/newsfirstlive-kannada/media/post_attachments/wp-content/uploads/2024/10/RATAN-TATA-6.jpg)
ಉದ್ಯಮಿ ರತನ್ ಟಾಟಾ ಇನ್ನು ನೆನಪು ಮಾತ್ರ. ಕೈಗಾರಿಕೋದ್ಯಮಿ, ವಾಣಿಜ್ಯೋದ್ಯಮಿ ಮತ್ತು ಟಾಟಾ ಸನ್ಸ್‌ನ ಗೌರವಾಧ್ಯಕ್ಷರಾಗಿದ್ದ ರತನ್ ಟಾಟಾ ಅನಾರೋಗ್ಯದಿಂದ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. 86 ವಯಸ್ಸಿನ ಉದ್ಯಮಿ ಆಸಕ್ತಿದಾಯಕ ಮತ್ತು ಬದುಕಿನ ಅನೇಕ ಕಥೆಗಳನ್ನು ಬಿಟ್ಟು ಹೋಗಿದ್ದಾರೆ.
1937 ಡಿಸೆಂಬರ್ 28 ರಂದು ಮುಂಬೈನಲ್ಲಿ ನೇವಲ್ ಟಾಟಾ ಮತ್ತು ಶ್ರೀಮತಿ ಸೂನಿ ಟಾಟಾರವರ ಪುತ್ರನಾಗಿ ರತನ್ ನಾವೆಲ್ ಟಾಟಾ ಜನಿಸಿದರು. ವಿಪರ್ಯಾಸ ಅಂದ್ರೆ ರತನ್ ಟಾಟಾ 10 ವರ್ಷ ಇರುವಾಗಲೇ ಪೋಷಕರು ದೂರವಾದ್ರು. ತನ್ನ ಅಜ್ಜಿಯ ಜೊತೆಗೆ ಬಾಲ್ಯ ಕಳೆಯುಂವತಾಯ್ತು.
ಇದನ್ನೂ ಓದಿ:Ratan Tata: ಯವ್ವನದಲ್ಲಿ ಪ್ರೀತಿಗೆ ಬಿದ್ದಿದ್ದ ರತನ್ ಟಾಟಾ ಮದ್ವೆ ಯಾಕಾಗಿಲ್ಲ! ಇಲ್ಲಿದೆ ಅವರ ಲವ್ ಸ್ಟೋರಿ
ಅಂದ್ಹಾಗೆ ರತನ್ ಟಾಟಾ ಅವಿವಾಹಿತರಾಗಿದ್ದರು. ಅವರು ಯಾಕೆ ಮದುವೆ ಆಗಲಿಲ್ಲ ಅನ್ನೋ ವಿಚಾರವನ್ನು ಸಂದರ್ಶನ ಒಂದರಲ್ಲಿ ಹೇಳಿದ್ದರು. ರತನ್ ಟಾಟಾಗೆ ತಮ್ಮ ತಂದೆ ಅಷ್ಟೊಂದು ಹತ್ತಿರವಾಗಿರಲಿಲ್ಲ. ಇಬ್ಬರ ನಡುವೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಬಾಲ್ಯದಲ್ಲಿ ಪಿಟೀಲು ಕಲಿಯಲು ಬಯಸಿದ್ದರು. ಆದರೆ ಅವರ ತಂದೆ ಪಿಯಾನೋ ಕಲಿಯಲು ಬಯಸಿದ್ದರು. ಈ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಟಾಟಾ ಅವರು ಓದಲು ಅಮೆರಿಕಕ್ಕೆ ಹೋಗಬೇಕೆಂದು ಬಯಸಿದ್ದರು. ಅವರ ತಂದೆ ಅವರನ್ನು ಬ್ರಿಟನ್‌ಗೆ ಕಳುಹಿಸಲು ಬಯಸಿದ್ದರು. ಟಾಟಾ ಸ್ವತಃ ವಾಸ್ತುಶಿಲ್ಪಿ ಆಗಬೇಕೆಂದು ಬಯಸಿದ್ದರು. ಅವರ ತಂದೆ ಎಂಜಿನಿಯರ್ ಆಗಬೇಕೆಂದು ಒತ್ತಾಯಿಸಿದ್ದರಂತೆ.
ಲಾಸ್ ಏಂಜಲೀಸ್‌ನಲ್ಲಿ ಕೆಲಸ ಮಾಡ್ತಿರುವಾಗ ಅವರಿಗೆ ಮದುವೆ ಆಗುವ ಸಮಯ ಬಂದಿತ್ತು. 1962ರ ಇಂಡೋ-ಚೀನಾ ಯುದ್ಧದ ಕಾರಣ ಹುಡುಗಿಯ ಪೋಷಕರು ಅವನನ್ನು ಭಾರತಕ್ಕೆ ಕಳುಹಿಸಲು ವಿರೋಧಿಸಿದ್ದರು. ಆ ನಂತರ ಅವರು ಮದುವೆ ಆಗಲಿಲ್ಲ. ಕೊನೆಗೆ ರತನ್ ಟಾಟಾ ವ್ಯಾಪಾರ ಜಗತ್ತಿನಲ್ಲಿ ಮುಳುಗಿದರು. ಅವರ ವೈಯಕ್ತಿಕ ಜೀವನದ ಬಗ್ಗೆ ಯೋಚಿಸಲು ಅವಕಾಶ ಸಿಗಲಿಲ್ಲ ಎಂದಿದ್ದರು.
ಇದನ್ನೂ ಓದಿ:ಚಿಕ್ಕವಯಸ್ಸಲ್ಲೇ ಹೆತ್ತವರು ದೂರ, ಅಜ್ಜಿ ಜೊತೆ ಬಾಲ್ಯ! ರತನ್ ಟಾಟಾ ಬೆಳೆದು ಬಂದ ಹಾದಿಯೇ ರೋಚಕ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ