ಭಾರತದ ಬಹುತೇಕ ನದಿಗಳು ಪೂರ್ವಕ್ಕೆ ಹರಿಯುತ್ತವೆ..? ಇದಕ್ಕೆ ಕಾರಣ ಏನು ಗೊತ್ತಾ..?

author-image
Ganesh
Updated On
ಭಾರತದ ಬಹುತೇಕ ನದಿಗಳು ಪೂರ್ವಕ್ಕೆ ಹರಿಯುತ್ತವೆ..? ಇದಕ್ಕೆ ಕಾರಣ ಏನು ಗೊತ್ತಾ..?
Advertisment
  • ಗಂಗಾ, ಬ್ರಹ್ಮಪುತ್ರದಂತಹ ನದಿಗಳು ಪೂರ್ವಕ್ಕೆ ಹರಿಯುತ್ತವೆ
  • ಕೃಷ್ಣ, ಕಾವೇರಿ, ಗೋದಾವರಿ ಕೂಡ ಹರಿಯೋದು ಪೂರ್ವಕ್ಕೆ
  • ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ನದಿಗಳು ಯಾವ್ಯಾವುದು?

ಭಾರತದಲ್ಲಿ ಅನೇಕ ನದಿಗಳು ಪೂರ್ವಕ್ಕೆ ಹರಿಯುತ್ತವೆ. ಬಂಗಾಳಕೊಲ್ಲಿಯನ್ನು ಸೇರುವ ಅನೇಕ ನದಿಗಳು ಪಶ್ಚಿಮದಿಂದ ಪೂರ್ವಕ್ಕೆ ಏಕೆ ಹರಿಯುತ್ತವೆ ಅಂತಾ ನಿಮಗೆ ಗೊತ್ತಾ..?

ಕಾರಣ ಇಲ್ಲಿದೆ..

ಭಾರತದಲ್ಲಿ ಸುಮಾರು 400 ಕ್ಕೂ ಹೆಚ್ಚು ನದಿಗಳು ಹರಿಯುತ್ತವೆ. ಅವು ವಿವಿಧ ದಿಕ್ಕುಗಳಿಂದ ಹರಿದು ಬಂಗಾಳಕೊಲ್ಲಿ ಮತ್ತು ಅರೆಬ್ಬಿ ಸಮುದ್ರವನ್ನು ಸೇರುತ್ತವೆ. ಈ ನದಿಗಳಲ್ಲಿ ಕೆಲವು ಜನರ ನಂಬಿಕೆಯೊಂದಿಗೆ ಸಂಬಂಧ ಹೊಂದಿವೆ. ನದಿಗಳನ್ನು ತಾಯಿ ರೂಪದಲ್ಲಿ ಪೂಜಿಸುತ್ತಾರೆ. ಈ ನದಿಗಳು ಜೀವವೈವಿಧ್ಯತೆ ಹೊಂದಿವೆ. ಅಲ್ಲದೇ ಅವು ಭೌಗೋಳಿಕವಾಗಿಯೂ ಮುಖ್ಯವಾಗಿವೆ.

ಯಾಕೆ ಪೂರ್ವಕ್ಕೆ ಹರಿಯುತ್ತವೆ..?

ಭಾರತದ ಹೆಚ್ಚಿನ ಭೂಪ್ರದೇಶವು ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಾಗಿದೆ. ಹೀಗಾಗಿ ಭಾರತದ ಹೆಚ್ಚಿನ ನದಿಗಳು ಪೂರ್ವಕ್ಕೆ ಹರಿಯುತ್ತವೆ. ಈ ಇಳಿಜಾರು ಹಿಮಾಲಯದಿಂದ ಬಂಗಾಳಕೊಲ್ಲಿಯವರೆಗೆ ಇದೆ. ಬಹುತೇಕ ನದಿಗಳು ಹಿಮಾಲಯದಿಂದ ಹುಟ್ಟಿಕೊಳ್ಳುತ್ತವೆ. ಇದೇ ಕಾರಣಕ್ಕೆ ಪಶ್ಚಿಮದಿಂದ ಪೂರ್ವಕ್ಕೆ ಇಳಿಜಾರಿನಲ್ಲಿ ನದಿಗಳು ಹರಿಯುತ್ತವೆ..

ಇದನ್ನೂ ಓದಿ: ರಸ್ತೆಯಲ್ಲಿ ಮಲಗಿ ರಾತ್ರಿ ಕಳೆದ ಸ್ಪೀಕರ್ ಯು.ಟಿ ಖಾದರ್; ಹಜ್ ಪ್ರವಾಸದಲ್ಲಿ ವಿಶೇಷ ಪ್ರಾರ್ಥನೆ

publive-image

ಹಿಮಾಲಯ ಪರ್ವತಗಳು ಭಾರತದ ಉತ್ತರದಲ್ಲಿದ್ದು, ಅದು ನದಿಗಳ ಮೂಲವಾಗಿದೆ. ಹಿಮಾಲಯದಿಂದ ಹುಟ್ಟುವ ಗಂಗಾ ಮತ್ತು ಬ್ರಹ್ಮಪುತ್ರದಂತಹ ನದಿಗಳು ಪೂರ್ವಕ್ಕೆ ಹರಿಯುತ್ತವೆ. ಭಾರತದ ದಕ್ಷಿಣ ಭಾಗದಲ್ಲಿ ಹರಿಯುವ ಕೃಷ್ಣ, ಕಾವೇರಿ, ಗೋದಾವರಿ ನದಿಗಳು ಸಹ ಪೂರ್ವದ ಕಡೆಗೆ ಹರಿಯುತ್ತವೆ. ಹಿಮಾಲಯದಿಂದ ಹುಟ್ಟುವ ನದಿಗಳಂತೆ ಇವು ಇಳಿಜಾರಿನ ಭೂಮಿಯಲ್ಲಿ ಪೂರ್ವಕ್ಕೆ ಹರಿಯುತ್ತವೆ..

ಬಂಗಾಳಕೊಲ್ಲಿಯು ನದಿಗಳು ಸೇರುವ ಕೊನೆಯ ಸ್ಥಳ. ಇದು ಭಾರತದ ಪೂರ್ವದಲ್ಲಿದೆ. ಇನ್ನು ನರ್ಮದಾ ಮತ್ತು ತಪತಿ ಪೂರ್ವದಿಂದ ಪಶ್ಚಿಮಕ್ಕೆ ಹಿಮ್ಮುಖವಾಗಿ ಹರಿಯುತ್ತವೆ.. ಇವು ರಿಫ್ಟ್ ಕಣಿವೆಯಲ್ಲಿ ಹರಿಯುತ್ತವೆ. ಇಲ್ಲಿ ಇಳಿಜಾರು ಪೂರ್ವದಿಂದ ಪಶ್ಚಿಮಕ್ಕೆ ಇದೆ..

ಇದನ್ನೂ ಓದಿ: ಅಭಿಮಾನಿಗಳಿಗೆ RCB ಅಂದ್ರೆ ಜೀವ.. ಫ್ರಾಂಚೈಸಿ ಮಾಲೀಕರಿಗೆ ಫ್ಯಾನ್ಸ್ ಅಂದ್ರೆ ಜಸ್ಟ್ ಬ್ಯುಸಿನೆಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment