/newsfirstlive-kannada/media/post_attachments/wp-content/uploads/2024/11/Highschool-Love-2.jpg)
ಹೈಸ್ಕೂಲ್ ದಿನಗಳನ್ನು ನೆನಪಿಸಿಕೊಳ್ಳಿ. ಅದು ಆಗಷ್ಟೇ ಮನಸ್ಸು ಹಾಗೂ ದೇಹ ಹದಿಹರೆಯಕ್ಕೆ ಕಾಲಿಡುವ ವಯಸ್ಸು. ಇನ್ಫ್ಯಾಚುಯೇಷನ್, ಕ್ರಶ್ಗಳು ಹುಟ್ಟುವ ಒಂದು ರಮ್ಯಮೋಹ ಕಾಲ. ಇದೇ ಸಮಯದಲ್ಲಿ ಪ್ರೀತಿಯಲ್ಲದ ಪ್ರೀತಿಗಳು ಚಿಗುರೊಡೆಯುತ್ತವೆ. ಗಂಡು ಹೆಣ್ಣಿಗೆ, ಹೆಣ್ಣು ಗಂಡಿಗೆ ಆಕರ್ಷಣೀಯವಾಗಿ ಕಾಣಲು. ಇದೇ ನನ್ನ ಬದುಕಿನ ಮೊದಲ ಹಾಗೂ ಕೊನೆಯ ಪ್ರೇಮ ಕಥೆಯೆನ್ನುವಂತಹ ಭಾವಗಳು ಅರಳವ ಸಮಯವದು. ಈ ಯೌವನದ ಮೊದಲ ಹೊಸ್ತಿಲಲ್ಲಿ ಹುಟ್ಟುವ ಪ್ರೇಮವು ಅದೆಷ್ಟೋ ವರ್ಷಗಳ ಕಾಲ ನಮ್ಮನ್ನು ಅದೇ ಮಧುರ ಅಮಲಿನಲ್ಲಿ ಕರೆದುಕೊಂಡು ಹೋಗುತ್ತವೆ. ಆದರೂ ಕೊನೆಗೊಮ್ಮೆ ಅವು ಮುರಿದು ಬೀಳುತ್ತವೆ.
ಹೈಸ್ಕೂಲ್ ಸಮಯದಲ್ಲಿ ಹುಟ್ಟುವ ಪ್ರೇಮಗಳು ಬೇಗನೇ ಅಳಿದು ಹೋಗುತ್ತವೆ ಕಾರಣ ಕಾಲೇಜು ಜೀವನ. ಕಾಲೇಜು ಮೆಟ್ಟಿಲು ಏರಿದ ಮೇಲೆ ಮನಸ್ಸು ದೇಹಗಳು ದೋರೆಗಾಯಿ, ಇತ್ತ ಪೂರ್ತಿ ಹಣ್ಣು ಅಲ್ಲದ ಪೂರ್ತಿ ಕಾಯಿಯೂ ಅಲ್ಲದ ಸ್ಥಿತಿಯಲ್ಲಿ ಅಲ್ಲಿ ನಾವು ಇರುತ್ತೇವೆ. ನಮ್ಮ ಆಕರ್ಷಣೆಗಳು, ನಮ್ಮ ದಿಕ್ಕುಗಳು ಬದಲಾಗುವ ಸಮಯವದು. ಈ ವೇಳೆ ಹೈಸ್ಕೂಲ್ನ ರಮ್ಯಮೋಹಕಾಲದಲ್ಲಿ ಸೃಷ್ಟಿಯಾದ ಸಂಬಂಧಗಳನ್ನು ನಿಭಾಯಿಸುವುದು ಕೊಂಚ ಕಠಿಣ ಎನಿಸಲು ತೊಡಗುತ್ತದೆ. ನಮ್ಮ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗಳು ಬೇರೆ ದಿಕ್ಕಿನತ್ತ ಹೊರಳಿರುತ್ತವೆ.
ಇದನ್ನೂ ಓದಿ:ತಂದೆಯಿಂದ ಮಕ್ಕಳಿಗೆ ಈ 7 ವಿಶೇಷ ಲಕ್ಷಣಗಳು ಅನುವಂಶಿಕವಾಗಿ ಬರುತ್ತವೆ.. ಯಾವುವು ಗೊತ್ತಾ?
ಹೈಸ್ಕೂಲ್ನಲ್ಲಿ ಸೃಷ್ಟಿಯಾಗುವ ಪ್ರಣಯಗಳು ಅನನ್ಯ, ಆಗಿರುವ ವಾತಾವರಣ ನಿತ್ಯವೂ ಸಂಗಾತಿ ಎದುರಾಗುವುದು. ಭಾವನೆಗಳು ವಿನಿಮಯವಾಗುವುದು ಈ ಎಲ್ಲದರ ಮೂಲಕ ಒಂದು ಅದ್ಭುತ ಗೆಳೆತನವೊಂದು ಉಭಯ ಮನಸ್ಸುಗಳಲ್ಲಿ ಸೃಷ್ಟಿಯಾಗಿರುತ್ತದೆ. ಅದ ಭಾವನಾತ್ಮಕವಾಗಿ ಆಳಕ್ಕೂ ಕೂಡ ಹೋಗಿರುತ್ತದೆ. ಆದರೂ ಕೂಡ ಇವು ಕಟ್ಟಕಡೆಯವರೆಗೂ ಬಂದು ಹೋಗಿ ನಿಲ್ಲುವುದಿಲ್ಲ. ಎಲ್ಲೊ ಒಂದು ಕಡೆ ಈ ಭಾವನಾತ್ಮಕ ಹಾಗೂ ಪ್ರೇಮಮಯ ಕೊಂಡಿ ಕಳಚಿ ಬೀಳುತ್ತದೆ.
ಇದನ್ನೂ ಓದಿ: Angry Kids: ಅತಿಯಾದ ಕೋಪ.. ನಿಮ್ಮ ಮಗುವಿನ ಭಾವನೆ ನಿಭಾಯಿಸಲು ಇಲ್ಲಿದೆ ಉಪಾಯ..!
ಇದಕ್ಕೆ ಕಾರಣವೇನು ಅನ್ನುವುದನ್ನ ಅಬ್ಸೆ ಸ್ಯಾಮ್ ಎಂಬ ಮಾನಸಿಕ ತಜ್ಞರು ಹೇಳುವ ಪ್ರಕಾರ ಹೈಸ್ಕೂಲ್ನಲ್ಲಿ ಹುಟ್ಟುವ ಮಧುರ ಪ್ರೇಮ ಅನೇಕ ಹೊಸ ಅನುಭವಗಳನ್ನು ನೀಡುತ್ತದೆ.ಒಂದು ಭಾವನಾತ್ಮಕ ಬೆಸುಗೆಯನ್ನು ಸೃಷ್ಟಿಸಿರುತ್ತದೆ. ದಿಗಂತದಷ್ಟು ವಿಶಾಲಕ್ಕೆ ಪ್ರೇಮವೊಂದು ಹರಡಿಕೊಂಡು ನಿಂತಿರುತ್ತದೆ. ಇದೆಲ್ಲದರ ನಡುವೆಯೂ ಕೂಡ ಮುಂದೊಂದು ದಿನ ಈ ಸಂಗಾತಿಗಳು ಬೇರಯಾಗುತ್ತಾರೆ ಕಾರಣ ಹಲವು ಇವೆ
ಈ ಒಂದು ಸಂಬಂಧಗಳು ಸೃಷ್ಟಿಯಾಗಿದ್ದು ದೇಹದಲ್ಲಿ ಭಾವನಾತ್ಮಕ ಹಾಗೂ ನರವೈಜ್ಞಾನಿಕ ಬೆಳವಣಿಗೆಗಳು ಆಗುವ ಸಂದರ್ಭದಲ್ಲಿ. ಮುಂದೆ ಹೋದಂತೆಲ್ಲಾ ಸಂಗಾತಿಗಳು ಅಭ್ಯಾಸ ಆಕರ್ಷಣೆ, ಯೋಚನೆ, ಅನುಭವಗಳು ಬೇರೆ ಬೇರೆಯಾಗುತ್ತಾ ಹೋಗುತ್ತವೆ.
ಇಬ್ಬರ ನಡುವಿನ ಆಸಕ್ತಿ, ಆಕರ್ಷಣೆಯೂ ದಿನ ಕಳೆದಂತೆ ಫೇಡ್ ಆಗುತ್ತಾ ಸಾಗುತ್ತವೆ ಇದು ಹೈಸ್ಕೂಲ್ ಪ್ರೇಮಗಳು ಕೆಡವಿ ಹಾಕುವುದರಲ್ಲಿ ಮೊದಲ ಪಾತ್ರವಹಿಸುತ್ತವೆ. ಹೀಗೆ ಹಲವು ಕಾರಣಗಳಿಂದಾಗಿ ಹೈಸ್ಕೂಲ್ನಲ್ಲಿ ಮೊದಲು ತಾಕಿದ ಪ್ರೇಮದ ಕಿರಣ ದಿನ ಕಳೆದಂತೆ ಕಣ್ಮರೆಯಾಗುತ್ತಾ ಸಾಗುತ್ತದೆ. ಅದು ಒಂದೇ ಬದಿಯಿಂದ ಮಾತ್ರವಲ್ಲ ಎರಡು ಕಡೆಯಲ್ಲೂ ಇದು ಆಗುವ ಸಾಧ್ಯತೆಯೇ ಹೆಚ್ಚು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ