Advertisment

ಕೆಕೆಆರ್​ಗೆ ಹೋಗ್ತಾರಾ KL ರಾಹುಲ್​..? ಫ್ರಾಂಚೈಸಿಗೆ ಕನ್ನಡಿಗನ ಮೇಲೆ ಒಲವು ಯಾಕೆ..?

author-image
Ganesh
ಸೂಪರ್ ಓವರ್​ನಲ್ಲಿ ಪಂದ್ಯ ಗೆಲ್ಲಿಸಿಕೊಟ್ಟ ಕನ್ನಡಿಗ ಕೆಎಲ್ ರಾಹುಲ್..!
Advertisment
  • ಕನ್ನಡಿಗ ಕೆ.ಎಲ್.ರಾಹುಲ್ ಮೇಲೆ ಕೊಲ್ಕತ್ತಾ ಕಣ್ಣು
  • ಕೆ.ಎಲ್.ರಾಹುಲ್ ಟಾರ್ಗೆಟ್​ ಹಿಂದಿದೆ ಮೇನ್ ರೀಸನ್
  • ಈ ಐವರಲ್ಲಿ ಯಾರಿಗೆ ಹಾಕುತ್ತೆ ಕೊಲ್ಕತ್ತಾ ಗಾಳ..?

ಸೀಸನ್​​-18ರಲ್ಲಿ ನಿರೀಕ್ಷೆ ತಕ್ಕ ಪ್ರದರ್ಶನ ನೀಡದ ಕೊಲ್ಕತ್ತಾ ನೈಟ್​ ರೈಡರ್ಸ್​, ಮುಂದಿನ ಸೀಸನ್​​​ಗೆ ಬಲಿಷ್ಠ ತಂಡ ಕಟ್ಟುವತ್ತ ದೃಷ್ಟಿ ಹರಿಸಿದೆ. ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿರುವ ಕೊಲ್ಕತ್ತಾ ನೈಟ್ ರೈಡರ್ಸ್​, ಬಿಗ್ ವಿಕೆಟ್ ಕೀಪರ್ ಆ್ಯಂಡ್ ಬ್ಯಾಟ್ಸ್​ಮನ್​​​ ಮೇಲೆ ಕಣ್ಣಿಟ್ಟಿದೆ.

Advertisment

ಕೆ.ಎಲ್.ರಾಹುಲ್ ಮೇಲೆ ಕೊಲ್ಕತ್ತಾ ಕಣ್ಣು

ಐವರು ಇಂಡಿಯನ್ ವಿಕೆಟ್ ಕೀಪರ್​ಗಳ ಪೈಕಿ ಕೊಲ್ಕತ್ತಾದ ಮೇನ್ ಟಾರ್ಗೆಟ್. ಕನ್ನಡಿಗ ಕೆ.ಎಲ್.ರಾಹುಲ್. ವಿಕೆಟ್ ಹಿಂದೆ ಗ್ಲೌಸ್ ತೊಟ್ಟು ಕೀಪಿಂಗ್​​ ಮಾಡುವ ಕೆ.ಎಲ್.ರಾಹುಲ್, ವಿಕೆಟ್ ಮುಂದೆ ನಿಂತು ಮ್ಯಾಚ್ ವಿನ್ನಿಂಗ್ ನಾಕ್ಸ್ ಆಡ್ತಾರೆ. ಎಲ್ಲಾ ಕಂಡೀಷನ್ಸ್​ಗೂ ಸಲ್ಲುವ ಕನ್ನಡಿಗ ಟಾಪ್ ಆರ್ಡರ್​ ಟು ಲೋವರ್ ಆರ್ಡರ್​ ತನಕ ಬ್ಯಾಟ್ ಬೀಸಬಲ್ಲ ತಾಕತ್ತಿದೆ. ಇದಿಷ್ಟೇ ಅಲ್ಲ, ಕೆ.ಎಲ್.ರಾಹುಲ್​ ಮೇಲಿನ ಒಲವಿಗೆ ಕಾರಣ ಕ್ಯಾಪ್ಟನ್ ಅಜಿಂಕ್ಯಾ ರಹಾನೆಯೂ ಆಗಿದ್ದಾರೆ ಅನ್ನೋದ್ರಲ್ಲಿ ಡೌಟೇ ಇಲ್ಲ.

ಕೆ.ಎಲ್.ರಾಹುಲ್ ಮೇಲೆ ಒಲವು ಯಾಕೆ..?

ಸದ್ಯ ಐಪಿಎಲ್​ನ ಅನುಭವಿ ಕ್ಯಾಪ್ಟನ್ ಅಂದ್ರೆ ಅದು ಅಜಿಂಕ್ಯಾ ರಹಾನೆ. ಅಜಿಂಕ್ಯಾ ರಹಾನೆಯ ನಾಯಕತ್ವದ ಬಗ್ಗೆ ಮ್ಯಾನೇಜ್​​ಮೆಂಟ್ ಬೇಸರಗೊಂಡಿದೆ. ಟಿ20 ಫಾರ್ಮೆಟ್​​ಗೆ ಸೂಕ್ತವಲ್ಲ ಎಂಬ ನಿರ್ಣಯಕ್ಕೆ ಬಂದಿರುವ ಮ್ಯಾನೇಜ್​ಮೆಂಟ್​​ಗೆ ತಂಡದಲ್ಲಿ ಪರ್ಯಾಯ ನಾಯಕ ಮಾತ್ರವಲ್ಲ. ಲಾಂಗ್ ಟರ್ನ್ ಕ್ಯಾಪ್ಟನ್ ಕ್ವಾಲಿಟಿಯ ಆಟಗಾರನಿಲ್ಲ. ಹೀಗಾಗಿ ನಾಯಕತ್ವದ ಅನುಭವ ಹೊಂದಿರುವ ರಾಹುಲ್​​​ನ ಟ್ರೇಡ್ ಮಾಡಿದ್ರೆ, ತಂಡವನ್ನು ಯಶಸ್ವಿಯಾಗಿ ಮುನ್ನಡೆಸ್ತಾರೆ ಎಂಬ ನಂಬಿಕೆ ಇದೆ. ಈ ಕಾರಣಕ್ಕೆ ಕೆಕೆಆರ್​ ಕನ್ನಡಿಗನ ಮೇಲೆ ವಿಶೇಷ ಆಸಕ್ತಿ ಹೊಂದಿದೆ.

ಇದನ್ನೂ ಓದಿ: ಹೈಕೋರ್ಟ್ ಸೂಕ್ತ ವಿವೇಚನೆ ಬಳಸಿ ದರ್ಶನ್​​ಗೆ ಜಾಮೀನು ನೀಡಿಲ್ಲ -ಸುಪ್ರೀಂ ಕೋರ್ಟ್​ ಅತೃಪ್ತಿ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment