ಸೌತ್ ಆಫ್ರಿಕಾದ ಈ ಸ್ಪೀಡ್ಸ್ಟರ್ ಎಲ್ಲರಿಗಿಂತ ಡಿಫ್ರೆಂಟ್
ಟೀಮ್ ಇಂಡಿಯಾಗೆ ಮಾರ್ಕೆಲ್ ಬೌಲಿಂಗ್ ಕೋಚ್
ಮಾರ್ಕೆಲ್ ಆಯ್ಕೆಯ ಹಿಂದಿರೋ ಲೆಕ್ಕಾಚಾರ ಏನು?
ಹೆಡ್ ಕೋಚ್ ಗೌತಮ್ ಗಂಭೀರ್ ಬೆಂಬಲ ಇದ್ದಿದ್ರಿಂದ ಮಾರ್ನೆ ಮಾರ್ಕೆಲ್ ಬೌಲಿಂಗ್ ಕೋಚ್ ಆಗ್ತಾರೆ ಅನ್ನೋದು ಎಲ್ಲರ ನಿರೀಕ್ಷೆಯಾಗಿತ್ತು. ಆ ನಿರೀಕ್ಷೆ ಕೊನೆಗೂ ನಿಜವಾಗಿದೆ. ಈ ಆಯ್ಕೆಗೆ ಗಂಭೀರ್ ಲಾಬಿ ಮಾತ್ರ ಕಾರಣವಲ್ಲ. ಮಾರ್ಕೆಲ್ ಸೆಲೆಕ್ಷನ್ ಹಿಂದೆ ಇನ್ನೂ ಹಲವು ಲೆಕ್ಕಾಚಾರಗಳಿವೆ.
ನಿರೀಕ್ಷೆಯಂತೆ ಟೀಮ್ ಇಂಡಿಯಾದ ನೂತನ ಬೌಲಿಂಗ್ ಕೋಚ್ ಆಗಿ ಸೌತ್ ಆಫ್ರಿಕಾ ಸ್ಪೀಡ್ ಸ್ಟರ್ ಮಾರ್ನೆ ಮಾರ್ಕೆಲ್ ಎಂಟ್ರಿ ಕೊಟ್ಟಿದ್ದಾರೆ. ಆರ್. ವಿನಯ್ ಕುಮಾರ್, ಲಕ್ಮೀಪತಿ ಬಾಲಾಜಿಯಂತಹ ಟೀಮ್ ಇಂಡಿಯಾದ ಮಾಜಿ ವೇಗಿಗಳು ಕೂಡ ಈ ಬೌಲಿಂಗ್ ಕೋಚ್ ರೇಸ್ಗಿಳಿದಿದ್ರು. ಇವರೆಲ್ಲರನ್ನ ಹಿಂದಿಕ್ಕಿ ಮಾರ್ನೆ ಮಾರ್ಕೆಲ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಮಾರ್ನೆ ಮಾರ್ಕೆಲ್ ಆಯ್ಕೆಗೆ ಹೆಡ್ ಕೋಚ್ ಗಂಭೀರ್ ಲಾಬಿ ಇದೆ ಅನ್ನೋದು ಓಪನ್ ಸೀಕ್ರೆಟ್. ಅದ್ರ ಹೊರತಾಗಿ ಮಾರ್ಕೆಲ್ ಆಯ್ಕೆಯ ಹಿಂದೆ ಹಲವು ಲೆಕ್ಕಾಚಾರಗಳಿವೆ.
ಇದನ್ನೂ ಓದಿ:ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಜೋರಾ..? ಈ ಮುಹೂರ್ತದಲ್ಲಿ ಮಾತ್ರ ಪೂಜೆ ಮಾಡಿ.. Don’t Miss
ಎಲ್ಲರಿಗಿಂತ ಡಿಫ್ರೆಂಟ್ ಸೌತ್ ಆಫ್ರಿಕಾದ ಈ ಸ್ಪೀಡ್ಸ್ಟರ್
ವೆಂಕಟೇಶ್ ಪ್ರಸಾದ್, ಎರಿಕ್ ಸಿಮನ್ಸ್, ಜೋ ಡೆವಿಸ್, ಭರತ್ ಅರುಣ್ ಹಾಗೂ ಪರಾಸ್ ಮಾಂಬ್ರೆ.. ಇವರೆಲ್ಲರೂ ಟೀಮ್ ಇಂಡಿಯಾ ಬೌಲಿಂಗ್ ಕೋಚ್ಗಳಾಗಿ ಈ ಹಿಂದೆ ಕೆಲಸ ಮಾಡಿದ್ದಾರೆ. ಇವರೆಲ್ಲರಿಗಿಂತ ಮಾರ್ನೆ ಮಾರ್ಕೆಲ್ ಸ್ಪೆಷಲ್.! ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಇವರೆಲ್ಲರಿಗಿಂತ ಮಾರ್ಕೆಲ್ ಹೆಚ್ಚು ಸಕ್ಸಸ್ ಕಂಡಿದ್ದಾರೆ. 86 ಟೆಸ್ಟ್, 117 ಏಕದಿನ, 44 ಟಿ20 ಆಡಿದ್ದಾರೆ. ಈ ಹಿಂದಿದ್ದ ಯಾವೊಬ್ಬ ಬೌಲಿಂಗ್ ಕೋಚ್ಗೂ ಇಷ್ಟು ಇಂಟರ್ನ್ಯಾಷನಲ್ ಪಂದ್ಯಗಳನ್ನ ಆಡಿದ ಅನುಭವವೇ ಇರಲಿಲ್ಲ.
ಕೋಚಿಂಗ್ನಲ್ಲೂ ಮಾರ್ಕೆಲ್ಗಿದೆ ಅಪಾರ ಅನುಭವ
ಈ ಹಿಂದೆ ಇದ್ದ ಬೌಲಿಂಗ್ ಕೋಚ್ಗಳಿಗೆ ಹೋಲಿಸಿದ್ರೆ ಕೋಚಿಂಗ್ ಅನುಭವದ ವಿಚಾರದಲ್ಲೂ ಮಾರ್ನೆ ಮಾರ್ಕೆಲ್ ಬೆಸ್ಟ್ ಎನಿಸಿದ್ದಾರೆ. ಫ್ರಾಂಚೈಸಿ ಕ್ರಿಕೆಟ್ ಜೊತೆಗೆ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲೂ ಆಟಗಾರರಿಗೆ ಪಾಠ ಮಾಡಿ ಸಕ್ಸಸ್ ಕಂಡಿದ್ದಾರೆ.
ಮಾರ್ಕೆಲ್ ಕೋಚಿಂಗ್ ಅನುಭವ
ಅಗ್ರೆಸ್ಸಿವ್ ಆಟವೇ ಬಲ, ರಿಯಲ್ ಫೈಟರ್
ಟೀಮ್ ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್ರಂತೆ ಮಾರ್ನೆ ಮಾರ್ಕೆಲ್ ಕೂಡ ಅಗ್ರೆಸ್ಸಿವ್ ಆಟಕ್ಕೆ ಫೇಮಸ್. ಸೌತ್ ಅಫ್ರಿಕಾ ಪರ ಆಡಿದ ಪಂದ್ಯಗಳಲ್ಲಿ ಅಗ್ರೆಸ್ಸಿವ್ ಆ್ಯಟಿಟ್ಯೂಡ್ನಿಂದಲೇ ಗಮನ ಸೆಳೆದಿದ್ರು. ಮೈದಾನಕ್ಕೆ ಇಳಿದ ಮೇಲೆ ರಿಯಲ್ ಫೈಟರ್ನಂತೆ ಹೋರಾಡ್ತಿದ್ದ ಮಾರ್ಕೆಲ್, ಸೌತ್ ಆಫ್ರಿಕಾ ಪಾಲಿನ ಮ್ಯಾಚ್ ವಿನ್ನರ್ ಆಗಿ ರೂಪುಗೊಂಡಿದ್ರು. ಮಾರ್ನೆ ಮಾರ್ಕೆಲ್ರ ಫೈಟಿಂಗ್ ಸ್ಪಿರಿಟ್ ಟೀಮ್ ಇಂಡಿಯಾಗೆ ನೆರವಾಗಲಿದೆ.
ಇದನ್ನೂ ಓದಿ:‘ಈತ ಅಂದ್ರೆ ನಂಗೆ ಭಾರೀ ಭಯ..’ ಬ್ಯಾಟಿಂಗ್ ವೇಳೆ ರೋಹಿತ್ ಭಯದಿಂದ ಬೆಚ್ಚಿ ಬೀಳೋದು ಯಾರಿಗೆ?
ಯುವ ವೇಗಿಗಳ ಪಾಲಿಗೆ ದಿ ಬೆಸ್ಟ್ ಗುರು
ಮೊಹಮ್ಮದ್ ಶಮಿ, ಜಸ್ಪ್ರಿತ್ ಬೂಮ್ರಾ.. ಇಬ್ಬರನ್ನ ಹೊರತುಪಡಿಸಿದ್ರೆ ಟೀಮ್ ಇಂಡಿಯಾದಲ್ಲಿರೋದು ಯುವ ವೇಗಿಗಳೇ. ಮೊಹಮ್ಮದ್ ಸಿರಾಜ್ಗೆ ಅನುಭವವಿದ್ರೂ ಇನ್ಕನ್ಸಿಸ್ಟೆನ್ಸಿ ಸಮಸ್ಯೆಯಿದೆ. ಆರ್ಷ್ದೀಪ್ ಸಿಂಗ್, ಮಯಾಂಕ್ ಯಾದವ್, ಉಮ್ರಾನ್ ಮಲಿಕ್.. ಹೀಗೆ ಹಲವಾರು ಯಂಗ್ಸ್ಟರ್ ಟೀಮ್ ಇಂಡಿಯಾದ ಫ್ಯೂಚರ್ ಸ್ಟಾರ್ಸ್ ಎನಿಸಿಕೊಂಡಿದ್ದಾರೆ. ಇವರೆಲ್ಲರನ್ನೂ ಭವಿಷ್ಯದ ಸೂಪರ್ ಸ್ಟಾರ್ಗಳನ್ನಾಗಿ ರೂಪಿಸುವಲ್ಲಿ ಅನುಭವಿ ಮಾರ್ಕೆಲ್ ಪ್ರಮುಖ ಪಾತ್ರ ನಿರ್ವಹಿಸಬಲ್ಲರು.
ಟೀಮ್ ಇಂಡಿಯಾ ಬೇಕಾದ ಪರ್ಫೆಕ್ಟ್ ಟೀಮ್ಮ್ಯಾನ್
ನೂತನ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಒಬ್ಬ ಪರ್ಫೆಕ್ಟ್ ಟೀಮ್ ಮ್ಯಾನ್ ಕೂಡ ಹೌದು.! ತಂಡದ ಒಳಿತಿಗಾಗಿ ಯಾವುದೇ ಕೆಲಸವನ್ನ ಬೇಕಾದ್ರೂ ಸಮರ್ಥವಾಗಿ ನಿಭಾಯಿಸಬಲ್ಲ ಗುಣ ಮಾರ್ಕೆಲ್ಗಿದೆ. ಈ ಎಲ್ಲ ಕಾರಣಗಳಿಂದಲೇ ಟೀಮ್ ಇಂಡಿಯಾ ಮಾಜಿ ವೇಗಿಗಳನ್ನ ಹಿಂದಿಕ್ಕಿ ಮಾರ್ಕೆಲ್ ಬೌಲಿಂಗ್ ಕೋಚ್ ಹುದ್ದೆಗೇರಿದ್ದಾರೆ. ಪಟ್ಟಕ್ಕೇರಿರುವ ಮಾರ್ಕೆಲ್ ಮೇಲೆ ನಿರೀಕ್ಷೆಗಳು ಸಾಕಷ್ಟಿದ್ದು, ಎಷ್ಟರಮಟ್ಟಿಗೆ ಸಕ್ಸಸ್ ಕಾಣ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
ಇದನ್ನೂ ಓದಿ:ಮಗಳು IAS ಆಗುವ ಕನಸು ಕಂಡಿದ್ದ ಅಪ್ಪ-ಅಮ್ಮ; ಕನಸು ನನಸು ಆದಾಗ ಸಂಭ್ರಮಿಸಲು ಅವರೇ ಇರಲಿಲ್ಲ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್