/newsfirstlive-kannada/media/post_attachments/wp-content/uploads/2024/03/breast-cancer-1.jpg)
ವಾಷಿಂಗ್ಟನ್: ಕ್ಯಾನ್ಸರ್, ಸದ್ಯ ವಿಶ್ವವನ್ನೇ ಕಾಡುತ್ತಿರುವ ಒಂದು ಮಹಾಮಾರಿಯಾಗಿ ಕಾಡುತ್ತಿದೆ. 2021ರಲ್ಲಿ ನೀಡಿದ ಮಾಹಿತಿ ಪ್ರಕಾರ ವರ್ಷಕ್ಕೆ 1 ಕೋಟಿ ಜನರು ಜಗತ್ತಿನಲ್ಲಿ ಈ ಮಹಾಮಾರಿಯಿಂದ ಪ್ರಾಣ ಬಿಡುತ್ತಿದ್ದಾರೆ. ಅಂದ್ರೆ ಆರು ಜನರಲ್ಲಿ ಒಬ್ಬರು ಈ ಭೀಕರ ಕ್ಯಾನ್ಸರ್ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. 6 ಲಕ್ಷ 10 ಸಾವಿರ ಜನ ಅಮೆರಿಕಾವೊಂದರಲ್ಲಿಯೇ ಬಲಿಯಾಗಿದ್ದಾರೆ. ಭಾರತದ ವಿಷಯಕ್ಕೆ ಬಂದ್ರೆ ಇಲ್ಲಿಯೂ ಕೂಡ ಮಹಾಮಾರಿ ತನ್ನ ಮೃತ್ಯುತಾಂಡವವನ್ನು ಆಡದೆ ಬಿಟ್ಟಿಲ್ಲ. ಕೇವಲ ದುಶ್ಚಟಗಳಿದ್ದರೆ ಮಾತ್ರವಲ್ಲ, ಅಡಿಕೆ ಹೋಳನ್ನು ಬಾಯಿಗೆ ಮುಟ್ಟಿಸದವರನ್ನು ಕೂಡ ಈ ರೋಗ ಬಿಟ್ಟಿಲ್ಲ. ಭಾರತದಲ್ಲಿ ಪ್ರಮುಖವಾಗಿ ಈ ಒಂದು ಇಸವಿಯಲ್ಲಿ ಹುಟ್ಟಿದವರಲ್ಲಿ ಈ ಕ್ಯಾನ್ಸರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ
ಮಿಲ್ಲೇನಿಯಲ್ಸ್ ಮತ್ತು ಜನರೇಷನ್ ಝಡ್ ಅಂದ್ರೆ 1997ರಿಂದ 2012ರೊಳಗೆ ಹುಟ್ಟಿದವರನ್ನು ಜೆನ್ ಝಡ್ ಅಂದ್ರೆ ಜನರೇಷನ್ ಝಡ್ ಎಂದು ಕರೆಯಲಾಗುತ್ತದೆ. ಇನ್ನು 1981 ರಿಂದ 1996ರೊಳಗೆ ಹುಟ್ಟಿದವರನ್ನ ಮಿಲ್ಲೆನಿಯಲ್ಸ್ ಎಂದು ಕರೆಯಲಾಗುತ್ತದೆ. ಈ ಮಿಲೆನಿಯಲ್ಸ್ ಹಾಗೂ ಜೆನ್ ಝಡ್ನ ಯುವ ಜನರಲ್ಲಿ ಅತಿಹೆಚ್ಚು ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ ಎಂದು ಅಧ್ಯಯನವೊಂದು ಹೇಳಿದೆ.
ಇದನ್ನೂ ಓದಿ:Almonds: ಬಾದಾಮ್ ಜಾಸ್ತಿ ತಿಂದ್ರು ಅಪಾಯ ಕಟ್ಟಿಟ್ಟ ಬುತ್ತಿ; ಒಂದು ದಿನಕ್ಕೆ ಎಷ್ಟು ತಿನ್ನಬೇಕು ಗೊತ್ತಾ?
ತಂತ್ರಜ್ಞಾನವಿಲ್ಲದ, ಮಾಹಿತಿಯೂ ಅಂಗೈಯಲ್ಲಿ ಸಿಗದ ಕಾಲದಲ್ಲಿ ಹುಟ್ಟಿದ ಈ ಜನರಲ್ಲಿ ಸುಮಾರು 17 ರೀತಿಯ ಕ್ಯಾನ್ಸರ್ ಎಂಬ ಮಹಾಮಾರಿ ಕಾಣಿಸಿಕೊಳ್ಳುತ್ತಿದೆ ಎಂದು ಇದೇ ಆಗಸ್ಟ್ 1 ರಂದು ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಬಿಡುಗಡೆ ಮಾಡಿರುವ ಸಾರ್ವಜನಿಕ ಆರೋಗ್ಯದ ಲ್ಯಾನ್ಸಟ್ನ ಹೊಸ ಅಧ್ಯಯನ ಅನ್ನೋ ತನ್ನ ನೂತನ ಅಧ್ಯಯನದಲ್ಲಿ ಈ ಒಂದು ಮಾಹಿತಿಯನ್ನು ನೀಡಿದೆ. ಒಂದೊಂದು ತಲೆಮಾರಿನಲ್ಲಿ ಹುಟ್ಟಿದವರಿಗೆ ಒಂದೊಂದು ರೀತಿಯ ರೋಗದ ಲಕ್ಷಣಗಳಿವೆ ಅದರಲ್ಲೂ ಈ 1997 ರಿಂದ 2012 ಹಾಗೂ 1981 ರಿಂದ 1996ರೊಳಗೆ ಹುಟ್ಟಿದ ತಲೆಮಾರಿನ ಜನರರು ಹೆಚ್ಚು ಹೆಚ್ಚು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಹೊಟ್ಟೆಗೆ ಸಂಬಂಧಿಸಿದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಪಿತ್ತಕೋಶದ ಕ್ಯಾನ್ಸರ್ ಸೇರಿದಂತೆ ಒಟ್ಟು 17 ಬಗೆಯ ಕ್ಯಾನ್ಸರ್ ರೋಗಗಳು ಈ ತಲೆಮಾರಿನ ಜನರಲ್ಲಿ ಹೆಚ್ಚು ಕಾಣಸಿಗುತ್ತಿದೆ ಎಂದು ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಬಿಡುಗಡೆ ಮಾಡಿರುವ ಅಧ್ಯಯನದಲ್ಲಿನ ಬಹಿರಂಗವಾಗಿದೆ.
ಭಾರತದಲ್ಲೂ ಕ್ಯಾನ್ಸರ್ ಮಹಾಮಾರಿಯ ಅಟ್ಟಹಾಸ
ಅಮೆರಿಕಾ ಬಿಡುಗಡೆ ಮಾಡಿರುವ ಅಧ್ಯಯನದ ಪ್ರಕಾರ ಭಾರತಕ್ಕೆ ಹಾಗೂ ಅಮೆರಿಕಾಕ್ಕೆ ಯಾವುದೇ ವ್ಯತ್ಯಾಸಗಳು ಇಲ್ಲ. ಇಲ್ಲಿಯೂ ಕೂಡ ದೆಹಲಿ ಸ್ಟೇಟ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಹೇಳುವ ಭಾರತದಲ್ಲಿಯೂ 31 ರಿಂದ 40 ವಯಸ್ಸಿನ ಯುವಕ ಯುವತಿಯರಲ್ಲಿ ಇತ್ತೀಚೆಗೆ ಹಲವು ರೀತಿಯ ಕ್ಯಾನ್ಸರ್ ಮಹಾಮಾರಿ ಕಾಣಸಿಗುತ್ತಿದೆ ಎಂದು ಹೇಳಿದೆ.
ಇದನ್ನೂ ಓದಿ:ಮಕ್ಕಳಿಗೆ ವ್ಯಾಕ್ಸಿನ್ ಕೊಡ್ಸೋದು ಎಷ್ಟು ಸೇಫ್? ಇದರಿಂದ ತೊಂದರೆ ಇದೆಯಾ?
ಐಸಿಎಂಆರ್ ಹಾಗೂ ಎನ್ಸಿಡಿಐಆರ್ 2022ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಆ ವರ್ಷ ದೇಶದಲ್ಲಿ ಒಟ್ಟು 14,61,427 ಕ್ಯಾನ್ಸರ್ ಪ್ರಕರಣಗಳು ದೇಶದಲ್ಲಿ ದಾಖಲಾಗಿದ್ದವು. 9 ಜನರಲ್ಲಿ ಒಬ್ಬರಿಗೆ ಕ್ಯಾನ್ಸರ್ನಂತಹ ಮಹಾಮಾರಿ ದೇಶದಲ್ಲಿ ಅಂಟಿಕೊಳ್ಳುತ್ತಿದೆ ಎಂದು ಈ ಅಧ್ಯಯನದಲ್ಲಿ ವರದಿಯಾಗಿದೆ.
ಕ್ಯಾನ್ಸರ್‌ಗೆ ಕಾರಣವೇನು?
ಬಿರ್ಲಾ ಆಸ್ಪತ್ರೆಯ ಡಾ ಪೂಜಾ ಬಬ್ಬರ್ ಹೇಳುವ ಪ್ರಕಾರ ವಾಯು ಮಾಲಿನ್ಯ, ಸಣ್ಣ ವಯಸ್ಸಿನಲ್ಲಿ ಮದ್ಯಪಾನ ದೂಮಪಾನದಂತಹ ಚಟಗಳಿಗೆ ಈಡಾಗುತ್ತಿರುವುದು ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳನ್ನು ಹೆಚ್ಚಿಸುತ್ತಿದೆ. ಜೆನ್ ಝಡ್ನ ಆಹಾರ ಪದ್ಧತಿಗಳು ಕೂಡ ಬದಲಾಗಿವೆ. ಕೂಲ್ಡ್ರೀಂಕ್ಸ್, ಪಾಪ್ಕಾರ್ನ್ ಈ ರೀತಿಯ ಆಹಾರಗಳು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತವೆ. ಹೀಗಾಗಿ ಆಹಾರ ಪದ್ಧತಿಯನ್ನು ಸರಿಯಾಗಿಟ್ಟುಕೊಳ್ಳುವುದ ಮತ್ತು ದುಶ್ಚಟಗಳಿಂದ ದೂರವಿರುವುದು ಒಳ್ಳೆಯದು ಎಂದು ವೈದ್ಯರು ಹೇಳತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ