪಿಟ್ ಸಂಭಾಷಣೆಗಳನ್ನು ದಾಖಲಿಸುತ್ತದೆ. ಇದರ ಮುಖ್ಯ ಉದ್ದೇಶ ವಿಮಾನ ಅಪಘಾತದ ಸಂದರ್ಭದಲ್ಲಿ ಕಾರಣಗಳನ್ನು ತನಿಖೆ ಮಾಡಲು ಸಹಾಯ ಮಾಡುತ್ತೆ. ಇದರಲ್ಲಿ ಇನ್ನೊಂದು ಅಂಶ ಏನೆಂದರೆ ಈ black box ಮೇಲೆ ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ. ಆದರೆ ಇದರ ಒಳಗಡೆ ಕಪ್ಪು ಬಣ್ಣ ಇರುತ್ತದೆ. ಏಕೆಂದರೆ ವಿಮಾನ ದುರಂತ ಸಂಭವಿಸಿದಾಗ ಕಪ್ಪು ಬಣ್ಣ ಕಣ್ಣೀಗೆ ಬೇಗ ಕಾಣಿಸಲಿ ಅನ್ನೋದೆ ಇದರ ಉದ್ದೇಶವಾಗಿದೆ. ಹೀಗಾಗಿ ಇದನ್ನು ಬ್ಲ್ಯಾಕ್​ ಬಾಕ್ಸ್​ ಆಂತ ಕರೆಯಲಾಗುತ್ತದೆ.

publive-image

ಬ್ಲ್ಯಾಕ್ ಬಾಕ್ಸ್ ಹೇಗೆ ಕಾರ್ಯನಿರ್ವಹಿಸುತ್ತದೆ?

ಬ್ಲ್ಯಾಕ್​ ಬಾಕ್ಸ್ ಮತ್ತು ಇತರ ರೆಕಾರ್ಡರ್​​ಗಳನ್ನು ಪ್ರಯೋಗಾಲಯಕ್ಕೆ ತಂದ ಬಳಿಕ, ತಜ್ಞರು ಅವುಗಳ ಸ್ಥಿತಿಯನ್ನು ಪರಿಶೀಲಿಸುತ್ತಾರೆ. ಡೇಟಾವನ್ನು ಸುಲಭವಾಗಿ ರಿಟ್ರೀವ್ ಮಾಡಬಹುದೇ ಎಂದು ಪರಿಶೀಲಿಸುತ್ತಾರೆ. ಅವುಗಳು ಸಮರ್ಪಕ ಸ್ಥಿತಿಯಲ್ಲಿದ್ದರೆ ಡೇಟಾವನ್ನು ಸುಲಭವಾಗಿ ಡೌನ್​​ಲೋಡ್ ಮಾಡಿಕೊಳ್ಳಬಹುದು. ಆದರೆ, ಹಾನಿಗೊಳಗಾಗಿದ್ದರೆ ಡೇಟಾ ರಿಟ್ರೀವ್ ಮಾಡಲು ಹೆಚ್ಚಿನ ಶ್ರಮ ಬೇಕಾಗುತ್ತದೆ. ತನಿಖೆಯ ಅತ್ಯಂತ ಸೂಕ್ಷ್ಮ ಅಂಶವೆಂದರೆ, ಕಾಕ್​ಪಿಟ್ ಧ್ವನಿ ರೆಕಾರ್ಡರ್ ಅನ್ನು ಪರಿಶೀಲಿಸುತ್ತದೆ.

Advertisment

ಅಷ್ಟೇ ಅಲ್ಲದೇ ವಿಮಾನದ ಎಂಜಿನ್ ವೇಗ, ಎತ್ತರ, ದಿಕ್ಕು, ಇಂಧನ ಮಟ್ಟ, ಮತ್ತು ಇತರ ತಾಂತ್ರಿಕ ಮಾಹಿತಿಯನ್ನು ದಾಖಲಿಸುತ್ತದೆ. ಈ ಡೇಟಾವನ್ನು ಸಂವೇದಕಗಳ ಮೂಲಕ ಸಂಗ್ರಹಿಸಿ, ಕ್ರ್ಯಾಶ್-ನಿರೋಧಕ ಮೆಮೊರಿಯಲ್ಲಿ ಸಂಗ್ರಹಿಸಲಾಗುತ್ತದೆ. ಇದು ಸಾಮಾನ್ಯವಾಗಿ 25 ಗಂಟೆಗಳವರೆಗಿನ ಡೇಟಾವನ್ನು ದಾಖಲಿಸುತ್ತದೆ. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಪೈಲಟ್‌ಗಳ ಸಂಭಾಷಣೆ, ರೇಡಿಯೋ ಸಂವಹನ, ಮತ್ತು ಕಾಕ್‌ಪಿಟ್‌ನಲ್ಲಿನ ಶಬ್ದಗಳನ್ನು (ಎಂಜಿನ್ ಶಬ್ದ, ಎಚ್ಚರಿಕೆ ಸಿಗ್ನಲ್‌ಗಳು) ರೆಕಾರ್ಡ್ ಮಾಡುತ್ತದೆ. ಇದು ಕೊನೆಯ 2 ಗಂಟೆಗಳ ಸಂಭಾಷಣೆಯನ್ನು ಸಂಗ್ರಹಿಸುತ್ತದೆ.

ಬ್ಲ್ಯಾಕ್ ಬಾಕ್ಸ್ ಅನ್ನು ಎಲ್ಲಿ ಇಡಲಾಗುತ್ತದೆ?

ಬ್ಲ್ಯಾಕ್ ಬಾಕ್ಸ್‌ಗಳನ್ನು ಸಾಮಾನ್ಯವಾಗಿ ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ. ಏಕೆಂದರೆ ಅಪಘಾತದ ಸಂದರ್ಭದಲ್ಲಿ ಈ ಭಾಗವು ಹೆಚ್ಚು ಸುರಕ್ಷಿತವಾಗಿ ಇರಬೇಕು ಅಂತ ವಿಮಾನದ ಹಿಂಭಾಗದಲ್ಲಿ ಇರಿಸಲಾಗಿರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment