/newsfirstlive-kannada/media/post_attachments/wp-content/uploads/2024/12/ITALY-HOMES.jpg)
ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಗಾದೆಯೇ ಇದೆ. ಅದರಲ್ಲೂ ಭಾರತದಂತಹ ದೇಶದಲ್ಲಿ ಒಂದು ಮನೆ ಕಟ್ಟಿ, ಗೃಹಪ್ರವೇಶ ಮಾಡುವಷ್ಟರಲ್ಲಿ ಯಜಮಾನನ ಅರ್ಧ ಹೆಣ ಬಿದ್ದು ಹೋಗಿರುತ್ತೆ. ಕೂಡಿಟ್ಟ ಹಣ, ಒಂದಿಷ್ಟು ಸಾಲ ಅದು ಇದು ಮಾಡಿ ಮನೆ ಕಟ್ಟಿ ಸುಂದರವಾದ ಬದುಕು ಕಟ್ಟಿಕೊಳ್ಳಲು ಅವನು ತನ್ನ ಅರ್ಧ ಆಯಸ್ಸು ಬಸೀದಿರುತ್ತಾನೆ.
ಭಾರತದಲ್ಲಿ ಮನೆ ಕಟ್ಟುವುದು ಕೊಳ್ಳುವುದು ಒಂದು ದೊಡ್ಡ ಹೈರಾಣಿನ ಕೆಲಸವಾದ್ರೆ.ಈ ದೇಶದಲ್ಲಿ ಜಸ್ಟ್ 260 ರೂಪಾಯಿಗೆ ಮನೆಗಳನ್ನು ಮಾರುತ್ತಾರೆ. ಅದು ಕೂಡ ಅಂತಾರಾಷ್ಟ್ರೀಯ ಖರೀದಿದಾರರಿಗೆ. ಆ ದೇಶದ ಹೆಸರು ಇಟಲಿ. ಈ ಹಿಂದೆ ಅಂದ್ರೆ 2019ರಲ್ಲಿ ಇಟಲಿ ಇದೇ ವಿಚಾರವಾಗಿ ಸುದ್ದಿಯಾಗಿತ್ತು. ದೇಶದಲ್ಲಿರುವ ಅತ್ಯಂತ ಹಳೆಯ ಮನೆಗಳನ್ನ ಇದು ಹರಾಜಿಗಿಟ್ಟಿತ್ತು ಅದು ಜಸ್ಟ್ 1 ಡಾಲರ್ಗೆ ಅಂದ್ರೆ ಭಾರತೀಯ 85 ರೂಪಾಯಿಗೆ. ಈಗ ಮರಳಿ ಇದೇ ಕೆಲಸವನ್ನು ಇಟಲಿ ಮಾಡುತ್ತಿದೆ. ದೇಶದಲ್ಲಿರುವ ಹಳೆಯ ಮನೆಗಳನ್ನು 2021 ಹಾಗೂ 2024ರಲ್ಲಿಯೂ ಕೂಡ ಹರಾಜಿಗಿಟ್ಟಿತ್ತು. ಅದರ ಮೊತ್ತ ಭಾರತೀಯ ರೂಪಾಯಿಗಳಲ್ಲಿ 170 ಹಾಗೂ 255 ರೂಪಾಯಿ. ಇದು ಇಟಲಿಗೆ ಪ್ರವಾಸಕ್ಕೆಂದು ಹೋಗಿ, ಆ ದೇಶಕ್ಕೆ ಮೈಮರೆತು ಅಲ್ಲಿಯೇ ಇರಲು ಇಚ್ಛಿಸುವ ಪ್ರವಾಸಿಗರಿಂದ ದೊಡ್ಡ ಪ್ರಮಾಣದ ಪ್ರತಿಕ್ರಿಯೆಗಳು ಬಂದಿದ್ದವು.
ಈ ಒಂದು ಐಡಿಯಾವನ್ನು ಉಳಿದ ದೇಶಗಳಾದ ಮುಸೊಮೆಲಿಯ ಸಿಸಿಯಲಿಯಲ್ಲಿ ಹಾಗೂ ಜುಂಗೋಲಿಯಲ್ಲಿ ತಮ್ಮದಾಗಿಸಿಕೊಂಡವು. ಮಾಲೀಕರು ಬಿಟ್ಟು ಹೋದ ಹಳೆಯ ಮನೆಗಳು,ಹಲವಾರು ವರ್ಷ ಯಾರೂ ವಾಸಿಸದೇ ಹಾಗೆ ಬಿಟ್ಟು ಹೋದ ಮನೆಗಳು ಅಂತಾರಾಷ್ಟ್ರೀಯ ಖರೀದಿದಾರರನ್ನು ಆಕರ್ಷಿಸಿದವು
ಈ ಒಂದು ಐಡಿಯಾ ಯಾಕೆ ಟ್ರೆಂಡ್ ಆಯಿತು ಅನ್ನೋದಕ್ಕೆ ಹಲವು ಕಾರಣಗಳಿವೆ.
ಇಷ್ಟು ಕಡಿಮೆ ಬೆಲೆಗೆ ಮನೆಗಳನ್ನು ಮಾರುತ್ತಿದ್ದಾರೆ ಅಂದ್ರೆ ಇದೊಂದು ಸ್ಕ್ಯಾಮ್ ಇರಬೇಕು ಎಂದು ಅನೇಕರಿಗೆ ಅನಿಸಿರುತ್ತದೆ ಆದ್ರೆ ಇದೊಂದು ಸ್ಕ್ಯಾಮ್ ಅಲ್ಲ. ಯುಎಸ್ನ ಅಲೆಕ್ಸಾಂಡರ್ ಎಂಬುವವರು ತಮ್ಮ ಸ್ನೇಹಿತ ಕಡಿಮೆ ಬೆಲೆಗೆ ಮನೆ ತೆಗೆದುಕೊಂಡಿದ್ದಾನೆ ಎಂಬುದು ಕೇಳಿ ಆಶ್ಚರ್ಯಪಟ್ಟಿದ್ದ. ಇದರಲ್ಲಿ ಏನೋ ಹಗರಣ ಇದೆ ಅಂದುಕೊಂಡಿದ್ದ, ಆದ್ರೆ ಆಮೇಲೆ ಇದು ದೊಡ್ಡದಾಗಿ ಸಕ್ಸಸ್ ಆದಮೇಲೆ ನಾನು ಕೂಡ ಎರಡು ಮನೆಗಳನ್ನು ತೆಗೆದುಕೊಂಡೆ ಎಂದು ಹೇಳುತ್ತಾರೆ.
ಇದನ್ನೂ ಓದಿ:ಗುಡ್ನ್ಯೂಸ್; 2025 ರಿಂದ ಈ ದೇಶಕ್ಕೆ ಹೋಗಲು ಭಾರತೀಯರಿಗೆ ವೀಸಾ ಬೇಕಿಲ್ಲ! ಯಾವ ರಾಷ್ಟ್ರ ಗೊತ್ತಾ?
ಇನ್ನು ಇಷ್ಟು ಕಡಿಮೆಗೆ ಮನೆಗಳನ್ನು ಮಾರುತ್ತಾರೆ ಅಂದ್ರೆ ಅವು ಹರುಕು ಮುರುಕು ಮನೆಗಳು ಇರಬಹುದು ಅಂತ ಅನೇಕರು ಅಂದುಕೊಳ್ಳಬಹುದು. ಆದ್ರೆ ಇವು ಹಾಗಿರುವುದಿಲ್ಲ. ತುಂಬಾ ಗಟ್ಟಿಮುಟ್ಟಾದ ಮನೆಗಳನ್ನೇ ಕೊಂಡವರು ಈ ಬಗ್ಗೆ ಸ್ಪಷ್ಟಪಡಿಸುತ್ತಾರೆ.
ಇನ್ನು ಇಲ್ಲಿ ಬಿಡ್ಡಿಂಗ ಮಾಡುವುದು ಕೂಡ ವಿಚಿತ್ರವಾಗಿದೆ ಜಡ್ಜ್ ಎದುರು ವಿನ್ನಿಂಗ್ ಬಿಡ್ ಓಪನ್ ಮಾಡುತ್ತಾರೆ. ಹರಾಜು ಕೂಗುವವರು ಮೊದಲು 5,399 ಡಾಲರ್ ಅಂದ್ರೆ 4.5 ರೂಪಾಯಿಯನ್ನು ಡಿಪಾಸಿಟ್ ಆಗಿ ಇಡಬೇಕು ಒಂದು ವೇಳೆ ಹರಾಜು ಕೂಗಿದವನು ಗೆದ್ದರೆ ಮುಗಿತು. ಇಲ್ಲವಾದರೆ ಅವನಿಗೆ ಅವರ ದುಡ್ಡನ್ನು ವಾಪಸ್ ಕೊಡಲಾಗುತ್ತದೆ.
ಇದನ್ನೂ ಓದಿ:ಮಕ್ಕಳು ಮಾಡಿಕೊಳ್ಳಲು ಸಂಬಳದ ಜತೆಗೆ ವಾರದಲ್ಲಿ 3 ದಿನ ರಜೆ; ಪೋಷಕರಿಗೆ ವಿಶೇಷ ಸೌಲಭ್ಯ
ಬಿಡ್ಡಿಗಂಗ್ನಲ್ಲಿ ಮನೆಯನ್ನು ಗೆದ್ದ ಮೇಲೆ ಮೂರು ವರ್ಷದೊಳಗೆ ಅದರ ನವೀಕರಣ ಆಗಬೇಕು. ಒಂದು ವೇಳೆ ಆಗದೇ ಇದ್ದಲ್ಲಿ ಅವರು ಕಟ್ಟಿರುವ ಡಿಪಾಸಿಟ್ ಅಮೌಂಟ್ ವಾಪಸ್ ನೀಡಲಾಗುವುದಿಲ್ಲ ಹೀಗೆ ಮನೆ ನವೀಕರಣದಿಂದ ದೇಶಕ್ಕೆ ಆದಾಯ ಬರುತ್ತದೆ. ಒಂದು ಮನೆ ಖರೀದಿಗೆ ತಾಗುವ ದುಡ್ಡು ಅಷ್ಟಾಗಿ ಇರೋದಿಲ್ಲ ನವೀಕರಣಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಬೇಕಾಗುತ್ತದೆ.
ಈ ತರದ ಮನೆ ಮಾರಾಟ ಮಾಡುವುದರಿಂದ ಅಂತಾರಾಷ್ಟ್ರೀಯ ಖರೀದಿದಾರರಿಂದ ಸ್ಥಳೀಯ ಆರ್ಥಿಕತೆಯ ಉತ್ತಮವಾಗಿ ಬೆಳೆಯುತ್ತದೆ.ಈ ಹಿಂದೆ ನಡೆದ ಈ ರೀತಿಯ ಮನೆಗಳ ಮಾರಾಟದಿಂದಲೇ 2.8 ಕೋಟಿ ಡಾಲರ್ಗಳ ವ್ಯವಹಾರವಾಗಿದೆ ಎಂದು ಹೇಳುತ್ತಾರೆ ಅಲ್ಲಿನ ಅಧಿಕಾರಿಗಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ