/newsfirstlive-kannada/media/post_attachments/wp-content/uploads/2025/01/Maha-Kumba-Mela-5.jpg)
ಉತ್ತರಪ್ರದೇಶದ ಪ್ರಯಾಗರಾಜ್ ಮಹಾಕುಂಭ ಮೇಳದ ವೈಭವದಲ್ಲಿ ಮುಳುಗಿದೆ. ಕೋಟ್ಯಾಂತರ ಭಕ್ತರು ಪುಣ್ಯ ಸ್ನಾನ ಮಾಡುವಲ್ಲಿ ನಿರತರಾಗಿದ್ದರೆ, ಭಂ ಭಂ ಬೋಲೇನಾಥ್ ಜಯಘೋಷ ಮುಗಿಲು ಮುಟ್ಟುತ್ತಿದೆ.
ಪ್ರಯಾಗರಾಜ್, ಹರಿದ್ವಾರ, ನಾಸಿಕ್, ಉಜ್ಜೈನಿ ದೇಶದ 4 ಸ್ಥಳಗಳಲ್ಲಿ ಮಾತ್ರ ಈ ಪವಿತ್ರ ಕುಂಭಮೇಳವನ್ನು ಆಯೋಜಿಸಲಾಗುತ್ತದೆ. ಕುಂಭಮೇಳವನ್ನು ಈ 4 ಸ್ಥಳಗಳಲ್ಲೇ ಮಾಡುವುದಕ್ಕೂ ಒಂದು ವಿಶೇಷವಾದ ಕಾರಣವಿದೆ.
ದೇವತೆಗಳು ಮತ್ತು ರಾಕ್ಷಸರು ಅಮೃತಕ್ಕಾಗಿ ಯುದ್ಧ ನಡೆಸಿದ್ದರು. ಅಮೃತ ಪಡೆಯಲು ದೇವತೆಗಳು, ರಾಕ್ಷಸರ ನಡುವೆ 12 ಆಕಾಶ ದಿನಗಳ ಕಾಲ ಯುದ್ಧ ನಡೆಯಿತು. 12 ಆಕಾಶ ದಿನಗಳು ಅಂದ್ರೆ 12 ಮಾನವ ವರ್ಷಗಳಿಗೆ ಸಮ. ಈ ಹಿನ್ನೆಲೆಯಲ್ಲಿ 12 ವರ್ಷಗಳಿಗೊಮ್ಮೆ ಕುಂಭ ಮೇಳ ನಡೆಸಲಾಗುತ್ತೆ.
ದೇವತೆಗಳು- ರಾಕ್ಷಸರ ನಡುವೆ ಅಮೃತ ಪಡೆಯಲು ಹೋರಾಟ ನಡೆದಾಗ ಅಮೃತ ಭೂಮಿ ಮೇಲೆ 4 ಸ್ಥಳಗಳ ಮೇಲೆ ಬಿದ್ದಿದೆ. ಪ್ರಯಾಗರಾಜ್, ಹರಿದ್ವಾರ, ನಾಸಿಕ್, ಉಜ್ಜೈನಿ ಈ 4 ಸ್ಥಳಗಳಲ್ಲೇ ಅಮೃತ ಬಿದ್ದಿದ್ದರಿಂದ ಈ 4 ಸ್ಥಳಗಳಲ್ಲೂ 12 ವರ್ಷಕ್ಕೊಮ್ಮೆ ಕುಂಭ ಮೇಳ ನಡೆಯುತ್ತದೆ.
ಇದನ್ನೂ ಓದಿ: ಮಹಾಕುಂಭದಲ್ಲಿ ಪಾರಿವಾಳ ಬಾಬಾ.. ಇವರ ತಲೆ ಬಿಟ್ಟು ಎಲ್ಲಿಯೂ ಹೋಗಲ್ಲ ಈ ಹಕ್ಕಿ..!
ಶಾಹಿ ಸ್ನಾನಕ್ಕಿರುವ ಮಹತ್ವವೇನು?
ಅಮೃತ ಬಿದ್ದ ಸ್ಥಳಗಳಲ್ಲೇ ಶಾಹಿ ಸ್ನಾನ ಅಥವಾ ಪುಣ್ಯದ ಸ್ನಾನ ಮಾಡುವುದರಿಂದ ಪಾಪಕೃತ್ಯ ನಿವಾರಣೆ, ಮೋಕ್ಷ ಪ್ರಾಪ್ತಿಯ ನಂಬಿಕೆ ಇದೆ. ಹಿಂದೂಗಳಲ್ಲಿ ಪಾಪಕೃತ್ಯ ನಿವಾರಣೆ, ಮೋಕ್ಷ ಪ್ರಾಪ್ತಿಯ ನಂಬಿಕೆ ಇರುವುದರಿಂದ ಶಾಹಿ ಸ್ನಾನ ಮಾಡಲು ಭಕ್ತರು ಮುಗಿಬೀಳುತ್ತಾರೆ. ಯಾವ್ಯಾವ ದಿನ ಯಾವ್ಯಾವ ಪುಣ್ಯಸ್ನಾನ ಮಾಡಲಾಗುತ್ತೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.
ಗಂಗಾಸ್ನಾನ.. ಪುಣ್ಯಸ್ನಾನ!
ಜನವರಿ 13 – ಪೌಷ ಪೂರ್ಣಿಮಾ ಸ್ನಾನ
ಜನವರಿ 15 – ಮಕರ ಸಂಕ್ರಾಂತಿ ಸ್ನಾನ
ಜನವರಿ 29 – ಮೌನಿ ಅಮವಾಸ್ಯೆ ಸ್ನಾನ
ಫೆಬ್ರವರಿ 3 – ಬಸಂತ್ ಪಂಚಮಿ ಸ್ನಾನ
ಫೆಬ್ರವರಿ 12 – ಮಾಘಿ ಪೂರ್ಣಿಮಾ ಸ್ನಾನ
ಫೆಬ್ರವರಿ 26 – ಮಹಾ ಶಿವರಾತ್ರಿ ಸ್ನಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ