/newsfirstlive-kannada/media/post_attachments/wp-content/uploads/2025/05/RCB_TEAM-4.jpg)
ಐಪಿಎಲ್ ಸೀಸನ್-18ರಲ್ಲಿ ಆರ್ಸಿಬಿ ವೇಗಿ ಜೋಶ್ ಹೇಝಲ್ವುಡ್, ಬೊಂಬಾಟ್ ಬೌಲಿಂಗ್ ಮಾಡ್ತಿದ್ದಾರೆ. ಹೇಝಲ್ವುಡ್ ತಂಡದಲ್ಲಿದ್ರೆ, ಬೌಲರ್ಗಳ ಜೋಶ್ ಬೇರೆ. ತಂಡದ ಬೌಲಿಂಗ್ ಅಟ್ಯಾಕ್ ಮುನ್ನಡೆಸುತ್ತಿರುವ ಹೇಝಲ್ವುಡ್, ಆರ್ಸಿಬಿಯ ರಿಯಲ್ ಗೇಮ್ಚೇಂಜರ್. ಈ ಆಸಿಸ್ ವೇಗಿ ಗೇಮ್ಚೇಂಜರ್, ಮ್ಯಾಚ್ ವಿನ್ನರ್ ಮಾತ್ರವಲ್ಲ. ಲಕ್ಕಿ ಬೌಲರ್ ಸಹ ಹೌದು. ಅದೇಗೆ ಅನ್ನೋದು ಇಲ್ಲಿದೆ.
ಬ್ಯಾಟ್ಸ್ಮನ್ಗಳು ಸ್ಪಾನ್ಸರ್ಶಿಪ್ ತಂದುಕೊಡ್ತಾರೆ. ಬೌಲರ್ಗಳು ಚಾಂಪಿಯನ್ಶಿಪ್ ಗೆಲ್ಲಿಸಿಕೊಡ್ತಾರೆ ಅನ್ನೋ ಮಾತಿದೆ. ಈ ಮಾತು, ಆರ್ಸಿಬಿ ವೇಗಿ ಜೋಶ್ ಹೇಝಲ್ವುಡ್ಗೆ, ಹೇಳಿ ಮಾಡಿಸಿದಂತಿದೆ. ಐಪಿಎಲ್ನಲ್ಲಿ ತಾನಾಡಿದ ಎಲ್ಲಾ ಪಂದ್ಯಗಳಲ್ಲೂ ಹೇಝಲ್ವುಡ್, ವಿಕೆಟ್ ಭೇಟೆಯಾಡಿದ್ದಾರೆ. ಒತ್ತಡಕ್ಕೆ ಸಿಲುಕಿದ ತಂಡವನ್ನ ಪಾರು ಮಾಡಿದ್ದಾರೆ. ಗೇಮ್ಚೇಂಜರ್ ಆಗಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಹೇಝಲ್ವುಡ್ ತಂಡದಲ್ಲಿದ್ರೆ, ಗೆಲುವು ಅಸಾಧ್ಯವಲ್ಲ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.
ಐಪಿಎಲ್ ಸೀಸನ್-18ರಲ್ಲಿ ಹೇಝಲ್ವುಡ್ ಮಿಂಚು..!
ಪ್ರಸಕ್ತ ಐಪಿಎಲ್ನಲ್ಲಿ ಆಸ್ಟ್ರೇಲಿಯಾದ ಅನುಭವಿ ವೇಗಿ, ಬೊಂಬಾಟ್ ಬೌಲಿಂಗ್ ಮಾಡಿದ್ದಾರೆ. ಸೂಪರ್ಸ್ಟಾರ್ ಬ್ಯಾಟ್ಸ್ಮನ್ಗಳನ್ನ, ತನ್ನ ಸೂಪರ್ಸ್ಪೆಲ್ ಬೌಲಿಂಗ್ನಿಂದ ಔಟ್ ಮಾಡಿದ್ದಾರೆ. ಬ್ಯಾಟಿಂಗ್ನಲ್ಲಿ ಕೊಹ್ಲಿ ದರ್ಬಾರ್ ನಡೆಸಿದ್ರೆ, ಬೌಲಿಂಗ್ನಲ್ಲಿ ಹೇಝಲ್ವುಡ್ ಮಿಂಚಿನ ದಾಳಿ ನಡೆಸಿದ್ದಾರೆ. ಆಡಿರೋ 11 ಪಂದ್ಯಗಳಲ್ಲಿ ಹೇಝಲ್ವುಡ್ 21 ವಿಕೆಟ್ ಪಡೆದಿದ್ದಾರೆ. ಪರ್ಫಲ್ ಕ್ಯಾಪ್ ಪಡೆಯಲು ಮುನ್ನುಗ್ಗುತ್ತಿದ್ದಾರೆ.
ಫೈನಲ್ನಲ್ಲಿ ಹೇಝಲ್ವುಡ್ಗೆ ಸೋಲೇ ಇಲ್ಲ..!
ಹೇಝಲ್ವುಡ್, ಆಸ್ಟ್ರೇಲಿಯಾ ತಂಡದ ಪರ ಆಡಲಿ ಅಥವಾ ಫ್ರಾಂಚೈಸಿ ಕ್ರಿಕೆಟ್ ಆಡಲಿ. ಈ ಟಾಲ್ ಪೇಸರ್, ಹಂಡ್ರೆಡ್ ಪರ್ಸಂಟ್ ಕಮಿಟ್ಮೆಂಟ್ ತೋರಿಸುತ್ತಾರೆ. ಹೇಝಲ್ವುಡ್ರ ಈ ಕ್ವಾಲಿಟಿನೇ, ಅವರನ್ನ ಸಕ್ಸಸ್ಫುಲ್ ಬೌಲರ್ ಆಗಿ ಮಾಡಿರೋದು. ಅಲ್ಲದೇ ಮಹತ್ವದ ಪಂದ್ಯಗಳಲ್ಲಿ ಸಖತ್ ಆಗೇ ಪ್ರೆಶರ್ ಹ್ಯಾಂಡಲ್ ಮಾಡೋ ಹೇಝಲ್ವುಡ್, ಬಿಗ್ಮ್ಯಾಚ್ ಪ್ಲೇಯರ್ ಎನಿಸಿಕೊಂಡಿದ್ದಾರೆ. ಅಂದಹಾಗೆ, ಹೇಝಲ್ವುಡ್ ಆಡಿರೋ 7 ಫೈನಲ್ ಪಂದ್ಯಗಳಲ್ಲಿ, ಇದುವರೆಗೂ ಒಂದೇ ಒಂದು ಪಂದ್ಯವನ್ನೂ ಸೋತಿಲ್ಲ.
ಲಕ್ಕಿ ಬೌಲರ್ ಹೇಝಲ್ವುಡ್..!
- 2012 ಚಾಂಪಿಯನ್ಸ್ ಲೀಗ್ T20 ವಿನ್
- 2015 ಏಕದಿನ ವಿಶ್ವಕಪ್ ಗೆಲುವು
- 2020 ಬಿಗ್ಬ್ಯಾಷ್ ಫೈನಲ್ ಗೆಲುವು
- 2021 ಐಪಿಎಲ್ ಫೈನಲ್ ಗೆಲುವು
- 2021 T20 ವಿಶ್ವಕಪ್ ಗೆಲುವು
- 2023 ಏಕದಿನ ವಿಶ್ವಕಪ್ ಗೆಲುವು
ಟೆಸ್ಟ್, ಏಕದಿನ, ಟಿ-ಟ್ವೆಂಟಿ, ಮೂರೂ ಫಾರ್ಮೆಟ್ಗಳಲ್ಲಿ ಹೇಝಲ್ವುಡ್ ಸಕ್ಸಸ್ಫುಲ್ ಬೌಲರ್. ರೆಡ್ ಬಾಲ್ ಕೊಟ್ರು ವಿಕೆಟ್ ಭೇಟೆಯಾಡ್ತಾರೆ. ವೈಟ್ಬಾಲ್ ಕೊಟ್ರೂ ವಿಕೆಟ್ ಭೇಟೆಯಾಡ್ತಾರೆ. ಅಂದಹಾಗೆ ಹೇಝಲ್ವುಡ್ರ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?.
ಹೇಝಲ್ವುಡ್ ಸಕ್ಸಸ್ಫುಲ್ ಬೌಲರ್ ಆಗಿದ್ದೇಗೆ..?
ಹೇಝಲ್ವುಡ್ ಒಬ್ಬ ಸ್ಪೆಷಲ್ ಬೌಲರ್. ಇದ್ರಲ್ಲಿ ಯಾವುದೇ ಅನುಮಾನವಿಲ್ಲ. ಹೇಝಲ್ವುಡ್ರ ಬೌಲಿಂಗ್ ಅಕ್ಯುರೆಸಿ ಅಂದ್ರೆ ಒಂದೇ ಜಾಗದಲ್ಲಿ ಕನ್ಸಿಸ್ಟೆಂಟ್ ಆಗಿ ಗುಡ್ ಲೆಂಥ್ ಬೌಲಿಂಗ್ ಮಾಡಿ, ಬ್ಯಾಟ್ಸ್ಮನ್ಗಳನ್ನ ಕಾಡ್ತಾರೆ. ಹೇಝಲ್ವುಡ್ರ ಹೈ ರಿಲೀಸ್ ಪಾಯಿಂಟ್ನಿಂದ, ಎಕ್ಸ್ಟ್ರಾ ಬೌನ್ಸ್ ಪಡೆಯುತ್ತಾರೆ. ಆಗಾಗ ತನ್ನ ಲೆಂಥ್ನ ವೇರಿ ಮಾಡುತ್ತಾ, ಬ್ಯಾಟ್ಸ್ಮನ್ಗಳನ್ನ ಯಾವಾಗಲೂ ಗೆಸ್ಸಿಂಗ್ನಲ್ಲೇ ಇಡ್ತಾರೆ. ಒತ್ತಡದ ಸಂದರ್ಭದಲ್ಲೂ ಹೇಝಲ್ವುಡ್ ಒಳ್ಳೆ ಎಕಾನಮಿ ಕಾಯ್ದುಕೊಳ್ತಾರೆ. ಇದೆಲ್ಲದರ ಜೊತೆಗೆ ಯಾವುದೇ ಕಂಡೀಷನ್ಸ್ ಇರಲಿ, ಹೇಝಲ್ವುಡ್ ಬೇಗ ಹೊಂದುಕೊಳ್ತಾರೆ. ತಮ್ಮ ಅನುಭವವನ್ನ ಸದುಪಯೋಗ ಪಡಿಸಿಕೊಳ್ತಾರೆ.
ಇದನ್ನೂ ಓದಿ: RCBಗೆ ಇಂದು ಡಬಲ್ ಸಂಭ್ರಮ, ಏನೇನು ಗೊತ್ತಾ..? ಫೈನಲ್ ಆಡಲು ಗುಜರಾತ್ ತಲುಪಿದ ಟೀಮ್
ಆರ್ಸಿಬಿಗೆ ಲಕ್ ತಂದುಕೊಡ್ತಾರಾ ಹೇಝಲ್ವುಡ್..?
ಆರ್ಸಿಬಿ 18 ವರ್ಷಗಳ ಕಾಲ ಕಪ್ ಇಲ್ಲದೆ, ವನವಾಸ ಅನುಭವಿಸಿದೆ. ಪ್ರತಿ ಸೀಸನ್ನಲ್ಲೂ ಆರ್ಸಿಬಿ ಫ್ಯಾನ್ಸ್, ನಿರಾಸೆಗೊಳ್ಳುತ್ತಲೇ ಇದ್ದಾರೆ. ಆದ್ರೆ ಈ ಬಾರಿ ಅನುಭವಿ ವೇಗಿ ಹೇಝಲ್ವುಡ್, ಆರ್ಸಿಬಿಗೆ ಲಕ್ಕಿ ಬೌಲರ್ ಆಗುತ್ತಾರಾ, ಬೆಂಗಳೂರು ತಂಡದ ಬಹು ವರ್ಷಗಳ ಕನಸು ನನಸು ಮಾಡುತ್ತಾರಾ?. 7 ಬಾರಿ ವಿವಿಧ ತಂಡಗಳ ಪರ ಫೈನಲ್ಸ್ ಆಡಿ ಗೆದ್ದಿರುವ ಹೇಝಲ್ವುಡ್, ಇದೀಗ 8ನೇ ಬಾರಿ ಫೈನಲ್ ಆಡಲಿದ್ದಾರೆ. ಫೈನಲ್ಸ್ನಲ್ಲಿ ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಹೇಝಲ್ವುಡ್, ವಿಜಯದ ಓಟ ಮುಂದುವರೆಸುತ್ತಾರಾ?.
ಹೇಝಲ್ವುಡ್, ಆರ್ಸಿಬಿಯ ಕೀ ಪ್ಲೇಯರ್. ಪ್ರತಿ ಪಂದ್ಯದಲ್ಲೂ ಆರ್ಸಿಬಿಯ ಬೆನ್ನೆಲೆಬಾಗಿ ನಿಂತು ಪರ್ಫಾಮ್ ಮಾಡಿರುವ ಜೋಷ್, ಫೈನಲ್ಸ್ನಲ್ಲೂ ಬೊಂಬಾಟ್ ಪ್ರದರ್ಶನ ನೀಡಲಿ. ಆರ್ಸಿಬಿಗೆ ಕಪ್ ಗೆಲ್ಲಿಸಿ, ಕೋಟ್ಯಾಂತರ ಅಭಿಮಾನಿಗಳ ಕನಸು ನನಸು ಮಾಡಲಿ ಅನ್ನೋದೇ, ನಮ್ಮೆಲ್ಲರ ಆಶಯ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ