/newsfirstlive-kannada/media/post_attachments/wp-content/uploads/2024/09/DKSHI-KAMAL-HARRIS.jpg)
ವಾಷಿಂಗ್ಟನ್: ವಿಶ್ವದ ಮೋಸ್ಟ್ ಪವರ್‌ಫುಲ್ ಲೇಡಿಯನ್ನ ಮೀಟ್ ಮಾಡೋಕೆ ಡಿಸಿಎಂ ಡಿ.ಕೆ ಶಿವಕುಮಾರ್ ಅಮೆರಿಕಾ ದೇಶಕ್ಕೆ ಹಾರಿದ್ದಾರೆ. ಇದೊಂದು ಫ್ಯಾಮಿಲಿ ಟ್ರಿಪ್ ಅಂತಾ ಹೇಳಿ ಫ್ಲೈಟ್ ಹತ್ತಿರೋ ಡಿಕೆಶಿ ಎಲ್ಲವನ್ನೂ ಗುಟ್ಟಾಗಿಟ್ಟಿದ್ದಾರೆ. ಆದ್ರೆ, ಡಿಕೆ ಶಿವಕುಮಾರ್‌ರಿಗೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರೋ ಈ ಕಮಲಾ ಹ್ಯಾರಿಸ್ ಅವ್ರು ಫೋನ್ ಕರೆ ಮಾಡಿ ಬನ್ನಿ ಅಂತಾ ಕರೆದಿರೋ ಕಾರಣಕ್ಕೆ ಡಿಕೆ ವಿಮಾನ ಏರಿದ್ದಾರೆ ಅಂತಾ ಮಾಹಿತಿ ಸಿಕ್ಕಿದೆ.
ಹಾಗಾದ್ರೆ, ಅಮೆರಿಕ ಅಧ್ಯಕ್ಷ ಚುನಾವಣಾ ಅಭ್ಯರ್ಥಿ ಕಮಲಾ, ಡಿಸಿಎಂ ಡಿ.ಕೆ ಶಿವಕುಮಾರ್ ಅವ್ರನ್ಯಾಕೆ ಅಲ್ಲಿಗೆ ಕರೆಸಿಕೊಳ್ಬೇಕು? ಚುನಾವಣೆ ನಡೀತಿರೋದು ಅಮೆರಿಕದಲ್ಲಿ.. ಡಿಕೆಶಿಗೆ ಅಲ್ಲೇನು ಕೆಲಸ, ಅವ್ರಿಂದೇನು ಲಾಭ ಅಂತೀರಾ? ಈ ಲೇಖನದಲ್ಲಿದೆ ವಿವರ.
/newsfirstlive-kannada/media/post_attachments/wp-content/uploads/2024/07/KAMALA_HARRIS_1.jpg)
ಅಮೆರಿಕದಲ್ಲಿರೋ ಕನ್ನಡಿಗರ ಮತ ಸೆಳೆಯೋಕೆ ಕಮಲಾ ರಣತಂತ್ರ!?
ಅಮೆರಿಕದಲ್ಲಿ ಭಾರತೀಯರ ಜನಸಂಖ್ಯೆ ದೊಡ್ಡ ಸಂಖ್ಯೆಯಲ್ಲಿದೆ. ಅಮೆರಿಕದ ಕ್ಯಾಲಿಫೋರ್ನಿಯಾ, ಉತ್ತರ ಕ್ಯಾರೋಲಿನಾ, ಮಿಶಿಗಾನ್, ಪೆನ್ಸಿಲ್ವೇನಿಯಾ, ಆರಿಜೋನಾ ಸೇರಿದಂತೆ ಅತಿ ಹೆಚ್ಚು ಜನಸಂಖ್ಯೆಯಿರೋ ರಾಜ್ಯಗಳಲ್ಲೇ ಭಾರತೀಯರು ನೆಲೆಸಿದ್ದಾರೆ. ಹಾಗಾಗಿ, ಅಧ್ಯಕ್ಷೀಯ ಚುನಾವಣೆ ಗೆಲ್ಲಬೇಕು ಅಂದ್ರೆ ಈ ಅನಿವಾಸಿ ಭಾರತೀಯರ ವೋಟುಗಳು ಬೇಕೇ ಬೇಕು. 30 ಕೋಟಿ ಜನಸಂಖ್ಯೆಯಿರೋ ಅಮೆರಿಕದಲ್ಲಿ ಜಸ್ಟ್ ಅರ್ಧ ಕೋಟಿ ಭಾರತೀಯರ ವೋಟುಗಳಿಗಾಗಿ ಇಷ್ಟೆಲ್ಲಾ ಸರ್ಕಸ್ ಯಾಕೆ ಅಂತ ನೀವ್ ಕೇಳ್ಬೋದು. ಇದರ ಹಿಂದೊಂದು ರೋಚಕ ಸಂಗತಿಯಿದೆ. ಕಮಲಾ ಡಿಕೆಶಿಯವ್ರನ್ನ ತಮ್ಮ ಕಾರ್ಯಕ್ರಮಕ್ಕೆ ಕರೆಸಿಕೊಂಡಿರೋದ್ರ ಹಿಂದೆಯಿರೋದು ಆ ಲೆಕ್ಕಾಚಾರವೇ!
ನಮ್ಮಲ್ಲಿ ಎಡಪಂಥೀಯ ಸಿದ್ಧಾಂತ ಮತ್ತು ಬಲಪಂಥೀಯ ಸಿದ್ಧಾಂತ ಇರುವಂತೆಯೇ ಅಮೆರಿಕದಲ್ಲೂ ರೈಟ್, ಲೆಫ್ಟ್​ ಮತ್ತು ಫಾರ್ ರೈಟ್, ಫಾರ್ ಲೆಫ್ಟ್, ಲೆಫ್ಟ್ ಟು ಸೆಂಟರ್, ರೈಟ್ ಟು ಸೆಂಟರ್ ಎಂಬ ಚಿತ್ರ ವಿಚಿತ್ರ ಸಿದ್ಧಾಂತಗಳಿವೆ. ಮೇಲಾಗಿ, ಅಮೆರಿಕದಲ್ಲಿರೋ ಎರಡು ಪಕ್ಷಗಳಾದ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಪಕ್ಷಗಳು ಈ ಸಿದ್ಧಾಂತಗಳ ಆಧಾರದ ಮೇಲೆಯೇ ವಿಂಗಡನೆಯಾಗಿವೆ. ನಮ್ಮಲ್ಲಿ, ಒಂದೊಂದು ಪಕ್ಷಕ್ಕೆ ಒಂದೊಂದು ಜಾತಿಯ ಮತಗಳು ಖಾಯಂ ಇದ್ದ ಹಾಗೆಯೇ. ಅಲ್ಲಿ ಒಂದೊಂದು ಪಕ್ಷಕ್ಕೆ ಒಂದೊಂದು ಸಿದ್ಧಾಂತದ ಮತಬ್ಯಾಂಕ್ ಫಿಕ್ಸ್. ಅಭ್ಯರ್ಥಿ ಯಾರೇ ಇರಲಿ, ಪರಿಸ್ಥಿತಿ ಏನೇ ಇರಲಿ.. ಅವರು ಅದೇ ಪಕ್ಷಕ್ಕೇ ವೋಟ್ ಹಾಕ್ತಾರೆ.
ಈ ಮತಬ್ಯಾಂಕ್ ವಿಚಾರದಲ್ಲಿ ಅಮೆರಿಕವನ್ನ 50-50 ಆಧಾರದಲ್ಲಿ ಇಬ್ಭಾಗ ಮಾಡಿಬಿಡಬಹುದು. ಆ ಪಕ್ಷದ ಪರ ಇದ್ದವರು ಈ ಪಕ್ಷದ ಕಡೆ ಬರೋಲ್ಲ. ಇಲ್ಲಿದ್ದವರು ಎಂದೆಂದಿಗೂ ಆ ಕಡೆ ಹೋಗಲ್ಲ. ಇದು, ಪೀಳಿಗೆಯಿಂದ ಪೀಳಿಗೆಗೆ ಮುಂದುವರೆಯುತ್ತಲೇ ಬಂದಿದೆ. ಹಾಗಾಗಿ, ಎರಡೂ ಪಕ್ಷಗಳಿಗೂ ಫಿಕ್ಸೆಡ್ ವೋಟ್‌ಬ್ಯಾಂಕ್ ಇದೆ. ಬಟ್, ಆ ವೋಟ್‌ಬ್ಯಾಂಕ್ ಅನ್ನು ತಕ್ಕಡಿಗೆ ಹಾಕಿ ತೂಗಿದ್ರೆ ಆಲ್‌ಮೋಸ್ಟ್ ಸಮಸಮ ಬರುತ್ತೆ. ಹಾಗಾಗಿಯೇ, ತಕ್ಕಡಿ ಮೇಲೇರಬೇಕು ಅಂದ್ರೆ ಬೇರೆ ವೋಟುಗಳ ಕೃಪೆ ಬೇಕು. ಆ ವೋಟರ್ಸ್ ಯಾರು? ಅನಿವಾಸಿಗಳು. ಅರ್ಥಾತ್, ಬೇರೆ ದೇಶಗಳಿಂದ ಬಂದು ನೆಲೆಸಿರೋರು!
/newsfirstlive-kannada/media/post_attachments/wp-content/uploads/2024/09/kamala_harris.jpg)
ಇದನ್ನೂ ಓದಿ:ಮಗಳ ತಲೆ ಮೇಲೆ CCTV ಫಿಟ್ ಮಾಡಿದ ಫ್ಯಾಮಿಲಿ.. ಪಾಕಿಸ್ತಾನ ಕುಟುಂಬದ ಅಸಲಿ ಪ್ಲಾನ್ ಏನು?
50 ಲಕ್ಷವಲ್ಲ, ಐದೇ ಐದು ವೋಟು ಇದ್ರೂ ಕೂಡ ಅವೂ ಇಂಪಾರ್ಟೆಂಟ್ ಅನ್ನೋದು ಎರಡೂ ಪಕ್ಷಗಳಿಗೆ ಗೊತ್ತಿದೆ. ಹಾಗಾಗಿ, ಅನಿವಾಸಿ ಭಾರತೀಯರ ಪ್ರತಿಯೊಂದು ವೋಟುಗಳನ್ನು ಸೆಳೆಯೋದಕ್ಕೆ ಟ್ರಂಪ್ ಮತ್ತು ಕಮಲಾ ರಣತಂತ್ರ ಮಾಡ್ತಿದ್ದಾರೆ. ಈ ವಿಚಾರದಲ್ಲಿ ಕಮಲಾ ಹ್ಯಾರಿಸ್‌ಗೆ ದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ ಅವ್ರು ಭಾರತ ಮೂಲದವ್ರು ಅನ್ನೋದು. ಅವರ ತಾಯಿ ತಮಿಳುನಾಡಿನವ್ರು. ಇದೇ ಅಸ್ತ್ರವನ್ನ ಬಳಸುತ್ತಾ ಭಾರತೀಯೆಗೆ ವೋಟು ಹಾಕದೆ ನೀವು ಇನ್ಯಾರನ್ನು ಗೆಲ್ಲಿಲಸು ಸಾಧ್ಯ ಅಂತಾ ಭಾವನಾತ್ಮಕ ಅಸ್ತ್ರವನ್ನು ಪ್ರಯೋಗಿಸ್ತಿದ್ದಾರೆ. ಈಗ ಡಿಕೆಶಿಯವರನ್ನು ತಮ್ಮ ಕಾರ್ಯಕ್ರಮಕ್ಕೆ ಕರೆಸಿಕೊಂಡಿರೋದು ಆ ಚುನಾವಣಾ ರಣತಂತ್ರದ ಮತ್ತೊಂದು ಅಧ್ಯಾಯ ಎನ್ನಲಾಗ್ತಿದೆ.
ಇದನ್ನೂ ಓದಿ:ಮೋದಿ ಬಳಿಕ ಮಾಸ್ಕೋದತ್ತ ಭಾರತದ ಜೇಮ್ಸ್ ಬಾಂಡ್ ಧೋವಲ್ ಪಯಣ; ಏನಿದರ ಮಾಸ್ಟರ್ ಪ್ಲಾನ್?
ಅಮೆರಿಕದಲ್ಲಿ ಅನಿವಾಸಿ ಕನ್ನಡಿಗರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಕರ್ನಾಟಕದ ಪಾಪ್ಯುಲರ್ ನಾಯಕ ತಮ್ಮ ಸಪೋರ್ಟ್‌ಗೆ ನಿಂತ್ರೆ ಆ ವೋಟುಗಳು ಬರೋಕು ಪಕ್ಕಾ ಅನ್ನೋ ಪ್ಲಾನ್ ಕಮಲಾ ಹ್ಯಾರಿಸ್‌ರದ್ದು. ಹಾಗಾಗಿ, ಕರ್ನಾಟಕದ ಪಾಪ್ಯುಲರ್ ರಾಜಕೀಯ ನಾಯಕರಾಗಿರೋ ಡಿ.ಕೆ ಶಿವಕುಮಾರ್ ಅವರಿಗೆ ಕಮಲಾ ಹ್ಯಾರಿಸ್ ಆಹ್ವಾನ ಕೊಟ್ಟು ಕರೆಸಿಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಕರ್ನಾಟಕದಿಂದ ಡಿಕೆಶಿವಕುಮಾರ್‌ರಿಗೆ ಆಮಂತ್ರಣ ನೀಡಿರುವಂತೆ ದೇಶದ ಬೇರೆ ಬೇರೆ ರಾಜ್ಯಗಳ ದಿಗ್ಗಜ ರಾಜಕಾರಣಿಗಳೂ ಸೆಪ್ಟಂಬರ್ 10 ರ ಕಮಲಾ ಕಾರ್ಯಕ್ರಮದಲ್ಲಿ ಭಾಗಿಯಾಗ್ತಿದ್ದಾರೆ. ರಾಹುಲ್ ಗಾಂಧಿ ಇದಾಗಲೇ ಅಮೆರಿಕದಲ್ಲಿ ಲ್ಯಾಂಡ್ ಆಗಿದ್ದು, ತಮಿಳುನಾಡು ಸಿಎಂ ಸ್ಟಾಲಿನ್ ಕೂಡ ಭಾಗಿಯಾಗಲಿದ್ದಾರೆ ಎಂಬ ಮಾಹಿತಿಯಿದೆ.
ಎಲ್ಲಾ ಓಕೆ! ಡಿಕೆಶಿಯವ್ರೇ ಯಾಕೆ? ಅದೇನಾ ಕಾರಣ?
ಕರ್ನಾಟಕದಲ್ಲಿ ಡಿಕೆಶಿಯವರನ್ನು ಒಳಗೊಂಡಂತೆ ಅನೇಕ ದಿಗ್ಗಜ ರಾಜಕೀಯ ನಾಯಕರಿದ್ರು. ಡಿಕೆಶಿಯವರೇ ಯಾಕೆ ಕಮಲಾ ಹ್ಯಾರಿಸ್ ಮೊದಲ ಆಯ್ಕೆ ಎಂಬ ಪ್ರಶ್ನೆ ಹುಟ್ಟದೇ ಇರದು. ಈ ಪ್ರಶ್ನೆಗೆ ಉತ್ತರ ಹಲವು. ಅದರಲ್ಲಿ ಪ್ರಮುಖವಾದದ್ದು ಅಂದ್ರೆ ಕಮಲಾ ಹ್ಯಾರಿಸ್ ತಾಯಿ ಶ್ಯಾಮಲಾ ಹ್ಯಾರಿಸ್‌ರ ಈ ಫೌಂಡೇಶನ್.
/newsfirstlive-kannada/media/post_attachments/wp-content/uploads/2024/07/Kamala-Harris.jpg)
ಸ್ತನ ಕ್ಯಾನ್ಸರ್ ತಜ್ಞೆಯಾಗಿದ್ದ ಕಮಲಾ ಹ್ಯಾರಿಸ್ ತಾಯಿ ಶ್ಯಾಮಲಾ ಗೋಪಾಲನ್ ಅವರ ಹೆಸರಲ್ಲೊಂದು ಫೌಂಡೇಶನ್ ನಡೆಯುತ್ತಿದೆ. ಆರೋಗ್ಯ, ಶಿಕ್ಷಣ, ಸಾಮಾಜಿಕ ಸೇವೆ ಸೇರಿದಂತೆಹಲವಾರು ಕ್ಷೇತ್ರಗಳಲ್ಲಿ ಕೊಡುಗೆ ನೀಡುತ್ತಿರೋ ಆ ಫೌಂಡೇಷನ್‌ಗೆ ಡಿಸಿಎಂ ಡಿಕೆಶಿವಕುಮಾರ್ ಅವರು ದೊಡ್ಡಮಟ್ಟದಲ್ಲಿ ದೇಣಿಗೆ ನೀಡಿದ್ದಾರೆಂಬ ಮಾಹಿತಿಯಿದೆ. ಆ ಕಾರಣಕ್ಕಾಗಿಯೇ ಕಮಲಾ ಹ್ಯಾರಿಸ್‌ರಿಗೆ ಡಿಕೆಶಿಯವರ ಮೇಲೆ ಅಪಾರ ಗೌರವ ಇದೆ ಎನ್ನಲಾಗಿದೆ. ಈ ಫೌಂಡೇಶನ್ ಮೂಲಕವೇ ಕಮಲಾ ಮತ್ತು ಡಿಕೆ ನಡುವೆ ಪರಿಚಯ ಎಂತಲೂ ಹೇಳಲಾಗಿದೆ. ಹಾಗಾಗಿ. ಕರ್ನಾಟಕದಿಂದ ಯಾವ ರಾಜಕೀಯ ನಾಯಕನಿಗೆ ಆಹ್ವಾನ ಕೊಡಬೇಕು ಅಂತಾ ಬಂದಾಗ. ಕಮಲಾರ ಮೊದಲ ಆಯ್ಕೆ ಡಿಕೆಶಿಯವರೇ ಆಗಿದ್ದಾರೆ ಎಂಬ ಮಾಹಿತಿಯಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ದೇಶದಲ್ಲೊಂದು ರಾಜಕೀಯ ಚರ್ಚೆ ಶುರುವಾಗಿದೆ. ಅದೇನಂದ್ರೆ, ಕಾಂಗ್ರೆಸ್ ಪಕ್ಷ, ಐಎನ್‌ಡಿಐಎ ಮೈತ್ರಿಕೂಟದ ನಾಯಕರು ಕಮಲಾ ಹ್ಯಾರಿಸ್‌ಗೆ ಬೆಂಬಲ ನೀಡುವ ನಿರ್ಧಾರ ಮಾಡಿದ್ದಾರೆ ಅನ್ನೋದು. ಯಾಕಂದ್ರೆ, ಸೆಪ್ಟೆಂಬರ್ 10 ರಂದು ಅಮೆರಿಕದ ಉತ್ತರ ಕ್ಯಾರೋಲಿನಾದಲ್ಲಿ ನಡೆಯುತ್ತಿರೋ ಕಮಲಾ ಹ್ಯಾರಿಸ್‌ರ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಭಾಗಿಯಾಗುತ್ತಿರೋ ಭಾರತೀಯರಲ್ಲಿ, ಬಹುತೇಕರು ಇಂಡಿಯ ಮೈತ್ರಿಕೂಟದ ನಾಯಕರು ಎಂಬ ಮಾಹಿತಿಯಿದೆ. ಹಾಗಾದ್ರೆ, ಬಿಜೆಪಿ ಟ್ರಂಪ್‌ಗೆ ಸಪೋರ್ಟ್ ಮಾಡುತ್ತಾ? ಅಥವಾ ತಟಸ್ಥವಾಗಿ ಉಳಿಯುತ್ತಾ? ಇಲ್ಲವೇ ಕಮಲಾ ಹ್ಯಾರಿಸ್ ಪರವೇ ಬ್ಯಾಟ್ ಬೀಸುತ್ತಾ? ಇದುವೇ ಸದ್ಯದ ಅತಿದೊಡ್ಡ ಕುತೂಹಲ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us