Advertisment

ಪುಟ್ಟ ಮಕ್ಕಳ ಕೈಗೆ ಬೆಳ್ಳಿ ಬಳೆ ಮತ್ತು ಕಾಲಿಗೆ ಗೆಜ್ಜೆ ಹಾಕೋದ್ಯಾಕೆ? ಇಲ್ಲಿದೆ ವೈಜ್ಞಾನಿಕ ಕಾರಣ!

author-image
Veena Gangani
Updated On
ಪುಟ್ಟ ಮಕ್ಕಳ ಕೈಗೆ ಬೆಳ್ಳಿ ಬಳೆ ಮತ್ತು ಕಾಲಿಗೆ ಗೆಜ್ಜೆ ಹಾಕೋದ್ಯಾಕೆ? ಇಲ್ಲಿದೆ ವೈಜ್ಞಾನಿಕ ಕಾರಣ!
Advertisment
  • ಬೆಳ್ಳಿಯು ದೇಹದ ಮೇಲೆ ತಂಪಾಗಿಸುವ ಪರಿಣಾಮವನ್ನು ಬೀರುತ್ತಾ!
  • ಬೆಳ್ಳಿ ವಸ್ತುವನ್ನು ಮಕ್ಕಳಿಗೆ ಹಾಕಿದ್ರೆ ಏನೆಲ್ಲಾ ಪ್ರಯೋಜನ ಆಗುತ್ತೆ?
  • ಆಗ ತಾನೇ ಹುಟ್ಟಿದ ಮಗುವಿನ ಕೈಗೆ ಬೆಳ್ಳಿ ಬಳೆ ಹಾಕೋದು ಏಕೆ?

ಮನೆಯಲ್ಲಿ ಪುಟಾಣಿ ಮಕ್ಕಳು ಇದ್ರೆ ಎಷ್ಟು ಚೆಂದ ಅಲ್ವಾ. ಯಾವ ಮನೆಯಲ್ಲಿ ಮಕ್ಕಳು ನಗು ನಗುತ್ತಾ ಇರುತ್ತಾರೋ ಅಲ್ಲಿ ಸಂಭ್ರಮದಂತೆ ಬಾಸವಾಗುತ್ತದೆ. ಇನ್ನೂ ಆಗ ತಾನೇ ಹುಟ್ಟಿದ ಮಗುವಿನ ಬಗ್ಗೆ ತಾಯಿ ಹಾಗೂ ಮನೆಯವರು ಕಾಳಜಿ ವಹಿಸುತ್ತಾರೆ. ತಮ್ಮಗಿದ್ದ ಎಲ್ಲಾ ಕೆಲಸ ಬಿಟ್ಟು ಮಗುವಿನ ಲಾಲನೆ ಪಾಲನೆಯಲ್ಲಿ ಪೋಷಕರು ಬ್ಯುಸಿಯಾಗಿತ್ತಾರೆ.

Advertisment

ಇದನ್ನೂ ಓದಿ:ದೇವರ ಪೂಜೆಗೆ ಬಳಸುವ ಹಿತ್ತಾಳೆ ಪಾತ್ರೆ ಜಿಡ್ಡನ್ನು ತೆಗೆಯುವುದು ಹೇಗೆ? ಇಲ್ಲಿವೆ ಸುಲಭ ಟ್ರಿಕ್ಸ್​!

publive-image

ಹಾಗೇ ಸಾಕಷ್ಟು ಪೋಷಕರಿಗೆ ಈ ವಿಚಾರದ ಬಗ್ಗೆ ಗೊತ್ತಿರೋದಿಲ್ಲ. ಏಕೆ ಹೊಸದಾಗಿ ಹುಟ್ಟಿದ ಮಗುವಿನ ಕೈಗೆ ಬೆಳ್ಳಿಯ ಬಳೆ ಹಾಕುತ್ತಾರೆ? ಜೊತೆಗೆ ಕಾಲಿಗೆ ಬೆಳ್ಳಿ ಗೆಜ್ಜೆ ಹಾಕೋದು ಏಕೆ ಅಂತ ಮೊದಲು ಇದರ ಹಿಂದಿನ ವೈಜ್ಞಾನಿಕ ಕಾರಣ ತಿಳಿದುಕೊಳ್ಳಿ. ಅನೇಕ ಸಂಸ್ಕೃತಿಗಳಲ್ಲಿ, ವಿಶೇಷವಾಗಿ ಭಾರತದಲ್ಲಿ ವಿವಿಧ ಕಾರಣಗಳಿಗಾಗಿ ಮಕ್ಕಳಿಗೆ ಬೆಳ್ಳಿ ಬಳೆ ಹಾಗೂ ಗೆಜ್ಜೆಯನ್ನು ಹಾಕಲಾಗುತ್ತದೆ.

publive-image

ಇದರ ಹಿಂದಿನ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಮಹತ್ವವೇನು?

ಬೆಳ್ಳಿಯೂ ಮಂಗಳಕರ ಲೋಹವೆಂದು ಪರಿಗಣಿಸಲಾಗುತ್ತದೆ. ಬೆಳ್ಳಿ ವಸ್ತುವನ್ನು ಹಾಕಿಕೊಂಡ ಪ್ರತಿಯೊಬ್ಬರಿಗೂ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಇಷ್ಟೇ ಅಲ್ಲದೇ ಹೀಗೆ ಬೆಳ್ಳಿಯು ಮಕ್ಕಳನ್ನು ದುಷ್ಟಶಕ್ತಿಗಳಿಂದ ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಿಸುತ್ತದೆ ಎಂದು ನಂಬಲಾಗಿದೆ. ಬೆಳ್ಳಿ ಆಭರಣಗಳನ್ನು ಧರಿಸುವುದು ತಲೆಮಾರುಗಳಿಂದ ಬಂದ ಸಂಪ್ರದಾಯವಾಗಿದೆ. ಹೀಗಾಗಿ ಇದನ್ನು ಇಂದಿಗೂ ಸಹ ಅನುಸರಿಸಿಕೊಂಡು ಹೋಗಲಾಗುತ್ತಿದೆ.

Advertisment

publive-image

ಬೆಳ್ಳಿ ಧರಿಸುವುದರಿಂದ ಆರೋಗ್ಯದ ಮೇಲೆ ಆಗೋ ಪ್ರಯೋಜನಗಳೇನು?

ಬೆಳ್ಳಿಯು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಬ್ಯಾಕ್ಟೀರಿಯಾ ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ. ಬೆಳ್ಳಿಯು ದೇಹದ ಮೇಲೆ ತಂಪಾಗಿಸುವ ಪರಿಣಾಮವನ್ನು ಬೀರುತ್ತದೆ. ಅದರಲ್ಲೂ ಮಗುವನ್ನು ಶಾಂತಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಮುಖ್ಯವಾಗಿ ಹೊಸದಾಗಿ ಹುಟ್ಟಿದ ಮಗುವಿನ ಮೇಲಿನ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅಲ್ಲದೇ ಬೆಳೆಯುತ್ತಿರುವ ಮಕ್ಕಳ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಈ ಮೇಲೆ ಉಲ್ಲೇಖಿಸಿರೋ ಅಂಶಗಳಿಗೆ ವೈಜ್ಞಾನಿಕ ಪುರಾವೆಗಳಿವೆ ಎಂಬುದನ್ನು ದಯವಿಟ್ಟು ಗಮನದಲ್ಲಿ ಇಟ್ಟುಕೊಳ್ಳಿ. ಇನ್ನೂ ಹೆಚ್ಚಿನದಾಗಿ ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ತಿಳಿದುಕೊಳ್ಳಬೇಕಾದರೇ ತಜ್ಞರು ಅಥವಾ ಆರೋಗ್ಯ ವೃತ್ತಿಪರರನ್ನು (Health professionals) ಸಂಪರ್ಕಿಸಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment