/newsfirstlive-kannada/media/post_attachments/wp-content/uploads/2025/06/ISREAL-VS-IRAN.jpg)
ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದಿದೆ. ನಮ್ಮ ಕೆಣಕಿದವರನ್ನ ಸುಮ್ನೆ ಬಿಡಲ್ಲ ಅಂತ ಪಣ ತೊಟ್ಟಿರೋ ಇಸ್ರೇಲ್.. ರೈಸ್ ಆಫ್ ಲಯನ್ ಹೆಸರಲ್ಲಿ ಇರಾನ್ ಮೇಲೆ ಭೀಕರ ದಾಳಿ ಮಾಡಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಡ್ರೋನ್ ದಾಳಿ ನಡೆಸಿದ್ದು, ಇಸ್ರೇಲ್ ಮತ್ತು ಇರಾನ್ ನಡುವೆ ಬಿಕ್ಕಟ್ಟು ತೀವ್ರಗೊಂಡಿದೆ.
ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಯುರೋ ಯಾವ ಲಕ್ಷಣಗಳು ಕಾಣ್ತಿಲ್ಲ. ಇವತ್ತು ಸುಮ್ಮನಾಗ್ತಾರೆ, ನಾಳೆ ಸುಮ್ಮನಾಗ್ತಾರೆ.. ಅಂತ ಹಲವು ದೇಶಗಳು ಕಾದ್ರೂ.. ಪ್ರಯೋಜನವಾಗಿಲ್ಲ.. ಬದಲಾಗಿ ಇಸ್ರೇಲ್ ಮತ್ತು ಇರಾನ್ ನಡುವೆ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದ್ದು, ಉಭಯ ದೇಶಗಳ ಮಧ್ಯೆ ದಾಳಿ-ಪ್ರತಿದಾಳಿ ನಡೆಸಿವೆ.
ಇದನ್ನೂ ಓದಿ: ಅಹಮದಾಬಾದ್ ವಿಮಾನ ಅಪಘಾತದ ಬೆನ್ನಲ್ಲೇ ದೊಡ್ಡ ಆದೇಶ ಹೊರಡಿಸಿದ DGCA.. ಏನದು?
ಖಂಡಾಂತರ ಕ್ಷಿಪಣಿಗಳು ದಾಳಿ
ಭಾರತದ ಆಪರೇಷನ್ ಸಿಂಧೂರ್ ರೀತಿ.. ಇಸ್ರೇಲ್ ಆಪರೇಷನ್ ರೈಸಿಂಗ್ ಲಯನ್ ಅಂತ ಹೆಸರಿಟ್ಟು.. ಡಜನ್ ಗಟ್ಟಲೆ ಜೆಟ್‌ಗಳನ್ನ ಕಳುಹಿಸಿ.. ಇರಾನ್‌ನ ಪರಮಾಣು ಸ್ಥಾವರಗಳ ಮೇಲೆ.. ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದೆ. ಈ ದಾಳಿಯಲ್ಲಿ ಇರಾನ್‌ನ ಪ್ಯಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್ ಮುಖ್ಯಸ್ಥ ಜನರಲ್ ಹೊಸೈನ್ ಸಲಾಮಿ ಹತ್ಯೆಗೀಡಾಗಿದ್ದಾರೆ. ಇದರಿಂದಾಗಿ ಇಸ್ರೇಲ್ ಹಾಗೂ ಇರಾನ್ ನಡುವಣ ಸಂಘರ್ಷ ಮತ್ತಷ್ಟು ಉಲ್ಬಣಗೊಂಡಿದೆ.
ಇರಾನ್‌ನ ಪ್ಯಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್ ಮುಖ್ಯಸ್ಥನ ಹತ್ಯೆಗೆ ಪ್ರತೀಕಾರವಾಗಿ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಸೆಂಟ್ರಲ್ ಇಸ್ರೇಲ್ನ ಟೆಲ್ ಅವೀವ್ ನಗರದ ಮೇಲೆ ಮಿಸೈಲ್ ದಾಳಿ ನಡೆಸಿದ್ದು, ಇರಾನ್‌ನ ಕ್ಷಿಪಣಿಗಳು ಜನವಸತಿ ಪ್ರದೇಶಗಳ ಮೇಲೆ ಬಿದ್ದಿವೆ. ಈ ದಾಳಿಯಲ್ಲಿ ಸುಮಾರು 21 ಇಸ್ರೇಲ್ ನಾಗರೀಕರಿಗೆ ಗಾಯಗಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇನ್ನು ಇರಾನ್.. ಇಸ್ರೇಲ್ನ ಪೈಟರ್ ಜೆಟ್ ಒಂದನ್ನು ಹೊಡೆದುರುಳಿಸಿದ್ದು, ಪೈಲೆಟ್ನನ್ನು ವಶಕ್ಕೆ ಪಡೆದಿದೆ.
ಇದನ್ನೂ ಓದಿ:28 ಗಂಟೆಗಳ ಬಳಿಕ ಸಿಕ್ಕ ಕಪ್ಪು ಪೆಟ್ಟಿಗೆಯಲ್ಲಿ ಏನಿದೆ..? ಸಂಪೂರ್ಣ ಪರಿಶೀಲನೆಗೆ ಎಷ್ಟು ದಿನ ಬೇಕು ಗೊತ್ತಾ..?
ಸದ್ಯ ಇರಾನ್ ದಾಳಿ ಬೆನ್ನಲ್ಲೇ ಜೆರುಸಲೇಮ್ನಲ್ಲಿ ಯುದ್ಧದ ಅಲರ್ಟ್ ಸೈರನ್ ಮೊಳಗಿದೆ ಎಂದು ಇಸ್ರೇಲ್ ಸೇನೆ ಹೇಳಿಕೊಂಡಿದೆ. ಇನ್ನು ಇಸ್ರೇಲ್ ಅಧ್ಯಕ್ಷ ನೆತನ್ಯಾಹು, ಇರಾನ್ ಜೊತೆ ನಮ್ಮ ಬಿಕ್ಕಟ್ಟು ಇಲ್ಲ.. ಇರಾನ್‌ನ ಜನತೆಯ ಜೊತೆ ಇಸ್ರೇಲ್ ಇರುತ್ತೆ ಎಂದು ಶಾಂತಿಯ ಮಾತುಗಳನ್ನಾಡಿದ್ದಾರೆ.
ಯುರೇನಿಯಂ ಕೇಂದ್ರಕ್ಕೂ ಹಾನಿ
ಇರಾನ್‌ನ ಕ್ಷಿಪಣಿ ದಾಳಿಗೂ 24 ಗಂಟೆ ಮೊದ್ಲು ಇಸ್ರೇಲ್.. ಇರಾನ್ ಮೇಲೆ ರಣಭೀಕರ ಏರ್ಸ್ಟ್ರೈಕ್ ನಡೆಸಿತ್ತು. ಟೆಹ್ರಾನ್ ಮೇಲಿನ ದಾಳಿಯನ್ನ ಇರಾನ್ ಖಚಿತಪಡಿಸಿದ್ದು,. ಈ ದಾಳಿಯಲ್ಲಿ ಇರಾನ್‌ನ ಕ್ಷಿಪಣಿ ಕಾರ್ಖಾನೆಗಳು, ಯುರೇನಿಯಂ ಸಂಗ್ರಹಣಾ ಕೇಂದ್ರಕ್ಕೂ ಹಾನಿಯಾಗಿರೋ ಮಾಹಿತಿ ಇದೆ. ಇನ್ನೂ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಇರಾನಿನ ಅರೆಸೇನಾ ಕ್ರಾಂತಿಕಾರಿ ಗಾರ್ಡ್ ಕಮಾಂಡರ್.. ಪರಮಾಣು ಯೋಜನೆಯ ಇಬ್ಬರು ವಿಜ್ಞಾನಿಗಳು ಮೃತಪಟ್ಟಿದ್ದಾರೆ.
ಇರಾನ್ ಅಣ್ವಸ್ತ್ರ ಹೊಂದಲು ಬಿಡಲ್ಲ ಎಂದ ಡೊನಾಲ್ಡ್ ಟ್ರಂಪ್
ಇಸ್ರೇಲ್ ದಾಳಿ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿ, ದಾಳಿ ಬಗ್ಗೆ ನಮಗೆ ಮೊದಲೇ ಮಾಹಿತಿ ಇತ್ತು.. ಇರಾನ್ ಅಣ್ವಸ್ತ್ರ ಹೊಂದಲು ಬಿಡಲ್ಲ ಅಂತ ವಾರ್ನಿಂಗ್ ಮಾಡಿದ್ದಾರೆ. ಇಸ್ರೇಲ್ ಪ್ರಧಾನಿ ನ್ಯಾಥನ್ಯಾಹು ಪ್ರಧಾನಿ ಮೋದಿ ಸೇರಿದಂತೆ ವಿಶ್ವದ ಹಲವು ನಾಯಕರಿಗೆ ಕರೆ ಮಾಡಿ, ಸದ್ಯದ ಪರಿಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಶಾಂತಿ ಕಾಪಾಡಿಕೊಳ್ಳುವಂತೆ ಇಸ್ರೇಲ್ ಪ್ರಧಾನಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಯಾಕೆ ದಾಳಿ..?
ಕಳೆದ ಕೆಲ ತಿಂಗಳಿನಿಂದ ಇರಾನ್ ಭಾರೀ ಪ್ರಮಾಣದಲ್ಲಿ ಪರಮಾಣು ಬಾಂಬ್ ತಯಾರಿಸಲು ಅಗತ್ಯವಾದ ಯುರೇನಿಯಂ ಅನ್ನು ಸಂಸ್ಕರಿಸಿದೆ. ಇದು ಕೆಲವೇ ದಿನಗಳಲ್ಲಿ ಕನಿಷ್ಠ 15 ಪರಮಾಣು ಬಾಂಬ್ ಸಿದ್ಧಪಡಿಸುವ ಸಾಮರ್ಥವನ್ನು ಇರಾನ್‌ಗೆ ನೀಡಿದೆ. ಇದು ಮುಂದಿನ ದಿನಗಳಲ್ಲಿ ತನ್ನ ಅಸ್ತಿತ್ವಕ್ಕೆ ಭಂಗ ತರುವ ಸಂಗತಿ. ಹೀಗಾಗಿ ನಮ್ಮ ಅಸ್ತಿತ್ವ ಉಳಿ ಸಿಕೊಳ್ಳುವ ನಿಟ್ಟಿನಲ್ಲಿ ಇರಾನ್‌ನ ಪರಮಾಣು ಬಾಂಬ್ ತಯಾರಿ ಸಾಮರ್ಥ್ಯ ನಾಶ ಮಾಡಬೇಕು ಎನ್ನುವ ಉದ್ದೇಶದಿಂದ ಇರಾನ್‌ನ 200ಕ್ಕೂ ಹೆಚ್ಚು ಸ್ಥಳಗಳ ಮೇಲೆ ಇಸ್ರೇಲ್ ಕ್ಷಿಪಣಿ ಮತ್ತು ಡೋನ್ ದಾಳಿ ನಡೆಸಿದೆ.ಇದರ ಜೊತೆಗೆ ಇಸ್ರೇಲ್ ವಿರುದ್ದ ಸದಾ ದಾಳಿ ನಡೆಸುವ ಹಮಾಸ್, ಹಿಜ್ಜುಲ್ಲಾ ಉಗ್ರರಿಗೂ ಇರಾನ್ ಆರ್ಥಿಕ ಮತ್ತು ಸೇನಾ ನೆರವು ನೀಡುತ್ತಿದೆ. ಜೊತೆಗೆ ತನ್ನ ವಿರುದ್ಧ ಸಂಚು ರೂಪಿಸುವ ಇರಾಕ್, ಲೆಬನಾನ್, ಸಿರಿಯಾ, ಗಾಜಾದಲ್ಲಿನ ವಿವಿಧ ಸಂಘಟನೆ ಗಳನ್ನು ಇರಾನ್ ಬೆಂಬಲಿಸುತ್ತಿದೆ ಅನ್ನೋದು ಇಸ್ರೇಲ್ ಆಕ್ರೋಶ.
ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಪಶ್ಚಿಮ ಏಷ್ಯಾದಲ್ಲಿ ಮತ್ತಷ್ಟು ಯುದ್ಧದ ಕಾರ್ಮೋಡವನ್ನು ಹೆಚ್ಚಿಸಿದೆ. ಇರಾನ್-ಇಸ್ರೇಲ್ ಬಿಕ್ಕಟ್ಟಿನಿಂದ ತೈಲದ ದರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದನ್ನೂ ಓದಿ: ಇಸ್ರೇಲ್ ದಾಳಿಗೆ ತತ್ತರಿಸಿದ ಇರಾನ್.. ಉನ್ನತ ಮಿಲಿಟರಿ ಕಮಾಂಡರ್ ಸೇರಿ ವಿಜ್ಞಾನಿಗಳೂ ಖತಂ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ