newsfirstkannada.com

ಪುರಾಣದಲ್ಲಿ ರಾಮಲಲ್ಲಾ ಬಗ್ಗೆ ಹೆಚ್ಚು ಪ್ರಸ್ತಾಪ ಇಲ್ಲ ಯಾಕೆ? ಅಸಲಿ ಕಾರಣವೇನು?

Share :

Published January 21, 2024 at 5:56am

  ರಾಮ ಬೇರೆಲ್ಲಾ ರೂಪಗಳಿಗಿಂತ ರಾಮಲಲ್ಲಾ ರೂಪವೇ ಶ್ರೇಷ್ಠ

  ಪುರಾಣಗಳಲ್ಲೂ ಬಾಲರಾಮ ವಿಗ್ರಹದ ಬಗ್ಗೆ ಹೆಚ್ಚು ಮಾಹಿತಿಯಿಲ್ಲ?

  ಸಪ್ತ ಚಿರಂಜೀವಿಗಳ ನಡುವೆ ಮತ್ತೊಬ್ಬ ಚಿರಂಜೀವಿ ಇದ್ದಾನಾ?

ಇಡೀ ಭರತ ಖಂಡ ಅಷ್ಟೇ ಯಾಕೆ ಭೂಮಂಡಲದ ಯಾವುದೇ ದೇಶದಲ್ಲೂ.. ಜಗತ್ತಿನ ಯಾವ ರಾಮಮಂದಿರದಲ್ಲೂ.. ಮತ್ಯಾವುದೇ ಹಿಂದೂ ದೇಗುಲಗಳಲ್ಲೂ ಕಾಣಲಿಕ್ಕೆ ಸಿಗದಂತಹ ವಿಶಿಷ್ಟವಾದ, ವಿಶೇಷವಾದ ಮತ್ತು ಸಂಪ್ರದಾಯಬದ್ಧವಾದ ರಾಮಲಲ್ಲಾ ಮೂರ್ತಿಯನ್ನ ಕೆತ್ತನೆ ಮಾಡಲಾಗಿದ್ದು.. ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರೋ ಬಾಲರಾಮನ ವಿಗ್ರಹ ಅತ್ಯಂತ ಶ್ರೇಷ್ಠವಾದ ರಾಮಮೂರ್ತಿಯಾಗಲಿದೆ ಎನ್ನಲಾಗ್ತಿದೆ. ಹಾಗಾಗಿ ರಾಮಲಲ್ಲಾ ದರ್ಶನಕ್ಕೆ ಭಕ್ತರು ತುದಿಗಾಲಲ್ಲಿ ಕಾಯ್ತಿದ್ದಾರೆ.

ಅಯೋಧ್ಯೆಯ ಅಧಿಪತಿ ಶ್ರೀರಾಮನನ್ನು ಅನೇಕಾನೇಕ ರೂಪಗಳಲ್ಲಿ ಪೂಜಿಸಲಾಗ್ತಿದೆ. ರಾಮದೇಗುಲಗಳಲ್ಲಿರೋ ಗರ್ಭಗುಡಿ ವಿಗ್ರಹಗಳಿ ಹಲವು ರೀತಿಯ ಹೆಸರುಗಳನ್ನು ನೀಡಲಾಗಿದೆ. ಒಂದೊಂದು ರಾಮಮಂದಿರದಲ್ಲೂ ಒಂದೊಂದು ವಿಶೇಷ ರಾಮವಿಗ್ರಹಗಳನ್ನು ಪ್ರತಿಷ್ಠಾಪನೆಗೊಳಿಸಿ ಪೂಜಿಸಲಾಗ್ತಿದೆ. ಆ ಒಂದೊಂದು ರಾಮವಿಗ್ರಹಗಳ ಸುತ್ತಲೂ ಅಚ್ಚರಿಯ, ವಿಸ್ಮಯಕಾರಿ ಕಥೆಗಳು ತಳುಕಹಾಕ್ಕೊಂಡಿವೆ. ಆದ್ರೆ ಈ ಹಿಂದೆ ನಾವು, ನಮ್ಮ ಪೂರ್ವಜರು ಅಷ್ಟೇ ಯಾಕೆ ಪುರಾಣ ಕಾಲದಲ್ಲಿಯೂ ಯಾರೂ ನೋಡಿರದಂತ. ಯಾರಿಂದಲೂ ಪೂಜಿಸಲ್ಪಟ್ಟಿದರಂತ ಬಾಲರಾಮನ ವಿಗ್ರಹದ ದರ್ಶನ ಭಾಗ್ಯ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಸಿಗಲಿದೆ.

ಇನ್ನೂ, ವಿಶೇಷ ಅಂದ್ರೆ ರಾಮಲಲ್ಲಾ ವಿಗ್ರಹವನ್ನು 5 ವರ್ಷದ ಬಾಲರಾಮನ ರೂಪದಲ್ಲೇ ಕೆತ್ತಲಾಗಿದ್ದರೂ ಕೂಡ ರಾಮನನ್ನೇ ನೋಡುವ ಅನುಭವ ಉಂಟು ಮಾಡುವಂತ ಮಾಂತ್ರಿಕ ಸ್ಪರ್ಶ ನೀಡಲಾಗಿದೆಯಂತೆ. ಅಂದ್ರೆ, ರಾಮಲಲ್ಲಾ ಮೂರ್ತಿಯ ಮುಖಭಾವ ಬಾಲರಾಮನ ರೂಪದಲ್ಲಿದ್ದು ಬಾಲರಾಮನ ಕೈಗಳಲ್ಲಿ ಬಿಲ್ಲು ಬಾಣಗಳಿರುತ್ವಂತೆ. ಮತ್ತು ವಿಗ್ರಹದ ಮೇಲ್ಭಾಗದಲ್ಲಿ ಪ್ರಭಾವಳಿಯೂ ಇರಲಿದ್ದು. ವಿಷ್ಣುವಿನ ದಶಾವಾತಾರಗಳೂ ರಾಮಲಲ್ಲಾ ಮೂರ್ತಿಯಲ್ಲಿ ದರ್ಶನವಾಗಲಿವೆಯಂತೆ. ಭಕ್ತರಿಗೆ ರಾಮನನ್ನೇ ನೋಡುವತ್ತಿರುವ ಭಾವ ಬರುವಂತೆ ರಾಮಲಲ್ಲಾ ಮೂರ್ತಿಯನ್ನು ಕೆತ್ತಲಾಗಿದೆಯಂತೆ. ರಾಮನ ಬಾಲ್ಯದ ರೂಪದ ಮೂರ್ತಿಯನ್ನೇ ಪ್ರತಿಷ್ಠಾಪನೆ ಮಾಡುತ್ತಿರೋದ್ರಿಂದ ಹಿಂದೆಯೂ ಪ್ರಮುಖ ಕಾರಣವಿದೆ. ಅಯೋಧ್ಯೆಯಲ್ಲಿ ಹಲವಾರು ರಾಮಮಂದಿರಗಳಿವೆ. ರಾಮ ಸೀತೆ ಮದುವೆಯ ದಿಬ್ಬಣ ಸಾಗುವ ಜಾಗದಲ್ಲಿ ದೇಗುಲವಿದೆ. ಕೆಲವು ಕಡೆ ರಾಮ ನಿಂತಿರುವ ಭಂಗಿಯಲ್ಲಿ. ಮತ್ತೆ ಕೆಲವು ಕಡೆ ಕುಳಿತಿರುವ ಭಂಗಿಯಲ್ಲಿರೋ ರಾಮ ಮೂರ್ತಿಗಳನ್ನಿರಿಸಿ ಪೂಜಿಸಲಾಗ್ತಿದೆ.

ಶ್ರೀರಾಮ ವಿಷ್ಣುವಿನ 7 ನೇ ಅವತಾರವಾಗಿರೋ ಕಾರಣಕ್ಕೆ ವಿಷ್ಣುವನ್ನು ಪ್ರತಿನಿಧಿಸೋ ಚತುರ್ಭಜ ರಾಮನನ್ನು ಪೂಜಿಸಲಾಗ್ತಿದೆ. ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಈ ಚತುರ್ಭಜ ರಾಮನ ದೇಗುಲಗಳಿವೆ. ಚತುರ್ಭುಜ ರಾಮ ವಿಗ್ರಹದ ರೀತಿಯಲ್ಲೇ ದ್ವಿಭುಜ ರಾಮನ ವಿಗ್ರಹವನ್ನೂ ಕೂಡ ಹಲವು ದೇಗುಲಗಳಲ್ಲಿ ಪೂಜಿಸಲಾಗ್ತಿದೆ. ಅಂದ್ರೆ. ರಾಮನ ಒಂದು ಕೈನಲ್ಲಿ ಬಿಲ್ಲು, ಮತ್ತೊಂದು ಕೈನಲ್ಲಿ ಬಾಣವನ್ನಿಟ್ಟುಕೊಂಡಿರೋ ಭಂಗಿಯಲ್ಲಿರೋ ಮೂರ್ತಿಗಳನ್ನು ಪೂಜೆ ಮಾಡಲಾಗ್ತಿದೆ. ರಾಮಮಂದಿರದಲ್ಲಿ ಬಾಲರಾಮನ ಮೂರ್ತಿಯನ್ನೇ ಪ್ರತಿಷ್ಠಾಪನೆಗೊಳಿಸುತ್ತಿರೋದಕ್ಕೆ ಕಾರಣ ಎರಡು.. ಮೊದಲನೆಯದ್ದು ಅಯೋಧ್ಯೆ ರಾಮಜನ್ಮಭೂಮಿ ಅನ್ನೋದು.. ಎರಡನೇ ಕಾರಣ ರಾಮವಂಶದ ಸಂಪ್ರದಾಯ!

ಹೌದು, ವಿಷ್ಣುವಿನ 7ನೇ ಅವತಾರವಾಗಿ ರಾಮ ಅಯೋಧ್ಯೆಯಲ್ಲಿ ಜನಿಸಿದ್ದರಿಂದಾಗಿ ಬಾಲರಾಮನನ್ನು ಪೂಜಿಸಲಾಗುತ್ತೆ. ಕೇವಲ ರಾಮನಷ್ಟೇ ಅಲ್ಲ. ಅಯೋಧ್ಯೆ ಅರಮನೆಯಲ್ಲಿ ದಶರಥರ ಮಕ್ಕಳಾಗಿ ಜನಿಸಿದ ಭರತ, ಶತ್ರುಜ್ಞ. ಲಕ್ಷ್ಮಣರ ಮೂರ್ತಿಗಳೂ ಕೂಡ ಬಾಲ್ಯಾವಸ್ಥೆಯ ರೂಪದಲ್ಲೇ ಇರಲಿವೆಯಂತೆ. ದೇಗುಲದ ವಿವಿಧ ಕಡೆಗಳಲ್ಲಿ ಅವರುಗಳ ಮೂರ್ತಿಗಳನ್ನಿರಿಸಿ ಪೂಜಿಸಲಾಗುತ್ತಂತೆ. ರಾಮನನ್ನ ಮರ್ಯಾದಾಪುರುಷ, ಕೌಸಲ್ಯಾ ಸುಪ್ರಜಾ, ಸೀತಾಪತಿ, ರಾಘವ, ಸೀತಾವಲ್ಲಭ. ಹೀಗೆ ನೂರಕ್ಕೂ ಹೆಚ್ಚು ಹೆಸರುಗಳಿಂದ ಕರೆಯಲಾಗುತ್ತೆ. ಅದೇ ರೀತಿಯಲ್ಲೇ ದೇಶ ವಿವಿಧ ರಾಮ ದೇಗುಲಗಳಲ್ಲಿ ಚತುರ್ಭುಜ ರಾಮ, ಕೋದಂಡ ರಾಮ, ಪಟ್ಟಾಭಿರಾಮ, ಸೀತಾರಾಮ, ಕೇವಲ ರಾಮ ಎಂಬೆಲ್ಲಾ ವಿಶೇಷವಾದ ರಾಮಮೂರ್ತಿಗಳಿವೆ. ರಾಮಲಲ್ಲಾ ಮೂರ್ತಿಯ ರೀತಿಯಲ್ಲೇ ಆ ರಾಮರೂಪಗಳ ಹಿಂದೆಯೂ ಚಕಿತಗೊಳಿಸೋ ರಹಸ್ಯಗಳು ಅಡಗಿವೆ.

 • ಚತುರ್ಭುಜ ರಾಮ- ನಾಲ್ಕು ಕೈಗಳನ್ನು ಹೊಂದಿರೋ ರಾಮನ ವಿಗ್ರಹದ ಪೂಜೆ!
 • ಪಟ್ಟಾಭಿರಾಮ- ಶ್ರೀ ರಾಮನ ಪಟ್ಟಾಭಿಷೇಕವಾಗುತ್ತಿರೋ ರೂಪದ ವಿಗ್ರಹ!
 • ಕೋದಂಡ ರಾಮ- ರಾಮ ಕೈನಲ್ಲಿ ಬಿಲ್ಲನ್ನು ಹಿಡಿದಿರೋ ರೂಪದ ಮೂರ್ತಿ ಪೂಜೆ!
 • ಸೀತಾರಾಮ- ರಾಮ ಮತ್ತು ಸೀತೆಯರು ಜೊತೆಯಲ್ಲಿರೋ ವಿಗ್ರಹದ ಪೂಜೆ
 • ರಾಮಪರಿವಾರ- ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮರಿರೋ ಮೂರ್ತಿಯ ಪೂಜೆ!

ಬಾಲ್ಯಾವಸ್ಥೆಯ ರಾಮನ ಮೂರ್ತಿಯನ್ನು ಪೂಜಿಸೋ ರೀತಿಯಲ್ಲೇ ದೇಶದ ಹಲವು ದೇಗುಲಗಳಲ್ಲಿ ಚತುರ್ಭುಜ ರಾಮ ಮೂರ್ತಿಯನ್ನು ಪೂಜಿಸಲಾಗುತ್ತೆ. ಚತುರ್ಭುಜ ರಾಮ ಅಂದ್ರೆ ನಾಲ್ಕು ಕೈಗಳನ್ನು ಹೊಂದಿರೋ ರಾಮ ಎಂದರ್ಥ. ನಾಲ್ಕು ಕೈಗಳನ್ನು ಹೊಂದಿರೋ ರಾಮನ ಮೂರ್ತಿಯನ್ನು ಕೆತ್ತನೆ ಮಾಡಿ. ಆ ನಾಲ್ಕು ಕೈಗಳಲ್ಲಿ ರಾಮ ಶಂಖ, ಚಕ್ರ, ಬಿಲ್ಲು ಮತ್ತು ಬಾಣಗಳನ್ನು ಹಿಡಿದಿರೋ ರೂಪ ನೀಡಲಾಗಿದೆ.

ರಾಮಾಯಣದಲ್ಲಿ ರಾಮನ ಬದುಕಿಗೆ ಅತಿದೊಡ್ಡ ತಿರುವು ಸಿಗೋದು.. ರಾಮಾಯಾಣ ಮಹಾಕಾವ್ಯಾವಾಗೋದಕ್ಕೆ ನಾಂದಿ ಹಾಡೋದೆ ರಾಮನ ಪಟ್ಟಾಭಿಷೇಕದ ಬಳಿಕ ಸಂಭವಿಸಿದ ಘಟನೆಗಳು. ಇನ್ನೇನು ರಾಮ ಅಯೋಧ್ಯೆಯ ರಾಜನಾಗಿ ಪಟ್ಟಾಭಿಷೇಕವಾಗಬೇಕು ಎಂಬ ಸಮಯದಲ್ಲೇ ರಾಮನಿಗೆ ವಿಧಿ ವನವಾಸದ ದಾರಿ ತೋರಿಸುತ್ತೆ. ಸೀತೆ, ಲಕ್ಷಣರೊಟ್ಟಿಗೆ ರಾಮ ವನವಾಸಕ್ಕೆ ಹೋಗ್ತಾನೆ. ವನವಾಸ ಅನುಭವಿಸಿ, ರಾವಣನನ್ನು ಸಂಹರಿಸಿ, ಸೀತೆ, ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ವಾಪಸ್ಸಾಗ್ತಾನೆ. ಆ ನಂತರ ರಾಮನ ಪಟ್ಟಾಭಿಷೇಕವಾಗುತ್ತೆ. ಹೌದು, ರಾಮ ಪಟ್ಟಾಭಿಷೇಕದ ಕಥೆಯೇ ಒಂದು ಮಹಾಕಾವ್ಯ. ಹಾಗಾಗಿ, ರಾಮ ರಾಜನಾಗಿ ಪಟ್ಟಾಭಿಷೇಕವಾಗುತ್ತಿರೋ ರೂಪದಲ್ಲೇ ವಿಗ್ರಹಗಳನ್ನು ಕೆತ್ತಿ ದೇಶದ ಹಲವು ರಾಜ್ಯಗಳಲ್ಲಿ ಪೂಜಿಸಲಾಗ್ತಿದೆ. ಹಂಪಿಯಲ್ಲಿ 16ನೇ ಶತಮಾನದ ಪಟ್ಟಾಭಿರಾಮ ದೇಗುಲವಿದ್ದು ರಾಮ ರಾಜನಾಗಿ ಪಟ್ಟಾಭಿಷೇಕವಾಗುತ್ತಿರೋ ರೂಪದಲ್ಲಿರೋ ಮೂರ್ತಿಯನ್ನು ಪೂಜಿಸಲಾಗ್ತಿದೆ. ಇದೇ ರೀತಿಯಲ್ಲಿ ರಾಜ್ಯದಲ್ಲೂ.. ದೇಶದಲ್ಲೂ ಹಲವಾರು ಪಟ್ಟಾಭಿರಾಮ ದೇಗುಲಗಳಿವೆ.

ಹೌದು.. ರಾಮ ತನ್ನ ಒಂದು ಕೈನಲ್ಲಿ ಬಿಲ್ಲನ್ನು ಹಿಡಿದು ನಿಂತಿರೋ ಭಂಗಿಯ ವಿಗ್ರಹಕ್ಕೆ ಕೋದಂಡ ರಾಮ ಎಂದು ಕರೆಯಲಾಗುತ್ತೆ. ದೇಶದ ಬಹುತೇಕ ರಾಮ ದೇಗುಲಗಳಲ್ಲಿ ಈ ಕೋದಂಡ ರಾಮ ವಿಗ್ರಹ ಕಾಣಸಿಗುತ್ತೆ. ಇನ್ನು, ಮಾದರಿ ಸತಿಪತಿಯ ಸಂಕೇತವಾಗಿರೋ ಸೀತೆ ಮತ್ತು ರಾಮ ಜೊತೆಗಿರೋ ವಿಗ್ರಹವನ್ನು ಕೆಲವು ದೇಗುಲಗಳಲ್ಲಿಸಿ ಪೂಜೆ ನಡೆಸಲಾಗ್ತಿದೆ.

ರಾಮಪರಿವಾರ ಹೆಸರಿನ ಮತ್ತೊಂದು ವಿಶೇಷ ವಿಗ್ರಹ ಕೆಲವು ದೇಗುಲಗಳ ಗರ್ಭಗುಡಿಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮರು ಜೊತೆಗಿರೋ ವಿಗ್ರಹವದು. ಇದೇ ಕಾರಣಕ್ಕೆ ರಾಮಪರಿವಾರ ವಿಗ್ರಹ ಅಂತ ಕರೆಯಲಾಗುತ್ತೆ. ಇವಿಷ್ಟೇ ಅಲ್ಲ. ಇನ್ನೂ ಅನೇಕ ರೂಪದ ರಾಮ ವಿಗ್ರಹಗಳು ದೇಶದ ಅನೇಕಾನೇಕ ರಾಮದೇಗುಲಗಳಲ್ಲಿ ಕಾಣಸಿಗುತ್ವೆ. ಆದ್ರೆ.. ದೇಶದಲ್ಲಿ ಅಷ್ಟೂ ರಾಮಮಂದಿರಗಳಲ್ಲಿರೋ ಅಷ್ಟೂ ರಾಮವಿಗ್ರಹಗಳಿಗಿಂತಲೂ ಈಗ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರೋ ರಾಮಲಲ್ಲಾ ವಿಗ್ರಹ ವಿಶೇಷ, ವಿಭಿನ್ನ ಮತ್ತು ಶ್ರೇಷ್ಟವಾಗಿ ನಿಲ್ಲಲಿದೆ. ಏಕೆಂದರೆ ಅಯೋಧ್ಯೆ ರಾಮ ಜನಿಸಿದ ಜಾಗ. ರಾಮನನ್ನ ಬಾಲ್ಯಾವಸ್ಥೆ ರೂಪದಲ್ಲೇ ಪೂಜಿಸಲಾಗುತ್ತೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುರಾಣದಲ್ಲಿ ರಾಮಲಲ್ಲಾ ಬಗ್ಗೆ ಹೆಚ್ಚು ಪ್ರಸ್ತಾಪ ಇಲ್ಲ ಯಾಕೆ? ಅಸಲಿ ಕಾರಣವೇನು?

https://newsfirstlive.com/wp-content/uploads/2024/01/rama-lile-2.jpg

Load More