ಕೊಹ್ಲಿ ಇದ್ರೂ ರಜತ್​ ಪಾಟಿದಾರ್​ಗೆ ಕ್ಯಾಪ್ಟನ್ಸಿ ಪಟ್ಟ ಕಟ್ಟಿದ್ದೇಕೆ? ಕೊನೆಗೂ ಅಸಲಿ ಕಾರಣ ಬಹಿರಂಗ

author-image
Ganesh Nachikethu
Updated On
ರಾಜಸ್ಥಾನ್​ ​ವಿರುದ್ಧ ಗೆಲ್ಲಲು ಆರ್​​​ಸಿಬಿ ಬಳಿಯಿದೆ ದೊಡ್ಡ ಬ್ರಹ್ಮಾಸ್ತ್ರ.. ಯಾರು ಆ ಮಿಸೈಲ್ ಮ್ಯಾನ್​​?
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​
  • ಐಪಿಎಲ್​ಗೆ ಇನ್ನೇನು ಕೇವಲ ಒಂದು ತಿಂಗಳು ಮಾತ್ರ ಬಾಕಿ
  • ಕ್ಯಾಪ್ಟನ್ಸಿ ವಿಚಾರದಲ್ಲಿ ಆರ್​​ಸಿಬಿಯಿಂದ ಮಹತ್ವದ ನಿರ್ಧಾರ

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​ಗೆ ಇನ್ನೇನು ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದೆ. ಐಪಿಎಲ್​ ಮೆಗಾ ಹರಾಜು ಬೆನ್ನಲ್ಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಈ ಸೀಸನ್​ನಲ್ಲಿ ಲೀಡ್​ ಮಾಡೋದು ಯಾರು? ಅನ್ನೋ ಚರ್ಚೆ ಜೋರಾಗಿತ್ತು. ಕ್ಯಾಪ್ಟನ್ಸಿ ರೇಸ್​ನಲ್ಲಿ ಸ್ಟಾರ್​ ಪ್ಲೇಯರ್​​ ವಿರಾಟ್​ ಕೊಹ್ಲಿ ಸೇರಿದಂತೆ ಹಲವರ ಹೆಸರುಗಳು ಕೇಳಿ ಬಂದಿದ್ದವು. ಇದರ ಮಧ್ಯೆ ಆರ್​​ಸಿಬಿ ಅಚ್ಚರಿ ನಿರ್ಧಾರವೊಂದು ಕೈಗೊಂಡಿದೆ. ಆರ್​​ಸಿಬಿ ತಂಡದ ಕ್ಯಾಪ್ಟನ್​ ಆಗಿ ಸ್ಟಾರ್​ ಪ್ಲೇಯರ್​ ರಜತ್​ ಪಾಟಿದಾರ್​ ಆಯ್ಕೆಯಾಗಿದ್ದಾರೆ.

ಕೊಹ್ಲಿ ಬದಲಿಗೆ ರಜತ್​ ಪಾಟಿದಾರ್​ಗೆ ಪಟ್ಟ ಕಟ್ಟಿದ್ದೇಕೆ?

ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡದ ಸ್ಟಾರ್​​ ಬ್ಯಾಟರ್​​ ವಿರಾಟ್​ ಕೊಹ್ಲಿ. ಇವರು ಆರ್​​ಸಿಬಿ ಮಾಜಿ ಕ್ಯಾಪ್ಟನ್​ ಕೂಡ ಹೌದು. ಈ ಬಾರಿ ಕೊಹ್ಲಿಗೆ ಕ್ಯಾಪ್ಟನ್ಸಿ ಪಟ್ಟ ಕಟ್ಟಬೇಕು ಎಂದು ಹಲವು ಸ್ಟಾರ್​​ ಆಟಗಾರರು ಆರ್​​ಸಿಬಿ ಮೇಲೆ ಒತ್ತಡ ಹೇರಿದ್ದರು. ಇಷ್ಟಾದ್ರೂ ಕೊಹ್ಲಿ ಬದಲಿಗೆ ರಜತ್​ ಪಾಟಿದಾರ್​​ಗೆ ಆರ್​​ಸಿಬಿ ಕ್ಯಾಪ್ಟನ್ಸಿ ಪಟ್ಟ ಕಟ್ಟಿದೆ. ಕೊಹ್ಲಿ ಕೂಡ ತನ್ನ ಬದಲಿಗೆ ರಜತ್​ಗೆ ಕ್ಯಾಪ್ಟನ್ಸಿ ನೀಡಿ ಎಂದರು ಅನ್ನೋ ಮಾಹಿತಿ ಲಭ್ಯವಾಗಿದೆ.

ರಜತ್​​ಗೆ ಕ್ಯಾಪ್ಟನ್ಸಿ ಕಟ್ಟಲು ಕಾರಣವೇನು?

ಆರ್‌ಸಿಬಿ ಈ ಬಾರಿ ಹೊಸ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ. 2025ರ ತಂಡದಲ್ಲಿ ಕೊಹ್ಲಿ, ರಜತ್​ ಹೊರತು ಉಳಿದ ಎಲ್ಲರೂ ಹೊಸ ಆಟಗಾರರೇ. ಹೊಸ ಆಟಗಾರರೊಂದಿಗೆ ಕಪ್​ ಗೆದ್ದು ಹೊಸ ಅಧ್ಯಾಯ ಶುರು ಮಾಡಲು ಆರ್​​ಸಿಬಿ ಮುಂದಾಗಿದೆ. ಅದಕ್ಕಾಗಿ ಹೊಸ ಕ್ಯಾಪ್ಟನ್​ ಮೊರೆ ಹೋಗಿದೆ ಆರ್​​ಸಿಬಿ.

ಭವಿಷ್ಯದ ದೃಷ್ಟಿಯಿಂದ ಮಹತ್ವದ ನಿರ್ಧಾರ

ಹೊಸ ಕ್ಯಾಪ್ಟನ್​ ಘೋಷಣೆ ಮಾಡಿರೋ ಆರ್​​ಸಿಬಿ ತಂಡ ಭವಿಷ್ಯದ ದೃಷ್ಟಿಯಿಂದ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವಿರಾಟ್‌ ಅವರಿಗೆ ಈಗ 37 ವರ್ಷ. ರಜತ್‌ಗೆ ಕೇವಲ 31 ವರ್ಷ. ಕೊಹ್ಲಿಗಿಂತಲೂ ಹೆಚ್ಚಿನ ವರ್ಷ ರಜತ್​ ಆರ್​​ಸಿಬಿ ತಂಡವನ್ನು ಲೀಡ್​ ಮಾಡಬಹುದು. ಕೊಹ್ಲಿ ಇನ್ನೂ ಮೂರು ವರ್ಷ ಆಡಲಿದ್ದು, ಅಷ್ಟರೊಳಗೆ ರಜತ್​​ ಅವರನ್ನು ಒಳ್ಳೆಯ ಕ್ಯಾಪ್ಟನ್​ ಆಗಿ ರೆಡಿ ಮಾಡಬೇಕು ಎಂಬುದು ಆರ್​​ಸಿಬಿ ಪ್ಲಾನ್​​.

ಆರ್​​ಸಿಬಿ ಆಯ್ಕೆ ರಜತ್​​ ಏಕೆ?

ಕೊಹ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಹಲವು ವರ್ಷಗಳ ಕಾಲ ಆರ್​​ಸಿಬಿಯನ್ನು ಲೀಡ್​ ಮಾಡಿದ್ದಾರೆ. ಇವರ ಕ್ಯಾಪ್ಟನ್ಸಿಯಲ್ಲಿ ಆರ್​​​ಸಿಬಿ ಹಲವು ಬಾರಿ ಫೈನಲ್​ ಪ್ರವೇಶಿಸಿದೆ. ಕೊಹ್ಲಿ ನಂತರ ಆರ್​​ಸಿಬಿಗೆ ಒಬ್ಬ ಲೀಡರ್​ ಬೇಕು. ಅದು ಯುವಕರೇ ಆಗಿರಬೇಕು. ಈ ದೃಷ್ಟಿಯಿಂದಲೇ ಆರ್​​ಸಿಬಿ ಮಹತ್ವದ ನಿರ್ಧಾರಕ್ಕೆ ಬಂದಿದೆ.

ಇದನ್ನೂ ಓದಿ:ರಜತ್ ಪರವಾಗಿ RCB ಫ್ಯಾನ್ಸ್‌ಗೆ ಕೊಹ್ಲಿ ಮನವಿ.. ವಿರಾಟ್ ಮಾತಿಗೆ ಭಾರೀ ಮೆಚ್ಚುಗೆ; ಏನಂದ್ರು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment