/newsfirstlive-kannada/media/post_attachments/wp-content/uploads/2025/02/NAGASADHUS-1-1.jpg)
ಮಹಾಕುಂಭಮೇಳದಲ್ಲಿ ನಾವು ನೋಡಿದ ಬಹುತೇಕ ನಾಗಾಸಾಧುಗಳು ಉದ್ದನೆಯ ಜಡೆಯನ್ನು ಬಿಟ್ಟಿರುತ್ತಾರೆ. ಸುಕ್ಕುಗಟ್ಟಿ ದಪ್ಪನೆಯ ಜಡೆ, ಹಾಗೂ ಬೂದಿ ಬಳಿದುಕೊಂಡ ಮುಖ ಅವರ ಪ್ರಮುಖ ಲಕ್ಷಣ. ನಾಗಾಸಾಧುಗಳು ಈ ರೀತಿಯಾಗಿ ಉದ್ದನೆಯ ಜಡೆ ಬಿಡುವುದೇಕೆ. ಅದಕ್ಕೆ ಇರುವ ಅಸಲಿ ಕಾರಣವೇನು ಎಂಬುದರ ಇಲ್ಲಿ ಸಂಪೂರ್ಣ ಮಾಹಿತಿ ಇದೆ.
ನಾಗಾಸಾಧುಗಳು ಅಂದರೆನೇ ತಪಸ್ಸಿಗೆ ಅನುಷ್ಠಾನಕ್ಕೆ ನಿಂತವರು. ತಮ್ಮನ್ನು ತಾವು ಬೋಲೆನಾಥನಿಗೆ ಅಂದರೆ ಶಿವನಿಗೆ ಸಂಪೂರ್ಣವಾಗಿ ಅರ್ಪಿಸಿಕೊಂಡವರು ಹಾಗೂ ಅವನ ಧ್ಯಾನಕ್ಕೆ ತಮ್ಮನ್ನು ತಾವು ಮುಡಿಪಾಗಿಟ್ಟುಕೊಂಡಿರುತ್ತಾರೆ. ನಾಗಾಸಾಧುಗಳು ಒಂದು ಬಾರಿ ತಪಸ್ಸಿಗೆ ಕುಳಿತರೆ ತಿಂಗಳುಗಟ್ಟಲೆ ಮೇಲೇಳುವುದಿಲ್ಲ ಈ ಸಮಯದಲ್ಲಿ ಅವರು ಸ್ನಾನವನ್ನು ಮಾಡುವುದಿಲ್ಲ, ತಮ್ಮ ಕೂದಲನ್ನು ಕತ್ತರಿಸುವುದಿಲ್ಲ. ಆ ಮಟ್ಟಿನ ತಪೋನಿಷ್ಠೆಯಲ್ಲಿ ಮುಳುಗಿರುತ್ತಾರೆ.
ಇದನ್ನೂ ಓದಿ:Kumbh Mela; ಮಹಾಕುಂಭಕ್ಕೆ ಹೋಗಲು ಆಗದ ಕನ್ನಡಿಗರಿಗೆ ಸರ್ಕಾರದಿಂದ ಗುಡ್ನ್ಯೂಸ್
ವರ್ಷಾನುಗಟ್ಟಲೇ ತಲೆಗೂದಲಿನ ಮೇಲೆ ನೀರು ಬೀಳದ ಕಾರಣ ಅವುಗಳು ಗಂಟಿಕ್ಕಿಕೊಂಡು ದಪ್ಪವಾಗಿ ಬೆಳೆಯುತ್ತವೆ. ಉದ್ದನೆಯ ಜಡೆಗಳು ಅವರ ತಪಸ್ಸಿನ ಹಾಗೂ ಧ್ಯಾನದ ಗುರುತುಗಳಾಗಿ ಅವರು ಕಂಡುಕೊಳ್ಳುತ್ತಾರೆ ಹೀಗಾಗಿ ಅವರು ಎಂದಿಗೂ ಕೂಡ ಕೂದಲಿಗೆ ಕತ್ತರಿಯನ್ನು ಮುಟ್ಟಿಸುವುದಿಲ್ಲ. ಹೀಗಾಗಿಯೇ ಅವರು ಉದ್ದನೆಯ ಜಡೆಯನ್ನು ಬಿಟ್ಟುಕೊಂಡು ಅಲೆದಾಡುತ್ತಾರೆ.
ಇದನ್ನೂ ಓದಿ:ಪ್ರಯಾಗ್ ರಾಜ್ ಮಹಾಕುಂಭಮೇಳದಲ್ಲಿ ಡಿ.ಕೆ ಶಿವಕುಮಾರ್ ಪುಣ್ಯಸ್ನಾನ; ಟಾಪ್ 10 ಪೋಟೋಗಳು!
ಇನ್ನು ಶಿವನನ್ನು ಕೂಡ ಜಟಾಧಾರಿ ಎಂದೇ ಕರೆಯಲಾಗುತ್ತದೆ. ಶಿವನಿಗೆ ತಮ್ಮನ್ನು ತಾವು ಸಮರ್ಪಿಸಿಕೊಂಡ ನಾಗಾಸಾಧುಗಳು ಶಿವನಂತೆಯೇ ಜಟಾಧಾರಿಗಳಾಗಿ ಇರಲು ಇಷ್ಟಪಡುತ್ತಾರೆ.ಅವರ ಉದ್ದನೆಯ ಜಡೆಯೂ ಕೂಡ ಶಿವನೆಡೆಗಿನ ಅವರ ಭಕ್ತಿಯ ಪ್ರತೀಕವಾಗಿ ನಾಗಾಸಾಧುಗಳು ಕಾಣುತ್ತಾರೆ. ಹೀಗಾಗಿ ಅವರು ಉದ್ದನೆಯ ಜಡೆಯನ್ನು ಬಿಡುತ್ತಾರೆ. ಇನ್ನು ಶಿವ ಭಸ್ಮಧಾರಿ ಹೀಗಾಗಿಯೇ ನಾಗಾಸಾಧುಗಳು ಕೂಡ ತಮ್ಮ ಮೈಗೆ ಭಸ್ಮ ಬಳೆದುಕೊಂಡು ಶಿವನನನ್ನು ಆರಾಧಿಸುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ