ಮನೆಯಲ್ಲಿ ಕಾಮಧೇನು ಮೂರ್ತಿಯನ್ನು ಇಡುವುದು ಏಕೆ? ಇದರ ಹಿನ್ನೆಲೆ ಏನು?

author-image
Gopal Kulkarni
Updated On
ಮನೆಯಲ್ಲಿ ಕಾಮಧೇನು ಮೂರ್ತಿಯನ್ನು ಇಡುವುದು ಏಕೆ? ಇದರ ಹಿನ್ನೆಲೆ ಏನು?
Advertisment
  • ಕಾಮಧೇನು ಪೂಜೆಗೆ ಹಿಂದೂ ಸಂಪ್ರದಾಯದಲ್ಲಿ ಅಷ್ಟೊಂದು ಮಹತ್ವವೇಕೆ?
  • ದೇವಲೋಕದ ಗೋಮಾತೆಯ ಪೂಜೆಯಿಂದ ಆಗಲಿರುವ ಪ್ರಯೋಜನಗಳೇನು?
  • ಯಾವ ದಿಕ್ಕಿನಲ್ಲಿ ಕಾಮಧೇನುವನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಬೇಕು ಗೊತ್ತಾ?

ಹಿಂದೂ ಸಂಪ್ರದಾಯದಲ್ಲಿ ಗೋವುಗಳನ್ನು ದೇವರ ಸಮಕ್ಕಿಟ್ಟು ಪೂಜಿಸಲಾಗುತ್ತದೆ. 33 ಕೋಟಿ ದೇವತೆಗಳು ಗೋವುಗಳಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆಯಿದೆ. ಇದು ಸಾಮಾನ್ಯ ಗೋವುಗಳ ಕಥೆಯಾದರೆ ದೇವಲೋಕದ ಕಾಮಧೇನುವಿಗೆ ವಿಶೇಷ ಸ್ಥಾನಮಾನವಿದೆ. ದೇವಲೋಕ ಬಿಟ್ಟರೆ ಅಂತಹದೊಂದು ಗೋವು ವಶಿಷ್ಠ ಮಹರ್ಷಿಗಳ ಬಳಿ ನಂದಿನಿ ಎಂಬ ದೇವಲೋಕದ ಗೋಮಾತೆ ಇತ್ತು. ಅದನ್ನು ಬೇಡಿ ಬಂದ ಕೌಶಿಕ ಮಹಾರಾಜ ಮುಂದೆ ಹೇಗೆ ವಿಶ್ವಾಮಿತ್ರನಾದ ಎಂಬ ಕಥೆ ನಿಮಗೆ ಗೊತ್ತೆ ಇದೆ. ಇದರ ಅರ್ಥ ಸಾಮಾನ್ಯ ಜನರಿಗೆ ಕಾಮಧೇನು ಸಿಗುವುದಿಲ್ಲ. ಹೀಗಾಗಿಯೇ ಕಾಮಧೇನುವಿನ ಮೂರ್ತಿ ಪೂಜೆಯನ್ನಂತು ಹಿಂದೂ ಸಂಪ್ರದಾಯದಲ್ಲಿ ಮಾಡುತ್ತಾರೆ. ಬಹುತೇಕ ಎಲ್ಲಾ ಮನೆಯಲ್ಲಿಯೂ ಕೂಡ ಕಾಮಧೇನುವಿನ ಮೂರ್ತಿ ಇರುತ್ತದೆ ಮತ್ತು ಅದಕ್ಕೆ ನಿತ್ಯ ಪೂಜೆಯನ್ನು ಸಲ್ಲಿಸಲಾಗುತ್ತದೆ. ಇದರ ಪ್ರಾಮುಖ್ಯತೆಯೇನು ಎನ್ನುವುದನ್ನು ನೋಡುವುದಾದ್ರೆ.

ಕಾಮಧೇನು ಪೂಜೆಯಿಂದ ನಮ್ಮ ಮನೋಕಾಮನೆಗಳೆಲ್ಲಾ ಈಡೇರುತ್ತವೇ ಈ ಒಂದು ಮೂರ್ತಿಯನ್ನು ಪೂಜಿಸುವುದರಿಂದ ದೇವಲೋಕದ ಎಲ್ಲ ದೇವರಿಗೂ ಪೂಜೆ ಸಲ್ಲಿಸಿದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಹಿಂದೂ ಸಂಪ್ರದಾಯದಲ್ಲಿದೆ ಹೀಗಾಗಿ ಜನರು ಹೆಚ್ಚು ಕಾಮಧೇನು ಪೂಜೆಯ ಮೊರೆ ಹೋಗುತ್ತಾರೆ.

ಇನ್ನು ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಕಾಮಧೇನು ಮೂರ್ತಿಯನ್ನು ಇಟ್ಟುಕೊಂಡು ನಿತ್ಯ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿ ಸುಖ ಶಾಂತಿ ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯೂ ಕೂಡ ಇದೆ. ಎಲ್ಲ ದುಷ್ಟಶಕ್ತಿಗಳ ಕಾಟದಿಂದ ಮುಕ್ತಿಪಡೆಯಬಹುದು ಎಂದು ಹೇಳಲಾಗುತ್ತದೆ. ಇನ್ನು ಕಾಮಧೇನು ಮೂರ್ತಿಯನ್ನು ತಂದು ಮನೆಯಲ್ಲಿ ಯಾವುದೇ ಮೂಲೆಯಲ್ಲಿಟ್ಟರೆ ಸಾಲದು. ಅದಕ್ಕೆ ಅದರದೇ ಆದ ಸ್ಥಾನಮಾನವಿದೆ ಹೀಗಾಗಿ ಕಾಮಧೇನು ಮೂರ್ತಿಯನ್ನು ನೀವು ತೆಗೆದುಕೊಂಡು ಬಂದಿದ್ದೆ ಆದರೆ ಅದನ್ನು ಪ್ರಮುಖ ಜಾಗದಲ್ಲಿಟ್ಟು ಪೂಜಿಸಬೇಕು.

publive-image

ಇದನ್ನೂ ಓದಿ:ಯಾವ ದೇಶದಲ್ಲಿ ಅತಿಹೆಚ್ಚು ದೀರ್ಘಾಯುಷಿಗಳು ಇದ್ದಾರೆ; ಭಾರತ ಯಾವ ಸ್ಥಾನದಲ್ಲಿದೆ ಗೊತ್ತಾ?

ವಾಸ್ತುಶಾಸ್ತ್ರದ ಪ್ರಕಾರ ಕಾಮಧೇನುವಿನ ಮೂರ್ತಿಯನ್ನು ನಾವು ಈಶಾನ್ಯ ಮೂಲೆಯಲ್ಲಿಟ್ಟು ಪೂಜಿಸಬೇಕು. ಇದು ಶುಭ ಸೂಚಕದ ಸಂಕೇತ ಎಂದು ಹೇಳಲಾಗುತ್ತದೆ. ಹಾಗಂತ ಮನೆಯ ಯಾವುದೋ ಈಶಾನ್ಯ ಮೂಲೆಯಲ್ಲಿ ಇಡುವಂತಿಲ್ಲ. ದೇವರ ಕೋಣೆಯ ಈಶಾನ್ಯ ಭಾಗದಲ್ಲಿ ಕಾಮಧೇನು ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡಬೇಕು. ನಿಮಗೆ ಮೂರ್ತಿಯನ್ನು ಕೊಂಡುಕೊಳ್ಳಲು ಆಗದೇ ಇದ್ದಲ್ಲಿ, ಒಂದು ಫೋಟೋವನ್ನಾದರೂ ಕೂಡ ತಂದು ದೇವರ ಮನೆಯಲ್ಲಿಟ್ಟು ಪೂಜಿಸುವುದರಿಂದ ಸಂಪತ್ತು ಸಮೃದ್ಧಿ ಉಂಟಾಗುತ್ತದೆ.

publive-image

ಇದನ್ನೂ ಓದಿ:ಆ ಅಘೋರಿ ಭವಿಷ್ಯವೇ ನಿಜವಾಯ್ತಾ? 30 ದಿನದ ಕುಂಭಮೇಳದಲ್ಲಿ 7 ಸಲ ಅಗ್ನಿ ಪ್ರಮಾದ! ಕಾರ್ಣಿಕದ ಪ್ರಭಾವವೇ?

ಇನ್ನು ಮೂರ್ತಿ ಯಾವ ಪ್ರಕಾರದ್ದಾಗಿರಬೇಕು ಅಂದ್ರೆ ಚಿನ್ನ, ಬೆಳ್ಳಿ, ತಾಮ್ರ ಇಂತಹ ಲೋಹಗಳಿಂದ ಸಿದ್ಧಗೊಂಡಿರಬೇಕು. ಈ ಕಾಮಧೇನುವಿನ ಮೂರ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಪ್ರತಿಷ್ಠಾಪನೆ ಮಾಡುವುದರಿಂದ ಮನೆಯಲ್ಲಿರುವ ವಾಸ್ತುದೋಷಗಳು ಪರಿಹಾರವಾಗುತ್ತವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment