/newsfirstlive-kannada/media/post_attachments/wp-content/uploads/2025/05/Josh_Hazlewood.jpg)
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ತವರಿನ ಪಿಚ್ನಲ್ಲಿ ಅಖಾಡಕ್ಕೆ ಧುಮುಕಿದೆ. ಎರಡು ತಂಡಗಳು ಗೆಲುವಿಗಾಗಿ ಭಾರೀ ಪೈಪೋಟಿ ನಡೆಸಿವೆ. ಆದರೆ ಪೇಸ್ ಬೌಲರ್ ಆಗಿರುವ ಜೋಶ್ ಹ್ಯಾಜಲ್ವುಡ್ರನ್ನ ಆರ್ಸಿಬಿ ತಂಡದಿಂದ ಹೊರಗಿಡಲಾಗಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಮತ್ತು ಆರ್ಸಿಬಿ ಕಾದಾಟ ನಡೆಸುತ್ತಿವೆ. ಈಗಾಗಲೇ ಹನ್ನೊಂದು ಆಟಗಾರರ ಹೆಸರನ್ನು ಪ್ರಕಟಿಸಿರುವ ಆರ್ಸಿಬಿ, ಜೋಶ್ ಹ್ಯಾಜಲ್ವುಡ್ರನ್ನ ಕೈಬಿಟ್ಟಿದೆ. ಓಪನರ್ ಫಿಲ್ ಸಾಲ್ಟ್ ಜ್ವರದಿಂದ ಬಳಲುತ್ತಿರುವ ಬೆನ್ನಲ್ಲೇ ಪೇಸ್ ಬೌಲರ್ ಅನ್ನು ತಂಡದಿಂದ ಹೊರಗಿಟ್ಟಿರುವುದು ಫ್ಯಾನ್ಸ್ಗೆ ಬೇಸರ ತರಿಸಿದೆ.
ಟಾಸ್ ಸೋತ ನಂತರ ಮಾತನಾಡಿದ ನಾಯಕ ರಜತ್ ಪಾಟಿದಾರ್ ಅವರು, ಜೋಶ್ ಹ್ಯಾಜಲ್ವುಡ್ ಅವರನ್ನು ತಂಡದಿಂದ ಹೊರಗಿಟ್ಟಿರುವುದಕ್ಕೆ ಯಾವುದೇ ಕಾರಣ ಹೇಳಿಲ್ಲ. ಇದರ ಬದಲಾಗಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಹ್ಯಾಜಲ್ವುಡ್ ಬದಲಿಗೆ ಲುಂಗಿ ಎನ್‌ಗಿಡಿ ಬೌಲಿಂಗ್ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: RCB ಅಭಿಮಾನಿಗಳು ಯಾವಾಗಲೂ ಲಾಯಲ್ ಎನ್ನುವುದಕ್ಕೆ ಈ ಸ್ಟೋರಿನೇ ಸಾಕ್ಷಿ.. ಹೇಗೆ?
ಇನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಹ್ಯಾಜಲ್ವುಡ್ ಕಣಕ್ಕೆ ಇಳಿಯುತ್ತಾರೆ ಎಂದು ನೋಡಿದರೆ ಆ ಲಿಸ್ಟ್ನಲ್ಲೂ ಹೆಸರು ಇಲ್ಲ. ಒಟ್ಟಿನಲ್ಲಿ ಇಂದಿನ ತಂಡದಲ್ಲಿ ಹ್ಯಾಜಲ್ವುಡ್ ಇಲ್ಲದೇ ಇರುವುದು ಆರ್ಸಿಬಿಗೆ ನಷ್ಟವೇ ಎಂದು ಹೇಳಬಹುದು. ಇನ್ನು ಟೂರ್ನಿಯಲ್ಲಿ ಬೌಲಿಂಗ್ನಲ್ಲಿ ಪರಾಕ್ರಮ ಮೆರೆದಿರುವ ಹ್ಯಾಜಲ್ವುಡ್ ಅವರು, 10 ಪಂದ್ಯಗಳಿಂದ 18 ವಿಕೆಟ್ಗಳನ್ನು ಕಬಳಿಸಿ ಪರ್ಪಲ್ ಕ್ಯಾಪ್ ರೇಸ್ನಲ್ಲಿ 2ನೇ ಸ್ಥಾನ ಪಡೆದಿದ್ದಾರೆ.
ಅಲ್ಲದೇ ಈ ಹಿಂದಿನ ಪಂದ್ಯದಲ್ಲಿ ಪರ್ಪಲ್ ಕ್ಯಾಪ್ ಕೂಡ ಪಡೆದಿದ್ದರು. ಈ ಸೀಸನ್ನಲ್ಲಿ 33 ರನ್ಗೆ 4 ವಿಕೆಟ್ ಉರುಳಿಸಿರುವುದು ಹ್ಯಾಜಲ್ವುಡ್ ಅವರ ಅತ್ಯುತ್ತಮ ಸಾಧನೆ ಆಗಿದೆ. ಇಂತಹ ಸಮಯದಲ್ಲಿ ಅವರನ್ನು ಆರ್ಸಿಬಿಯಿಂದ ಹೊರಗಿಟ್ಟಿದ್ದು ಬೇಸರವೇ ಎಂದು ಹೇಳಬಹುದು. ಕ್ರಿಕೆಟ್ ಮೂಲಗಳ ಪ್ರಕಾರ ಜೋಶ್ ಹ್ಯಾಜಲ್ವುಡ್ ಭುಜದ ನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಆದ್ರೆ ಈ ಬಗ್ಗೆ ಅಧಿಕೃತವಾಗಿ ಆರ್ಸಿಬಿ ಮಾಹಿತಿ ನೀಡಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ