ವಿನಮ್ರ ಉದ್ಯಮಿ ಎಂದೇ ಕರೆಯಲ್ಪಡ್ತಿದ್ದ ರತನ್ ಟಾಟಾ
ಅತ್ಯಂತ ಪ್ರಭಾವಶಾಲಿ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿದ್ದರು
ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರು
ವಿನಮ್ರ ಉದ್ಯಮಿ ಎಂದೇ ಕರೆಯಲ್ಪಡ್ತಿದ್ದ ರತನ್ ಟಾಟಾ, ವಿಶ್ವದ ಅತ್ಯಂತ ಪ್ರಭಾವಶಾಲಿ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿದ್ದರು. 6 ಖಂಡಗಳಲ್ಲಿ 100ಕ್ಕೂ ಹೆಚ್ಚು ದೇಶಗಳಲ್ಲಿ 30 ಕಂಪನಿಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಮುನ್ನಡೆಸಿದ್ದರು.
ಇದರ ಹೊರತಾಗಿಯೂ ವಿಶ್ವದ ಅಗ್ರ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿಲ್ಲ. 6 ದಶಕಗಳಿಂದ ದೇಶದ ಅತಿ ದೊಡ್ಡ ಉದ್ಯಮ ಸಂಸ್ಥೆಯನ್ನು ನಡೆಸುತ್ತಿರುವ ವ್ಯಕ್ತಿಯ ಹೆಸರು ಟಾಪ್-10 ಅಥವಾ ಟಾಪ್-20 ಶ್ರೀಮಂತರ ಪಟ್ಟಿಯಲ್ಲೂ ಇಲ್ಲ. ಅಚ್ಚರಿ ಆಗಬಹುದು! ಆದರೆ ನಿಜ! ಅದಕ್ಕೆ ಕಾರಣ ಟಾಟಾ ಟ್ರಸ್ಟ್ ಮೂಲಕ ಟಾಟಾ ಕುಟುಂಬ ಮಾಡುತ್ತಿರುವ ದೊಡ್ಡ ಪ್ರಮಾಣದ ಪರೋಪಕಾರಿ ಕೆಲಸ ಎಂಬ ವಿಶ್ಲೇಷಣೆ ಇದೆ.
ಇದನ್ನೂ ಓದಿ:ತೀವ್ರ ಲೋ ಬಿಪಿಯಿಂದ ಬಳಲುತ್ತಿದ್ದ ರತನ್ ಟಾಟಾ; BP ಇರೋರು ಈ ತಪ್ಪು ಮಾಡಬಾರದು!
ಈ ನಿಯಮ ಕಾರಣ
ವಾಸ್ತವವಾಗಿ ಟಾಟಾ ಕುಟುಂಬದ ಸದಸ್ಯರು ತಮ್ಮ ಸ್ವಂತ ಕಂಪನಿಗಳಲ್ಲಿ ಹೆಚ್ಚಿನ ಪಾಲನ್ನು ತೆಗೆದುಕೊಳ್ಳಲ್ಲ. ಟಾಟಾ ಸನ್ಸ್‌ನಲ್ಲಿ ಗಳಿಸುವ ಬಹುಪಾಲು ಹಣವನ್ನು ಟಾಟಾ ಟ್ರಸ್ಟ್‌ಗೆ ದಾನ ಮಾಡಬೇಕೆಂದು ಜೆಮ್ ಶೆಡ್ ಜಿ ಟಾಟಾ (Jamshedji) ಕಟ್ಟಪ್ಪಣೆ ಇದೆಯಂತೆ. ಟಾಟಾ ಗ್ರೂಪ್ ಹುಟ್ಟು ಹಾಕುವ ಮೊದಲು ಅವರೇ ಈ ರೀತಿಯ ನಿಯಮವನ್ನು ಹಾಕಿಕೊಂಡಿದ್ದರು ಎಂದು ವರದಿಯಾಗಿದೆ.
ಸಾಫ್ಟ್‌ವೇರ್‌ನಿಂದ ಕ್ರೀಡೆಯವರೆಗೆ ಟಾಟಾ ಗ್ರೂಪ್ ಚಾಪು ಮೂಡಿಸಿದೆ. ಅದರ ಕೀರ್ತಿ ರತನ್ ಟಾಟಾಗೆ ಸಲ್ಲುತ್ತದೆ. ರತನ್ ಟಾಟಾ ಎಂಬ ಹೆಸರು ಪದಗಳಿಗಿಂತಲೂ ಮೀರಿದ್ದು. ಅವರ ವ್ಯಕ್ತಿತ್ವಕ್ಕೆ ಅಷ್ಟು ಘನತೆ, ಗೌರವ ಇದೆ. ದೇಶದ ಪ್ರತಿಯೊಬ್ಬ ನಾಗರಿಕರು ಪ್ರಾಮಾಣಿಕವಾಗಿ ಗೌರವಿಸುವ ಜನರಲ್ಲಿ ಒಬ್ಬರು. ತುಂಬಾ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ರತನ್ ಟಾಟಾ, ನಿನ್ನೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ:ರತನ್ ಟಾಟಾ ಬ್ರಹ್ಮಚಾರಿ.. TATA ಸನ್ಸ್ ಸಾಮ್ರಾಜ್ಯದ ಮುಂದಿನ ಉತ್ತರಾಧಿಕಾರಿ ಯಾರು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ