BBK12: ‘ಬಿಗ್​ಬಾಸ್​​ ನಿರೂಪಣೆಗೆ ಮತ್ತೆ ಯಾಕೆ ಒಪ್ಪಿಕೊಂಡೆ ಅಂದರೆ..’ ವೀಕ್ಷಕರಿಗೆ ಸ್ಪಷ್ಟನೆ ಕೊಟ್ಟ ಸುದೀಪ್

author-image
Veena Gangani
Updated On
BBK12: ‘ಬಿಗ್​ಬಾಸ್​​ ನಿರೂಪಣೆಗೆ ಮತ್ತೆ ಯಾಕೆ ಒಪ್ಪಿಕೊಂಡೆ ಅಂದರೆ..’ ವೀಕ್ಷಕರಿಗೆ ಸ್ಪಷ್ಟನೆ ಕೊಟ್ಟ ಸುದೀಪ್
Advertisment
  • ಬಿಗ್​ಬಾಸ್​ ಟೀಮ್​ ಬಗ್ಗೆ ಕಿಚ್ಚ ಸುದೀಪ್​ ಏನಂದ್ರು..?
  • ಕಿಚ್ಚ ಸುದೀಪ್ ಮತ್ತೆ ಬಿಗ್​ಬಾಸ್​ಗೆ ಬರೋದಕ್ಕೆ ಕಾರಣ?
  • ಜನರ ಪ್ರೀತಿ, ಸ್ನೇಹಿತರ ಮಾತು, ತಂಡದ ಶ್ರಮ ವರ್ಕ್​ ಆಯ್ತು

ಕೊನೆಗೂ ಬಿಗ್​ಬಾಸ್​ ವೀಕ್ಷಕರಿಗೆ ಖುಷಿ ಸುದ್ದಿ ಕೊಟ್ಟಿದೆ ತಂಡ. ಈ ಬಾರಿಯ ಬಿಗ್​ಬಾಸ್​ ಸೀಸನ್ 12 ನಿರೂಪಣೆ ಸಾರಥ್ಯವನ್ನು ಕಿಚ್ಚ ಸುದೀಪ್​ ಅವರೇ ವಹಿಸಿಕೊಳ್ಳುತ್ತಿದ್ದಾರೆ. ಇದು ಕಿಚ್ಚ ಸುದೀಪ್​ ಅವರ ಅಭಿಮಾನಿಗಳಿಗೆ, ಬಿಗ್​ಬಾಸ್​ ವೀಕ್ಷಕರಿಗೆ ಖುಷಿ ಕೊಟ್ಟಿದೆ.

ಇದನ್ನೂ ಓದಿ:ಅಭಿಮಾನಿಗಳಿಗೆ ಭರ್ಜರಿ ಗುಡ್​ನ್ಯೂಸ್​.. ಕಿಚ್ಚ ಸುದೀಪ್ ಅವರಿಂದಲೇ ಬಿಗ್​ಬಾಸ್​ ಸೀಸನ್​ 12 ಹೋಸ್ಟ್..!

publive-image

ಹೌದು, ಕನ್ನಡ ರಿಯಾಲಿಟಿ ಶೋ ಬಿಗ್‌ಬಾಸ್ 12 ಸೀಸನ್ ಆರಂಭಕ್ಕೆ ಸಜ್ಜಾಗಿದ್ದು, ಇನ್ನು, ಬಿಗ್​ಬಾಸ್​ ಹೊಸ ಸೀಸನ್ ಆರಂಭಕ್ಕೆ 3-4 ತಿಂಗಳು ಬಾಕಿ ಇದೆ. ಹೀಗಿರೋವಾಗ ಬಿಗ್​ಬಾಸ್ ತಂಡ ಇಂದು ಆಯೋಜನೆ ಮಾಡಿದ ಪ್ರೆಸ್‌ ಮೀಟ್​ನಲ್ಲಿ ಮುಂದಿನ ಸೀಸನ್​ ಅನ್ನು ಕಿಚ್ಚ ಸುದೀಪ್ ಅವರೇ ನಿರೂಪಕರಾಗಿ ಮುಂದುವರೆಯಲಿದ್ದಾರೆ ಎಂದು ಅನೌನ್ಸ್​ ಮಾಡಿದೆ.

publive-image

ಕಳೆದ 11ನೇ ಸೀಸನ್ ನಡೆಯುತ್ತಿರುವಾಗಲೇ ಕಿಚ್ಚ ಸುದೀಪ್ ಇದು ನಾನು ನಡೆಸಿಕೊಡುವ ಕೊನೆಯ ಸೀಸನ್ ಅಂತಾ ಅನೌನ್ಸ್ ಮಾಡಿದ್ದರು. ಕಿಚ್ಚನ ಈ ಮಾತು ಬಿಗ್‌ಬಾಸ್ ವೀಕ್ಷಕರಿಗೆ ಶಾಕ್ ನೀಡಿತ್ತು. ಇದೀಗ ಬಿಗ್‌ಬಾಸ್ ಸೀಸನ್ 12 ಶುರುವಾಗೋದಕ್ಕೆ ಇನ್ನು 3-4 ತಿಂಗಳು ಬಾಕಿ ಇದೆ. ಹೀಗಿರೋವಾಗ ಕಿಚ್ಚ ಸುದೀಪ್ ಅವರ ಮನಸ್ಸನ್ನ ಆ ವಾಹಿನಿ ಒಲಿಸುವುದಕ್ಕೆ ಪ್ರಯತ್ನ ಕೊನೆಗೂ ಅಭಿಮಾನಿಗಳಿಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ.

publive-image

ಇನ್ನೂ, ಇಂದು ನಡೆಯುತ್ತಿರೋ ಸುದ್ದಿಗೋಷ್ಠಿಯಲ್ಲಿ ಮತ್ತೆ ಬಿಗ್​ಬಾಸ್​ ನಿರೂಪಣೆ ವಹಿಸೋದಕ್ಕೆ ಕಾರಣ ಏನು ಅಂತ ಬಹಿರಂಗ ಪಡಿಸಿದ್ದಾರೆ. ಈ ವೇಳೆ ಮಾತಾಡಿದ ಅವರು, ಬಿಗ್​ಬಾಸ್​ ಶುರುವಾಗುತ್ತೆ ಅಂದ್ರೆ ಅಷ್ಟೊಂದು ಜನ ನೋಡ್ತಾರೆ ಅಂದ್ರೆ ಅದಕ್ಕೆ ಅಷ್ಟು ಇಂಪಾರ್ಟೆನ್ಸ್ ಇದೆ. ಹಾಗೇ ನೋಡಿದ್ರೆ ಜನರು ನನ್ನ ಮೇಲೆ ಇಟ್ಟಿರೋ ಪ್ರೀತಿ, ಗೌರವ ಕಾಣಿಸಿದೆ. ನಾನು ವಾಪಸ್​ ಬರೋದಕ್ಕೆ ಮುಖ್ಯ ಕಾರಣ ಪ್ರತಿಯೊಬ್ಬರು ನನಗೆ ಕರೆದ ರೀತಿ ಇರಬಹುದು. ಅವರು ನನ್ನ ಮೇಲೆ ಇಟ್ಟಿರೋ ಪ್ರೀತಿ ಇರಬಹುದು. ಜನ ಅಭಿಪ್ರಾಯ, ನನ್ನ ಸ್ನೇಹಿತರು ಈ ಬಗ್ಗೆ ಹೇಳಿದ್ದು, ಬಿಗ್​ಬಾಸ್​ ಟೀಮ್ ಪದೇ ಪದೇ ಬಂತು ಮನವೊಲಿಸಿದ್ದಕ್ಕೆ ನಾನು ಇದ್ದೇನೆ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment