/newsfirstlive-kannada/media/post_attachments/wp-content/uploads/2025/02/RAJAT.jpg)
ಆರ್ಸಿಬಿಗೆ ಯಾರು ಸಾರಥಿ ಆಗುತ್ತಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಕ್ಯಾಪ್ಟನ್ಸಿ ವಿಚಾರದಲ್ಲಿ ಅಳೆದು ತೂಗಿ, ಸಾಧಕ, ಬಾಧಕಗಳನ್ನು ಚರ್ಚಿಸಿ ಕೊನೆಗೂ ಕೊಹ್ಲಿ ಆಪ್ತನಿಗೆ ಆರ್ಸಿಬಿ ಪಟ್ಟ ಕಟ್ಟಿದೆ. ರಜತ್ ಪಾಟೀದಾರ್ ಆರ್ಸಿಬಿಯ ನೂತನ ಕ್ಯಾಪ್ಟನ್!
ಕಳೆದ ಕೆಲವು ವರ್ಷಳಿಂದ ಆರ್ಸಿಬಿ ತಂಡದ ಭಾಗವಾಗಿರುವ ರಜತ್ ಪಾಟಿದಾರ್, ಈ ಬಾರಿ ತಂಡವನ್ನು ಮುನ್ನಡೆಸಲಿದ್ದಾರೆ. ಪವರ್ ಹಿಟ್ಟರ್ ಆಗಿರುವ ರಜತ್, ನಾಯಕನಾಗಿ ಸೈಯದ್ ಮುಷ್ತಾಕ್ ಅಲಿಯಲ್ಲಿ ಯಶಸ್ಸು ಕಂಡಿದ್ದಾರೆ. 10 ಪಂದ್ಯಗಳ 9 ಇನ್ನಿಂಗ್ಸ್‌ಗಳಿಂದ 61.14 ಸರಾಸರಿಯಲ್ಲಿ ಬರೋಬ್ಬರಿ 428 ರನ್ ಕಲೆಹಾಕಿದ್ದಾರೆ. 186.04 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿರುವ ರಜತ್, 32 ಬೌಂಡರಿ, 31 ಸಿಡಿಸಿದ್ದಾರೆ. ಮೊದಲ ಅವಕಾಶದಲ್ಲೇ ರನ್ನರ್ಸ್ ಆಪ್ ಸ್ಥಾನಕ್ಕೇರಿಸಿದ ಸಾಧನೆಯನ್ನು ಮಾಡಿದ್ದಾರೆ. ಈಗ ಆರ್ಸಿಬಿ ನಾಯಕತ್ವದ ಪಟ್ಟ ಒಲಿದಿದೆ.
ಇದನ್ನೂ ಓದಿ: ಆರ್ಸಿಬಿಗೆ ರಜತ್ ಪಾಟೀದಾರ್ ನಾಯಕ.. ಈ ಆಯ್ಕೆ ಹಿಂದಿದೆ 8 ಕಾರಣಗಳು..!
ಪಾಟೀದಾರ್ಗೆ ಪಟ್ಟ ಯಾಕೆ..?
- ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಮಧ್ಯ ಪ್ರದೇಶ ನಾಯಕನಾಗಿ ಸಕ್ಸಸ್
- ರಜತ್ ನಾಯಕತ್ವದಲ್ಲಿ 10 ಪಂದ್ಯಗಳಲ್ಲಿ ಮಧ್ಯ ಪ್ರದೇಶ 8 ಪಂದ್ಯ ಗೆಲುವು
- ಹೈ-ಫ್ರೆಷರ್ ಗೇಮ್ಗಳಲ್ಲಿ ರಜತ್ಗಿದೆ ಬಿಗ್ ಇನ್ನಿಂಗ್ಸ್ ಕಟ್ಟಬಲ್ಲ ಸಾಮರ್ಥ್ಯ
- ಬೌಲಿಂಗ್ ಚೇಂಜ್, ಫೀಲ್ಡಿಂಗ್ ಅಡ್ಜಸ್ಟ್ಮೆಂಟ್ನಲ್ಲಿ ನಾಯಕತ್ವದ ಚಾಣಾಕ್ಷತೆ
- ಕಳೆದ ಸೀಸನ್ನಲ್ಲಿ ಆರ್ಸಿಬಿ ಪರ ಪಾಟಿದಾರ್ ಮ್ಯಾಚ್ ವಿನ್ನಿಂಗ್ ಆಟ
- ಕೂಲ್ ಅಂಡ್ ಕಾಮ್, ಎಲ್ಲರೊಂದಿಗೆ ಬೆರೆಯುವ ಗುಣ ರಜತ್ಗೆ ಇದೆ
- ಆರ್ಸಿಬಿ ತಂಡದ ಕಲ್ಚರ್ ಬಗ್ಗೆ ರಜತ್ ಪಾಟಿದಾರ್ಗೆ ಅರಿವು
31 ವರ್ಷದ ರಜತ್ ಪಾಟಿದಾರ್, ದೇಶಿ ಕ್ರಿಕೆಟ್ ಹಾಗೂ ಆರ್ಸಿಬಿ ಪರವೂ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೀಡಿದ್ದಾರೆ. ಇದಲ್ಲಕ್ಕಿಂತ ಮಿಗಿಲಾಗಿ ಆರ್ಸಿಬಿ ಪರ ಮಿಡಲ್ ಆರ್ಡರ್ನ ಬಲವಾಗಿದ್ದಾರೆ. ರಜತ್ ಪಾಟಿದಾರ್ ಮೇಲೆ ಭರವಸೆ ಹೊಂದಿರುವ ಮ್ಯಾನೇಜ್ಮೆಂಟ್, ಎರಡ್ಮೂರು ವರ್ಷಗಳ ಕಾಲ ನಾಯಕತ್ವದ ಪಟ್ಟ ಕಟ್ಟುವ ಲೆಕ್ಕಾಚಾರದಲ್ಲಿದೆ.
ಇದನ್ನೂ ಓದಿ: ಆರ್ಸಿಬಿಗೆ ರಜತ್ ಪಾಟೀದಾರ್ ನಾಯಕ.. ಈ ಆಯ್ಕೆ ಹಿಂದಿದೆ 8 ಕಾರಣಗಳು..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್