ಪೆಸಿಫಿಕ್ ಸಾಗರದ ಮೇಲೆ ವಿಮಾನಗಳು ಹಾರಾಡುವುದಿಲ್ಲ ಏಕೆ..? ಇಲ್ಲಿವೆ ಆ ಕಾರಣಗಳು

author-image
Gopal Kulkarni
Updated On
ಪೆಸಿಫಿಕ್ ಸಾಗರದ ಮೇಲೆ ವಿಮಾನಗಳು ಹಾರಾಡುವುದಿಲ್ಲ ಏಕೆ..? ಇಲ್ಲಿವೆ ಆ ಕಾರಣಗಳು
Advertisment
  • ಪೆಸಿಫಿಕ್ ಮಹಾಸಾಗರ ಮೇಲೆ ವಿಮಾನಗಳು ಹಾರಾಡುವುದಿಲ್ಲ ಏಕೆ?
  • ಮಹಾಸಾಗರದ ಮೇಲೆ ವಿಮಾನ ಪ್ರಯಾಣ ಎಷ್ಟು ಅಪಾಯಕಾರಿ?
  • ಪೆಸಿಫಿಕ್ ಸಮುದ್ರ ಮೇಲೆ ವಿಮಾನಯಾನ ನಿಷೇಧಕ್ಕೆ ಕಾರಣಗಳು ಇಲ್ಲಿವೆ

ನೀವು ಎಷ್ಟು ಬಾರಿ ವಿಮಾನ ಪ್ರಯಾಣ ಕೈಗೊಂಡಿದ್ದೀರಿ ಅನ್ನುವುದು ವಿಷಯವಲ್ಲ. ನೀವು ಹಲವು ಬಾರಿ ನೂರು ಬಾರಿ ವಿಮಾನ ಪ್ರಯಾಣ ಮಾಡಿರಬಹುದು. ಆಗಸದಲ್ಲಿ ತೇಲತ್ತಿರುವ ಮೋಡಗಳನ್ನು ಕಂಡು ವಿಸ್ಮಿತರಾಗಿರಬಹುದು. ಇವು ವಿಮಾನಯಾನದಲ್ಲಿ ಕಾಣುವ ಅನೇಕ ವಿಸ್ಮಿತ ಅನುಭವಗಳು. ಆದ್ರೆ ಅತಿಹೆಚ್ಚು ವಿಮಾನ ಪ್ರಯಾಣ ಮಾಡಿದವರು, ತಮ್ಮ ವಿಮಾನದ ಕಿಟಕಿಯಿಂದ ಪೆಸಿಫಿಕ್ ಮಹಾಸಾಗರವನ್ನು ನೋಡುವ ಭಾಗ್ಯ ಸಿಗುವುದಿಲ್ಲ. ಜಗತ್ತಿನ ಅತ್ಯಂತ ಆಳವಾದ ಈ ಮಹಾಸಾಗರ ಭೂಮಿಯ ಮೂರನೇ ಒಂದು ಭಾಗವನ್ನು ಆವರಿಸಿಕೊಂಡಿದೆ.155 ಮಿಲಿಯನ್​ ಸ್ಕ್ವೇರ್ ಕಿಲೋ ಮೀಟರ್​ ಉದ್ದವಿರುವ ಈ ಸಾಗರ ಸುಮಾರು 13000 ಅಡಿ ಆಳವನ್ನು ಹೊಂದಿದೆ. 1520ರಲ್ಲಿ ಫರ್ದಿನಂದ್ ಮ್ಯಾಗೆಲನ್​ ಇದನ್ನು ಮೊದಲ ಬಾರಿಗೆ ಪೆಸಿಫಿಕ್ ಮಹಾಸಾಗರ ಎಂದು ಹೆಸರಿಟ್ಟ. ಕಾರಣ ಈ ಸಾಗರ ಸದಾ ಪ್ರಶಾಂತತೆಯಿಂದ ಕೂಡಿದ್ದಕ್ಕೆ. ಇಂತಹ ಮಹಾಸಾಗರದ ಮೇಲೆ ವಿಮಾನ ಹಾರಾಟ ಬಹುತೇಕವಾಗಿ ಆಗುವುದಿಲ್ಲ ಅದಕ್ಕೆ ಕಾರಣವಿದೆ.

ಇದನ್ನೂ ಓದಿ:ಭಾರತೀಯ ಸೇನೆಗೆ ಗುಡ್​ನ್ಯೂಸ್ ಕೊಟ್ಟ ಟ್ರಂಪ್​; ಸದ್ಯದಲ್ಲೇ ಆರ್ಮಿ ಬತ್ತಳಿಕೆಗೆ ಸೇರಲಿದ ದೊಡ್ಡ ಬ್ರಹ್ಮಾಸ್ತ್ರ

ಹೆಚ್ಚಿನ ಇಂಧನ ಬೇಕು

ಈಗಾಗಲೇ ಹೇಳಿದಂತೆ ಪಿಸಿಫಿಕ್ ಮಹಾಸಾಗರ ತಂಬಾ ವ್ಯಾಪಕಾವಾಗಿ ಹರಡಿಕೊಂಡಿರುವ ಸಾಗರ. ಇದರ ಮೇಲೆ ಹಾರಿಕೊಂಡು ಪ್ರಯಾಣ ಬೆಳೆಸಲು ವಿಮಾನಗಳಿಗೆ ಅನಿವಾರ್ಯವಾಗಿ ಹೆಚ್ಚಿನ ಇಂಧನ ಬೇಕಾಗುತ್ತದೆ. ಮತ್ತು ಪ್ರಯಾಣವೂ ದೀರ್ಘವಾಗುತ್ತದೆ. ಹೀಗಾಗಿ ಆದಷ್ಟು ವಾಣಿಜ್ಯ ವಿಮಾನಗಳು ಪೆಸಿಫಿಕ್ ಸಾಗರದ ಮೇಲಿನ ಹಾರಾಟವನ್ನು ಕೈಬಿಡುತ್ತವೆ.

publive-image

ದೀರ್ಘಪ್ರಯಾಣ
ಈಗಗಲೇ ಹೇಳಿದಂತೆ ಪೆಸಿಫಿಕ್ ಸಾಗರ ಭೂಮಿಯ ಮೇಲೆ ವಿಶಾಲವಾಗಿ ಹರಡಿಕೊಂಡಿದೆ. ಕರ್ವಡ್​ ರೂಟ್​ಗಿಂತ ಈ ಪ್ರದೇಶದ ಮೇಲೆ ಹಾರಾಟ ನಡೆಸುವುದರಿಂದ ಪ್ರಯಾಣ ಇನ್ನುಷ್ಟು ದೀರ್ಘವಾಗುತ್ತದೆ. ಇಂಧನ ಉಳಿಸಲು ಹಾಗೂ ಪ್ರಯಾಣದ ಸಮಯವನ್ನು ಉಳಿಸಲು ವಿಮಾನಗಳು ಈ ಸಾಗರದ ಮೇಲೆ ಹಾರಾಟ ನಡೆಸುವುದಿಲ್ಲ.

ಇದನ್ನೂ ಓದಿ:ಪ್ರೇಮಿಗಳ ದಿನದಂದೇ ಪ್ರಿಯತಮನ ವಿರುದ್ಧ ರಿವೇಂಜ್ ತೀರಿಸಿಕೊಂಡ ಯುವತಿ; ಸುಸ್ತಾದ ಪ್ರಿಯಕರ..!

ಪ್ರಕ್ಷುಬ್ಧ ವಾತಾವರಣದ ಅಪಾಯ
ಪೆಸಿಫಿಕ್ ಮಹಾಸಾಗರ ತುಂಬಾ ಊಹೆ ಮಾಡಲಾಗದಂತಹ ಭಯಾನಕ ವಾತಾವರಣವನ್ನು ಹೊಂದಿದೆ. ಭೀಕರ ಗಾಳಿ ಬಿರುಗಾಳಿಗಳು ಈ ಸಮುದ್ರದ ವಾಯುಪ್ರದೇಶದಲ್ಲಿ ಉಂಟಾಗುತ್ತವೆ. ಇದು ವಿಮಾನ ಹಾರಾಟಕ್ಕೆ ತುಂಬಾ ಪ್ರತಿಕೂಲ ವಾತಾವರಣವನ್ನು ಸೃಷ್ಟಿಸುತ್ತವೆ. ಹೀಗಾಗಿ ಈ ಮಹಾಸಾಗರದ ಮೇಲೆ ವಿಮಾನಳು ಹಾರಾಟ ನಡೆಸುವುದಿಲ್ಲ.

ತುರ್ತುಭೂಸ್ಪರ್ಷಕ್ಕೆ ಅವಕಾಶಗಳು ಕಡಿಮೆ
ಒಂದು ವೇಳೆ ಪೆಸಿಫಿಕ್​ ಮಹಾಸಾಗರದ ಮೇಲೆ ವಿಮಾನಗಳ ಹಾರಾಟ ನಡೆಸುವಾಗ ವಿಮಾನಗಳಲ್ಲಿ ಏನಾದರೂ ತಾಂತ್ರಿಕ ದೋಷ ಅಥವಾ ಇನ್ನಾವುದಾದರು ಸಮಸ್ಯೆ ಕಂಡು ಬಂದಲ್ಲಿ ತುರ್ತು ಭೂಸ್ಪರ್ಶ ಅಥವಾ ಎಮರ್ಜೆನ್ಸಿ ಲ್ಯಾಂಡಿಂಗ್​​ ಮಾಡಲು ಅವಕಾಶಗಲೇ ಇಲ್ಲ. ಪರ್ಯಾಯ ವ್ಯವಸ್ಥೆಗಳು ಕೂಡ ಇಲ್ಲ ಹೀಗಾಗಿ ಹಲವು ದೂರಾಲೋಚನೆಯಿಂದಾಗಿ ಪೆಸಿಫಿಕ್ ಮಹಾಸಾಗರದ ಮೇಲೆ ವಿಮಾನಗಳು ಹಾರಾಟ ನಡೆಸುವುದಿಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment