/newsfirstlive-kannada/media/post_attachments/wp-content/uploads/2025/04/SIRAJ-3.jpg)
ಆರ್‌ಸಿಬಿ ಜೊತೆಗಿನ ನನ್ನ ಪ್ರಯಾಣ 7 ವರ್ಷಗಳು. ಚಿನ್ನಸ್ವಾಮಿಯಲ್ಲಿ ಜೀವಿಸಿದ್ದೇನೆ. ಇಲ್ಲಿ ಕಲಿತದ್ದು ತುಂಬಾನೇ ಇದೆ. ಆರ್‌ಸಿಬಿ ವಿರುದ್ಧ ಆಡುವಾಗ ಸಹಜವಾಗಿಯೇ ಭಾವುಕನಾದೆ. ಆರ್‌ಸಿಬಿ ಜರ್ಸಿಯಲ್ಲಿ ಬೌಲ್ ಮಾಡಿದ ಮೊದಲ ಎಸೆತದಿಂದ, ತೆಗೆದುಕೊಂಡ ಪ್ರತಿ ವಿಕೆಟ್, ಆಡಿದ ಪ್ರತಿ ಪಂದ್ಯ, ನಿಮ್ಮೊಂದಿಗೆ ಹಂಚಿಕೊಂಡ ಪ್ರತಿ ಕ್ಷಣ, ಪ್ರತಿ ಪ್ರಯಾಣ, ಅಭಿಮಾನಿಗಳ ಪ್ರೀತಿ ಅಸಾಧಾರಣ. ಅದಕ್ಕೆ ಭಾವುಕನಾದೆ -ಮೊಹ್ಮದ್ ಸಿರಾಜ್, GTಬೌಲರ್
ಹೌದು, ಮೊಹ್ಮದ್ ಸಿರಾಜ್ ಆರ್​ಸಿಬಿ ಅಭಿಮಾನಿಗಳ ಹೃದಯವನ್ನು ಮತ್ತೆ ಕಲುಕಿದ್ದಾರೆ. ನಿನ್ನೆ ಎಂ.ಚಿನ್ನಸ್ವಾಮಿಯಲ್ಲಿ ಪಂದ್ಯ ಆರಂಭ ಆಗುತ್ತಿದ್ದಂತೆಯೇ ಅಕ್ಷರಶಃ ಭಾವುಕರಾದರು. ತಾವು ಎಮೋಷನಲ್ ಆಗೋದು ಮಾತ್ರವಲ್ಲದೇ, ಆರ್​ಸಿಬಿ ಅಭಿಮಾನಿಗಳನ್ನು ಭಾವುಕ ಕ್ಷಣಕ್ಕೆ ಕೊಂಡೊಯ್ದರು. ಅದಕ್ಕೆ ಕಾರಣ ಗುರುವಿನ ರೂಪದಲ್ಲಿ ಸಿಕ್ಕಿರುವ ವಿರಾಟ್ ಕೊಹ್ಲಿ.
ಆಗಿದ್ದೇನು..?
ಟಾಸ್​ ಗೆದ್ದ ಕ್ರಿಕೆಟ್ ಪ್ರಿನ್ಸ್​ ಗಿಲ್, ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ಅಂತೆಯೇ ಮೈದಾನಕ್ಕೆ ಇಳಿದ ಗುಜರಾತ್ ಟೈಟನ್ಸ್, ಆರ್​ಸಿಬಿ ವಿರುದ್ಧ ಸಿರಾಜ್ ಮೂಲಕವೇ ದಾಳಿ ಮಾಡಿಸಿತು. ಗಿಲ್, ಸಿರಾಜ್​ಗೆ ಬಾಲ್ ನೀಡ್ತಿದ್ದಂತೆಯೇ ಭಾವುಕರಾದು. ಮೊದಲ ಎಸೆತವನ್ನು ಫಿಲ್ ಸಾಲ್ಟ್​ಗೆ ಹಾಕಿದರು. ಒಂದು ರನ್​ಗಳಿಸುವ ಮೂಲಕ ಸಾಲ್ಟ್​, ಕೊಹ್ಲಿಗೆ ಸ್ಟ್ರೈಕ್ ನೀಡಿದರು.
ಆಗಲೇ ಗೊತ್ತಾಗಿದ್ದು..
ಯಾವಾಗ ಕೊಹ್ಲಿ ಸ್ಟ್ರೈಕ್ ಬಂದರೋ ಆಗ ಸಿರಾಜ್ ಮತ್ತಷ್ಟು ಭಾವುಕರಾದರು. ಕೊಹ್ಲಿಗೆ ಬಾಲ್ ಎಸೆಯಲು ಪ್ರಯತ್ನಿಸಿದಾಗ ಸಾಧ್ಯವಾಗಲಿಲ್ಲ. ಕ್ರೀಸ್​ ತನಕ ಓಡಿಬಂದು ಅರ್ಧಕ್ಕೆ ನಿಲ್ಲಿಸಿ ಎಮೋಷನಲ್ ಆದರು. ಸಿರಾಜ್​​ ಮನಸ್ಥಿತಿ ಅರ್ಥ ಮಾಡಿಕೊಂಡ ನಾಯಕ ಗಿಲ್, ಸಂತೈಸುವ ನಗುವಿನೊಂದಿಗೆ ಪ್ರತಿಕ್ರಿಯಿಸಿ, ಹುರಿದುಂಬಿಸಿದರು. ಇಲ್ಲಿ ಸಿರಾಜ್​ ತಳಮಳ ಏನೋ ಅನ್ನೋದು ಗಿಲ್ ಅವರ ರಿಯಾಕ್ಷನ್ ವಿವರಿಸಿ ಹೇಳುತ್ತಿತ್ತು.. ​
ಸಿರಾಜ್ ಯಾಕೆ ಹಾಗೆ ಮಾಡಿದರು..?
ಸಿರಾಜ್ ಹಾಗೆ ಮಾಡಲು ಕಾರಣ ಕೊಹ್ಲಿ ಜೊತೆಗಿನ ಒಡನಾಟ. ಕ್ರಿಕೆಟ್​ನಲ್ಲಿ ಸಿರಾಜ್ ಎತ್ತರಕ್ಕೆ ಬೆಳೆಯಲು ಹಿಂದಿರುವ ಶಕ್ತಿಯೇ ಕೊಹ್ಲಿ ಮತ್ತು ಆರ್​ಸಿಬಿ. ಸುದೀರ್ಘ 7 ವರ್ಷಗಳ ಕಾಲ ಆರ್​ಸಿಬಿಯಲ್ಲಿ ಆಡಿದ ಸಿರಾಜ್​ಗೆ ದೊಡ್ಡ ವೇದಿಕೆ ಸಿಕ್ಕಿದ್ದೇ ಕೊಹ್ಲಿಯಿಂದ. ಆರ್​​ಸಿಬಿಯಲ್ಲಿ ಕಿಂಗ್ ಕಲಿಸಿದ ಪಾಠಗಳು! ಈ ಗುರು ಶಿಷ್ಯರ ಬಾಂಧವ್ಯ, ಸಿರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ಹೆಸರು ಮಾಡುವಂತೆ ಮಾಡಿತು.
ಸಿರಾಜ್ ಸಂಕಷ್ಟದಲ್ಲಿ ಕೊಹ್ಲಿ..
ಬೌಲಿಂಗ್​ನಲ್ಲಿ ಎಡವಿದಾಗ, ವಿಕೆಟ್ ಪಡೆಯಲು ಪರದಾಡಿದಾಗ, ಆಟದ ಅವಸರದಲ್ಲಿ ಕ್ಯಾಚ್ ಬಿಟ್ಟಾಗ, ಮಿಸ್ ಫೀಲ್ಡಿಂಗ್ ಆದಾಗ, ಕುಗ್ಗಿದ ಮನಸ್ಥಿತಿಯಲ್ಲಿದ್ದಾಗ ಸಿರಾಜ್​ಗೆ ಬೆನ್ನೆಲುಬಾಗಿ, ಸ್ಫೂರ್ತಿಯಾಗಿ ಬೆನ್ನು ತಟ್ಟುತ್ತಿದ್ದೇ ವಿರಾಟ್ ಕೊಹ್ಲಿ. ಅಲ್ಲದೇ ಸಿರಾಜ್​ಗೆ ವೈಯಕ್ತಿಕವಾಗಿಯೂ ಕೊಹ್ಲಿ ಹತ್ತಿರವಾಗಿದ್ದಾರೆ. ತಂದೆಯನ್ನು ಕಳೆದುಕೊಂಡ ನೋವಿನಲ್ಲಿದ್ದಾಗ ಸಿರಾಜ್​ ಸಂಕಷ್ಟಕ್ಕೆ ಹೆಗಲು ಕೊಟ್ಟಿದ್ದೇ ಕೊಹ್ಲಿ. ಆಟದ ಜೊತೆಗೂ ಇಬ್ಬರು ವೈಯಕ್ತಿಕವಾಗಿಯೂ ಉತ್ತಮ ಒಡನಾಟ ಇರುವ ಕಾರಣದಿಂದಲೇ, ಕೊಹ್ಲಿ ವಿರುದ್ಧ ಮೊದಲ ಬಾರಿಗೆ ಬೌಲ್ ಮಾಡುವಾಗ ಭಾವುಕರಾದರು.
View this post on Instagram
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್