ಭಾರೀ ನಿರೀಕ್ಷೆ ಮೂಡಿಸಿದ್ದ ಕಮಲಾ ಹ್ಯಾರಿಸ್ ಸೋಲು; ಅಸಲಿ ಕಾರಣಗಳೇನು ಗೊತ್ತಾ?

author-image
Gopal Kulkarni
Updated On
ಭಾರೀ ನಿರೀಕ್ಷೆ ಮೂಡಿಸಿದ್ದ ಕಮಲಾ ಹ್ಯಾರಿಸ್ ಸೋಲು;  ಅಸಲಿ ಕಾರಣಗಳೇನು ಗೊತ್ತಾ?
Advertisment
  • ಬಹು ನಿರೀಕ್ಷೆ ಮೂಡಿಸಿದ್ದ ಭಾರತೀಯ ಮೂಲದ ಕಮಲಾ ಸೋತಿದ್ದೇಕೆ?
  • ಯಾವೆಲ್ಲಾ ಪ್ರಮಾದಗಳು ಕಮಲಾ ಹ್ಯಾರಿಸ್​ರನ್ನು ಸೋಲಿನ ಸುಳಿಗೆ ತಳ್ಳಿದವು?
  • ಸ್ಪಷ್ಟನೆ, ನೇರ ಮಾತುಗಳು ಇಲ್ಲದೇ, ಸರಿಯಾದ ಗುರಿಯೂ ಇಲ್ಲದೇ ಸೋತರಾ?

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಅಖಾಡದಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಜೋ ಬೈಡನ್ ಏಕಾಏಕಿ ಹಿಂದೆ ಸರಿದ ಬಳಿಕ, ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಮುನ್ನೆಲೆಗೆ ಬಂದಿದ್ದು ಕಮಲಾ ಹ್ಯಾರಿಸ್. ಕಮಲಾ ಹ್ಯಾರಿಸ್​ ಹೆಸರು ಘೋಷಣೆಯಾದ ಬಳಿಕ ಹೆಚ್ಚು ಕಡಿಮೆ ಅವರೇ ಅಮೆರಿಕಾದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಹೊರಹೊಮ್ಮಲಿದ್ದಾರೆ, ಟ್ರಂಪ್​ರನ್ನು ಸಮರ್ಥವಾಗಿ ಎದುರಿಸಲಿದ್ದಾರೆ. ಈ ಸಮುದಾಯದ, ಈ ದೊಡ್ಡ ದೊಡ್ಡ ರಾಜ್ಯಗಳ ಮತದಾರರು ಅವರ ಹಿಂದೆ ಇದ್ದಾರೆ ಎಂಬ ವಾದಗಳೇ ತೇಲಿ ಬಂದಿದ್ದವು. ಆದ್ರೆ ಮಹಾ ಮಹಾ ರಾಜಕೀಯ ಪಂಡಿತರ ಲೆಕ್ಕಾಚಾರಗಳೇ ಹುಸಿಯಾಗಿವೆ. ಹ್ಯಾರಿಸ್ ಹೀನಾಯ ಸೋಲು ಕಂಡು ಟ್ರಂಪ್​ 2.O ಸರ್ಕಾರಕ್ಕೆ ಕ್ಷಣಗಣನೆಗಳು ಶುರುವಾಗಿವೆ. ಹಾಗಿದ್ರೆ ವಿಪರೀತ ನಿರೀಕ್ಷೆ ಮೂಡಿಸಿದ್ದ ಕಮಲಾ ಹ್ಯಾರಿಸ್ ಸೋಲಿಗೆ ಕಾರಣಗಳೇನು? ಅಸಲಿಗೆ ಅವರು ಎಡವಿದ್ದು ಎಲ್ಲಿ? ಡೆಮಾಕ್ರಟಿಕ್ ಪಕ್ಷ ಎಲ್ಲಿ ಹಾದಿ ತಪ್ಪಿತು ಎಂಬುದನ್ನು ನೋಡುವುದಾದ್ರೆ.

ಅಮೆರಿಕಾದಲ್ಲಿ ಬದಲಾವಣೆ ವಿಷಯವನ್ನೇ ಹ್ಯಾರಿಸ್ ಮಾತನಾಡಲಿಲ್ಲ
ಕಮಲಾ ಹ್ಯಾರಿಸ್ ತಮ್ಮ ಸೋಲಿಗೆ ಮೊಟ್ಟ ಮೊದಲ ಮೆಟ್ಟಿಲು ಸೃಷ್ಟಿಯಾಗಿದ್ದೇ ಇಲ್ಲಿ. ಸದ್ಯ ಅಮೆರಿಕಾ ಹೇಗಿದೆಯೋ ಅದನ್ನು ಹೇಗೆಲ್ಲಾ ಬದಲಾವಣೆ ಮಾಡಬೇಕೋ ಎಂಬುದನ್ನು ಸ್ಪಷ್ಟವಾಗಿ ಅವರಿಗೆ ಹೇಳಲು ಸಾಧ್ಯವಾಗಲಿಲ್ಲ. ಏನಾದರೂ ಕೊರತೆ ಇದೆ ಎಂಬುದನ್ನು ಎತ್ತಿ ತೋರಿಸಲು ಹೋದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಅವರೇ ಉಪಾಧ್ಯಕ್ಷೆಯಾಗಿದ್ದರು. ಆದರೂ ಕೂಡ ಸುಧಾರಣೆ ಮಾಡಲು ಏಕೆ ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗಳು ತೇಲಿ ಬರುತ್ತಿದ್ದವು. ಉದಾಹರಣೆಗೆ ಯಾವುದೇ ಕ್ಷೇತ್ರದಲ್ಲಿ ಸುಧಾರಣೆ ಮಾಡಬೇಕಾದರೆ, ಸುಧಾರಣೆ ಆಗಿಲ್ಲ ಎಂಬುದನ್ನು ಹೇಳಬೇಕಾಗುತ್ತದೆ. ಹಾಗೊಂದು ವೇಳೆ ಹೇಳಿದ್ದೇ ಆದಲ್ಲಿ ಜನರು ನೀವು ನಾಲ್ಕು ವರ್ಷದಿಂದ ಏನು ಮಾಡುತ್ತಿದ್ದೀರೆ ಎಂದೇ ಪ್ರಶ್ನೆ ಮಾಡುತ್ತಿದ್ದರು. ಅಮೆರಿಕಾದ ಆರ್ಥಿಕ ವ್ಯವಸ್ಥೆಯೇ ಆಗಲಿ, ವಿದೇಶಾಂಗ ನೀತಿಯೇ ಆಗಲಿ ಹ್ಯಾರಿಸ್ ಕೇವಲ ಜೆನರಿಕ್ ಆಗಿ ಮಾತನಾಡಿದರೆ ಹೊರತು, ನಿರ್ಧಿಷ್ಟವಾಗಿ ಮಾತನಾಡಲಿಲ್ಲ .
ಆದ್ರೆ ಈ ವಿಚಾರದಲ್ಲಿ ಟ್ರಂಪ್ ಸ್ಪಷ್ಟವಾಗಿದ್ದರು, ಅಮೆರಿಕಾ ಫಸ್ಟ್ ಅಗೇನ್ ಎಂಬ ನೀತಿಯನ್ನು ಪದೇ ಪದೇ ಹೇಳಿದರು. ಅದಕ್ಕೆ ಕಾರಣಗಳನ್ನು ಕೂಡ ನೀಡಿದರು. ಹಣದುಬ್ಬರ ದೇಶದಲ್ಲಿ ಜಾಸ್ತಿ ಆಗಿ ಹೋಗಿದೆ. ಅದನ್ನು ನಿಯಂತ್ರಣಕ್ಕೆ ತರುತ್ತೇನೆ. ಆಚೆಯವರು ನಮ್ಮ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತಿರುವುದರ ಬಗ್ಗೆ ಟ್ರಂಪ್ ನಿರ್ಧಿಷ್ಟವಾಗಿ ಮಾತನಾಡಿದರು. ಅಕ್ರಮ ವಲಸೆಗರಾರನ್ನು ತಡೆಯುವ ವಿಚಾರ, ಹೀಗೆ ಎಲ್ಲ ವಿಚಾರಗಳ ಬಗ್ಗೆ ನೇರಾನೇರ ಮಾತನಾಡುತ್ತಿದ್ದರು. ಇದು ಟ್ರಂಪ್​ಗೆ ಪ್ಲಸ್​ ಆಗಿ ಹೋಯ್ತು.

publive-image

ವಿದೇಶಾಂಗ ನೀತಿಯ ಬಗ್ಗೆಯೂ ಹ್ಯಾರಿಸ್​ಗೆ ಸ್ಪಷ್ಟತೆ ಇರಲಿಲ್ಲ!
ಇನ್ನು ವಿದೇಶಾಂಗ ನೀತಿ ಎಂಬುದು ಬಂದಾಗ ಅಮೆರಿಕಾ ಎಂಬ ರಾಷ್ಟ್ರದತ್ತ ಎಲ್ಲರೂ ನೋಡುತ್ತಾರೆ. ಜಾಗತಿಕ ಸಂಘರ್ಷಗಳಿಗೆಲ್ಲಾ ಪರಿಹಾರಕ್ಕಾಗಿ ಅಮೆರಿಕಾದತ್ತಲೇ ಜಗತ್ತು ನೋಡುತ್ತದೆ. ಗಾಜಾ ಹಾಗೂ ಇಸ್ರೇಲ್ ವಿಷಯದಲ್ಲಿ ಹ್ಯಾರಿಸ್​ಗೆ ಸ್ಪಷ್ಟನೆ ಇರಲಿಲ್ಲ. ವಾರ್ ಕೊನೆಗೊಳಿಸುತ್ತೇನೆ ಎಂದು ಹೇಳುತ್ತಲೇ ಮತ್ತೊಂದು ಕಡೆ ಇಸ್ರೇಲ್​ನ್ನು ರಕ್ಷಿಸುತ್ತೇನೆ ಎಂದು ಕೂಡ ಹೇಳುತ್ತಿದ್ದರು. ನಾನು ಯಾವ ಕಡೆ ಇದ್ದೇನೆ ಎಂಬ ಬಗ್ಗೆ ಅವರಿಗೆ ಸ್ಪಷ್ಟತೆ ಇರಲಿಲ್ಲ. ನೇರವಾದ ಒಂದು ಸಂದೇಶವನ್ನು ಹ್ಯಾರಿಸ್​ರಿಂದ ಅಮೆರಿಕನ್ ಜನರು ಪಡೆಯಲೇ ಇಲ್ಲ

ಗರ್ಭಪಾತ ತಡೆಗಟ್ಟುವಿಕೆಯಲ್ಲೂ ನೇರ ಸಂದೇಶ ಬರಲಿಲ್ಲ
ಯುಎಸ್​ನಲ್ಲಿ ಹೆಣ್ಣು ಮಕ್ಕಳ ಅಬಾರ್ಷನ್​ಗಳು ವಿಪರೀತಕ್ಕೆ ಹೋಗುತ್ತಿವೆ. ನಾಲ್ವರಲ್ಲಿ ಒಬ್ಬಳು ಗರ್ಭಿಣಿ ಅಬಾರ್ಷನ್ ಮೊರೆ ಹೋಗುತ್ತಿದ್ದಾಳೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿಯೂ ಕೂಡ ಕಮಲಾ ಹ್ಯಾರಿಸ್ ಯಾವುದೇ ಸ್ಪಷ್ಟವಾದ ನಿಲುವಿಗೆ ಬರಲಿಲ್ಲ .ಕೇವಲ ಘೋಷಣೆಗಳಿಗೆ ಸರಿಹೋಗುವ ವಿಷಯವನ್ನೇ ಮಾತನಾಡಿದರು. ಕಾಂಗ್ರೆಸ್ ಕಾನೂನು ಪಾಸ್ ಮಾಡಿದ್ರೆ ನಾನು ಸಹಿ ಹಾಕುತ್ತೇನೆ ಎಂದರೆ ಹೊರತು. ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಚಕಾರವನ್ನು ಕೂಡ ಎತ್ತಲಿಲ್ಲ. ಇಡೀ ಸಮಸ್ಯೆಯನ್ನು ಕಾಂಗ್ರೆಸ್​ ಮೇಲೆಯೇ ಹಾಕಿಬಿಟ್ಟರು.

publive-image

ಭಾರತೀಯರ ಮತದಾರರ ಭಾವನೆಗೆ ಬೆಲೆ ಕೊಡಲಿಲ್ಲ
ಅಮೆರಿಕಾದಲ್ಲಿ ಬಿಡಿ ಭಾರತದಲ್ಲಿಯೇ ಕಮಲಾ ಹ್ಯಾರಿಸ್​ರನ್ನು ನಮ್ಮ ಊರಿನ ಮಗಳು ಎಂದೇ ಗೌರವಿಸುತ್ತಾರೆ. ಆದ್ರೆ ಕಮಲಾ ಹ್ಯಾರಿಸ್ ಎಲ್ಲಿಯೂ ಕೂಡ ತಾನು ಭಾರತೀಯ ಮೂಲದವಳು, ಅದರ ಬಗ್ಗೆ ಹೆಮ್ಮೆಯಿದೆ ಎಂದು ಹೇಳಲೇ ಇಲ್ಲ. ಕೇವಲ ನಾನು ಕಪ್ಪು ಜನಾಂಗಕ್ಕೆ ಸೇರಿದಳು, ನಾನು ಕಪ್ಪು ವರ್ಣಿಯ ಎಂದು ಹೇಳಿದರೆ ಹೊರತು, ಭಾರತೀಯ ಅಮೆರಿಕನ್ನರು ಹ್ಯಾರಿಸ್​ ಮೇಲೆ ಇಟ್ಟುಕೊಂಡಿದ್ದ ಪ್ರೀತಿಗೆ ಸರಿಯಾದ ಸ್ಪಂದಿಸದೇ ಹೋದರು. ಭಾರತದ ಬಗ್ಗೆ ಹಾಗೂ ಹಿಂದೂ ಧರ್ಮದ ಬಗ್ಗೆ ನನಗೆ ಯಾವುದೇ ಪ್ರೀತಿಯಿಲ್ಲ ಎಂಬ ರೀತಿಯಲ್ಲಿಯೇ ನಡೆದುಕೊಂಡರು.ತಮ್ಮ ಭಾರತೀಯ ಬೇರುಗಳ ಬಗ್ಗೆ ಹೇಳಿಕೊಳ್ಳಲೇ ಇಲ್ಲ. ಇಂಡಿಯನ್ ಕಮ್ಯೂನಿಟಿಗಿಂತ ಬ್ಲ್ಯಾಕ್ ಕಮ್ಯುನಿಟಿ ನನ್ನ ಬೆಂಬಲಕ್ಕೆ ನಿಲ್ಲುತ್ತದೆ ಎಂಬ ಭರವಸೆ ಆಕೆಗೆ ಇತ್ತು. ಭಾರತೀಯ ಕಮ್ಯುನಿಟಿ ಮತದಾರರು ಕೇವಲ 1 ಪರ್ಸೆಂಟ್ ಇದ್ದರೂ ಕೂಡ ಅವರು 5 ರಿಂದ 6 ಪರ್ಸೆಂಟ್ ಟ್ಯಾಕ್ಸ್ ಕಟ್ಟುತ್ತಾರೆ ಇದೆಲ್ಲವನ್ನೂ ಕಮಲಾ ಮರೆತರು. 7 ರಿಂದ 8 ರಾಜ್ಯಗಳಲ್ಲಿ ಭಾರತೀಯ ಮೂಲದವರ ಮತಗಳು ತುಂಬಾ ಪ್ರಭಾವ ಬೀರುತ್ತವೆ. ಇದನ್ನು ಅವರು ಗಮನಿಸಲಿಲ್ಲ.

publive-image

ಇದನ್ನೂ ಓದಿ: US ELECTION 2024: ಇಂಡಿಯನ್ ಅಮೆರಿಕನ್ ವೋಟು ಪಡೆಯುವಲ್ಲಿ ಕಮಲಾ ಹ್ಯಾರಿಸ್ ಎಡವಿದ್ದು ಎಲ್ಲಿ?

ಆದ್ರೆ ಟ್ರಂಪ್ ಈ ವಿಚಾರದಲ್ಲಿ ತುಂಬಾ ಸ್ಪಷ್ಟವಾಗಿ ಮಾತನಾಡಿದರು. ಹಿಂದೂಗಳಿಗೆ ಎಡಪಂಥೀಯರಿಂದ ತೊಂದರೆಗಳಾಗುತ್ತಿವೆ ಅವರನ್ನು ನಾನು ರಕ್ಷಿಸುತ್ತೇನೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದಬ್ಬಾಳಿಕೆಯನ್ನು ಕೊನೆಗೊಳಿಸುತ್ತೇನೆ ಎಂದೆಲ್ಲಾ ಹೇಳಿದರು. ಆದ್ರೆ ಹಿಂದೂ ಮನೆಯ ಮಗಳಾಗಿದ್ದ ಕಮಲಾ ಹ್ಯಾರಿಸ್ ಬಾಯಿಯಲ್ಲಿಯೇ ಇಂತಹ ಒಂದೇ ಒಂದು ಮಾತು ಬರಲಿಲ್ಲ. ತನ್ನ ಮೂಲವನ್ನೇ ಗೌರವಿಸಿದ ಮಹಿಳೆ ಅಮೆರಿಕವನ್ನು ಹಾಗೂ ಅದರ ಅಸ್ಮಿತೆಯನ್ನು ಹೇಗೆ ಗೌರವಿಸುತ್ತಾರೆ ಎಂಬ ಸಂಶಯ ಯುಎಸ್​ ಮತದಾರರಲ್ಲಿ ಮೂಡಿತ್ತು.

ಇದನ್ನೂ ಓದಿ: ಅಮೆರಿಕಾ ಅಧ್ಯಕ್ಷೀಯ ಚುನಾವಣೆ; ಡೊನಾಲ್ಡ್​ ಟ್ರಂಪ್​ಗೆ ಭರ್ಜರಿ ಗೆಲುವು

ಇದು ಮಾತ್ರವಲ್ಲ ಕಮಲಾ ಹ್ಯಾರಿಸ್ ಯುಎಸ್​ನ ವೈಸ್ ಪ್ರಸಿಡೆಂಟ್ ಆಗಿದ್ದು ತಮ್ಮ ಸ್ವಂತ ಬಲದಿಂದ ಅಲ್ಲ. ಆರಂಭದಲ್ಲಿ ಹವಾಯಿ ಸೆನೆಟರ್ ಆಗಿದ್ದ ತುಳಸಿ ಗಬ್ಬಾರ್ ವಾಯ್ಸ್ ಪ್ರೆಸಿಡೆಂಟ್ ಆಗಿ ಆಯ್ಕೆ ಆಗಬೇಕಿತ್ತು ತುಳಸಿಯನ್ನು ಹಿಂದಕ್ಕೆ ತಳ್ಳಿ ಕಮಲಾ ತಾವು ಈ ಜಾಗಕ್ಕೆ ಬಂದು ಕುಳಿತವರು. ಒಂದು ವೇಳೆ ತುಳಸಿಯೇ ಉಪಾಧ್ಯಕ್ಷೆಯ ಸ್ಥಾನಕ್ಕೆ ಆಯ್ಕೆಯಾಗಿ ಈಗ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದರೆ ಖಂಡಿತಾ ಡೆಮಾಕ್ರಟಿಕ್ ಪಕ್ಷಕ್ಕೆ 270 ಸ್ಥಾನವನ್ನು ಸರಳವಾಗಿ ಗಳಿಸುವ ಶಕ್ತಿ ಬರುತ್ತಿತ್ತು.
ಟ್ರಂಪ್ ಹ್ಯಾರಿಸ್ ಮಾಡುತ್ತಿರುವ ತಪ್ಪುಗಳನ್ನೆಲ್ಲಾ ಗಮನಿಸುತ್ತಾ ಅವುಗಳನ್ನು ತಾವು ಮಾಡದಂತೆ ಜಾಣತನವಹಿಸಿದರು. ನೇರಾನೇರ ಮಾತುಗಳನ್ನಾಡಿದರು. ಕೇವಲ ಪೊಲಿಟಕಲ್ ಕರೆಕ್ಟ್ ಎನ್ನುವಂತ ಮಾತುಗಳು ಅವರ ಬಾಯಿಂದ ಬರಲಿಲ್ಲ. ಹೀಗಾಗಿ ಟ್ರಂಪ್​ ತಮ್ಮ ಗೆಲುವನ್ನು ನಿಶ್ಚಯಗೊಳಿಸಿಕೊಂಡ್ರು. ಹ್ಯಾರಿಸ್ ಅನೇಕ ಕಡೆ ಜನರ ಮತ ಸೆಳೆಯುವಲ್ಲಿ ವಿಫಲಗೊಂಡರು. ಅಪ್ರಾಮಾಣಿಕರು ಎಂಬ ಸಂಶಯಬರುವಂತೆ ನಡೆದುಕೊಂಡರು. ಪ್ರಮುಖವಾಗಿ ಬೈಡನ್ ಜಾಗವನ್ನು ನಾನು ನಿಶ್ಚಿತವಾಗಿ ತುಂಬಬಲ್ಲೆ ಎಂಬ ಸಂದೇಶವನ್ನು ಕೂಡ ರವಾನಿಸುವಲ್ಲಿ ಅವರು ಸೋತು ಹೋದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment