Advertisment

ಕೇರಳ ಭೂಕುಸಿತಕ್ಕೆ 3 ಕಾರಣಗಳು; ಬೆಟ್ಟ, ಗುಡ್ಡ ಕುಸಿಯುವ ಹಿಂದಿನ ಸತ್ಯ ಬಿಚ್ಚಿಟ್ಟ ವಿಜ್ಞಾನಿ..!

author-image
Ganesh
Updated On
ಹನಿಮೂನ್‌ಗೆ ಹೋದ ನವಜೋಡಿಗಳು ನಾಪತ್ತೆ; ಕೇರಳದ  ಭೀಕರತೆ ಬಿಚ್ಚಿಟ್ಟ ಬೆಂಗಳೂರಿನ ಚಾಲಕ- VIDEO

ಕೃಪೆ: ಮನೋರಮಾ

Advertisment
  • ಕೇರಳ ಭೂ-ಕುಸಿತದಲ್ಲಿ 45ಕ್ಕೂ ಹೆಚ್ಚು ಮಂದಿ ಸಾವು
  • ಮಣ್ಣಿಗೂ ಒಂದು ವಿಶೇಷ ಗುಣ ಇದೆ, ಅತಿಯಾದರೆ ಕಷ್ಟ, ಕಷ್ಟ..!
  • ಕೇರಳದ ‘ವಯನಾಡು ವಿಪತ್ತು ವಲಯ’ ಎಂದು ಕರೆಯೋದು ಯಾಕೆ..?

ಶಿರೂರು ಗುಡ್ಡ ಕುಸಿತ ದುರಂತದ ಬೆನ್ನಲ್ಲೇ ನೆರೆಯ ರಾಜ್ಯ ಕೇರಳದಲ್ಲಿ ಘೋರ ದುರಂತವೊಂದು ಸಂಭವಿಸಿದೆ. ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಮೂರು ಗುಡ್ಡ ಕುಸಿತದಿಂದ 45ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ನೂರಾರು ಮಂದಿಯ ಸಾವು ನೋವಿನ ಆತಂಕ ಎದುರಾಗಿದೆ.

Advertisment

ಕೇರಳದ ವಯನಾಡು ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸುವುದು ಇದೇ ಮೊದಲೇನೂ ಅಲ್ಲ. 2020ರಲ್ಲಿ ಪುತ್ತುಮಲದಲ್ಲಿ ಸಂಭವಿಸಿದ ದುರಂತ ಇನ್ನೂ ಕಣ್ಮುಂದೆಯೇ ಇದೆ. ಇದೇ ಕಾರಣಕ್ಕೆ ವಯನಾಡು ಜಿಲ್ಲೆಯನ್ನು ವಿಪತ್ತು ವಲಯ ಎಂದೇ ಗುರುತಿಸಲಾಗಿದೆ. ಇದೀಗ ಮುಂಡಕ್ಕೈ (Mundakkai), ಚೂರಲ್ಮಲಾ (Chooralmala), ಅಟ್ಟಮಾಲಾ ( Attamala) ಮತ್ತು ನೂಲ್ಪುಝಾ (Noolpuzha) ಗ್ರಾಮದಲ್ಲಿ ಭೂಕುಸಿತ ಆಗಿದೆ.

ಇದನ್ನೂ ಓದಿ:ನದಿಯಲ್ಲಿ ತೇಲಿ ಬರ್ತಿವೆ ಶವಗಳು.. 200 ಮನೆಗಳು ಅಪ್ಪಚ್ಚಿ.. ಕೇರಳದ ಮಹಾ ದುರಂತದ ಫೋಟೋಗಳು..!

publive-image

ಹಾಗಿದ್ದರೆ ಕೇರಳ ಭೂಕುಸಿತಕ್ಕೆ ಕಾರಣ ಏನು..?
ಮಳೆ ಮಿತಿ ಮೀರಿದಾಗ ಇಲ್ಲಿ ಭೂಕುಸಿತ ಸಂಭವಿಸೋದು ಸಾಮಾನ್ಯವಾಗಿದೆ. ಮಳೆಗಾಲದಲ್ಲಿ ವಯನಾಡಿನ ಒಂದೆಲ್ಲ ಒಂದು ಪ್ರದೇಶ ಸಂಕಷ್ಟಕ್ಕೆ ಸಿಲುಕುತ್ತಿದೆ. ಹಾಗಾದರೆ ಭೂಕುಸಿತ ಹೇಗೆ ಸಂಭವಿಸುತ್ತದೆ? ಭೂಕುಸಿತಕ್ಕೆ ಜೋರು ಮಳೆ ಮಾತ್ರ ಕಾರಣನಾ? ಎಂಬ ಪ್ರಶ್ನೆ ಇದೆ.

Advertisment

ಸಿಯುಎಸ್​ಟಿ (Cochin University of Science and Technology) ರಡಾರ್ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಎಂ.ಜಿ. ಮನೋಜ್ ಪ್ರಕಾರ.. ಭೂಕುಸಿತಕ್ಕೆ ಹಲವು ಕಾರಣಗಳು ಇವೆ. ಅದರಲ್ಲಿ ಪ್ರಮುಖವಾಗಿ ಮಣ್ಣು ನೀರನ್ನು ಹೀರಿಕೊಳ್ಳುವ ಸೀಮಿತ ಸಾಮರ್ಥ್ಯವನ್ನು ಹೊಂದಿದೆ. ಅದೂ ಕೂಡ ಪ್ರತಿ ಮಣ್ಣಿನ ಗುಣಗಳ ಆಧಾರದ ಮೇಲೆ ನೀರನ್ನು ಹೀರಿಕೊಳ್ಳುವ ಶಕ್ತಿ ಇದೆ. ಅಂದರೆ ನೀರಿಗೆ ಸ್ವಲ್ಪ ಸಕ್ಕರೆ ಹಾಕಿದರೆ ಅದು ಕರಗುತ್ತದೆ. ನಿರಂತರವಾಗಿ ಸಕ್ಕರೆ ಹಾಕಿದರೆ ಅದು ಕರಗುವುದಿಲ್ಲ. ಮಣ್ಣಿನ ವಿಷಯದಲ್ಲೂ ಹಾಗೆಯೇ. ಸತತ ಮಳೆಯಾದರೆ ನೀರು ಇಂಗುವುದಿಲ್ಲ. ಮಿತಿ ಮೀರಿ ನೀರು ಬಂದರೆ ಅದು ಸ್ವೀಕರಿಸುವುದಿಲ್ಲ. ನೈಸರ್ಗಿಕ ವಿಕೋಪದಿಂದ ಅತಿಯಾದ ಮಳೆಯಾದರೆ ಪರ್ವತದ ತಪ್ಪಲಿನಲ್ಲಿ ಭೂಕುಸಿತ ಸಂಭವಿಸುತ್ತದೆ ಎನ್ನುತ್ತಾರೆ.

ಇದನ್ನೂ ಓದಿ:ನಾಯಿ ಹೊಟ್ಟೆಗೆ ಜಾಸ್ತಿ ಹಾಕಿದ್ರೆ ಜೈಲಿಗೆ ಹೋಗ್ತೀರಿ ಹುಷಾರ್.. ಮಹಿಳೆಗೆ 2 ತಿಂಗಳ ಜೈಲು ಶಿಕ್ಷೆ ಕೊಟ್ಟ ಕೋರ್ಟ್​..!

publive-image

ಅದೇ ರೀತಿ ಇನ್ನೊಂದು ರೀತಿಯಲ್ಲಿ ಭೂಕುಸಿತ ಸಂಭವಿಸುತ್ತದೆ. ಮಣ್ಣಿನ ಒಳಗೆ ಸಂಭವಿಸುವ ಕೊಳವೆಗಳಿಂದಾಗಿ. ಅಂದರೆ ಇಲಿಗಳು ಕೊರೆಯುವ ಬಿಲದ ರೀತಿ. ಭೂಮಿಯೊಳಗೆ ಆಗಾಗ ನೀರನ ಸುರಂಗ ಕೂಡ ನಿರ್ಮಾಣ ಆಗುತ್ತದೆ. ಮಣ್ಣು ಸಡಿಲಗೊಂಡು ನೀರು ಹರಿಯಲು ಶುರುವಾಗುತ್ತದೆ. ಆದರೆ ಭೂಮಿಯ ಮೇಲ್ಭಾಗದಲ್ಲಿ ಮೇಲ್ನೋಟಕ್ಕೆ ಯಾವುದೇ ತೊಂದರೆ ಕಂಡುಬರುವುದಿಲ್ಲ. ಆದರೆ ಅದು ಕ್ರಮೇಣ ನೀರಿನ ಹರಿವು ಹೆಚ್ಚಾಗಿ, ಮಣ್ಣು ಕೊಚ್ಚಿಹೋಗಿ ಜೋರಾಗಿ ಹರಿಯಲು ಶುರುವಾಗುತ್ತದೆ. ಹೀಗಾದಾಗ ಭೂಮಿಯ ಮೇಲ್ಮೈನ ಬೆಟ್ಟ ನಿಧಾನವಾಗಿ ಸಡಿಲಗೊಳ್ಳುತ್ತದೆ. ಕೊನೆಗೆ ಒಂದೇ ಏಟಿನಲ್ಲಿ ಭೂಮಿ ತಳಕ್ಕೆ ಕುಸಿಯುತ್ತದೆ.

Advertisment

ಇನ್ನೊಂದು ಮಾದರಿಯ ಭೂಕುಸಿತ ಹೇಗೆ ಸಂಭವಿಸುತ್ತದೆ ಅನ್ನೋದನ್ನೂ ಅವರು ವಿವರಿಸಿದ್ದಾರೆ. ಈಗಾಗಲೇ ಭೂಕುಸಿತ ಸಂಭವಿಸಿದ ಪ್ರದೇಶದಲ್ಲಿ ಭೂಮಿ ಕುಸಿಯುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. ಒಮ್ಮೆ ಭೂಮಿ ಕುಸಿದಾಗ ಅಲ್ಲಿರುವ ಪ್ರದೇಶ ಛಿದ್ರಗೊಂಡಿರುತ್ತದೆ.

ಇದನ್ನೂ ಓದಿ:ರೀಚಾರ್ಜ್ ಬೆಲೆ ಏರಿಸಿದ್ದ ಕಂಪನಿಗಳಿಗೆ TRAI ಗುನ್ನಾ.. ಮತ್ತೆ ಕಡಿಮೆ ಬೆಲೆಗೆ ಹೊಸ ಪ್ಲಾನ್..!

publive-image

ಮಳೆಗಾಲ ನಿಂತು ಎಲ್ಲವೂ ಸರಿ ಹೋದಾಗ ಆ ಭೂಮಿ, ಬೆಟ್ಟ ಹಾಗೆಯೇ ಇರುತ್ತದೆ. ಮತ್ತೆ ಮಳೆಗಾಲ ಶುರುವಾಗಾಗ ಅಲ್ಲಿ ನಿಂತಿದ್ದ ಮಣ್ಣು ಮತ್ತೆ ಕೊಚ್ಚಿ ಹೋಗುತ್ತದೆ. ಇದರಿಂದ ಮತ್ತೆ ಆ ಬೆಟ್ಟ, ಗುಡ್ಡ ಸಡಿಲಗೊಳ್ಳುತ್ತದೆ. ಪರಿಣಾಮ ಈ ಹಿಂದೆ ಛಿದ್ರಗೊಂಡಿದ್ದ ಜಾಗದ ಅಕ್ಕಪಕ್ಕ ಗುಡ್ಡ ಕುಸಿತ ಸಂಭವಿಸುತ್ತದೆ ಎಂದು ವಿಜ್ಞಾನಿ ಮನೋಜ್ ತಿಳಿಸಿದ್ದಾರೆ.

Advertisment

ಇದನ್ನೂ ಓದಿ:MS ಧೋನಿ ಅಭಿಮಾನಿಗಳಿಗೆ ಕೊನೆಗೂ ಸಿಕ್ಕೇಬಿಡ್ತು ಗುಡ್​ನ್ಯೂಸ್​..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment