/newsfirstlive-kannada/media/post_attachments/wp-content/uploads/2024/10/MIRROR-INSIDE-LIFT.jpg)
ನೀವು ಯಾವುದೋ ಮಾಲ್​ಗೆ ಅಥವಾ ದೊಡ್ಡ ಬಿಲ್ಡಿಂಗ್​ಗೆ ಹೋದಾಗ ಅಲ್ಲಿ ಲಿಫ್ಟ್​​ನಲ್ಲಿ ಏರಿದಾಗ ಮೊದಲು ನೋಡುವುದೇ ಅಲ್ಲಿ ಅಳವಡಿಸಲಾಗಿರುವ ಕನ್ನಡಿಯನ್ನ. ಲಿಫ್ಟ್​ಗೆ ಹೋದ ತಕ್ಷಣ ನಾವು ಮೊದಲು ಕನ್ನಡಿಯನ್ನು ನೋಡಿ, ನಮ್ಮ ಹೇರ್​ಸ್ಟೈಲ್ ಸರಿ ಮಾಡಿಕೊಳ್ಳುತ್ತೇವೆ. ಉಟ್ಟಿರುವ ಧಿರಿಸನ್ನು ಸರಿಯಾಗಿ ಸೆಟ್ ಮಾಡಿಕೊಳ್ಳುತ್ತೇವೆ. ನಮ್ಮನ್ನು ನಾವೇ ನೋಡಿಕೊಂಡು ಸ್ವಯಂ ಪ್ರಶಂಸೆಪಡುತ್ತೇವೆ. ಆದರೆ ಪ್ರತಿ ಲಿಫ್ಟ್​ನಲ್ಲೂ ಅಂತಹದೊಂದು ಕನ್ನಡಿ ಇರಲು ಕಾರಣವೇನು.
ಇದನ್ನೂ ಓದಿ:ಕನ್ನಡತಿ ಐಶ್ವರ್ಯ ರೈ ಬಚ್ಚನ್ ಬಾಡಿಗಾರ್ಡ್ ಸಂಬಳ ಎಷ್ಟು? ಗೊತ್ತಾದ್ರೆ ಒಂದು ಕ್ಷಣ ಬೆಚ್ಚಿ ಬೀಳ್ತೀರಾ?
ಕೇವಲ ಅಲಂಕಾರಕ್ಕಾಗಿ ಮಾತ್ರ ಅದನ್ನು ಅಲ್ಲಿ ಅಳವಡಿಸಲಾಗಿರುತ್ತದೆಯಾ? ಇಲ್ಲವೇ ವಿಶೇಷ ಕಾರಣಗಳೇನಾದ್ರು ಇವೆಯಾ ಅಂತ ನೋಡುವುದಾದ್ರೆ. ಲಿಫ್ಟ್​ನಲ್ಲಿ ಕನ್ನಡಿ ಅಳವಡಿಸಲು ಹಲವು ಕಾರಣಗಳಿವೆ. ನಿಮಗೆ ಗೊತ್ತಿಲ್ಲದ ಆ ಕಾರಣಗಳನ್ನು ನಾವು ಇಂದು ನಿಮ್ಮ ಮುಂದೆ ತೆರೆದಿಡಲಿದ್ದೇವೆ. ಲಿಫ್ಟ್​​ನಲ್ಲಿ ಸಾಮಾನ್ಯವಾಗಿ ಕನ್ನಡಿ ಅಳವಡಿಸಲು ಹಲವು ಕಾರಣಗಳಿವೆ. ಕೆಲವು ವೈದ್ಯಕೀಯ ಕಾರಣಗಳು ಹಾಗೂ ಕೆಲವು ಸಾಮಾಜಿಕ ಕಾರಣಗಳು ಅವು ಏನು ಅನ್ನೋದು ನೋಡುವುದಾದ್ರೆ.
/newsfirstlive-kannada/media/post_attachments/wp-content/uploads/2024/10/MIRROR-INSIDE-LIFT-2.jpg)
ಮಾನಸಿಕವಾದ ಒಂದು ನಿರಾಳತೆ
ಹಲವರಿಗೆ ವಿಪರೀತ ಜನರು ಒಂದೇ ಕಡೆ ಸೇರಿದಾಗ ಒಂದು ರೀತಿಯ ಕಸಿವಿಸಿಯುಂಟಾಗುತ್ತದೆ. ಇನ್ನೂ ಕೆಲವರು ಬಾಗಿಲು ಮುಚ್ಚಿದ ಕೋಣೆಯಲ್ಲಿ ಉಂಟಾಗುವ ಆತಂಕಗಳ ರೀತಿ ಲಿಫ್ಟ್​ನಲ್ಲಿಯೂ ಅನುಭವಿಸುತ್ತಾರೆ. ಇಂತಹ ಭ್ರಮೆಗಳನ್ನು ನಿವಾರಿಸಲು ಹಾಗೂ ಆತಂಕಗಳನ್ನು ದೂರ ಮಾಡಲೆಂದೆ ಲಿಫ್ಟ್​ನಲ್ಲಿ ಕನ್ನಡಿಗಳನ್ನು ಅಳವಡಿಸಿರುತ್ತಾರೆ. ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳುತ್ತ ಇರುವಾಗಲೇ ಅಲ್ಲಿನ ಪುಟ್ಟದೊಂದು ಪ್ರಯಾಣ ಮುಗಿದು ಬಿಟ್ಟಿರುತ್ತದೆ. ಹೀಗಾಗಿ ಬೇರೆಯ ಕಡೆಗೆ ನಮ್ಮ ಗಮನ ಹರಿಯುವುದಿಲ್ಲ. ಲಿಫ್ಟ್​ನಲ್ಲಿ ಕನ್ನಡಿ ಅಳವಡಿಸಲು ಇದು ಕೂಡ ಒಂದು ಕಾರಣ
ಸುರಕ್ಷತೆ ಹಾಗೂ ಭದ್ರತೆ
ಕನ್ನಡಿಯಲ್ಲಿ ನಮ್ಮ ಸುತ್ತಮುತ್ತಲೂ ಇರುವವರ ನಡವಳಿಕೆಯನ್ನು ತಿಳಿಯಲು ಸಾಧ್ಯವಾಗುತ್ತದೆ. ಯಾರು ತಮ್ಮ ಹಿಂದೆ ಇದ್ದಾರೆ. ಏನು ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುವುದರಿಂದ ನಮಗೊಂದು ಭದ್ರತೆಯ ಭಾವ ಉಂಟಾಗುತ್ತದೆ. ಹೀಗಾಗಿ ತಮ್ಮ ಸಹ ಪ್ರಯಾಣಿಕರ ಬಗ್ಗೆ ಒಂದು ಎಚ್ಚರಿಕೆಯಲ್ಲಿ ಜನರು ಲಿಫ್ಟ್​ನಲ್ಲಿ ಪ್ರಯಾಣಿಸುತ್ತಾರೆ. ಅದು ಮಾತ್ರವಲ್ಲದೆ ಕನ್ನಡಿ ಇರುವುದರಿಂದ ಆ ಪ್ರಯಾಣ ಆದಷ್ಟು ಪಾರದರ್ಶಕ ಹಾಗೂ ಸುರಕ್ಷಿತ ಎಂಬ ಭಾವ ಜನರಲ್ಲಿ ಮೂಡುತ್ತದೆ.
/newsfirstlive-kannada/media/post_attachments/wp-content/uploads/2024/10/MIRROR-INSIDE-LIFT-1.jpg)
ವಿಶೇಷಚೇತನರಿಗೆ ಅನುಕೂಲ
ನಾವು ಸಾಮಾನ್ಯವಾಗಿ ಆಸ್ಪತ್ರೆಯ ಲಿಫ್ಟ್​ಗಳಲ್ಲಿ ನೋಡಿರುತ್ತೇವೆ, ಅನೇಕ ರೋಗಿಗಳನ್ನು ವ್ಹೀಲ್​ ಚೇರ್​ ಮೇಲೆ ಕೂರಿಸಿಕೊಂಡು ಲಿಫ್ಟ್​ನೊಳಗೆ ಅಲ್ಲಿನ ಸಿಬ್ಬಂದಿ ಬರುವುದು ಸರ್ವೆ ಸಾಮಾನ್ಯ. ಹೀಗೆ ಒಳಗೆ ಬಂದ ವ್ಹೀಲ್ ಚೇರ್​ನ್ನು ವಾಪಸ್ ಹಿಂದಿನ ಬಂದಿಯಿಂದ ಎಳೆದುಕೊಂಡು ಹೋಗುವಾಗ ತಮ್ಮ ಹಿಂದೆ ಯಾರಿದ್ದಾರೆ. ಎಷ್ಟು ಗದ್ದಲವಿದೆ ಅನ್ನೋದು ವ್ಹೀಲ್ ಚೇರ್ ತಳ್ಳಿಕೊಂಡು ಬಂದವರಿಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ.
ಚಾಂಚಲ್ಯವನ್ನು ಮರೆಸುತ್ತದೆ
ಜನರಿಗೆ ಸ್ವಲ್ಪ ತಾಳ್ಮೆ ಕಡಿಮೆ. ಎಲ್ಲವೂ ಬೇಗ ಆಗಬೇಕು ಅಂತ ಬಯಕೆ, ಅದು ಲಿಫ್ಟ್​ ಪ್ರಯಾಣಕ್ಕೂ ಕೂಡ ಅಳವಡಿಸುತ್ತದೆ. ತಮ್ಮ ಒಂದು ಪ್ರಯಾಣ ಯಾವಾಗ ಮುಗಿಯುತ್ತೊ ಅನ್ನೋ ಅವಸರ ಹಾಗೂ ಆ ವೇಳೆ ಹುಟ್ಟುವ ಚಿತ್ತ ಚಾಂಚಲ್ಯವನ್ನು ಕನ್ನಡಿ ದೂರ ಮಾಡುತ್ತದೆ. ಅದರಲ್ಲಿ ತಮ್ಮನ್ನು ತಾವು ನೋಡಿಕೊಂಡು. ಹೇರ್​ಸ್ಟ್ರೈಲ್, ಡ್ರೆಸ್ ಸರಿ ಮಾಡಿಕೊಳ್ಳುವುದರಲ್ಲಿ ಲಿಫ್ಟ್​ ತಾನು ಸೇರಬೇಕಾದ ಜಾಗ ಸೇರಿಯಾಗಿರುತ್ತದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲೆಂದೇ ಲಿಫ್ಟ್​ನಲ್ಲಿ ಕನ್ನಡಿಗಳನ್ನು ಅಳವಡಿಸಲಾಗಿರುತ್ತದೆ.
ಇನ್ನು ಲಿಫ್ಟ್​ನಲ್ಲಿ ಕನ್ನಡಿಯನ್ನು ಅಳವಡಿಸಲು ಶುರುವಾಗಿದ್ದು ಜಪಾನ್​ನ ಎಲಿವೇಟರ್ ಅಸೋಸಿಯೇಷನ್ ಆಫ್ ಜಪಾನ್ ಎಂಬ ಸಂಸ್ಥೆಯ ಮಾರ್ಗದರ್ಶನದ ಮೇಲೆ. ಲಿಫ್ಟ್​ನಲ್ಲಿ ಕನ್ನಡಿ ಅಳವಡಿಸುವುದರಿಂದ ಮಾನಸಿಕ ನಿರಾಳತೆಯ ಜೊತೆಗೆ ಅನೇಕ ವಿಚಾರಗಳಲ್ಲಿ ಒಂದು ನಿರಾಳತೆ ದೊರೆಯುತ್ತದೆ ಎಂದು ಅಧ್ಯಯನದಿಂದ ತಿಳಿದ ಈ ಸಂಸ್ಥೆ ಇಂತಹದೊಂದು ಮಾರ್ಗದರ್ಶನ ನೀಡಿತ್ತು. ಅದನ್ನು ಈಗಲೂ ಕೂಡ ಅಳವಡಿಸಿಕೊಂಡು ಬರಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us